Children Health: ಮಕ್ಕಳಿಗೆ ಕಾಫಿ-ಟೀ ಕೊಡ್ತಿದಿರಾ? ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ..!

Coffee and Tea: ಪುಟ್ಟ ಮಕ್ಕಳಿಗೆ ಕಾಫಿ ಟೀ ಕೊಡುವ ಮುನ್ನ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು.ಕೆಫಿನ್​ ಅಂಶಗಳು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಟೀ ಕಾಫಿಯನ್ನು ಮಕ್ಕಳಿಗೆ ನೀಡಿದರೆ ಇದರಿಂದ ಭಯ, ಆತಂಕ, ಗೊಂದಲದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚೆಗೆ ಸ್ಥೂಲಕಾಯದ(Obesity) ಮಕ್ಕಳೇ(Children) ಹೆಚ್ಚುತ್ತಿರುವುದನ್ನು ಕಾಣಬಹುದು. 3 ರಿಂದ 11ನೇ ವರ್ಷದವರೆಗಿನ ಮಕ್ಕಳ ಆಹಾರ ಶೈಲಿಯು (Food Style) ಅವರ ಭೌತಿಕ, ದೈಹಿಕ(Physical), ಮಾನಸಿಕ(Mental), ಬೌದ್ಧಿಕ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಈ ಆಹಾರದ ಶೈಲಿಯು ಕೊಂಚ ವಿಭಿನ್ನವಾದರೂ ಕ್ಯಾನ್ಸರ್‌(Cancer), ಸಕ್ಕರೆ(Sugar), ಹೃದಯ ರೋಗ(Heart Problem), ಮಧುಮೇಹ ಬರುತ್ತಿರುವುದನ್ನು ಕಾಣಬಹುದು. ಅದಕ್ಕಾಗಿ ಪೋಷಕರು(Parents) ತಮ್ಮ ಮಕ್ಕಳು ಸೂಕ್ತ ಆಹಾರ ಪದ್ಧತಿ ಅನುಕರಿಸುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಅತಿಯಾಗಿ ತಿನ್ನಿಸುವುದನ್ನು ಕಲಿಸಿದರೆ ಬೊಜ್ಜು ತನ್ನಿಂದ ತಾನಾಗಿಯೇ ಬರುತ್ತದೆ. ಅದರಲ್ಲು ಜಂಕ್‌ಫುಡ್‌ನ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

    ಪೋಷಕರು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಬೇಕು-ಬೇಡಗಳನ್ನು ಚರ್ಚಿಸಿ ಆಹಾರವನ್ನು ಕೊಡುವ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು.. ಅದ್ರಲ್ಲೂ ಪುಟ್ಟ ಮಕ್ಕಳಿಗೆ ಕಾಫಿ ಟೀ ಕೊಡುವ ಮುನ್ನ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಕೆಫಿನ್​ ಅಂಶಗಳು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಟೀ ಕಾಫಿಯನ್ನು ಮಕ್ಕಳಿಗೆ ನೀಡಿದರೆ ಇದರಿಂದ ಭಯ, ಆತಂಕ, ಗೊಂದಲದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಙರು.

    ಮಕ್ಕಳ ಆಹಾರ ಪದ್ಧತಿ ಹೇಗಿರಬೇಕು..?

    ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಾಗಿ  ನೀಡಬೇಕಾದ ಆಹಾರಗಳು, ಸಿಹಿಯಾದ,  ಹುಳಿ, ಉಪ್ಪು, ಕರ ಮಸಾಲೆಯುಕ್ತ ಪದಾರ್ಥಗಳು, ಪ್ಯಾಕೇಜ್ ಮಾಡಿದ ಆಹಾರವನ್ನು ತಪ್ಪಿಸಿಬೇಕು. ಮಕ್ಕಳ ಅಭಿರುಚಿ ಹಾಗೂ ಹಸಿವನ್ನು ಗುರುತಿಸಬೇಕು. ಮಕ್ಕಳನ್ನು ಆಹಾರ ತಿನ್ನುವಂತೆ ಒತ್ತಾಯಿಸಬಾರದು. ಅದ್ರಲ್ಲೂ ಮಕ್ಕಳಿಗೆ ಟೀ ಅಥವಾ ಕಾಫಿಯ ಅಭ್ಯಾಸ ಮಾಡಿಸಿದ್ದರೆ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆಯೇ ಸರಿ. ಟೀ, ಕಾಫಿಯಲ್ಲಿರುವ ಕೆಫಿನ್​ ಅಂಶಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

    ಇದನ್ನೂ ಓದಿ: ಹ್ಯಾಂಗೋವರ್‌ನಿಂದ ಹೊರಬರಲು ಪರದಾಡ್ತಿದ್ರೆ ತಪ್ಪದೇ ಈ ಹಣ್ಣು ತಿನ್ನಿ

    ಟೀ, ಕಾಫಿ ಮಕ್ಕಳಿಗೆ ನೀಡಿದ್ರೆ ಏನಾಗುತ್ತದೆ...?

    1) ಮಕ್ಕಳ ಬೆಳವಣಿಗೆ ಕುಂಠಿತ: ಕಾಫಿಯಲ್ಲಿ ಕೆಫೀನ್ ಎಂಬ ಸಾವಯವ ವಸ್ತುವಿದೆ, ಇದು ನರಮಂಡಲವನ್ನು ಪ್ರಚೋದಿಸುವ ಕಾರಣ ಕಾಫಿ ಸೇವಿಸಿದಾಗ ಒಂದು ಬಗೆಯ ಉತ್ತೇಜಕ ಪರಿಣಾಮ ಉಂಟಾಗುವುದು, ಇನ್ನು ಮಕ್ಕಳಿಗೆ ಕಾಫಿ ಕೊಡುವುದರಿಂದ ಅವರ ಬೆಳವಣಿಗೆ ಕುಂಠಿತವಾಗುವುದು, ಆದ್ದರಿಂದ ಮಕ್ಕಳಿಗೆ ಕಾಫಿ ಅಭ್ಯಾಸ ಮಾಡಿಸದೇ ಇರುವುದೇ ಲೇಸು.

    2) ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ: ಕೆಫಿನ್​ ಅಂಶಗಳಿರುವ ಕಾಫಿ, ಟೀ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಗ್ಯಾಸ್ಟ್ರಿಕ್​, ಹೊಟ್ಟೆಯುಬ್ಬರದಂತಹ ಅನಾರೋಗ್ಯ ಉಂಟಾಗುತ್ತದೆ.
    ಅಲ್ಲದೆ ಜಠರ ಮತ್ತು ಕರಳುಗಳಿಗೆ ಸಂಭಂದಿಸಿದ ರೋಗಗಳಲ್ಲಿ ಕಾಫಿ ಸೇವಿಸುವುದು ಸರಿಯಲ್ಲ.

    3) ಕ್ಯಾಲ್ಸಿಯಂ ಕೊರತೆ: ಕೆಫೀನ್ ಕ್ಯಾಲ್ಸಿಯಂ ಕೊರತೆಯನ್ನೂ ಉಂಟುಮಾಡಬಹುದು. ಅತಿಯಾದ ಕೆಫೀನ್ ಸೇವನೆ ಕ್ರಮೇಣ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಅಸ್ಥಿರಂಧ್ರತೆಯ ಅಪಾಯಕ್ಕೂ ಗುರಿಮಾಡಬಹುದು.

    4) ನರಕೋಶಗಳ ಸಾಮರ್ಥ್ಯವನ್ನು ತಗ್ಗಿಸುತ್ತದೆ: ಕೆಫೀನ್ ಮಕ್ಕಳ ಬೆಳವಣಿಗೆ ಮತ್ತು ಮಿದುಳಿನಲ್ಲಿ ಸಂಪರ್ಕಗಳ ರೂಪುಗೊಳ್ಳುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತದೆ. ಹದಿಹರೆಯದಲ್ಲಿ ಶರೀರದಲ್ಲಿ ನರ ಸಂಪರ್ಕಗಳು ರೂಪುಗೊಳ್ಳುತ್ತವೆ ಮತ್ತು ದೃಢಗೊಳ್ಳುತ್ತವೆ. ಕೆಫೀನ್ ನರಕೋಶಗಳ ಸಾಮರ್ಥ್ಯವನ್ನು ತಗ್ಗಿಸುತ್ತದೆ.

    ಇದನ್ನೂ ಓದಿ: ರೋಸ್ ವಾಟರ್ ಹಚ್ಚಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ, ಕೇಶ ಸೌಂದರ್ಯಕ್ಕೂ ಇದೇ ಬೆಸ್ಟ್

    5) ಹೃದಯ ಸ್ತಂಭನ: ಕೆಫಿನ್​ ಒಂದು ರೀತಿಯ ವಿಷವಿದ್ದಂತೆ. ನಿಧಾನವಾಗಿ ದೇಹವನ್ನು ಕೊಲ್ಲುತ್ತದೆ. ಅತಿಯಾದ ಟೀ ಅಥವಾ ಕಾಫಿಯ ಸೇವನೆ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎನ್ನುತ್ತಾರೆ ತಜ್ಙರು. 10 ಗ್ರಾಂಗಿಂತ ಹೆಚ್ಚಿನ ಕೆಫಿನ್​ ಅಂಶವನ್ನು ದೇಹಕ್ಕೆ ಪ್ರತಿನಿತ್ಯ ನೀಡಿದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆಯೇ ಸರಿ.
    Published by:ranjumbkgowda1 ranjumbkgowda1
    First published: