Indian Jujube: ಸರ್ವ ರೋಗಕ್ಕೂ ಈ ಹಣ್ಣು ದಿವ್ಯ ಔಷಧ! ಇದನ್ನು ತಿಂದ್ರೆ ಯಾವ ಕಾಯಿಲೆನೂ ಬರಲ್ಲಾ

ಯಾವುದೇ ಋತುಮಾನವಿದ್ದರೂ ನೀವು ಆ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಸೇವಿಸುತ್ತಾ ಇದ್ದರೆ, ನಿಮ್ಮ ಆರೋಗ್ಯ ಉತ್ತಮವಾಗಿ ಇರುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗೆಯೇ ಬೋರೆ ಹಣ್ಣು ಸಹ. ಇದನ್ನು ಗ್ರಾಮೀಣ ಭಾಷೆಯಲ್ಲಿ ಬಾರಿ ಹಣ್ಣು ಎಂದು ಕರೆಯುತ್ತಾರೆ. ಈ ಹಣ್ಣು ಹುಳಿ ಮಿಶ್ರಿತ ಸಿಹಿ ಹಣ್ಣು ಆಗಿರುವುದರಿಂದ ಬೋರೆ ಹಣ್ಣು ವಿಭಿನ್ನವಾದ ರುಚಿಯನ್ನು ಹೊಂದಿರುತ್ತದೆ ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ಈ ಲೇಖನದಲ್ಲಿಂದು ತಿಳಿಯೋಣ ಬನ್ನಿ.

ಬಾರಿ ಹಣ್ಣು ಅಥವಾ ಬೋರೆ ಹಣ್ಣು

ಬಾರಿ ಹಣ್ಣು ಅಥವಾ ಬೋರೆ ಹಣ್ಣು

  • Share this:
ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣುಗಳನ್ನು (Fruits) ಸೇವನೆ ಮಾಡುವುದು ಮಾನವನ ದೇಹಕ್ಕೆ ಉತ್ತಮ ಎಂದು ವೈದ್ಯರು ಮತ್ತು ತಜ್ಞರು ಆಗಾಗ ಹೇಳುತ್ತಲೇ ಇರುತ್ತಾರೆ. ಮಳೆಗಾಲದಲ್ಲಿ (Rainy Season) ಒಂದು ರೀತಿಯ ಹಣ್ಣು ಸಿಕ್ಕರೆ, ಚಳಿಗಾಲದಲ್ಲಿ ಸಿಗುವ ಹಣ್ಣುಗಳೇ ಬೇರೆ, ಇನ್ನು ಬೇಸಿಗೆಯಲ್ಲೂ (Summer) ಸಿಗುವ ಹಣ್ಣುಗಳೇ ಬೇರೆ. ಋತುಮಾನಗಳು ಬದಲಾದಂತೆ ಹಣ್ಣುಗಳು ಕೂಡ ಬದಲಾಗುತ್ತಲೇ ಇರುತ್ತವೆ. ಆದರೆ ಯಾವುದೇ ಋತುಮಾನವಿದ್ದರೂ (Season) ನೀವು ಆ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಸೇವಿಸುತ್ತಾ ಇದ್ದರೆ, ನಿಮ್ಮ ಆರೋಗ್ಯ ಉತ್ತಮವಾಗಿ ಇರುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗೆಯೇ ಬೋರೆ ಹಣ್ಣು ಸಹ.  ಇದನ್ನು ಗ್ರಾಮೀಣ ಭಾಷೆಯಲ್ಲಿ ಬಾರಿ ಹಣ್ಣು  (Indian Jujube) ಎಂದು ಕರೆಯುತ್ತಾರೆ.

ಈ ಹಣ್ಣು ಹುಳಿ ಮಿಶ್ರಿತ ಸಿಹಿ ಹಣ್ಣು ಆಗಿರುವುದರಿಂದ ಬೋರೆ ಹಣ್ಣು ವಿಭಿನ್ನವಾದ ರುಚಿಯನ್ನು ಹೊಂದಿರುತ್ತದೆ ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ಈ ಲೇಖನದಲ್ಲಿಂದು ತಿಳಿಯೋಣ ಬನ್ನಿ.

ಈ ಸಮಸ್ಯೆಗಳನ್ನು ಬೋರೆ ಹಣ್ಣು ತಿನ್ನುವುದರಿಂದ ಕಡಿಮೆ ಮಾಡಬಹುದಂತೆ
ಫೆಬ್ರವರಿ 2012 ರಲ್ಲಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಕರೆಂಟ್ ರಿಸರ್ಚ್ ಅಂಡ್ ರಿವ್ಯೂನಲ್ಲಿ ಪ್ರಕಟವಾದ ವರದಿ ಪ್ರಕಾರ, "ಕಫ, ಬೊಜ್ಜು, ಜ್ವರ, ಉರಿಯೂತ, ಕೆಮ್ಮು, ಗಾಯ, ಚರ್ಮ ರೋಗಗಳು, ಹುಣ್ಣುಗಳು, ಅತಿಸಾರ, ಲೈಂಗಿಕ ದೌರ್ಬಲ್ಯ ಮತ್ತು ಸಾಮಾನ್ಯ ದೌರ್ಬಲ್ಯ ಎಂಬ ಮುಂತಾದ ಸಮಸ್ಯೆಗಳನ್ನು ಈ ಬೋರೆ ಹಣ್ಣನ್ನು ಸೇವಿಸುವುದರಿಂದ ಕಡಿಮೆ ಮಾಡಬಹುದು” ಎಂದು ಹೇಳಿದೆ.

ಈ ಸಸ್ಯದ ವಿವಿಧ ಭಾಗಗಳು ಕ್ಯಾನ್ಸರ್ ನಿವಾರಕ ಮತ್ತು ಅತಿಸಾರವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ವರದಿಯು ಮಾಹಿತಿಯನ್ನು ಸೇರಿಸುತ್ತದೆ.

ನಟ್ಸ್ ಅಂಡ್ ಸೀಡ್ಸ್ ಇನ್ ಹೆಲ್ತ್ ಅಂಡ್ ಡಿಸೀಸ್ ಪ್ರಿವೆನ್ಶನ್ ಎಂಬ ಪುಸ್ತಕವು ಈ ಬೋರೆ ಸಸ್ಯದ ಬೀಜಗಳು ಆಂಜಿಯೋಲೈಟಿಕ್ (ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ) ಮತ್ತು ನಿದ್ರಾಜನಕ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಸಹಾಯ ಮಾಡುತ್ತವೆ ಎಂದು ಕಂಡುಹಿಡಿದಿದೆ.

ಬೋರೆ ಸಸ್ಯದಲ್ಲಿರುವ ಆರೋಗ್ಯ ಪ್ರಯೋಜನಗಳು:

  • ಬೋರೆ ಹಣ್ಣಿನ ಬೀಜಗಳು ಅಲ್ಜೈಮರ್‌ (ಮರೆವಿನ ಕಾಯಿಲೆ) ರೋಗಿಗಳಿಗೆ ಕೂಡ ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ ಎಂದು ಪುಸ್ತಕದಲ್ಲಿ ಮಾಹಿತಿ ಇದೆ.

  • ಇದರ ಬೀಜದ ಸಾರವು ಕ್ಷಯರೋಗ, ಕ್ಯಾನ್ಸರ್ ಮತ್ತು ಏಡ್ಸ್ ಚಿಕಿತ್ಸೆಯಲ್ಲಿ ಸಹ ಸಹಾಯ ಮಾಡುತ್ತದೆ, ಈ ಬೀಜವು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

  • ಇದರ ಬೇರುಗಳನ್ನು ಕೆಮ್ಮು ಮತ್ತು ತಲೆನೋವುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

  • ಎಲೆಗಳು ಜ್ವರನಿವಾರಕ (ಜ್ವರ ಚಿಕಿತ್ಸೆಗಾಗಿ ಬಳಸಲಾಗುತ್ತದೆ).

  • ಈ ಹಣ್ಣನ್ನು ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಕ್ಷಯರೋಗಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

  • ಇದರ ಬೀಜಗಳು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

  • ಹೆಚ್ಚು ಬಾಯಾರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

  • ನಿದ್ರಾಜನಕ ಪರಿಣಾಮವನ್ನು ಹೊಂದಿರುತ್ತದೆ.

  • ಇದು ನಿದ್ರಾಹೀನತೆ, ದೈಹಿಕ ನೋವು, ದೈಹಿಕ ದೌರ್ಬಲ್ಯ ಮತ್ತು ಸಂಧಿವಾತ ರೋಗಗಳಿಗೂ ರಾಮ ಬಾಣವಾಗಿದೆ.

  • ಡಯಾಬಿಟಿಸ್‌ ರೋಗಿಗಳಿಗೂ ಇದು ಉತ್ತಮವಾದ ಹಣ್ಣಾಗಿದೆ.


ಇದನ್ನೂ ಓದಿ:  Ghee Health Benefits: ಈ ಆರೋಗ್ಯ ಸಮಸ್ಯೆಗಳು ಬರಬಾರದು ಅಂದ್ರೆ ಪ್ರತಿದಿನ ತುಪ್ಪ ತಿನ್ಬೇಕಂತೆ

ಈ ಎಲ್ಲ ಆರೋಗ್ಯ ಪ್ರಯೋಜನಗಳ ಬಗ್ಗೆ ನಟ್ಸ್ ಅಂಡ್ ಸೀಡ್ಸ್ ಇನ್ ಹೆಲ್ತ್ ಅಂಡ್ ಡಿಸೀಸ್ ಪ್ರಿವೆನ್ಶನ್ ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.

ವರದಿಯ ಪ್ರಕಾರ ಸಸ್ಯದ ಪ್ರತಿಯೊಂದು ಭಾಗದ ಪ್ರಯೋಜನಗಳೇನು?
ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಸಿ ಮತ್ತು ಫಾರ್ಮಾಸ್ಯುಟಿಕಲ್ ರಿಸರ್ಚ್‌ನಲ್ಲಿ ಪ್ರಕಟವಾದ ವರದಿಯು ಸಸ್ಯದ ಪ್ರತಿಯೊಂದು ಭಾಗದಿಂದ ನೀಡಲಾಗುವ ಆರೋಗ್ಯ ಪ್ರಯೋಜನಗಳನ್ನು ವಿವರಿಸುತ್ತದೆ.

  • ಹಣ್ಣು ರಕ್ತವನ್ನು ಶುದ್ಧೀಕರಿಸಲು ಉಪಯುಕ್ತವಾಗಿದೆ.

  • ಹೃದಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

  • ಈ ಬೀಜವು ಗರ್ಭಾವಸ್ಥೆಯಲ್ಲಿ ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

  • ಬೀಜಗಳಿಂದ ತಯಾರಿಸಿದ ಪೇಸ್ಟ್ ಅನ್ನು ಗಾಯಗಳಿಗೆ ಅನ್ವಯಿಸಬಹುದು.

  • ಎಲೆಗಳನ್ನು ಅತಿಸಾರದ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

  • ಮಕ್ಕಳಲ್ಲಿ ಥೈರಾಯ್ಡ್‌ಗೆ ಶಿಫಾರಸು ಮಾಡಲಾಗಿದೆ ಎಂದು ವರದಿ ಹೇಳುತ್ತದೆ.

  • ಇದರ ಹೂವನ್ನು ಚರ್ಮದ ಹುಣ್ಣು, ಕಣ್ಣಿನ ಕಾಯಿಲೆ ಮತ್ತು ಕಾಮಾಲೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

  • ಸಸ್ಯವು ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಯಕೃತ್ತಿನ ಹಾನಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ವರದಿಯು ಕಂಡುಕೊಳ್ಳುತ್ತದೆ.


ಇದನ್ನೂ ಓದಿ:Kitchen Hacks: ತರಕಾರಿ-ಹಣ್ಣಿನ ಸಿಪ್ಪೆ ವೇಸ್ಟ್​ ಅಲ್ವೇ ಅಲ್ಲ, ಹೀಗೆಲ್ಲಾ ಬಳಸ್ಬಹುದು!

ಈ ಬೋರೆ ಹಣ್ಣನ್ನು ಸೇವಿಸುವುದರಿಂದ ಡಯಾಬಿಟಿಸ್‌, ನಿದ್ರೆ ಕೊರತೆಯನ್ನು ದೂರ ಮಾಡಬಹುದು. ಇದು ಬರಗಾಲದಲ್ಲೂ ಸಹ ಸಿಗುವ ಸಾಮಾನ್ಯ ಹಣ್ಣಾಗಿದೆ. ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತೆ.
Published by:Ashwini Prabhu
First published: