Health Care: ಬಿಕ್ಕಳಿಕೆಯನ್ನು ಕ್ಷಣಾರ್ಧದಲ್ಲಿ ಮಾಯ ಮಾಡಲು ಈ ಸರಳ ಟ್ರಿಕ್ಸ್ ಪಾಲಿಸಿ

ಬಿಕ್ಕಳಿಕೆ ಒಂದು ಸಾಮಾನ್ಯ ತೊಂದರೆಯಾಗಿದೆ. ಯಾರಿಗೇ ಆಗಲಿ ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆ ಬಂದೇ ಬಂದಿರುತ್ತದೆ. ಪದೇ ಪದೇ ಬಿಕ್ಕಳಿಕೆ ಬಂದಾಗ ಏನು ಮಾಡಬೇಕು ಎಂಬುದನ್ನು ಇಲ್ಲಿ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಮಗೆಲ್ಲರಿಗೂ ಬಿಕ್ಕಳಿಕೆ (Hiccups) ಬಗ್ಗೆ ಗೊತ್ತೇ ಇದೆ. ಊಟ (Dinner) ಮಾಡುವಾಗ ಬಿಕ್ಕಳಿಕೆ ಹೆಚ್ಚಾಗಿ ಬರುವುದುಂಟು. ಬಿಕ್ಕಳಿಕೆ ಬರುವುದು ಸಹ ತುಂಬಾ ಸಾಮಾನ್ಯವಾಗಿದೆ. ಬಿಕ್ಕಳಿಕೆ ಬಂದ ನಂತರ ಕೆಲವು ನಿಮಿಷಗಳಲ್ಲಿ (Minutes) ತಾನಾಗಿಯೇ ಹೋಗಿ ಬಿಡುತ್ತದೆ. ಆದರೆ ಕೆಲವೊಮ್ಮೆ ಈ ಬಿಕ್ಕಳಿಕೆಗಳು ನಮ್ಮನ್ನು ತುಂಬಾ ಕಾಡುತ್ತವೆ. ಬಿಕ್ಕಳಿಕೆ ಒಂದು ಸಾಮಾನ್ಯ (Normal) ತೊಂದರೆಯಾಗಿದೆ. ಯಾರಿಗೇ ಆಗಲಿ ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆ ಬಂದೇ ಬಂದಿರುತ್ತದೆ. ಬಿಕ್ಕಳಿಕೆ ಕಡಿಮೆಯಾಗುವವರೆಗೂ ಅಹಿತಕರ ಭಾವನೆಗೆ (Uncomfortable) ನಾವು ತುತ್ತಾಗುತ್ತೇವೆ. ಬಿಕ್ಕಳಿಕೆಯ ಶಬ್ದ ಕಿರಿಕಿರಿ ಉಂಟು ಮಾಡುತ್ತದೆ. ನಮ್ಮ ಎದೆ ಮತ್ತು ಹೊಟ್ಟೆಯ ನಡುವೆ ಇರುವ ವಪೆ ಎಂಬ ಪದರ ಕೆಲವೊಮ್ಮೆ ಅಕಸ್ಮಾತ್ತಾಗಿ ಸಂಕುಚಿತಗೊಂಡಾಗ ಗಾಳಿ ಸ್ಫೋಟಿಸಿದಂತೆ ಹೊರಗೆ ಬೀಳುತ್ತದೆ. ಆಗ ಧ್ವನಿಪೆಟ್ಟಿಗೆಯೂ ಮುಚ್ಚಿಕೊಳ್ಳುತ್ತದೆ. ಆಗ ಬಿಕ್ಕಳಿಕೆ ಉಂಟಾಗುತ್ತದೆ.

    ಬಿಕ್ಕಳಿಕೆ ಸೆಕೆಂಡುಗಳ ಅಂತರದಲ್ಲಿ ಮತ್ತೊಮ್ಮೆ ಹೀಗೇ ಪುನರಾವರ್ತನೆಯಾಗುತ್ತದೆ ಹಾಗೂ ಸಾಮಾನ್ಯವಾಗಿ ಇದು ಒಂದೆರಡು ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಕೆಲವರಲ್ಲಿ ಇದು ತುಂಬಾ ಹೊತ್ತಿನವರೆಗೆ ಹೋಗುವುದೇ ಇಲ್ಲ.

    ಬಿಕ್ಕಳಿಕೆಯಿಂದ ತೊಂದರೆ

    ಹೀಗೆ ದೀರ್ಘಕಾಲ ಕಾಡುವ ಬಿಕ್ಕಳಿಕೆ ಉಸಿರಾಟದ ತೊಂದರೆ, ಕೇಂದ್ರ ನರವ್ಯವಸ್ತೆಯಲ್ಲಿ ಏರುಪೇರು, ಜಠರ ಕರುಳಿನ ತೊಂದರೆ ಹಾಗೂ ಜೀವರಾಸಾಯನಿಕ ಕ್ರಿಯೆಯಲ್ಲಿ ತೊಂದರೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಬುರುಗುಬರುವ ಲಘು ಪಾನೀಯ ಅಥವಾ ಮದ್ಯ ಸೇವಿಸಿದಾಗ, ಕೆಲವೊಮ್ಮೆ ಹೆಚ್ಚು ಆಹಾರ ಸೇವನೆ, ಗಡಿಬಿಡಿಯಲ್ಲಿ ತಿಂದಾಗ ಅಥವಾ ಮಸಾಲೆಯುಕ್ತ ಆಹಾರ ಸೇವನೆ, ಗಟ್ಟಿ ಪದಾರ್ಥಗಳ ಸೇವನೆ ಮಾಡಿದಾಗ ಬಿಕ್ಕಳಿಕೆ ಬರುವುದುಂಟು.

    ಇದನ್ನೂ ಓದಿ: ಕೂತು ಕೆಲಸ ಮಾಡಿ ತೂಕ ಹೆಚ್ಚಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

    ಕೆಲವರು ಬಿಕ್ಕಳಿಕೆಯಿಂದ ಅತಿಯಾದ ಭಯ, ಒತ್ತಡ ಅಥವಾ ಉದ್ವೇಗಕ್ಕೆ ಒಳಗಾಗುತ್ತಾರೆ. ನಾಲ್ಕು ಜನರ ಮಧ್ಯೆ ಇದ್ದಾಗ ಬಿಕ್ಕಳಿಕೆ ಮುಜುಗರ ತರಿಸುತ್ತದೆ. ಹಾಗಾಗಿ ನೀವು ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ತೊಡೆದು ಹಾಕಬಹುದು. ನಿಮಗೆ ಪದೇ ಪದೇ ಬಿಕ್ಕಳಿಕೆ ಬಂದಾಗ ಏನು ಮಾಡಬೇಕು ಎಂಬುದನ್ನು ಇಲ್ಲಿ ನೋಡಿ.. ಬಿಕ್ಕಳಿಕೆ ನಿಲ್ಲಿಸಲು ಹೀಗೆ ಮಾಡಿ

    ನೀರು ಕುಡಿಯುವುದು

    ಉಸಿರಾಟ ಪ್ರಕ್ರಿಯೆಯ ಮಧ್ಯೆ ನಿಲ್ಲದೆ ನಿಧಾನವಾಗಿ ಒಂದು ಲೋಟ ನೀರು ಕುಡಿಯಿರಿ. ಇದು ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತದೆ. ಬಿಕ್ಕಳಿಕೆಯನ್ನೆ ನಿಮಿಷಗಳಲ್ಲಿ ಮಂಗಮಾಯ ಮಾಡುತ್ತದೆ. ಯುಗಗಳಿಂದಲೂ  ಈ ಟ್ರಿಕ್ ನ್ನು ಜನರು ಬಳಸುತ್ತಿದ್ದಾರೆ. ನೀರು ಕುಡಿದಾಗ ನಿಮಗೆ ಬಿಕ್ಕಳಿಕೆ ಸಮಸ್ಯೆ ಕಡಿಮೆಯಾಗಿ ರಿಲೀಫ್ ಸಿಗುತ್ತದೆ.

    ರೆಫ್ರಿಜರೇಟರ್ ನೀರು ಕುಡಿಯಿರಿ

    ಒಂದು ಲೋಟದಲ್ಲಿ ಹೆಚ್ಚು ತಂಪಾದ ಅಂದರೆ ರೆಫ್ರಿಜರೇಟರ್ ನೀರನ್ನು ತೆಗೆದುಕೊಂಡು ಅದನ್ನು ನಿಧಾನವಾಗಿ ಬಾಯಲ್ಲಿ ಕಚ್ಚಿಕೊಂಡು ಹೀರುತ್ತಾ ಹೋಗಿ. ಇದರಿಂದ ಬಿಕ್ಕಳಿಕೆಗೆ ಕಾರಣವಾದ  ನರಮಂಡಲ ಶಾಂತವಾಗುತ್ತದೆ. ತಕ್ಷಣ ಬಿಕ್ಕಳಿಕೆ ನಿಂತು ಹೋಗುತ್ತದೆ.

    ಟವೆಲ್ ಮುಚ್ಚಿ ನೀರು ಕುಡಿಯಿರಿ

    ನೀವು ಒಂದು ಲೋಟದ ಮೇಲೆ ಒಂದು ಶುದ್ಧವಾದ ಹತ್ತಿ ಬಟ್ಟೆಯನ್ನು ಅಥವಾ ಟವಲ್ ಮುಚ್ಚಿ ಅದರಿಂದ ನೀರು ಕುಡಿಯುವ ಪ್ರಯತ್ನ ಮಾಡಿ. ಇದು ನಿಮ್ಮ ಬಿಕ್ಕಳಿಕೆಯನ್ನು ನಿಲ್ಲಿಸುತ್ತದೆ.

    ಉಸಿರಾಟವನ್ನು ನಿಲ್ಲಿಸಿ

    ದೀರ್ಘ ಉಸಿರನ್ನು ಎಳೆದುಕೊಳ್ಳಿ. ಕೆಲ ನಿಮಿಷ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ ನಂತರ ನಿಧಾನವಾಗಿ ಹೊರಗೆ ಬಿಡಿ. ಹೀಗೆ ಮಾಡುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

    ಒಂದು ಚಮಚ ಸಕ್ಕರೆಯನ್ನು ಸೇವಿಸಿ

    ಬಿಕ್ಕಳಿಕೆ ನಿಮಿಷಗಳಲ್ಲಿ ನಿಲ್ಲದಿದ್ದರೆ, ನಿಮಗೆ ಬಿಕ್ಕಳಿಕೆ ಬಂಇದ್ದರೆ ನಿಮ್ಮ ನಾಲಿಗೆಗೆ ಅರ್ಧ ಚಮಚ ಸಕ್ಕರೆ ಹಾಕಿ. ಮತ್ತು ಅದನ್ನು 5 ಸೆಕೆಂಡುಗಳ ಕಾಲ ಇರಿಸಿ. ನಂತರ ಅದನ್ನು ನುಂಗಿ. ಹೀಗೆ ಮಾಡುವುದರಿಂದ ನಿಮ್ಮ ಬಿಕ್ಕಳಿಕೆ ನಿಲ್ಲುತ್ತದೆ.

    ನಾಲಿಗೆಯನ್ನು ನಿಧಾನವಾಗಿ ಎಳೆಯಿರಿ

    ಇದು ನಿಮಗೆ ವಿಚಿತ್ರವೆನಿಸಬಹುದು ಆದರೆ ಈ ಟ್ರಿಕ್ ನಿಜವಾಗಿಯೂ ಕೆಲಸ ಮಾಡುತ್ತದೆ. ಇದಕ್ಕಾಗಿ ನಿಮ್ಮ ನಾಲಿಗೆಯನ್ನು ಒಮ್ಮೆ ಅಥವಾ ಎರಡು ಬಾರಿ ನಿಧಾನವಾಗಿ ಹೊರಕ್ಕೆ ಎಳೆಯಿರಿ. ಇದರಿಂದ ಬಿಕ್ಕಳಿಕೆ ಕಡಿಮೆ ಆಗುತ್ತದೆ.

    ಇದನ್ನೂ ಓದಿ: ನಿದ್ರೆ ಬರ್ತಿಲ್ಲವೇ? ಈ ಯೋಗಾಸನ ಮಾಡಿ ಗುಡ್ ನೈಟ್ ಹೇಳಿ!

    ಕಾಗದದ ಚೀಲದಲ್ಲಿ ಉಸಿರಾಡಿ

    ನಿಮ್ಮ ಬಾಯಿಯ ಮೇಲೆ ಕಾಗದದ ಚೀಲವನ್ನು ಇರಿಸಿ. ನಿಮ್ಮ ಮೂಗನ್ನೂ ಮುಚ್ಚಿಕೊಳ್ಳಿ. ಈಗ ಉಸಿರಾಡುವಾಗ ಮತ್ತು ಬಿಡುವಾಗ ಕಾಗದದ ಚೀಲವನ್ನು ನಿಧಾನವಾಗಿ ಉಬ್ಬಿಸಿ. ಹೀಗೆ ಮಾಡುವುದರಿಂದ ಬಿಕ್ಕಳಿಕೆಯಿಂದ ಮುಕ್ತಿ ಪಡೆಯಬಹುದು.
    Published by:renukadariyannavar
    First published: