HOME » NEWS » Lifestyle » ESIC RECRUITMENT 2020 39 TEACHING VACANCIES ON OFFER WALK IN INTERVIEW ON OCTOBER 23 HK

Esic Recruitment: ನೌಕರರ ರಾಜ್ಯ ವಿಮಾ ಆಸ್ಪತ್ರೆಯಲ್ಲಿ39 ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೌಕರರ ರಾಜ್ಯ ವಿಮಾ ಆಸ್ಪತ್ರೆ(ಇಎಸ್ಐಸಿ) ಕಲಬುರ್ಗಿ ವಿವಿಧ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹಾಗೂ ಸಹ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

news18-kannada
Updated:October 19, 2020, 4:17 PM IST
Esic Recruitment: ನೌಕರರ ರಾಜ್ಯ ವಿಮಾ ಆಸ್ಪತ್ರೆಯಲ್ಲಿ39 ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
  • Share this:
Esic Recruitment : ನೌಕರರ ರಾಜ್ಯ ವಿಮಾ ಆಸ್ಪತ್ರೆ(ಇಎಸ್ಐಸಿ) ಕಲಬುರ್ಗಿ ವಿವಿಧ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹಾಗೂ ಸಹ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 23 ರಂದು ನಡೆಯಲಿರುವ ವಾಕ್-ಇನ್ ಸಂದರ್ಶನಕ್ಕೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹಾಜರಾಗಬಹುದು. ಒಟ್ಟು 39 ಹುದ್ದೆಗಳು ಖಾಲಿ ಇವೆ.

ಹುದ್ದೆಗಳ ವಿವರ :

ಸಹಾಯಕ ಪ್ರಾಧ್ಯಾಪಕರು - 27 ಹುದ್ದೆಗಳು

ಸಹ ಪ್ರಾಧ್ಯಾಪಕರು ಮತ್ತು - 12 ಹುದ್ದೆಗಳು

ವೇತನ :

ಸಹಾಯಕ ಪ್ರಾಧ್ಯಾಪಕರು - ತಿಂಗಳಿಗೆ 92,000 ರೂಪಾಯಿ

ಸಹ ಪ್ರಾಧ್ಯಾಪಕ-  ತಿಂಗಳಿಗೆ 1,06,000 ರೂಪಾಯಿಅಭ್ಯರ್ಥಿಗಳು ಅಕ್ಟೋಬರ್ 23 ರಂದು ಬೆಳಿಗ್ಗೆ 9 ರಿಂದ 11 ರವರೆಗೆ ನಡೆಯುವ ವಾಕ್-ಇನ್ ಮತ್ತು ಸಂದರ್ಶನಕ್ಕೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಣಿ ಬೆಳಿಗ್ಗೆ 11 ಗಂಟೆಗೆ ಒಳಗೆ ಮಾಡಿಕೊಂಡಿರಬೇಕು.

ಅಭ್ಯರ್ಥಿಗಳು ಈ ಕೆಳಗಿನ ಮೂಲ ಮತ್ತು ಸ್ವಯಂ ದೃಡೀಕರಿಸಿದ ದಾಖಲೆಗಳನ್ನು ಸಂದರ್ಶನದ ದಿನಾಂಕದಂದು ತಮ್ಮೊಂದಿಗೆ ತರಲು ಸೂಚಿಸಲಾಗಿದೆ.

 ದಾಖಲೆಗಳು :

ಎಸ್​ಎಸ್​ಎಲ್​​ಸಿ ಅಂಕಪಟ್ಟಿ

ಎಂಬಿಬಿಎಸ್ ಅಂಕಪಟ್ಟಿ

ಸ್ನಾತಕೋತ್ತರ ಪದವಿ ಅಂಕಪಟ್ಟಿ

ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಪತ್ರ

ಜಾತಿ ಪ್ರಮಾಣಪತ್ರ

ಅನುಭವದ ಪ್ರಮಾಣಪತ್ರ

ಎರಡು ಪಾಸ್​​ಪೋರ್ಟ್​​ ಸೈಜ್​​ ಪೋಟೊಗಳು

ಅಧ್ಯಾಪಕರ ನೇಮಕಾತಿಗೆ ಎಂಸಿಐ ಮಾನದಂಡದ ಪ್ರಕಾರ ಇತರ ದಾಖಲೆಗಳು / ಪ್ರಕಟಣೆಗಳು

ಹೆಚ್ಚಿನ ಮಾಹಿಗಾಗಿ ಅಧಿಕೃತ ವೆಬ್​​ಸೈಟ್​  ನೋಡಿ  https://www.esic.nic.in/attachments/recruitmentfile/c04da6b9d51912052d9ff3e055757d60.pdf
Published by: G Hareeshkumar
First published: October 19, 2020, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories