HOME » NEWS » Lifestyle » ESSENTIAL TO A CLEAN YOUR MASK IN RIGHT TIME SESR

ಮಾಸ್ಕ್​ ಬಳಸಿದರೆ ಸಾಲದು, ಶುಚಿತ್ವದ ಅರಿವಿರುವುದು ಅವಶ್ಯ, ಇಲ್ಲದಿದ್ದರೆ ಸ್ಕೀನ್​ ಇನ್​ಫೆಕ್ಷನ್​ ಆದೀತು!

ಒಂದೇ ಮಾಸ್ಕ್​ ಅನ್ನು ದೀರ್ಘಕಾಲದವರೆಗೆ ಬಳಸುವುದು ಕೂಡ ಅಪಾಯ. ಅದನ್ನು ಯಾವಾಗ ಬದಲಾಯಿಸಬೇಕು. ಎಷ್ಟು ದಿನಕ್ಕೆ ಒಮ್ಮೆ ಶುಚಿಗೊಳಿಸಬೇಕು ಎಂಬ ಕುರಿತು ಅರಿವಿರುವುದು ಮುಖ್ಯ.

Seema.R | news18-kannada
Updated:November 30, 2020, 4:31 PM IST
ಮಾಸ್ಕ್​ ಬಳಸಿದರೆ ಸಾಲದು, ಶುಚಿತ್ವದ ಅರಿವಿರುವುದು ಅವಶ್ಯ, ಇಲ್ಲದಿದ್ದರೆ ಸ್ಕೀನ್​ ಇನ್​ಫೆಕ್ಷನ್​ ಆದೀತು!
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ಸೋಂಕಿನ ನಡುವೆಯೇ ಸಾಮಾನ್ಯ ಜೀವನಕ್ಕೆ ನಿಧಾನಕ್ಕೆ ಎಲ್ಲರೂ ಮರಳುತ್ತಿದ್ದಾರೆ. ಅಗತ್ಯದ ವಸ್ತುಗಳ ಪಟ್ಟಿಯಲ್ಲಿ ಮಾಸ್ಕ್​ ಕೂಡ  ಒಂದಾಗಿದೆ.  ನಿತ್ಯ ಜೀವನದ ಭಾಗವಾಗಿ ಮಾಸ್ಕ್​ ಈಗ ನಮ್ಮ ಜೊತೆಯಾಗಿದೆ. ಮಾಸ್ಕ್​ ಧರಿಸದೇ ಹೋದರೆ, ಅಪಾಯದ ಜೊತೆ ದಂಡ ಕೂಡ ಕಟ್ಟಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾಸ್ಕ್​ ಹಾಕಿಕೊಳ್ಳುವುದು ಸರಿ. ಆದರೆ, ಆ ಮಾಸ್ಕ್​ನ ಶುಚಿತ್ವದ ಬಗ್ಗೆ ಕೂಡ ನಮಗೆ ಅರಿವಿರಬೇಕು. ದೀರ್ಘಕಾಲದವರೆಗೆ ಒಂದೇ ಮಾಸ್ಕ್​ ಬಳಸುವುದರಿಂದ ಅದು ಇನ್ನೊಂದು ರೀತಿಯ ಅಪಾಯ ತಂದೊಡ್ಡುವುದು ಸುಳ್ಳಲ್ಲ. ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದಂತೆ ಮೂಗು, ಬಾಯಿ ಮುಚ್ಚುವಂತಹ ಮಾಸ್ಕ್​ ಬಳಸುವುದು ಉತ್ತಮ. ಅದರಲ್ಲಿಯೂ ಮೂರು ಪದರದ ಬಟ್ಟೆ ಮಾಸ್ಕ್​ ಬಳಕೆಯಿಂದ ಉಸಿರಾಟಕ್ಕೂ ಅನುಕೂಲದ ಜೊತೆ ಇದನ್ನು ಪುನರ್​ ಬಳಕೆ ಮಾಡಬಹುದು. ಆದರೆ, ಒಂದು ಮಾಸ್ಕ್​ ಎಷ್ಟು ಬಾರಿ ಪುನರ್​ ಬಳಕೆ ಮಾಡಬೇಕು ಎಂಬ ಬಗ್ಗೆ ಸಾಕಷ್ಟು ಜನರಿಗೆ ಅರಿವಿರುವುದಿಲ್ಲ. ಒಂದೇ ಮಾಸ್ಕ್​ ಅನ್ನು ದೀರ್ಘಕಾಲದವರೆಗೆ ಬಳಸುವುದು ಕೂಡ ಅಪಾಯ. ಅದನ್ನು ಯಾವಾಗ ಬದಲಾಯಿಸಬೇಕು. ಎಷ್ಟು ದಿನಕ್ಕೆ ಒಮ್ಮೆ ಶುಚಿಗೊಳಿಸಬೇಕು ಎಂಬ ಕುರಿತು ಅರಿವಿರುವುದು ಮುಖ್ಯ.

ಮಾಸ್ಕ್​ ಬಳಸುವುದರ ಜೊತೆಗೆ ಅದರ ಶುಚಿತ್ವದ ಬಗ್ಗೆ ಕೂಡ ಗಮನವಿರಬೇಕು. ಹಾಗಾಗಿ ಬಳಸುವ ಮಾಸ್ಕ್​ ಸರಿಯಾಗಿದೆಯಾ ಎಂಬ ಕುರಿತು ಯೋಚಿಸಬೇಕು. ಬಟ್ಟೆಯ ಮಾಸ್ಕ್​ ಆಗಿದ್ದರೆ, ಅದನ್ನು ಆಗ್ಗಿಂದಾಗ್ಗೆ ತೊಳೆದು ಸ್ವಚ್ಛ ಮಾಡಬೇಕು. ಜೊತೆಗೆ ನೀಟಾಗಿ ಒಣಗಿಸಿಡಬೇಕು. ಬಟ್ಟೆ ಮಾಸ್ಕ್​ಗಳನ್ನು ಒಂದೆರಡು ಬಾರಿ ತೊಳೆದು ಮತ್ತೆ ಬೇರೆ ಮಾಸ್ಕ್​ ಬಳಸುವುದು ಉತ್ತಮ.

ಪದೇ ಪದೇ ಮಾಸ್ಕ್​ಗಳನ್ನು ತೊಳೆಯುವುದರಿಂದ ಅದರ ಬಟ್ಟೆ ಹಾಳಾಗುವುದರಿಂದ ಅದು ಸರಿಯಾದ ರಕ್ಷಣೆ ನೀಡುವುದಿಲ್ಲ. ಈ ಹಿನ್ನಲೆ ಮಾಸ್ಕ್​ ಬದಲಾಯಿಸುವುದು ಉತ್ತಮ.

ಮಾಸ್ಕ್​ ಶುಚಿತ್ವವಿಲ್ಲದಿದ್ದರೆ, ಅಥವಾ ಅದರ ಬಟ್ಟೆ ಉತ್ತಮ ಗುಣಮಟ್ಟದಾಗಿಲ್ಲದಿದ್ದರೆ ಸ್ಕೀನ್​ ಇನ್​ಫೆಕ್ಷನ್​ ಅಥವಾ ಇತರೆ ರೀತಿಯ ಇನ್​ಫೆಕ್ಷನ್​ ಆಗುವ ಸಾಧ್ಯತೆ ಹೆಚ್ಚು. ಈ ಹಿನ್ನಲೆ ಮುಖದ ಚರ್ಮಕ್ಕೆ ಹಾನಿಯಾಗದಂತಹ ಉತ್ತಮ ಗುಣಮಟ್ಟಣದ ಬಟ್ಟೆ ಮಾಸ್ಕ್​ ಧರಿಸುವುದು ಅವಶ್ಯ.

ಇದನ್ನು ಓದಿ: ಫಿಲ್ಟರ್​ ಮಾಸ್ಕ್ ಬಳಸುವ ಮುನ್ನ ಯೋಚಿಸಿ; ಅಂಥ ಮಾಸ್ಕ್ ಅಪಾಯಕಾರಿ ಎನ್ನುತ್ತಾರೆ ತಜ್ಞರು

ಇನ್ನು ಒಮ್ಮೆ ಹಾಕಿ ಬಿಸಾಡುವ ಮಾಸ್ಕ್​ ಬಗ್ಗೆ ಕೂಡ ಎಚ್ಚರ. ಅನೇಕರು ಈ ಮಾಸ್ಕ್​ಗಳ ವಿಲೇವಾರಿ ಮಾಡದೇ ಅದನ್ನೇ ಬಳಸುವುದರಿಂದ ಅಪಾಯ. ಈ ಹಿನ್ನಲೆ ನೀವು ಬಳಸುತ್ತಿರುವ ಮಾಸ್ಕ್​ ಯಾವ ರೀತಿಯದ್ದು ಎಂಬುದು ತಿಳಿಯುವುದು ಅವಶ್ಯ.

ಇನ್ನು ಸದಾ ಹೊರಗೆ ಓಡಾಡುವವರು ನೀವಾಗಿದ್ದರೆ, ಧರಿಸಿದ ಮಾಸ್ಕ್​ ಅಲ್ಲದೇ, ಮತ್ತೊಂದು ಮಾಸ್ಕ್​ ಅನ್ನು ಬ್ಯಾಗ್​ನಲ್ಲಿ ಇಟ್ಟುಕೊಂಡಿರುವುದು ಉತ್ತಮ. ಕಾರಣ ಬೆವರು, ನೀರಿನಿಂದ ಯಾವುದೇ ಹಾನಿಯಾದರೆ, ತಕ್ಷಣಕ್ಕೆ ಬೇರೆ ಮಾಸ್ಕ್​ ಧರಿಸಬಹುದು.
Published by: Seema R
First published: November 30, 2020, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories