ನಿಮ್ಮ ಹೊಟ್ಟೆಯಲ್ಲಿ ತುಂಬಾ ಬೊಜ್ಜಿನ ಅಂಶವನ್ನು ಹೊಂದಿದ್ದರೆ ಮನೆಯಲ್ಲಿ ಅದನ್ನು ತಿನ್ನಬೇಡ, ತಿಂದರೆ ಇನ್ನಷ್ಟು ನಿನ್ನ ಹೊಟ್ಟೆ ದಪ್ಪ ಆಗುತ್ತೆ ಮತ್ತೆ ಅದನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾನೇ ಕಷ್ಟ ಅಂತಾ ಹೇಳೊದನ್ನ ಕೇಳಿರುತ್ತೇವೆ. ಬಹಳಷ್ಟು ಜನರು ತಾವು ದಪ್ಪ ಆಗುತ್ತೇವೆ ಎಂದು ಜಾಸ್ತಿ ಏನನ್ನೂ ತಿನ್ನುವುದಿಲ್ಲ. ಕೆಲವರು ದಪ್ಪಗಿದ್ದೇವೆ ಇನ್ನೂ ತಿಂದರೆ ಇನ್ನೂ ದಪ್ಪಗಾಗ್ತಿವಿ ಅಂತ ತಮಗೆ ಇಷ್ಟವಿದ್ದರೂ ಏನೂ ತಿನ್ನುವುದಿಲ್ಲ. ಅದರಲ್ಲಿಯೂ ಹೊಟ್ಟೆಯ ಬೊಜ್ಜು ಕರಗಿಸಲು ಹರಸಾಹಸವನ್ನು ಮಾಡಿದರೂ ಸಹ ಅಷ್ಟು ಸುಲಭವಾಗಿ ಬೊಜ್ಜು ಕಡಿಮೆ ಆಗುವುದಿಲ್ಲ.
ಇಲ್ಲಿ ಕೆಲವೊಂದಿಷ್ಟು ರುಚಿಕರವಾದಂತಹ ಆಹಾರ ಪದಾರ್ಥಗಳಿವೆ, ಅವುಗಳನ್ನು ನೀವು ತಿಂದರೆ ನಿಮ್ಮ ಬೊಜ್ಜು ಜಾಸ್ತಿಯಾಗುವುದಿಲ್ಲ, ಬದಲಿಗೆ ನಿಮ್ಮ ಬೊಜ್ಜು ಕಡಿಮೆ ಆಗುತ್ತದೆ. ಯಾವುದಪ್ಪ ಅಂತಹ ರುಚಿಕರ ಆಹಾರ ಪದಾರ್ಥಗಳು ಅಂತೀರಾ.
“ದಿ ಅರ್ಲಿ ಶೋ” ಎನ್ನುವ ಮ್ಯಾಗಝಿನ್ ನ ಸಂಪಾದಕರಾದ ಲೂಸಿ ಡ್ಯಾನ್ಝಿಗರ್ ಅವರು ಆ ರುಚಿಕರ ಆಹಾರ ಪದಾರ್ಥಗಳ ಬಗ್ಗೆ ಹೇಳಿದ್ದು ಅವುಗಳು ನಿಮ್ಮ ಬೊಜ್ಜನ್ನು ಸಹ ಕಡಿಮೆ ಮಾಡುವಲ್ಲಿ ಹೇಗೆ ಸಹಾಯಕವಾಗುತ್ತವೆ ಎಂದು ತಿಳಿಸಿದ್ದಾರೆ.
ಅವಕಾಡೊ (ಬೆಣ್ಣೆ ಹಣ್ಣು)
ಒಂದೇ ಒಂದು ಅವಕಾಡೊ ಹಣ್ಣಿನಲ್ಲಿ 10 ಗ್ರಾಂ ನಷ್ಟು ಆರೋಗ್ಯಕರವಾದ ಕೊಬ್ಬುಗಳಿವೆ. ಇವುಗಳು ಹೊಟ್ಟೆಯ ಉಬ್ಬರವನ್ನು ತಡೆಯುತ್ತದೆ ಮತ್ತು ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯಲ್ಲಿನ ಬೊಜ್ಜು ಕಡಿಮೆಯಾಗುತ್ತದೆ.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ 422 ಮಿಲಿ ಗ್ರಾಂ ನಷ್ಟು ಪೊಟ್ಯಾಶಿಯಮ್ ಹೊಂದಿದ್ದು, ನಿಮ್ಮ ಹೊಟ್ಟೆ ಊದಿಕೊಳ್ಳುವಂತೆ ಮಾಡುವ ಸೋಡಿಯಂ ಪ್ರಮಾಣವನ್ನು ಮಿತಿಗೊಳಿಸಲು ಸಹಾಯಕವಾಗಿದೆ.
ಮೊಸರು
ಪ್ರತಿದಿನ ಒಂದು ಕಪ್ ಮೊಸರು ಸೇವಿಸುವುದರಿಂದ ನಿಮ್ಮ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಹೊಟ್ಟೆಯ ಉಬ್ಬುವಿಕೆಗೆ ಕಾರಣವಾಗುವಂತಹ ದೋಷ ಪೂರಿತ ಬ್ಯಾಕ್ಟೀರಿಯಾಗಳನ್ನು ಹೊಡೆದೊಡಿಸುತ್ತದೆ.
ಕೆನೆಯಿರುವ ಮೊಸರು ಸೇವಿಸಲು ಇನ್ನೂ ಮಜವಾಗಿರುತ್ತದೆ ಮತ್ತು ಇದು ಕಾರ್ಬೊಹೈಡ್ರೇಟ್ಗಳು ಮತ್ತು ಪ್ರೊಟೀನ್ ಹೊಂದಿರುತ್ತದೆ.
ಗ್ರೀನ್ ಟೀ
ಪ್ರತಿದಿನ ನೀವು ಮೂರು ಕಪ್ ಗ್ರೀನ್ ಟೀ ಕುಡಿದರೆ ನಿಮ್ಮ ದೇಹದಲ್ಲಿ ಚಯಪಚಯ ಕ್ರಿಯೆಯು ತುಂಬಾ ಸುಗಮವಾಗಿ ನಡೆಯುತ್ತದೆ. ಇದರಿಂದ ಸುಮಾರು 30 ಕ್ಯಾಲೋರಿಗಳನ್ನು ಸುಡಬಹುದಾಗಿದೆ.
ಧಾನ್ಯಗಳು
ನೀವು ಧಾನ್ಯಗಳಿಂದ ಕೂಡಿದ ಓಟ್ ಮೀಲ್, ಬ್ರೌನ್ ರೈಸ್ ಅಂತಹ ಆಹಾರವನ್ನು ಸೇವಿಸಿದರೆ ಅದರಲ್ಲಿರುವ ಫೈಬರ್ ಅಂಶವು ನಿಮ್ಮ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚಾಕೋಲೇಟ್ ಕೆನೆರಹಿತ ಹಾಲು
ಈ ಚಾಕೋಲೇಟ್ ಕೆನೆರಹಿತ ಹಾಲಿನಲ್ಲಿ ಪ್ರೊಟೀನ್ ಮತ್ತು ಕಾರ್ಬೊಹೈಡ್ರೆಟ್ಗಳು ಇರುವುದರಿಂದ ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ನೀವು ವ್ಯಾಯಾಮ ಮಾಡಿದ ನಂತರ ಇದನ್ನು ಕುಡಿಯಿರಿ. ಅದರಲ್ಲಿರುವ ಕ್ಯಾಲ್ಸಿಯಂ ನಿಂದ ನಮ್ಮ ದೇಹದಲ್ಲಿರುವ ಮೂಳೆಗಳು ಬಲಗೊಳ್ಳುತ್ತವೆ.
ಸಿಟ್ರಸ್
ನೀವು ಸಿಟ್ರಸ್ ಕುಡಿಯುವುದರಿಂದ ಅದರಲ್ಲಿನ ವಿಟಮಿನ್ ಸಿ ಯು ನೀವು ವ್ಯಾಯಾಮ ಮಾಡಬೇಕಾದರೆ 30 ಪ್ರತಿಶತ ಹೆಚ್ಚು ಕೊಬ್ಬನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ