HOME » NEWS » Lifestyle » EGYPT WOMEN ARRESTED FOR BAKING INDECENT CAKES SESR

Viral: ಜನನಾಂಗ ಹೋಲುವಂತಹ ಕೇಕ್​ ತಯಾರಿಸಿದ ಮಹಿಳೆಯ ಬಂಧನ

ಇದು ಸಮಾಜದ ಮೌಲ್ಯಗಳಿಗೆ ಮಾಡಿದ ಅವಮಾನ ಮತ್ತು ನಿಂದನೆಯಾಗಿದೆ ಎಂದು ದೂರು ದಾಖಲಿಸಿ ಬಂಧಿಸಲಾಗಿದೆ

news18-kannada
Updated:January 20, 2021, 5:34 PM IST
Viral: ಜನನಾಂಗ ಹೋಲುವಂತಹ ಕೇಕ್​ ತಯಾರಿಸಿದ ಮಹಿಳೆಯ ಬಂಧನ
ಜನನಾಂಗ ಹೋಲುವಂತಹ ಕೇಕ್​
  • Share this:
ಇಸ್ಲಾಮಿಕ್​ ದೇಶಗಳಲ್ಲಿ ಕಾನೂನುಗಳು ಬಲು ಕಠಿಣ. ಇಲ್ಲಿ ಕಾನೂನಿನ ವಿರುದ್ಧ ನಡೆದವರಿಗೆ ಸರ್ಕಾರದಿಂದ ಕಠೋರ ಶಿಕ್ಷೆ ಕೂಡ ವಿಧಿಸಲಾಗುತ್ತದೆ. ಯಾವುದೇ ಮುಲಾಜಿಗೆ ಒಳಗಾಗದೇ ಸರ್ಕಾರ ಮಕ್ಕಳು, ಮಹಿಳೆಯರು ಎಂಬುದನ್ನು ಪರಿಗಣಿಸಿದೆ ಶಿಕ್ಷೆ ವಿಧಿಸುತ್ತದೆ. ಇದೇ ಹಿನ್ನಲೆ ಇಲ್ಲಿನ ಕಾನೂನುಗಳ ಬಗ್ಗೆ ಸಾಕಷ್ಟು ಭಯ ಇಲ್ಲಿನ ಜನರಿಗೆ. ಸರ್ಕಾರದ ಆಶಯದ ವಿರುದ್ಧ ನಡೆದವರು ಮಹಿಳೆಯೊಬ್ಬರು ಈಗ ಬಂಧನಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ಈ ಮಹಿಳೆಯ ಮಾಡಿದ ತಪ್ಪು ಎಂದರೆ ಕೇಕ್​ ತಯಾರಿಸಿದ್ದು. ಕೇಕ್​ ತಯಾರಿಸುವುದು ಇಲ್ಲಿ ಅಪರಾಧವಲ್ಲ. ಆದರೆ, ಈ ಮಹಿಳೆ ಮಾನವನ ಜನನಾಂಗದ ರೂಪದಲ್ಲಿ ಕೇಕ್​ ತಯಾರಿಸಿರುವುದು ಮಹಾಪರಾಧವಾಗಿದೆ, ಇವು ಅಶ್ಲೀಲತೆಯನ್ನು ಬಿಂಬಿಸುತ್ತವೆ. ಈ ರೀತಿಯ ವರ್ತನೆ ಖಂಡನೀಯ ಎಂದು ಆಕೆಯನ್ನು ಬಂಧಿಸಲಾಗಿದೆ. ಆಕೆ ತಯಾರಿಸಿರುವ ಕೇಕ್​ನ ಫೋಟೋಗಳು ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.



ಈಜಿಪ್ಟ್​ನ ಕೈರೋ ಪ್ರದೇಶದಲ್ಲಿ ಈ ಮಹಿಳೆ ಸ್ಥಳೀಯ ರೆಸ್ಟೋರೆಂಟ್​ ನಡೆಸುತ್ತಿದ್ದರು. ಈಕೆ ಹುಟ್ಟುಹಬ್ಬದ ಹಿನ್ನಲೆ ಕೇಕ್​ ತಯಾರಿಸಿದ್ದಾರೆ.  ಅದು ಮಾನವನ ಗುಪ್ತಾಂಗಗಳನ್ನು ಹೋಲುವಂತೆ ವಿವಿಧ ಆಕಾರಗಳನ್ನು ಹೊಂದಿದೆ. ಈ ಹಿನ್ನಲೆ ಪೊಲೀಸರು ಈಕೆ ಮೇಲೆ ದೂರು ದಾಖಲಿಸಿ ಬಂಧಿಸಿದ್ದಾರೆ. ಇದು ಸಮಾಜದ ಮೌಲ್ಯಗಳಿಗೆ ಮಾಡಿದ ಅವಮಾನ ಮತ್ತು ನಿಂದನೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ. ಅಷ್ಟೆ ಅಲ್ಲದೇ ಮಹಿಳೆಯರ  ಬರ್ತಡೇ ಪಾರ್ಟಿ ಆಯೋಜಿಸಿದ ಹಿನ್ನಲೆ  ಕ್ಲಬ್​ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಮಹಿಳೆ ಬಂಧನವಾಗುತ್ತಿದ್ದಂತೆ ಆಕೆ ತಯಾರಿಸಿದ ಕೇಕ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು ಬಂಧಿತ ಮಹಿಳೆಗೆ 300 ಡಾಲರ್​ ದಂಡ ವಿಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ.
Published by: Seema R
First published: January 20, 2021, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories