ತೂಕ ಇಳಿಸುವ (Weight Loss) ಪ್ರಯಾಣ ಸುಲಭವಲ್ಲ. ಇದರ ಹಿಂದೆ ಸತತ ಹಾಗೂ ಕಠಿಣ ಪರಿಶ್ರಮ (Hard Work), ತಾಳ್ಮೆ, ಆತ್ಮವಿಶ್ವಾಸ ಬೇಕೇ ಬೇಕು. ಪ್ರತಿಯೊಬ್ಬರ ಜೀವನದಲ್ಲಿ (Life) ಒಂದು ಮಹತ್ವದ ತಿರುವು ಇರುತ್ತದೆ. ಅದು ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಅದರಲ್ಲೂ ತೂಕ ಇಳಿಸುವ ಪ್ರಯಾಣದ ವೇಳೆ ಮಹತ್ವದ ಘಟ್ಟ ಬಂದೇ ಬರುತ್ತದೆ. ಅದೇ ನಿಮ್ಮನ್ನು ತೂಕ ಇಳಿಸಲು ಪ್ರಚೋದನೆ ನೀಡುತ್ತದೆ. ಅದರ ನಂತರ ಯಾರೇ ಆಗಲಿ ತಮ್ಮ ಫಿಟ್ನೆಸ್ (Fitness) ಪ್ರಯಾಣ ಶುರು ಮಾಡುತ್ತಾರೆ. ಅಂತಹ ಒಂದು ಹಂತದಲ್ಲಿ ತೂಕ ಇಳಿಸುವ ಬಗ್ಗೆ ನಿರ್ಧಾರ ಮಾಡಿದ ಇಪ್ಪತ್ತೆರಡು ವರ್ಷದ ಹುಡುಗಿಯೊಬ್ಬರಿದ್ದಾರೆ.
ಆಕೆಯ ತೂಕ ಸುಮಾರು 172 ಕೆಜಿ ಇತ್ತು. ಒಮ್ಮೆ ಮ್ಯೂಸಿಯಂ ಪಾರ್ಕ್ಗೆ ಹೋದಾಗ ಸವಾರಿ ಮಾಡುವಾಗ ಇಬ್ಬರು ಸೇರಿ ಆಕೆಯನ್ನು ತಳ್ಳಬೇಕಾಗಿ ಬಂತು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಆಕೆ, ಅಂದೇ ತಾನು ತೂಕ ಇಳಿಸಬೇಕೆಂದು ನಿರ್ಧರಿಸಿದಳು. ಅದೇ ಆಕೆಯ ಜೀವನದಲ್ಲಿ ತೂಕ ಇಳಿಕೆಯ ಟರ್ನಿಂಗ್ ಪಾಯಿಂಟ್ ಆಗಿತ್ತು.
ಇಂದು ಆ ಹುಡುಗಿ ಸುಮಾರು 88 ಕೆಜಿ ಇಳಿಸಿದ್ದಾಳೆ. ಆ ಹುಡುಗಿ ಯಾರು? ಆಕೆಯ ಫಿಟ್ನೆಸ್ ಜರ್ನಿ ಹೇಗಿತ್ತು ಎಂಬುದನ್ನು ಇಲ್ಲಿ ನೋಡೋಣ.
ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!
ಎಂಬತ್ತೆಂಟು ಕೆಜಿ ತೂಕ ಇಳಿಸಿದ ಆ ಹುಡುಗಿ ಯಾರು?
88 ಕೆಜಿ ತೂಕ ಇಳಿಸಿದ ಹುಡುಗಿಯ ಹೆಸರು ಸ್ಟೆಫನಿ ಸ್ಮಿತ್. ಆಕೆಯ ವಯಸ್ಸು ಇಪ್ಪತ್ತೆರಡು. ಅವರ ತೂಕ 172 ಕೆಜಿ ಮತ್ತು BMI 56 ಆಗಿತ್ತು. ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಆರೋಗ್ಯಕರ BMI 18.5 ರಿಂದ 24.9 ವರೆಗೆ ಇರಬೇಕು. ಸ್ಟೆಫನಿ 88 ಕೆಜಿ ತೂಕ ಇಳಿಸಲು 18 ತಿಂಗಳು ಬೇಕಾಯಿತು. ಇಂದು ಸ್ಟೆಫನಿಯ ತೂಕ 82 ಕೆ.ಜಿ
ಅತಿಯಾದ ಆಹಾರ ಸೇವನೆಯೇ ತೂಕ ಹೆಚ್ಚಾಗಲು ಕಾರಣ
5 ಅಡಿ 9 ಇಂಚು ಎತ್ತರದ ಸ್ಟೆಫನಿಗೆ ಬಾಲ್ಯದಿಂದಲೂ ಆಹಾರವೆಂದರೆ ತುಂಬಾ ಇಷ್ಟ. 12 ವರ್ಷದವಳಿದ್ದಾಗ ಆಕೆ ಸಾಮಾನ್ಯ ಗಾತ್ರ ಹೊಂದಿದ್ದಳು. 12 ವರ್ಷದ ನಂತರ ತೂಕ ಹೆಚ್ಚಿತು. ಸ್ಕೂಲಿನಲ್ಲಿದ್ದಾಗ ಎರಡೆರಡು ಕೇಕ್ ತಿನ್ನುತ್ತಿದ್ದಳು. ಜೊತೆಗೆ ಬಿಸ್ಕತ್, ರೋಲ್ ಪ್ಯಾಕೆಟ್ ತಿನ್ನುತ್ತಿದ್ದಳು. ಆಕೆಯ ಹಸಿವಿಗೆ ಮಿತಿಯೇ ಇರಲಿಲ್ಲ. ಎಲ್ಲಾ ಸಮಯದಲ್ಲಿ ಬರೀ ತಿನ್ನುತ್ತಲೇ ಇರುತ್ತಿದ್ದಳು. ಆಲೋಚನೆ ಮತ್ತು ತಿಳುವಳಿಕೆ ಕೇವಲ ಆಹಾರಕ್ಕೆ ಸೀಮಿತವಾಗಿತ್ತು ಎಂದು ಸಂದರ್ಶನವೊಂದರಲ್ಲಿ ತಮ್ಮ ಅನುಭವ ಶೇರ್ ಮಾಡಿದ್ದಾರೆ.
ಹೊಟ್ಟೆ ತುಂಬಿದ ನಂತರವೂ ತಿನ್ನುತ್ತಿದ್ದೆ. ಎಷ್ಟೋ ಸಲ ಹೊಟ್ಟೆ ನೋಯುವ ತನಕ ತಿನ್ನುತ್ತಿದ್ದೆ. ಆವಕಾಡೊ, ಸ್ಕ್ರಾಂಬಲ್ಡ್ ಮೊಟ್ಟೆ ಮತ್ತು ಟೋಸ್ಟ್, ಡೈರಿ ಫುಡ್ಸ್, ಹಸಿವಾದ ತಕ್ಷಣ ಕುರುಕಲು-ಬೀಫರ್-ಕೇಕ್ , ಮಧ್ಯಾಹ್ನ ಎರಡು ದೊಡ್ಡ ಸ್ಯಾಂಡ್ವಿಚ್, ಹೀಗೆ ದಿನವಿಡೀ ಊಟ ಮಾಡುತ್ತಿದ್ದೆ ಎಂದಿದ್ದಾರೆ.
15-16 ವರ್ಷ ವಯಸ್ಸಿನಲ್ಲಿ ನನ್ನ ತಿನ್ನುವ ಚಟ ಅತಿಯಾಯಿತು. ಹೀಗಾಗಿ ನನ್ನ ಹೆತ್ತವರು ಅಡುಗೆಮನೆ ಮತ್ತು ಫ್ರಿಜ್ಗೆ ಬೀಗ ಹಾಕುತ್ತಿದ್ದರು. ದಿನಗಳು ಕಳೆದಂತೆ ನನಗೆ ಮೆಟ್ಟಿಲು ಹತ್ತಲು ಸಾಧ್ಯವಾಗಲಿಲ್ಲ. ಬಗ್ಗಿ ಶೂ ಲೇಸ್ ಕಟ್ಟಲಾಗ್ತಿರಲಿಲ್ಲ. ನಡೆಯಲು ಸಹ ಸಾಧ್ಯವಾಗಲಿಲ್ಲ.
2020 ರ ಬೇಸಿಗೆಯಲ್ಲಿ ಥೋರ್ಪ್ ಪಾರ್ಕ್ನಲ್ಲಿ ಸವಾರಿ ಮಾಡುವಾಗ ಮುಜುಗರ ಎದುರಿಸಿದೆ. ಆಗ ಮನೆಯವರು ನನಗೆ ಡಯಟ್ ಮಾಡಲು ಸಲಹೆ ನೀಡಿದರು. ಅದು ನನ್ನ ಜೀವನದ ಮಹತ್ವದ ತಿರುವು ಎಂದಿದ್ದಾರೆ.
ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ಟೆಫನಿ
ಕುಟುಂಬದ ಸಲಹೆಯ ಮೇರೆಗೆ ಕೆಂಟ್ನ ಬೆನೆಡೆನ್ ಆಸ್ಪತ್ರೆಯಲ್ಲಿ 2020 ರಲ್ಲಿ ಸ್ಟೆಫನಿ ಮೊದಲು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಪಡೆದರು. ಒಂದು ತಿಂಗಳಲ್ಲಿ ಸುಮಾರು 3 ಕೆಜಿ ತೂಕ ಇಳಿಸಿದರು. ಆಹಾರ ಕ್ರಮ ಬದಲಾಯಿಸಿದರು. ಇಂದು ಅವರ ತೂಕ ಸುಮಾರು 82 ಕೆ.ಜಿ. BMI 27 ಇದೆ.
ಇದನ್ನೂ ಓದಿ: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ
ಈಗ ನನ್ನ ಹಸಿವು ಸಾಕಷ್ಟು ಕಡಿಮೆಯಾಗಿದೆ. ಸಣ್ಣ ಭಾಗ ಮಾಡಿ ಆಹಾರ ಸೇವಿಸುವುದು, ಹಸಿರು ತರಕಾರಿ, ಧಾನ್ಯ, ಹಣ್ಣು ಮತ್ತು ತಾಜಾ ಆಹಾರ ಸೇವಿಸುವುದಾಗಿ ಹೇಳಿದ್ದಾರೆ. ಪ್ರತಿದಿನ ನಡಿಗೆ, ಜೀವನಶೈಲಿ ಬದಲಾಯಿಸಿದ್ದಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ