• Home
  • »
  • News
  • »
  • lifestyle
  • »
  • Elon Musk: 13 ಕೆಜಿ ತೂಕ ಇಳಿಸಿಕೊಂಡ ಟ್ವಿಟರ್‌ ಮಾಲೀಕ, ಎಲಾನ್​ ಮಸ್ಕ್ ಸ್ಟೋರಿ ಇದು

Elon Musk: 13 ಕೆಜಿ ತೂಕ ಇಳಿಸಿಕೊಂಡ ಟ್ವಿಟರ್‌ ಮಾಲೀಕ, ಎಲಾನ್​ ಮಸ್ಕ್ ಸ್ಟೋರಿ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Elon Musk Lost 13 kg: ಟ್ವಿಟರ್‌ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಸುಮಾರು 30 ಪೌಂಡ್‌ (13 ಕೆಜಿ) ತೂಕ ಕಳೆದುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ.

  • Share this:

ಸಾಮಾಜಿಕ ಮಾಧ್ಯಮ (Social Media) ದೈತ್ಯ ಟ್ವಿಟರ್‌(Twitter) ಅನ್ನು ಸ್ವಾಧೀನ ಪಡಿಸಿಕೊಂಡ ಮೇಲೆ ಅದರ ಮುಖ್ಯಸ್ಥ ಎಲಾನ್ ಮಸ್ಕ್‌ (elon musk) ಒಂದಲ್ಲ ಒಂದು ವಿಚಾರಕ್ಕೆ ದಿನವೂ ಸುದ್ದಿಯಾಗುತ್ತಿದ್ದಾರೆ. ಇದೀಗ ಈ ಬಿಲಿಯನೇರ್‌ ಮಸ್ಕ್‌ ಸುಮಾರು 13 ಕೆಜಿ ತೂಕ ಕಳೆದುಕೊಂಡಿದ್ದೇನೆಂದು (Weight Loss) ಹೇಳಿದ್ದು ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಟ್ವಿಟರ್‌ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಸುಮಾರು 30 ಪೌಂಡ್‌ (13 ಕೆಜಿ) ತೂಕ ಕಳೆದುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ. ತಾವು ಮಧುಮೇಹ ಹೊಂದಿರುವುದರಿಂದ ಅದರ ಔಷಧ ತೆಗೆದುಕೊಳ್ಳುವುದು ಕಡ್ಡಾಯ. ಜೊತೆಗೆ ತಾವು ಅಳವಡಿಸಿಕೊಂಡ ಉಪವಾಸ ಹಾಗೂ ಕಟ್ಟುನಿಟ್ಟಿನ ಆಹಾರ ಕ್ರಮದ ಬಗ್ಗೆಯೂ ಹೇಳಿದ್ದಾರೆ.


ತೂಕ ಇಳಿಕೆಯ ರಹಸ್ಯ ಬಿಚ್ಚಿಟ್ಟ ಮಸ್ಕ್


ಈ ಬಗ್ಗೆ ಟ್ವಿಟರ್‌ ನಲ್ಲಿ ವಿವರಿಸಿದ ಮಸ್ಕ್‌, ಉಪವಾಸ + ಓಜೆಂಪಿಕ್ / ವೆಗೋವಿ + ನನ್ನ ಹತ್ತಿರ ಯಾವುದೇ ರುಚಿಕರವಾದ ಆಹಾರವಿಲ್ಲ" ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಮಸ್ಕ್ ಅವರು ಉಪವಾಸದ ಇದೇ ಸಂಯೋಜನೆಯನ್ನು ಬಳಸುತ್ತಾರೆ. "ಟೇಸ್ಟಿ ಆಹಾರ" ಸೇವನೆಯನ್ನು ಸೀಮಿತಗೊಳಿಸುತ್ತಾರೆ ಮತ್ತು ಸಮತೋಲನ ತೂಕ ಮತ್ತು ಆರೋಗ್ಯಕರವಾಗಿರಲು ಮಧುಮೇಹ ಔಷಧಿ Ozempic/Wegovy ಅನ್ನು ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.


ಇನ್ನು, ಮಸ್ಕ್‌ ಅವರ ಟ್ವೀಟ್‌ ಗೆ ಬಹಳಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಒಬ್ಬರಂತೂ "ನೀವು ಒಂದು ಟನ್ ತೂಕವನ್ನು ಕಳೆದುಕೊಂಡಿದ್ದೀರಿ, ಎಲೋನ್! ಅದ್ಭುತ ಕೆಲಸವನ್ನು ಮುಂದುವರಿಸಿ" ಎಂದು ಪ್ರಕ್ರಿಯಿಸಿದ್ದಾರೆ. ಅಲ್ಲದೇ ಅವರು ಅವರು ಟ್ವೀಟ್‌ನಲ್ಲಿ ಬಿಲಿಯನೇರ್‌ ಮಸ್ಕ್‌ ಅವರ ತೂಕ ಇಳಿಕೆ ರೂಪಾಂತರವನ್ನ ತೋರಿಸುವ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಯಂಗ್‌ ಆಗಿ ಕಾಣೋಕೆ ಕಾಲಜನ್ ಇರೋ ಈ ಆಹಾರಗಳನ್ನು ತಿನ್ಬೇಕಂತೆ


ಇನ್ನೂ ಅನೇಕ ಬಳಕೆದಾರರು ಮಸ್ಕ್ ರೂಪಾಂತರವನ್ನು ನೋಡಿ ಆಶ್ಚರ್ಯಚಕಿತರಾದರು. ಅವರಲ್ಲಿ ಒಬ್ಬರು ಕಂಪನಿಯ "ಚೀಫ್ ಟ್ವಿಟ್" ಗೆ ಇದನ್ನು ಹೇಗೆ ಸಾಧಿಸಿದ್ದೀರಿ ಎಂದು ಕೇಳಿದರು.‌ ಇನ್ನೂ ಕೆಲವಷ್ಟು ಜನರು ಎಲೋನ್‌ ಅವರನ್ನು ಅಭಿನಂದಿಸಿದರು. ಒಬ್ಬ ಬಳಕೆದಾರ, "ಅಭಿನಂದನೆಗಳು ಇದು ಅದ್ಭುತವಾಗಿದೆ" ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, "ಇದು ಕಠಿಣ ಹಾದಿಯಾಗಿರಬಹುದು, ಆದರೆ ಅದನ್ನು ಮುಂದುವರಿಸಿ ಮತ್ತು ನೀವು ನಿಮ್ಮ ಗುರಿ ತಲುಪಿ " ಎಂದಿದ್ದಾರೆ.


ಜೀವನಶೈಲಿ ಬದಲಾಯಿಸಿಕೊಂಡಿದ್ದಾರಂತೆ ಮಸ್ಕ್


ಅಂದಹಾಗೆ, ಕೆಲವು ತಿಂಗಳುಗಳ ಹಿಂದೆ ಎಲಾನ್ ಮಸ್ಕ್ ಅವರು ಕೆಲವು ಜೀವನಶೈಲಿಯನ್ನು ಬದಲಾಯಿಸುತ್ತಿರುವುದಾಗಿ ಹಂಚಿಕೊಂಡಿದ್ದರು. ಸ್ನೇಹಿತರೊಬ್ಬರ ಸಲಹೆ ಮೇರೆಗೆ ನಿಯತಕಾಲಿಕವಾಗಿ ಉಪವಾಸ ಮಾಡುತ್ತಿದ್ದೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಆಗಸ್ಟ್ 28 ರಂದು ಟ್ವೀಟ್ ನಲ್ಲಿ ತಿಳಿಸಿದ್ದರು. "ಒಳ್ಳೆಯ ಸ್ನೇಹಿತನ ಸಲಹೆಯ ಮೇರೆಗೆ, ನಾನು ಉಪವಾಸ ಮಾಡುತ್ತಿದ್ದೇನೆ ಮತ್ತು ಆರೋಗ್ಯವಾಗಿರುತ್ತೇನೆ. ಝೀರೋ ಫಾಸ್ಟಿಂಗ್ ಅಪ್ಲಿಕೇಶನ್ ತುಂಬಾ ಒಳ್ಳೆಯದು" ಎಂದು ಟ್ವಿಟರ್‌ ನಲ್ಲಿ ಬರೆದುಕೊಂಡಿದ್ದರು. ಅವರು ತಮ್ಮ ಗರಿಷ್ಠ ತೂಕದಿಂದ "20 ಪೌಂಡುಗಳಷ್ಟು (ಒಂಬತ್ತು ಕೆಜಿ) ಕಡಿಮೆ ಮಾಡಿದ್ದಾಗಿ ಸಹ ಉಲ್ಲೇಖಿಸಿದ್ದರು.


ಈ ಮಧ್ಯೆ, ಈ ಹಿಂದೆ ಆಸ್ಟ್ರೇಲಿಯನ್ ರೇಡಿಯೋ ಸ್ಟೇಷನ್ KIIS FM ನಲ್ಲಿ ಕೈಲ್ ಮತ್ತು ಜಾಕಿ ಓ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಸ್ಕ್ ಅವರ ತಂದೆ ಎರೋಲ್ ಮಸ್ಕ್, ತಮ್ಮ ಮಗ "ಕೆಟ್ಟದಾಗಿ ತಿನ್ನುತ್ತಿದ್ದಾನೆ" ಎಂದು ಹೇಳಿದ್ದರು. ಅಲ್ಲದೇ, ಎರೋಲ್ ಮಸ್ಕ್ ತನ್ನ ಮಗ ತನ್ನ ತೂಕವನ್ನು ಕಾಯ್ದುಕೊಳ್ಳಲು ಡಯಟ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದರು.
ಒಟ್ಟಾರೆ, ಮಧುಮೇಹವನ್ನೂ ಹೊಂದಿರುವ ಎಲಾನ್ ಮಸ್ಕ್‌ ಆಹಾರ ಪದ್ಧತಿ, ಜೀವನಶೈಲಿಯನ್ನು ಬದಲಾಯಿಸಿಕೊಂಡು ತೂಕ ಇಳಿಕೆ ಮಾಡಿಕೊಂಡಿದ್ದಾರೆ. ಸ್ಥೂಲಕಾಯದಿಂದ ಮುಕ್ತಿ ಹೊಂದಲು ಕಡಿಮೆ ಆಹಾರ, ಪೌಷ್ಠಿಕಾಂಶವುಳ್ಳ ಆಹಾರ ಹಾಗೂ ಸರಿಯಾದ ವ್ಯಾಯಾಮ ಬಹಳ ಮುಖ್ಯ.


ಇದನ್ನೂ ಓದಿ: ಧುಮ್ಮಿಕುವ ಹಬ್ಬೆ ಜಲಪಾತ ನೋಡೋದೆ ಒಂದು ಸುಂದರ ಅನುಭವ, ಇಲ್ಲಿಗೆ ಹೋಗೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್​


ಅವರು ಶ್ರೀಮಂತರೇ ಇರಲಿ ಅಥವಾ ಬಡವರೇ ಇರಲಿ. ಉತ್ತಮ ಜೀವನ ಶೈಲಿಯನ್ನು ಹೊಂದುವುದು ಬಹಳ ಮುಖ್ಯವಾಗಿದೆ. ಅದರಲ್ಲೂ ಮಧುಮೇಹದಂತಹ ರೋಗ ರೊಂದಿರುವವರು ಆಹಾರವನ್ನು ಅತ್ಯಂತ ಕಟ್ಟುನಿಟ್ಟಾಗಿ ಸೇವಿಸೋದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಎಲೋನ್‌ ಮಸ್ಕ್‌ ಅವರ ಸಾಧನೆ ದೊಡ್ಡದೆಂದೇ ಹೇಳಬಹುದು.

Published by:Sandhya M
First published: