ನೀವು ದಿನವೂ ಬೆಳಗಿನ ತಿಂಡಿಗೆ (Morning Breakfast) ಮೊಟ್ಟೆ ಸೇವನೆ ಮಾಡುತ್ತೀರಾ? ಮೊಟ್ಟೆಯನ್ನು (Egg) ನೀವು ಆಮ್ಲೆಟ್ ಮಾಡಿ ತಿನ್ನುವುದು, ಕುದಿಸಿ ತಿನ್ನುವುದು ಹಾಗೂ ವಿವಿಧ ಖಾದ್ಯಗಳ ಮೂಲಕ ಸೇವನೆ ಮಾಡಬಹುದಾಗಿದೆ. ಮೊಟ್ಟೆ ಒಂದು ಸೂಪರ್ ಫುಡ್ (Super Food). ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿದೆ. ಮೊಟ್ಟೆಗಳನ್ನು ಸೂಪರ್ ಫುಡ್ ಎಂದು ಪರಿಗಣಿಸಲು ಅದರಲ್ಲಿರುವ ಪೋಷಕಾಂಶ ಗುಣಗಳು ಕಾರಣವಾಗಿವೆ. ಮೊಟ್ಟೆಯಲ್ಲಿ ದೇಹಕ್ಕೆ ಬೇಕಾದ ಆರೋಗ್ಯಕರ ಎಲ್ಲಾ ಪೋಷಕಾಂಶಗಳು ಅಡಗಿವೆ. ಮೊಟ್ಟೆಯ ಬಿಳಿ ಅಥವಾ ಹಳದಿ ಭಾಗ ಎರಡೂ ಸಹ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.
ಮೊಟ್ಟೆಯನ್ನು ಹೇಗೆ ತಿನ್ನಬೇಕು?
ಮೊಟ್ಟೆಯನ್ನು ಹೇಗೆ ತಿನ್ನಬೇಕು, ಬೇಯಿಸಿ ಅಥವಾ ಹುರಿದು ತಿನ್ನಬೇಕಾ? ಮೊಟ್ಟೆಯನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು? ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ? ಮೊಟ್ಟೆಯನ್ನು ತಿಂದರೆ ಯಾವೆಲ್ಲಾ ಪ್ರಯೋಜನ ಸಿಗುತ್ತವೆ? ಹೀಗೆ ಅನೇಕ ಪ್ರಶ್ನೆಗಳಿಗೆ ತಜ್ಞರು ಹೀಗೆ ಹೇಳ್ತಾರೆ.
ಮೊಟ್ಟೆಗಳನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಮೊಟ್ಟೆಯು ಮುಖ್ಯವಾಗಿ ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ. ಇದು ದೇಹವು ಸ್ವಂತವಾಗಿ ಮಾಡಲು ಸಾಧ್ಯವಿಲ್ಲ. ಮೊಟ್ಟೆ ಸೇವನೆಯ ಪ್ರಯೋಜನ ಮತ್ತು ಅದನ್ನು ಹೇಗೆ ಮತ್ತು ಎಷ್ಟು ಸೇವಿಸಬೇಕೆಂದು ತಿಳಿಯೋಣ.
ಮೊಟ್ಟೆಗಳಲ್ಲಿನ ಪ್ರೋಟೀನ್ ಅಂಶ
ಪೌಷ್ಟಿಕ ತಜ್ಞರ ಪ್ರಕಾರ, ಮೊಟ್ಟೆಯ ಪ್ರೋಟೀನ್ ಅನ್ನು ಉತ್ತಮ ಗುಣಮಟ್ಟದ ಪ್ರೋಟೀನ್ ಎಂದು ಕರೆಯುತ್ತಾರೆ. ಒಂದು ಸಂಪೂರ್ಣ ಮೊಟ್ಟೆಯು ಸುಮಾರು 6.3 ಗ್ರಾಂ ಪ್ರೋಟೀನ್ ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜ ಹೊಂದಿದೆ.
ಮಧುಮೇಹ ರೋಗಿಗಳಿಗೆ ಮೊಟ್ಟೆ ಸೇವನೆ ಪ್ರಯೋಜನಕಾರಿ
ಉತ್ತಮ ವಿಷಯ ಅಂದ್ರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರದ ಪಟ್ಟಿಯಲ್ಲಿ ಮೊಟ್ಟೆಯನ್ನು ಸೇರ್ಪಡೆ ಮಾಡಲಾಗಿದೆ. ಮೊಟ್ಟೆಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇದೆ. ಹೀಗಾಗಿ ಇದು ಮಧುಮೇಹಿಗಳಿಗೆ ಲಾಭಕಾರಿ. ಇದು ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸುವುದಿಲ್ಲ. ಮಧುಮೇಹಿಗಳಿಗೆ ಮೊಟ್ಟೆ ಅತ್ಯುತ್ತಮ ಆಹಾರ ಆಗಿದೆ.
ಮೊಟ್ಟೆ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸುತ್ತದೆ
ಮೊಟ್ಟೆಯ ಹಳದಿ ಲೋಳೆ ಭಾಗವು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿದೆ. ಹಳದಿ ಲೋಳೆಯಲ್ಲಿ ಲಿಪಿಡ್ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವು ಅಧಿಕ ಆಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ಮತ್ತು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಂದ್ರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಈ ಕೊಲೆಸ್ಟ್ರಾಲ್ ಟೆಸ್ಟೋಸ್ಟೆರಾನ್ ಉತ್ಪಾದನೆಗೆ ಸಹ ಅಗತ್ಯವಾಗಿದೆ. ಇದು ಸ್ನಾಯುಗಳನ್ನು ನಿರ್ಮಿಸಲು ಮತ್ತು ಶಕ್ತಿಯ ಮಟ್ಟ ಕಾಪಾಡಿಕೊಳ್ಳಲು ಸಹಕಾರಿ ಆಗಿದೆ.
ತೂಕ ನಷ್ಟಕ್ಕೆ ಸಹಕಾರಿ
ಮೊಟ್ಟೆಯು ತೂಕವನ್ನು ಕಡಿಮೆ ಮಾಡಲು ಸಹಾಯಕ. ಇದರಲ್ಲಿ ಪ್ರೋಟೀನ್ ಇದೆ. ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರಿಸುತ್ತದೆ. ಇದು ಸುಮಾರು 80-100 ಕ್ಯಾಲೋರಿಗಳಷ್ಟು ಚಯಾಪಚಯ ಹೆಚ್ಚಿಸುತ್ತದೆ. ಮೊಟ್ಟೆಗಳು ತೂಕ ನಷ್ಟ ಉತ್ತೇಜಿಸುತ್ತವೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತವೆ.
ಒಂದು ದಿನದಲ್ಲಿ ಎಷ್ಟು ಮೊಟ್ಟೆ ತಿನ್ನಬೇಕು?
ಮೊಟ್ಟೆಗಳನ್ನು ತಿನ್ನಲು ಉತ್ತಮ ಸಮಯ ಅಂದ್ರೆ ಬೆಳಗಿನ ಉಪಾಹಾರ. ಇದನ್ನು ಬೆಳಗ್ಗೆ ತಿಂದರೆ ಹೆಚ್ಚಿನ ಕೊಬ್ಬು ಮತ್ತು ಪ್ರೋಟೀನ್ ಸಂಯೋಜನೆಯು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿ ಇರಿಸುತ್ತದೆ. ಹಾಗೂ ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಆರೋಗ್ಯವಂತ ವ್ಯಕ್ತಿಯು ಬೆಳಗಿನ ಉಪಾಹಾರದಲ್ಲಿ 2 ಮೊಟ್ಟೆ ತಿನ್ನುವುದು ಉತ್ತಮ.
ಮೊಟ್ಟೆಗಳನ್ನು ಹೇಗೆ ತಿಂದರೆ ಉತ್ತಮ?
ನಿಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಲು ಉತ್ತಮ ಮಾರ್ಗ ಅಂದ್ರೆ ನೀವು ಅದನ್ನು ಆಮ್ಲೆಟ್, ಬೇಯಿಸಿ ಅಥವಾ ಸ್ಕ್ರಾಂಬಲ್ಡ್ ಮಾಡಿ ಸೇವನೆ ಮಾಡಬಹುದು. ನೀವು ತೂಕ ಇಳಿಕೆಗೆ ಯತ್ನಿಸುತ್ತಿದ್ದರೆ ಈ ವಿಧಾನಗಳು ನಿಮಗೆ ಉತ್ತಮವಾಗಿವೆ.
ಇದನ್ನೂ ಓದಿ: ಈ ಸ್ಪೆಷಲ್ ಟೀ ಕುಡಿದ್ರೆ ಒಂದು ತಿಂಗಳಿನಲ್ಲಿಯೇ ಸಣ್ಣ ಆಗ್ತೀರಾ; ನೆನಪಿನ ಶಕ್ತಿಯೂ ಹೆಚ್ಚಾಗುತ್ತೆ
ಆದಾಗ್ಯೂ ನೀವು ವಿವಿಧ ಮೊಟ್ಟೆ ಭಕ್ಷ್ಯ ಮಾಡಿ ತಿನ್ನಬಹುದು. ಕೋಸುಗಡ್ಡೆ, ಕೇಲ್, ಪಾಲಕ್ ನಂತಹ ಯಾವುದೇ ಕಡಿಮೆ ಕಾರ್ಬ್ ತರಕಾರಿ ಖಾದ್ಯಗಳಲ್ಲಿ ಮೊಟ್ಟೆ ಸೇರಿಸಿ ಸೇವನೆ ಮಾಡಬಹುದು. ಎಣ್ಣೆಯನ್ನು ಕಡಿಮೆ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ