• Home
 • »
 • News
 • »
 • lifestyle
 • »
 • Underwater Hotels: ನೀರೊಳಗೆ ನಿರ್ಮಾಣಗೊಂಡಿವೆ ಈ 8 ರೆಸ್ಟೋರೆಂಟ್ ಗಳು.. ಇವುಗಳ ವಿಶೇಷತೆಗಳೇನು ಗೊತ್ತೇ?

Underwater Hotels: ನೀರೊಳಗೆ ನಿರ್ಮಾಣಗೊಂಡಿವೆ ಈ 8 ರೆಸ್ಟೋರೆಂಟ್ ಗಳು.. ಇವುಗಳ ವಿಶೇಷತೆಗಳೇನು ಗೊತ್ತೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದುಬೈನಿಂದ ಸಿಂಗಾಪುರದವರೆಗೆ .. ಆಸ್ಟ್ರೇಲಿಯಾದಿಂದ ತಾಂಜಾನಿಯಾದವರೆಗೆ ನೀರೊಳಗೆ ಇರುವ ವಿಶ್ವದ 8 ಸುಂದರ ಹಾಗೂ ಭವ್ಯವಾದ ಹೋಟೆಲ್‌ಗಳು ಇವು.. ಮಾನವನ ಕಲ್ಪನೆಗೆ ಮೀರಿದ್ದು ಎಂಥವರನ್ನೂ ಅಚ್ಚರಿಗೊಳಿಸುತ್ತವೆ.

 • Share this:

  ನಾವೆಲ್ಲರೂ ಭೂಮಿ ಮೇಲಿರುವ ಹೋಟೆಲ್ (Hotel), ರೆಸ್ಟೋರೆಂಟ್  (Restaurant)ಗಳನ್ನು ನೋಡಿದ್ದೇವೆ. ವಿವಿಧ ರೀತಿಯ ಹೋಟೆಲ್ ಗಳು, ವಿನ್ಯಾಸಗಳು (Design) ಹಾಗೂ ವಾತಾವರಣ (Atmosphere), ಊಟ ಹಾಗೂ ರುಚಿಯಿಂದಲೇ ಸಾಕಷ್ಟು ಫೇಮಸ್ ಆಗಿವೆ. ರೆಸ್ಟೋರೆಂಟ್ ಗಳಿಗೆ ಹೋಗಿ ಬಂದ ನಂತರ ಊಟದ (Food) ಸವಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ. ಭೂಮಿಯ ಮೇಲೆ ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಇರೋದು ಸಾಮಾನ್ಯವಾದ ವಿಷಯ. ಅದೇ ಹೋಟೆಲ್ ಗಳು ನೀರಿನೊಳಗೆ ಇವೆ ಅಂದರೆ ನಂಬುತ್ತೀರಾ..? ನಂಬಲೇಬೇಕು. ಯಾಕೆಂದರೆ ಪ್ರಪಂಚದ (World) 8 ವಿಶಿಷ್ಟ ಹೋಟೆಲ್‌ ಗಳನ್ನು ನೀರಿನ ಆಳದಲ್ಲಿ ನಿರ್ಮಿಸಲಾಗಿದೆ.  ಹೋಟೆಲ್ ನೋಟ ನಮಗೆ ಸುಂದರ ಕನಸಿನಂತೆ ಭಾಸವಾಗುತ್ತದೆ. ಅದ್ಭುತವಾದ ಹೋಟೆಲ್ ಗಳು ನೀರಿನಾಳದಲ್ಲಿ (Underwater) ನಿರ್ಮಾಣವಾಗಿದ್ದು, ಆಕರ್ಷಕವಾಗಿವೆ.


  ದುಬೈನಿಂದ ಸಿಂಗಾಪುರದವರೆಗೆ ಮತ್ತು ಆಸ್ಟ್ರೇಲಿಯಾದಿಂದ ತಾಂಜಾನಿಯಾದವರೆಗೆ ನೀರೊಳಗೆ ಇರುವ ಅನೇಕ ಹೋಟೆಲ್‌ಗಳು ಮಾನವನ ಕಲ್ಪನೆಗೆ ಮೀರಿದ್ದು, ಅಚ್ಚರಿಗೊಳಿಸುತ್ತವೆ. ವಿಶ್ವದ 8 ಸುಂದರ ಹಾಗೂ ಭವ್ಯವಾದ ನೀರೊಳಗೆ ಇರುವ ಹೋಟೆಲ್‌ ಗಳ ಒಂದು ನೋಟ ಇಲ್ಲಿದೆ.


  ದಿ ಮುರಕಾ ಕಾನ್ರಾಡ್ ಮಾಲ್ಡೀವ್ಸ್ ರಂಗಾಲಿ ದ್ವೀಪ ( The muraka conrad maldives rangali island)


  ಸಮುದ್ರದ ನೀಲಿ ನೀರಿನಲ್ಲಿ ತೇಲುತ್ತಿರುವ ವಿವಿಧ ಜೀವಿಗಳ ಸುಂದರ ಜಗತ್ತಿನಲ್ಲಿ ದಿಂಬು ಇಟ್ಟುಕೊಂಡು ಮಲಗುವುದೆಂದರೆ ಸುಂದರವಾದ ಕನಸಿನಂತೆ ಭಾಸವಾಗುತ್ತದೆ. 2018 ರಲ್ಲಿ ಕಾನ್ರಾಡ್‌ನ ರಂಗಾಲಿ ದ್ವೀಪವು ದಿ ಮುರಾಕಾವನ್ನು ಪ್ರಾರಂಭಿಸಿತು. ಮುರಕಾ ಕಾನ್ರಾಡ್ ನೀರೊಳಗಿನ ಜಗತ್ತು ನಮ್ಮನ್ನು ಮತ್ತಷ್ಟು ಆಳಕ್ಕೆ ಕರೆದೊಯ್ಯುತ್ತದೆ. ನೀರೊಳಗಿನ ಕೋಣೆಯನ್ನು ಮೇಲ್ಮೈಯಿಂದ ಸುಮಾರು 16 ಅಡಿ ಆಳದಲ್ಲಿ ನಿರ್ಮಿಸಲಾಗಿದೆ. ಗಾಜಿನ ಗೋಡೆಗಳು ಸಮುದ್ರದ ಸುಂದರ ದೃಶ್ಯವನ್ನು ಕಣ್ಣಿಗೆ ಕಟ್ಟಿ ಕೊಡುತ್ತವೆ. ಸುಮಾರು ಒಂಬತ್ತು ಜನರು ಒಟ್ಟಿಗೆ ಮಲಗಲು ಸ್ಥಳವನ್ನು ಹೊಂದಿದೆ. ಸುಂದರ ಜಲಚರಗಳ ಜಗತ್ತಿನಲ್ಲಿ ವಿಹರಿಸುವಂತೆ ಮಾಡುತ್ತದೆ.


  ಇದನ್ನೂ ಓದಿ: ಬೆಂಗ್ಳೂರಲ್ಲೇ ಜಪಾನಿ ಖಾದ್ಯ ಸವಿಯೋಕೆ ಈ ರೆಸ್ಟೊರೆಂಟ್​ಗಳಿಗೆ ಭೇಟಿ ಕೊಡಿ, ಇಲ್ಲಿನ Sushi ಜಪಾನಿಯರಿಗೂ ಇಷ್ಟವಂತೆ!


  ಚೀನಾದ ಇಂಟರ್ ಕಾಂಟಿನೆಂಟಲ್ ಶಾಂಘೈ ವಂಡರ್ಲ್ಯಾಂಡ್ (Intercontinental Shanghai Wonderland)


  ಚೀನಾದಲ್ಲಿರುವ ಈ ನೀರೊಳಗಿನ ಹೋಟೆಲ್ ನ್ನು ಶಾಂಘೈನ ಮಧ್ಯಭಾಗದಿಂದ ಸುಮಾರು 20 ಮೈಲುಗಳಷ್ಟು ದೂರದ ಸಾಂಗ್ಜಿಯಾಂಗ್ ನಲ್ಲಿ ನಿರ್ಮಿಸಲಾಗಿದೆ. ಹೋಟೆಲ್ ನ ಕೊಠಡಿಗಳು ಮತ್ತು ಭವ್ಯವಾದ ಬಾಲ್ಕನಿಗಳಿಂದ ಹರಿಯುವ ಜಲಪಾತಗಳ ಆಕರ್ಷಕ ನೋಟ ಮನ ಸೆಳೆಯುತ್ತದೆ. ಹೋಟೆಲ್‌ನ ಎರಡು ಮಹಡಿಗಳು ನೀರಿನಲ್ಲಿ ಮುಳುಗಿವೆ. ಅಲ್ಲಿಂದ ಪ್ರೀಮಿಯರ್ ಅಂಡರ್‌ವಾಟರ್ ನ್ನು ನೋಡಬಹುದು. ರೆಸ್ಟೋರೆಂಟ್ ಮತ್ತು ಈಜುಕೊಳ ಸೌಲಭ್ಯ ಸಹ ಇದೆ.


  ಸಿಂಗಪುರದ ರೆಸಾರ್ಟ್ ವರ್ಲ್ಡ್ ಸೆಂಟೋಸಾ (Resort World Sentosa)


  ಸಿಂಗಾಪುರದ ಕರಾವಳಿಯಿಂದ ಸ್ವಲ್ಪ ದೂರದಲ್ಲಿರುವ ಸೆಂಟೋಸಾ ದ್ವೀಪದಲ್ಲಿ ರೆಸಾರ್ಟ್ ವರ್ಲ್ಡ್ ಅನ್ನು ನಿರ್ಮಿಸಲಾಗಿದೆ. ಇಲ್ಲಿ ಉಳಿಯಲು ನೀವು 11 ಎರಡು ಅಂತಸ್ತಿನ ಲಾಡ್ಜ್‌ಗಳನ್ನು ಕಾಣಬಹುದು. ಇಲ್ಲಿಗೆ ಬರುವ ಅತಿಥಿಗಳು ರಾತ್ರಿಯಲ್ಲಿ ನೀರು ಮತ್ತು ತೆರೆದ ಆಕಾಶದಡಿ ಮಲಗಿ ಸುಂದರ ದೃಶ್ಯವನ್ನು ಸವಿಯಬಹುದು. ಹೋಟೆಲ್‌ನ ಕೆಳಭಾಗದಲ್ಲಿ ಸುಮಾರು 40,000 ಮೀನುಗಳಿಂದ ತುಂಬಿದ ಅಕ್ವೇರಿಯಂ ಕೂಡ ಇದೆ.


  ತಾಂಜಾನಿಯಾದ ಮಾಂಟಾ ರೆಸಾರ್ಟ್ (manta resort Pemba Island Zanzibar)


  ಜಂಜಿಬಾರ್ ಕರಾವಳಿಯಲ್ಲಿ ನಿರ್ಮಿಸಲಾದ ಮಾಂಟಾ ರೆಸಾರ್ಟ್‌ನ ನೀರೊಳಗಿನ ಕೋಣೆ ಕರಾವಳಿಯಿಂದ ಸುಮಾರು ಎರಡು ನಿಮಿಷಗಳಷ್ಟು ದೂರದಲ್ಲಿದೆ. ಅದರ ಮೂರು ಹಂತದ ವಸತಿ ಸೌಕರ್ಯಗಳಲ್ಲಿ, ನೀವು ಹವಳದ ಬಂಡೆಯನ್ನು ವೀಕ್ಷಿಸಬಹುದು. ಮುಳುಗುವ ಮಲಗುವ ಕೋಣೆಗಳು ಮತ್ತು ಟೆರೇಸ್‌ನಿಂದ ಉಸಿರುಕಟ್ಟಿಕೊಂಡು ದೃಶ್ಯದ ಸವಿಯನ್ನು ಆನಂದಿಸಬಹುದು. ಇಲ್ಲಿ ಸ್ಕೂಬಾ ಡೈವ್ ಕೂಡ ಇದೆ.


  ಮಾಲ್ಡೀವ್ಸ್ ನ ಹುವಾಫೆನ್ ಫುಶಿ (Huvafen fushi)


  ಇದು ಹಿಂದೂ ಮಹಾಸಾಗರದಲ್ಲಿದೆ. ಹುವಾಫೆನ್ ಫುಶಿ ಆಕರ್ಷಕ ಕೊಠಡಿಗಳು, ನೀರೊಳಗಿಲ್ಲದಿದ್ದರೂ ಅಲ್ಲಿ ನಿರ್ಮಿಸಲಾದ ಸ್ಪಾ ಅಡಿಯಲ್ಲಿ ಸುಮಾರು 25 ಅಡಿ ಆಳಕ್ಕೆ ಇಳಿಯಬಹುದು. ಇಲ್ಲಿಗೆ ಬರುವ ಅತಿಥಿಗಳು ಲೋನು ವಾಯೊ, ಉಪ್ಪು ನೀರಿನ ತೇಲುವ ಕೊಳಕ್ಕೆ ಹೋಗಬಹುದು.


  ಆಸ್ಟ್ರೇಲಿಯಾದ ರೀಫ್‌ಸೂಟ್ಸ್ ವಿಟ್ಸಂಡೆ ದ್ವೀಪ (Reefsuites)


  ಆಸ್ಟ್ರೇಲಿಯಾದ ವಿಟ್ಸಂಡ್ ದ್ವೀಪದಲ್ಲಿ ರೀಫ್‌ಸೂಟ್ಸ್ ಇಲ್ಲದಿದ್ದರೂ ಸಹ ಒಬ್ಬರು ನೀರೊಳಗಿರುವ ಕೋಣೆಯಲ್ಲಿ ಉಳಿಯಬಹುದು. ಕ್ವೀನ್ಸ್‌ಲ್ಯಾಂಡ್‌ನಿಂದ 46 ಮೈಲುಗಳಷ್ಟು ದೂರದಲ್ಲಿರುವ ರೀಫ್ ಅನ್ನು ಪಾಂಟೂನ್ ದೋಣಿಯಲ್ಲಿ ಸಾಗಿ ತಲುಪಬಹುದು. ನಕ್ಷತ್ರಗಳ ಬೆಳಕಿನ ನಡುವೆ ರುಚಿಕರ  ಆಹಾರ ಸೇವನೆ ಮಾಡಿ ಆನಂದಿಸಬಹುದು. ಖಾಸಗಿ ಕೋಣೆಗೆ ಹೋಗಿ ಮೀನುಗಳು ಈಜುವುದನ್ನು ನೋಡಬಹುದು.


  ದುಬೈನ ಅಟ್ಲಾಂಟಿಸ್ ದಿ ಪಾಮ್ ( Atlantis )


  ಅಟ್ಲಾಂಟಿಸ್ ದುಬೈನಲ್ಲಿದೆ. ನೀರಿನೊಳಗೆ ಕೋಣೆಯಿದೆ. ರೆಸಾರ್ಟ್‌ ನ ಅಕ್ವೇರಿಯಂನಿಂದ ಸುಮಾರು 65,000 ಸಮುದ್ರ ಜೀವಿಗಳು ಈಜುವುದನ್ನು ನೋಡಬಹುದು. ಇಲ್ಲಿಗೆ ಬರುವ ಅತಿಥಿಗಳಿಗೆ ಮೊದಲ 30 ನಿಮಿಷಗಳ ತರಬೇತಿ ನೀಡಲಾಗುತ್ತದೆ. ಇದರ ಊಟದ ಕೋಣೆ ಅತಿಥಿಗಳಿಗಾಗಿ ದಿನದ 24 ಗಂಟೆಯೂ ತೆರೆದಿರುತ್ತದೆ.


  ಇದನ್ನೂ ಓದಿ: ಕೊರೊನಾ ಅಟ್ಟಹಾಸ; ಮತ್ತೆ ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್ ಬಂದ್..!


  ಸ್ವೀಡನ್ ನ ಅಟ್ಟರ್ ಇನ್ ( utar in )


  ಸ್ಟಾಕ್‌ಹೋಮ್ ಬಳಿಯ ಮ್ಲಾರೆನ್ ಸರೋವರದ ಮೇಲೆ ತೇಲುತ್ತಿರುವ ಏಕೈಕ ನೀರೊಳಗಿನ ಕೋಣೆ ಇದಾಗಿದೆ. ಇದು ಇತರ ನೀರೊಳಗಿನ ಹೋಟೆಲ್‌ಗಳಂತೆ ಐಷಾರಾಮಿ ಅಲ್ಲ, ಆದರೆ ಹಾಸಿಗೆಗಳು, ಟೇಬಲ್‌ಗಳು ಮತ್ತು ಎಲ್ಲಾ ಮೂಲಭೂತ ಸೌಕರ್ಯಗಳಿವೆ. ರೊಮ್ಯಾಂಟಿಕ್ ಪ್ಲೇಸ್ ಆಗಿದೆ.

  Published by:renukadariyannavar
  First published: