EPFO: ಇಪಿಎಫ್​ಒ ಹೊಸ ವ್ಯವಸ್ಥೆ; ಇನ್ಮುಂದೆ ಯಾವುದೇ ಪ್ರಾದೇಶಿಕ ಕಚೇರಿಯಲ್ಲಿ ಕ್ಲೈಮ್​ ಸೆಟ್ಲಮೆಂಟ್​ ಮಾಡಬಹುದು!

Provident Fund Claim: ಉದ್ಯೋಗಿಗಳು ಯಾವುದೇ ಪ್ರಾದೇಶಿಕ ಕಚೇರಿಯಲ್ಲಿ ತಮ್ಮ ಕ್ಲೈಮ್​​ ಸೆಟ್ಲಮೆಂಟ್​​ ಮಾಡಬಹುದಾಗಿದೆ. ಪಿಂಚಣಿ ಹಣ, ಹಣ ವರ್ಗಾವಣೆ ಹೀಗೆ ನಾನಾ ತರಹದ ಕೆಲಸಗಳನ್ನು ಆನ್​​ಲೈನ್​ ಕ್ಲೈಮ್​ಗಳಿಗೆ ಪ್ರಾದೇಶಿಕ ಕಚೇರಿಯಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದ ಜನರು ಯಾವುದೇ ಮೂಲೆಯಲ್ಲಿದ್ದರು ಪ್ರಾದೇಶಿಕ ಕಚೇರಿಗೆ ತೆರಳಿ ಕ್ಲೈಮ್​ ಸೆಟ್ಲಮೆಂಟ್​ ಮಾಡಬಹುದಾಗಿದೆ.

news18-kannada
Updated:June 17, 2020, 4:40 PM IST
EPFO: ಇಪಿಎಫ್​ಒ ಹೊಸ ವ್ಯವಸ್ಥೆ; ಇನ್ಮುಂದೆ ಯಾವುದೇ ಪ್ರಾದೇಶಿಕ ಕಚೇರಿಯಲ್ಲಿ ಕ್ಲೈಮ್​ ಸೆಟ್ಲಮೆಂಟ್​ ಮಾಡಬಹುದು!
ಹಣ
  • Share this:
ಪ್ರತಿ ಉದ್ಯೋಗಿಗಳು ಭವಿಷ್ಯ ನಿಧಿಯನ್ನು ಹೊಂದಿರುತ್ತಾರೆ. ಅಂತಹ ಉದ್ಯೋಗಿಗಳಿಗೆ ಇದೀಗ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಕ್ಲೈಮ್​ ಸೆಟ್ಲಮೆಂಟ್​​ ಮಾಡಲು ಹೊಸ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಮೂಲಕ ಅವರಿಗೆ ಮತ್ತಷ್ಟು ಸುಲಭ ಸೌಲಭ್ಯವನ್ನು ಒದಗಿಸಿದೆ.

ಉದ್ಯೋಗಿಗಳು ಯಾವುದೇ ಪ್ರಾದೇಶಿಕ ಕಚೇರಿಯಲ್ಲಿ ತಮ್ಮ ಕ್ಲೈಮ್​​ ಸೆಟ್ಲಮೆಂಟ್​​ ಮಾಡಬಹುದಾಗಿದೆ. ಪಿಂಚಣಿ ಹಣ, ಹಣ ವರ್ಗಾವಣೆ ಹೀಗೆ ನಾನಾ ತರಹದ ಕೆಲಸಗಳನ್ನು ಆನ್​​ಲೈನ್​ ಕ್ಲೈಮ್​ಗಳಿಗೆ ಪ್ರಾದೇಶಿಕ ಕಚೇರಿಯಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದ ಜನರು ಯಾವುದೇ ಮೂಲೆಯಲ್ಲಿದ್ದರು ಪ್ರಾದೇಶಿಕ ಕಚೇರಿಗೆ ತೆರಳಿ ಕ್ಲೈಮ್​ ಸೆಟ್ಲಮೆಂಟ್​ ಮಾಡಬಹುದಾಗಿದೆ.

ಇಪಿಎಫ್​ ಸಂಸ್ಥೆ  ಕಲ್ಪಿಸಿರುವ ಹೊಸ ವ್ಯವಸ್ಥೆ ದೇಶದ ಅನೇಕ ಉದ್ಯೋಗಿಗಳಿಗೆ ನೆರವಾಗಲಿದೆ. ತಮಗೆ ಅನುಕೂಲಕರವಾಗಿರುವ ಮತ್ತು ಹತ್ತಿರದ ಪ್ರಾದೇಶಿಕ ಕಚೇರಿ ಮೂಲಕ ಸೇವೆ ಪಡೆಯಬಹುದಾಗಿದೆ. ಈ ಹಿಂದೆ ಪ್ರಾದೇಶಿಕ ಕೇಂದ್ರದಲ್ಲಿ ಮಾತ್ರ ಈ ಸೇವೆಯನ್ನು ಒದಗಿಸಿತ್ತು. ಆದರೀಗ ಪ್ರಾದೇಶಿಕ ಕಚೇರಿಯಲ್ಲಿ ಈ ಸೌಲಭ್ಯವನ್ನು ಕಲ್ಪಿಸಿದೆ.
First published:June 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading