• Home
  • »
  • News
  • »
  • lifestyle
  • »
  • Enterovirus Disease: ಯುಎಸ್ ನಲ್ಲಿ ಹೆಚ್ಚುತ್ತಿದೆ ಎಂಟ್ರೊವೈರಸ್ ಡಿ 68 ಕಾಯಿಲೆ ಆತಂಕ, ಲಕ್ಷಣಗಳು ಹೀಗಿವೆ!

Enterovirus Disease: ಯುಎಸ್ ನಲ್ಲಿ ಹೆಚ್ಚುತ್ತಿದೆ ಎಂಟ್ರೊವೈರಸ್ ಡಿ 68 ಕಾಯಿಲೆ ಆತಂಕ, ಲಕ್ಷಣಗಳು ಹೀಗಿವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಂಟ್ರೊವೈರಸ್ ಡಿ 68 ಮತ್ತು ಪೋಲಿಯೊ ವೈರಸ್ ಸೋಂಕಿತ ವ್ಯಕ್ತಿಯ ನರಮಂಡಲದ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ನಾಯು ದೌರ್ಬಲ್ಯ ಉಂಟು ಮಾಡಬಹುದು. ಭಾರತದಲ್ಲಿ ಇದುವರೆಗೆ ಇಂತಹ ಪ್ರಕರಣಗಳು ಅಧಿಕೃತವಾಗಿ ಕಂಡು ಬಂದಿಲ್ಲ. ಆದರೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.

  • Share this:

    ಇಂದಿನ ಕಾಲದಲ್ಲಿ ಯಾರ ಶ್ವಾಸಕೋಶವೂ (Lungs) ಸಹ 100 ಪ್ರತಿಶತ ಸುರಕ್ಷಿತ ಆಗಿಲ್ಲ (Not Safe). ನೀವು ಸಿಗರೇಟ್ ಸೇದುತ್ತೀರೋ ಅಥವಾ ಇಲ್ಲವೋ, ಆದರೆ ನಮ್ಮ ಸುತ್ತಮುತ್ತಲಿನ ಮಾಲಿನ್ಯವು (Pollution) ಶ್ವಾಸಕೋಶಗಳಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತಿದೆ. ಇದು ನಿಮ್ಮ ಉಸಿರಾಟದ (Breathing) ಟ್ಯೂಬ್‌ಗಳಲ್ಲಿ ಸೋಂಕು ಇರುವುದು ತುಂಬಾ ಸಾಮಾನ್ಯ ಸಂಗತಿಯಾಗಿಸಿದೆ. ಇತ್ತೀಚೆಗೆ ಅಂತಹ ಒಂದು ಉಸಿರಾಟದ ಸೋಂಕಿನ ಪ್ರಕರಣಗಳು US ನಲ್ಲಿ ವೇಗವಾಗಿ ಹೆಚ್ಚುತ್ತಿವೆ. ಇದರಿಂದಾಗಿ ಜನರು ಅಂಗವೈಕಲ್ಯ ಲಕ್ಷಣಗಳಿಗೆ ಗುರಿಯಾಗುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ, ಎಂಟ್ರೊವೈರಸ್ ಡಿ 68 ಪ್ರಕರಣಗಳ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದೆ.


    ಎಂಟ್ರೊವೈರಸ್ ಡಿ 68 ಕಾಯಿಲೆ


    ಎಂಟರೊವೈರಸ್ ಡಿ 68 ಕಾಯಿಲೆಯು ಇದು ತೀವ್ರವಾದ ಫ್ಲಾಸಿಡ್ ಮೈಲಿಟಿಸ್ ಎಂದು ಕರೆಯಲ್ಪಡುವ ಮಕ್ಕಳಲ್ಲಿ ಪಾರ್ಶ್ವವಾಯು ಸಮಸ್ಯೆ ಸಂಬಂಧಿತ ಉಸಿರಾಟ ಕಾಯಿಲೆ ಆಗಿದೆ. ಪೋಲಿಯೊ ಕೂಡ ಎಂಟರೊವೈರಸ್ ಕುಟುಂಬಕ್ಕೆ ಸೇರಿದೆ.


    ಎಂಟ್ರೊವೈರಸ್ ಡಿ 68 ಮತ್ತು ಪೋಲಿಯೊ ವೈರಸ್ ಸೋಂಕಿತ ವ್ಯಕ್ತಿಯ ನರಮಂಡಲದ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ನಾಯು ದೌರ್ಬಲ್ಯ ಉಂಟು ಮಾಡಬಹುದು. ಭಾರತದಲ್ಲಿ ಇದುವರೆಗೆ ಇಂತಹ ಪ್ರಕರಣಗಳು ಅಧಿಕೃತವಾಗಿ ಕಂಡು ಬಂದಿಲ್ಲ. ಆದರೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.


    ಇದನ್ನೂ ಓದಿ: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ


    ಎಂಟ್ರೋವೈರಸ್- ಡಿ 68 ಎಂದರೇನು?


    ಎಂಟ್ರೊವೈರಸ್ ಡಿ 68 ಪೋಲಿಯೊ ಅಲ್ಲದ ಎಂಟ್ರೊವೈರಸ್ ಎಂದು ಕರೆಯಲ್ಪಡುವ 100 ಕಾಯಿಲೆಗಳಲ್ಲಿ ಒಂದಾಗಿದೆ. ಪೋಲಿಯೊ ಕೂಡ ಎಂಟ್ರೊವೈರಸ್ ಆಗಿದೆ. ಎಂಟ್ರೊವೈರಸ್ ಡಿ68 ಸಾಮಾನ್ಯವಾಗಿ ಸೌಮ್ಯ ಉಸಿರಾಟದ ಕಾಯಿಲೆಗೆ ಕಾರಣ ಆಗುತ್ತದೆ.


    ಚಳಿಗಾಲದಲ್ಲಿ ಉಂಟಾಗುವ ಉಸಿರಾಟ ತೊಂದರೆಯಂತೆ ಇದು ತೀವ್ರ ಫ್ಲಾಸಿಡ್ ಮೈಲಿಟಿಸ್ ಎಂಬ ಗಂಭೀರ ತೊಡಕಿಗೆ ಕಾರಣವಾಗುತ್ತದೆ. ಇದು ಪಾರ್ಶ್ವವಾಯು ಸಮಸ್ಯೆಗೆ ಕಾರಣ ಆಗಬಹುದು. US CDC ಯ ಪ್ರಕಾರ, ಎಂಟ್ರೊವೈರಸ್ ಸೋಂಕು ಸಾಮಾನ್ಯವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಸೋಂಕುಗಳು ಹೆಚ್ಚಾಗುತ್ತವೆ.


    ಎಂಟ್ರೊವೈರಸ್-ಡಿ68 ಹೇಗೆ ಹರಡುತ್ತದೆ?


    ಎಂಟ್ರೊವೈರಸ್-ಡಿ68 ನ ವೈರಸ್ ಸೋಂಕಿತ ವ್ಯಕ್ತಿಯ ಉಸಿರಾಟದ ಸ್ರವಿಸುವಿಕೆಯಲ್ಲಿ ಕಂಡು ಬರುತ್ತದೆ. ಲಾಲಾರಸ, ಮೂಗಿನ ಲೋಳೆ ಅಥವಾ ಶ್ವಾಸಕೋಶದಿಂದ ಲೋಳೆಯಂತಹ ಸ್ರವಿಸುವಿಕೆ ಒಳಗೊಂಡಿದೆ. ಸಿಡಿಸಿ ಪ್ರಕಾರ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಇತರ ಜನರು ಸ್ಪರ್ಶಿಸುವ ಮೇಲ್ಮೈ ಸ್ಪರ್ಶಿಸಿದಾಗ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.


    ಎಂಟ್ರೊವೈರಸ್-D68 ನ ಲಕ್ಷಣಗಳು


    ಈ ಸೋಂಕಿನ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಸಾಧ್ಯತೆ ಇದೆ. ಇದು ಸೌಮ್ಯವಾದ ರೋಗಲಕ್ಷಣಗಳು, ತೀವ್ರವಾದ ರೋಗ ಲಕ್ಷಣಗಳು ಅಥವಾ ಯಾವುದೇ ರೋಗ ಲಕ್ಷಣ ಉಂಟು ಮಾಡಬಹುದು. ಸೋರುವ ಮೂಗು, ಸೀನುವುದು, ಮೈಕೈ ನೋವು, ಸ್ನಾಯು ನೋವು ಲಕ್ಷಣಗಳು ಆಗಿವೆ.


    ಎಂಟ್ರೊವೈರಸ್ ಡಿ 68 ನ ಮಾರಕ ಚಿಹ್ನೆಗಳು


    ತೀವ್ರವಾದ ಫ್ಲಾಸಿಡ್ ಮೈಲಿಟಿಸ್ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಬೆನ್ನುಹುರಿ, ದೇಹದ ಸ್ನಾಯುಗಳು ಮತ್ತು ಪ್ರತಿವರ್ತನ ದುರ್ಬಲಗೊಳಿಸುತ್ತದೆ.


    ಹೆಚ್ಚಿನ ಫ್ಲಾಸಿಡ್ ಮೈಲಿಟಿಸ್ ಪ್ರಕರಣಗಳು 90 ಪ್ರತಿಶತಕ್ಕಿಂತ ಹೆಚ್ಚು ಚಿಕ್ಕ ಮಕ್ಕಳಲ್ಲಿ ಸಂಭವಿಸಿವೆ. ಎಂಟ್ರೊವೈರಸ್ D68 ನಿಂದ ಫ್ಲಾಸಿಡ್ ಮೈಲಿಟಿಸ್ ನ ಲಕ್ಷಣಗಳು ಇದರಲ್ಲಿ ಸೇರಿವೆ


    ತೋಳು ಅಥವಾ ಕಾಲಿನ ದೌರ್ಬಲ್ಯ, ಕುತ್ತಿಗೆ, ಬೆನ್ನು, ತೋಳು ಅಥವಾ ಕಾಲು ನೋವು, ಆಹಾರ ನುಂಗಲು ತೊಂದರೆ, ಕಣ್ಣುಗಳನ್ನು ಮಿಟುಕಿಸಲು ತೊಂದರೆ, ಮುಖದ ಕುಗ್ಗುವಿಕೆ ಅಥವಾ ದೌರ್ಬಲ್ಯ ಲಕ್ಷಣಗಳು ಸೇರಿವೆ.


    ಎಂಟ್ರೊವೈರಸ್ ಡಿ 68 ಕಾಯಿಲೆಯಿಂದ ರಕ್ಷಣೆ ಹೇಗೆ?


    ಎಂಟ್ರೊವೈರಸ್ ಗಳನ್ನು ತಪ್ಪಿಸುವುದು ಕಷ್ಟ. ಇದರಿಂದ ರಕ್ಷಣೆ ಪಡೆಯಲು ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ. ತೊಳೆಯದ ಕೈಗಳಿಂದ ನಿಮ್ಮ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಬೇಡಿ.


    ಇದನ್ನೂ ಓದಿ: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!


    ಚುಂಬನ, ಅಪ್ಪಿಕೊಳ್ಳುವುದು ಮತ್ತು ಕಪ್‌ ಹಂಚಿಕೊಳ್ಳುವುದು, ಇತರರ ತಟ್ಟೆಯಲ್ಲಿ ಆಹಾರ ಸೇವನೆ ಮತ್ತು ನಿಕಟ ಸಂಪರ್ಕ ತಪ್ಪಿಸಿ. ಕೆಮ್ಮು ಮತ್ತು ಸೀನುವಾಗ ಟಿಶ್ಯೂ, ಕರವಸ್ತ್ರ ಬಳಸಿ. ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿ.

    Published by:renukadariyannavar
    First published: