ಈರುಳ್ಳಿ (Onion) ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿದೆ. ಈರುಳ್ಳಿಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಹೆಚ್ಚಿನ ಜೀವಸತ್ವಗಳು ಮತ್ತು ಖನಿಜಗಳು ಈರುಳ್ಳಿಯಲ್ಲಿ ಸಮೃದ್ಧವಾಗಿವೆ. ಒಂದು ಮಧ್ಯಮ ಗಾತ್ರದ ಈರುಳ್ಳಿ ಕೇವಲ 44 ಪ್ರಮಾಣದ ಕ್ಯಾಲೋರಿ ಹೊಂದಿದೆ. ಈರುಳ್ಳಿಯಲ್ಲಿ ವಿಟಮಿನ್ಗಳು (Vitamin), ಖನಿಜ ಮತ್ತು ಫೈಬರ್ (Fiber) ಗಣನೀಯ ಪ್ರಮಾಣದಲ್ಲಿದೆ. ಈರುಳ್ಳಿಯಲ್ಲಿ ವಿಶೇಷವಾಗಿ ವಿಟಮಿನ್ ಸಿ ಅಧಿಕವಾಗಿದೆ. ಇದು ಪ್ರತಿರಕ್ಷಣಾ ಆರೋಗ್ಯ, ಕಾಲಜನ್ ಉತ್ಪಾದನೆ, ಅಂಗಾಂಶ ದುರಸ್ತಿ ಮತ್ತು ಕಬ್ಬಿಣದ ಹೀರಿಕೊಳ್ಳುವಿಕೆ ನಿಯಂತ್ರಿಸುವ ಪೋಷಕಾಂಶವಾಗಿದೆ. ಈರುಳ್ಳಿ ಬಗ್ಗೆ ಯಾಕೆ ಇಷ್ಟೊಂದು ಹೇಳ್ತಿದಿವಿ ಅಂದುಕೊಂಡ್ರಾ? ಯಾಕೆಂದ್ರೆ ಜೀವಸತ್ವಗಳಿಂದ ಸಮೃದ್ಧವಾಗಿರುವ ಈರುಳ್ಳಿ ಕಚೋರಿ ರೆಸಿಪಿ ಬೆಳಗಿನ ಉಪಾಹಾರದಲ್ಲಿ ಬಳಸಿದರೆ ಸಾಕಷ್ಟು ಆರೋಗ್ಯಕ್ಕೆ ಹಿತವಾಗಿದೆ.
ಈರುಳ್ಳಿ ಕಚೋರಿ ರೆಸಿಪಿ
ಈರುಳ್ಳಿ ಕಚೋರಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬೆಳಗಿನ ಉಪಾಹಾರವಾಗಲಿ ಅಥವಾ ಸಂಜೆಯ ತಿಂಡಿಗೆ ಇದನ್ನು ಮಾಡುವುದು ಉತ್ಸಾಹದಿಂದ ತಿನ್ನುವಂತೆ ಮಾಡುತ್ತದೆ. ಇದನ್ನು ಹಸಿರು ಚಟ್ನಿಯೊಂದಿಗೆ ಸೇವಿಸುವುದು ಸಾಕಷ್ಟು ಚೆನ್ನಾಗಿರುತ್ತದೆ. ಅಲ್ಲದೆ ಜನರು ಇದನ್ನು ಚಹಾದೊಂದಿಗೆ ತಿನ್ನಲು ಇಷ್ಟ ಪಡುತ್ತಾರೆ. ಹಾಗಾದರೆ ಇಲ್ಲಿ ನಾವು ಇಂದು ಈರುಳ್ಳಿ ಕಚೋರಿ ರೆಸಿಪಿ ಮಾಡುವ ವಿಧಾನದ ಬಗ್ಗೆ ತಿಳಿಯೋಣ.
ಈರುಳ್ಳಿ ಕಚೋರಿ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು
ತುಪ್ಪ
3 ಕಪ್ ಮೈದಾ ಅಥವಾ ಗೋಧಿ ಹಿಟ್ಟು,
4 ಕತ್ತರಿಸಿದ ಈರುಳ್ಳಿ,
3 ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು,
1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ,
5 ಲವಂಗ,
ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!
ಸಿಪ್ಪೆ ಸುಲಿದ ಮತ್ತು ಕತ್ತರಿಸಿದ ಬೆಳ್ಳುಳ್ಳಿ,
2 ಟೀಸ್ಪೂನ್ ಕೊತ್ತಂಬರಿ ಬೀಜಗಳು,
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ,
1 ಚಿಟಿಕೆ ಇಂಗು ಪುಡಿ,
1 ಟೀಸ್ಪೂನ್ ಜೀರಿಗೆ,
ಉಪ್ಪು ರುಚಿಗೆ ತಕ್ಕಷ್ಟು,
ಮಸಾಲಾ,
ಕರಿಯಲು ಎಣ್ಣೆ
ಈರುಳ್ಳಿ ಕಚೋರಿ ರೆಸಿಪಿ ಮಾಡುವ ವಿಧಾನ
ಗ್ಯಾಸ್ ಮೇಲೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕೊತ್ತಂಬರಿ ಬೀಜ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿ. ಈಗ ಈರುಳ್ಳಿ ಹಾಕಿ ಬೇಯಿಸಿ. ಈರುಳ್ಳಿಯ ಬಣ್ಣ ಗೋಲ್ಡನ್ ಆದ ನಂತರ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಒಂದು ನಿಮಿಷ ಬೇಯಿಸಿದ ನಂತರ, ಗ್ಯಾಸ್ ಆಫ್ ಮಾಡಿ.
ಈರುಳ್ಳಿ ಮಿಶ್ರಣಕ್ಕೆ ಹಸಿರು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ನಂತರ ಪಾತ್ರೆಯಲ್ಲಿ ಹಿಟ್ಟನ್ನು ಶೋಧಿಸಿ. ನಂತರ ಕರಗಿದ ತುಪ್ಪ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ. ಈಗ ಮೈದಾಗೆ ಸ್ವಲ್ಪ ನೀರು ಸೇರಿಸಿ ಕಲಸಿ. ಹಿಟ್ಟನ್ನು ಬೆರೆಸಿದ ನಂತರ ಅದನ್ನು ಹಗುರವಾದ ಒದ್ದೆಯಾದ ಬಟ್ಟೆಯಿಂದ ಮುಚ್ಚಿ. 10-15 ನಿಮಿಷಗಳ ಕಾಲ ಇರಿಸಿ.
ಈಗ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ದುಂಡಗೆ ಆಕಾರ ಮಾಡಿ, ಪೂರಿಯ ಮಧ್ಯದಲ್ಲಿ ಸ್ವಲ್ಪ ಈರುಳ್ಳಿ ಮಿಶ್ರಣ ಇರಿಸಿ ಮುಚ್ಚಿರಿ. ಅಂಗೈಗಳ ನಡುವೆ ಒತ್ತುವ ಮೂಲಕ ಅದನ್ನು ತೆಳ್ಳಗೆ ಮತ್ತು ಸುತ್ತಿರಿ. ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
ಇದನ್ನೂ ಓದಿ: ಕೂದಲು ಸಮಸ್ಯೆ ಹೆಚ್ಚಿದ್ರೆ ಇದು ಅಧಿಕ ಕೊಲೆಸ್ಟ್ರಾಲ್ ಸಂಕೇತವಾಗಿರಬಹುದು!
ಇದರಲ್ಲಿ ಕಚೋರಿ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಗಳಿಂದ ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ. ನಂತರ ಕಚೋರಿ ತಟ್ಟೆಗೆ ಹಾಕಿ. ಈಗ ಈರುಳ್ಳಿ ಕಚೋರಿಗಳು ಸಿದ್ಧ. ಇದನ್ನು ಹುಳಿ-ಸಿಹಿ ಚಟ್ನಿ ಮತ್ತು ಮೊಸರಿನ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ