Sleep: 6 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡ್ತಿದ್ದೀರಾ? ಎಚ್ಚರ...ಎಚ್ಚರ !

Oversleeping: ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ಆದ್ರೆ ಇತ್ತೀಚಿನ ಮಾಹಿತಿಗಳ ಪ್ರಕಾರ 6ಗಂಟೆಗಿಂತ ಅಧಿಕ ನಿದ್ದೆ ಮಾಡುವುದು ಆರೋಗ್ಯಕ್ಕೆ ಹಾನಿಕಾರವಂತೆ.

ನಿದ್ರೆ

ನಿದ್ರೆ

  • Share this:
    ದಿನವಿಡೀ ಚೈತನ್ಯ(Active) ಶೀಲರಾಗಿ ಕೆಲಸ(Work) ಮಾಡಲು ಗುಣಮಟ್ಟದ ನಿದ್ರೆಯನ್ನು(Sleep) ಹೊಂದಿರಬೇಕು. ವೈಜ್ಞಾನಿಕವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿ ದಿನಕ್ಕೆ 8 ಗಂಟೆಗಳ(8 hours) ನಿದ್ರೆಯನ್ನು ಹೊಂದಬೇಕು. ಈ ನಿದ್ರಾ ಅವಧಿಯು ಕೆಲವರಿಗೆ ಕಡಿಮೆ(Low) ಆಗಬಹುದು. ಕೆಲವರು ಹೆಚ್ಚು ಕಾಲ ನಿದ್ರೆ ಮಾಡಬಹುದು. ನಿದ್ರೆಯ ಸಮಯದಲ್ಲಿ ಮಿದುಳು(Brain) ಮತ್ತು ದೇಹದ ಅಂಗಾಂಗಳು(Body Parts) ವಿಶೇಷ ಆರೈಕೆಗೆ ಒಳಗಾಗುತ್ತವೆ. ಹಾಗಾಗಿಯೇ ನಿದ್ರೆಯಿಂದ ಎಚ್ಚೆತ್ತುಕೊಂಡ ನಂತರ ಹೆಚ್ಚು ಉಲ್ಲಾಸ ಹಾಗೂ ಚೈತನ್ಯತೆಯನ್ನು ಪಡೆದುಕೊಳ್ಳುವರು. ಸರಿಯಾಗಿ ನಿದ್ರೆ ಮಾಡಿದರೆ ಗ್ಲೂಕೋಸ್(Glouce) ಹೆಚ್ಚುವುದನ್ನು ಕಡಿಮೆ ಮಾಡುತ್ತದೆ, ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ, ಕಾರ್ಟಿಸೋಲ್, ಗ್ರೆಲಿನ್ ಮತ್ತು ಲೆಪ್ಟಿನ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ಆದ್ರೆ ಇತ್ತೀಚಿನ ಮಾಹಿತಿಗಳ ಪ್ರಕಾರ 6ಗಂಟೆಗಿಂತ ಅಧಿಕ ನಿದ್ದೆ ಮಾಡುವುದು ಆರೋಗ್ಯಕ್ಕೆ ಹಾನಿಕಾರವಂತೆ..

    ಎಷ್ಟು ನಿದ್ರೆ ಮಾಡಬೇಕು..?

    ಪ್ರಜ್ಞೆಗೆ ಎಷ್ಟು ನಿದ್ರೆ ಸಂಬಂಧಿಸಿದೆ ಎಂದು ಸಂಶೋಧನಾ ತಂಡ ತಿಳಿಯಲು ಬಯಸಿತು. ಇದನ್ನು ಮಾಡಲು ಅವರು ಸರಾಸರಿ 70 ವರ್ಷದ ನೂರು ಮಂದಿ ವಯಸ್ಕರನ್ನು ನಾಲ್ಕು ಮತ್ತು ಐದು ವರ್ಷಗಳ ಕಾಲ ಸಂಶೋಧನೆ ಮಾಡಿದರು. ಅವರ ಅಧ್ಯಯನದ ಸಮಯದಲ್ಲಿ, 88 ಜನರು ಬುದ್ಧಿಮಾಂದ್ಯತೆಯ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ಆದರೆ 12 ಜನರು ಅರಿವಿನ ದುರ್ಬಲತೆಯ ಲಕ್ಷಣಗಳನ್ನು ತೋರಿಸಿದರು.ಅಧ್ಯಯನದ ಸಮಯದಲ್ಲಿ ಭಾಗವಹಿಸಿದವರ ನಿದ್ರೆಯನ್ನು ಅಳೆಯಲಾಯಿತು.

    ಮೆದುಳಿನ ಚಟುವಟಿಕೆಯನ್ನು ಅಳೆಯಲು EEG ಅನ್ನು ಬಳಸಲಾಯಿತು. ಸಂಶೋಧಕರು ಅರಿವಿನ ಕುಸಿತದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ - ವಯಸ್ಸು, ಜೆನೆಟಿಕ್ಸ್, ಮತ್ತು ಒಬ್ಬ ವ್ಯಕ್ತಿಯ ಡಿಮೆನ್ಶಿಯಾಕ್ಕೆ ಸಂಬಂಧಿಸಿರುವ ಬೀಟಾ-ಅಮಿಲಾಯ್ಡ್ ಅಥವಾ ಟೌ ಪ್ರೋಟೀನ್‌ಗಳ ಚಿಹ್ನೆಗಳನ್ನು ಹೊಂದಿದ್ದಾನೆಯೇ ಎಂದು ಗಮನಿಸಿದರು. ಒಟ್ಟಾರೆಯಾಗಿ, 4-5 ಗಂಟೆಗಳಿಗಿಂತ ಕಡಿಮೆ ಮತ್ತು 6-5 ಗಂಟೆಗಳಿಗಿಂತ ಹೆಚ್ಚು ರಾತ್ರಿ ನಿದ್ರೆ ಮಾಡುವುದು- ಕಳಪೆ ಗುಣಮಟ್ಟದ ನಿದ್ರೆ ಸಹ- ಕಾಲಾನಂತರದಲ್ಲಿ ವ್ಯಕ್ತಿಯ ಪ್ರಜ್ಞೆಯು ಕುಸಿಯಲು ಕಾರಣವಾಗುತ್ತಿದೆ ಎಂದು ಸಂಶೋಧಕರು ಕಂಡುಕೊಂಡರು. ಕುತೂಹಲಕಾರಿಯಾಗಿ, ಅರಿವಿನ ಕ್ರಿಯೆಯ ಮೇಲೆ ನಿದ್ರೆಯ ಅವಧಿಯ ಪ್ರಭಾವದ ಜೊತೆಗೆ ವಯಸ್ಸೂ ಪರಿಣಾಮ ಬೀರುತ್ತದೆ. ಅಂದರೆ ವಯಸ್ಸಾದಂತೆ, ನಿದ್ರೆ ಕಡಿಮೆ ಅಥವಾ ಅತಿನಿದ್ರೆಯಿಂದ ಈ ಅಪಾಯಗಳು ಜಾಸ್ತಿ.

    1)ಬೊಜ್ಜು ಹೆಚ್ಚಳ: ಅತೀ ಹೆಚ್ಚು ನಿದ್ದೆ ಅಥವಾ ಅತೀ ಕಡಿಮೆ ನಿದ್ದೆಯ ಪರಿಣಾಮ ನಿಮ್ಮ ತೂಕದ ಹೆಚ್ಚಾಗುವುದು. ದಿನಕ್ಕೆ 6ಕ್ಕಿಂತ ಹೆಚ್ಚು ಗಂಟೆಗಳ ಕಾಲ ಮಲಗುವವರಿಗೆ ಬೊಜ್ಜು ಬರುವ ಸಂಭವ 21% ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

    ಇದನ್ನೂ ಓದಿ: ಮಲಗೋಕೂ ಒಂದು ವಿಧಾನ ಇದೆ, ಹೆಂಗಂದ್ರೆ ಹಂಗೆ ಮಲಗಬೇಡಿ!

    2)ಅಲ್ಸೈಮರ್ಸ್ ಪ್ರೊಟೀನ್‌ಗಳ ಅವನತಿ: ನಿದ್ರೆಯ ಕೊರತೆಯು ಅರಿವಿನ ಅವನತಿಗೆ ಸಂಬಂಧಿಸಿದೆ ಎಂದು ಹಿಂದಿನ ಸಂಶೋಧನೆಯಿಂದ ನಮಗೆ ತಿಳಿದಿದೆ. ಕಡಿಮೆ ನಿದ್ರೆಯ ಸಮಯವನ್ನು ಹೊಂದಿರುವ ಜನರು ತಮ್ಮ ಮೆದುಳಿನಲ್ಲಿ ಹೆಚ್ಚಿನ ಮಟ್ಟದ ಬೀಟಾ-ಅಮಿಲಾಯ್ಡ್ ಅನ್ನು ಹೊಂದಿರುತ್ತಾರೆ ಎಂದು ಇತರ ಸಂಶೋಧನೆಗಳು ತೋರಿಸಿವೆ - ಇದು ಸಾಮಾನ್ಯವಾಗಿ ಆಲ್ಝೈಮರ್ಸ್ ಕಾಯಿಲೆ ಇರುವ ಜನರ ಮೆದುಳಿನಲ್ಲಿ ಕಂಡುಬರುತ್ತದೆ.

    3)ಅತಿಯಾದ ತಲೆನೋವು: ವಾರಾಂತ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಹೆಚ್ಚು ಸಮಯ ನಿದ್ದೆ ಮಾಡುವುದರಿಂದ ಕೆಲವರಿಗೆ ತಲೆ ನೋವು ಕಾಣಬಹುದು. ಮೆದುಳಿನ ಕೆಲವು ನರಗಳ ಮೇಲೆ ಅತಿಯಾದ ನಿದ್ದೆಯಿಂದ ಉಂಟಾಗುವ ಪರಿಣಾಮದಿಂದ ಈ ಥರ ತಲೆನೋವು ಬರುವುದು

    ಇದನ್ನೂ ಓದಿ: ರಾತ್ರಿ ಬೀಳೋ ಯಾವ ಕನಸುಗಳು ನಿಜವಾಗುತ್ತವೆ.. Dreams ಭವಿಷ್ಯ ಸೂಚಕಗಳಾ?

    4)ಖಿನ್ನತೆ: ಸಾಮಾನ್ಯವಾಗಿ ನಿದ್ರಾಹೀನತೆಗೆ ಒಳಪಟ್ಟವರು ಅತೀಯಾಗಿ ನಿದ್ರೆ ಮಾಡುವವರಿಗಿಂತ ಹೆಚ್ಚು ಖಿನ್ನತೆ ಅನುಭವಿಸುತ್ತಾರೆ. ಆದಾಗ್ಯೂ, ಸುಮಾರು 15% ರಷ್ಟು ಜನರು ಅತಿ ಹೆಚ್ಚು ನಿದ್ರೆ ಮಾಡುವದರಿಂದ ಖಿನ್ನತೆಗೆ ಒಳಗಾಗುವರು. ಅತಿಯಾದ ನಿದ್ದೆಯಿಂದ ಈ ಖಿನ್ನತೆ ಹೆಚ್ಚುವ ಸಾಧ್ಯತೆ ಇದೆ. ಅವಶ್ಯವಿದ್ದಷ್ಟು ನಿದ್ರಿಸುವ ಅಭ್ಯಾಸ ಖಿನ್ನತೆಯನ್ನು ಹೋಗಲಾಡಿಸಿ ಮನಸ್ಸಿಗೆ ಚೈತನ್ಯವನ್ನು ತುಂಬುತ್ತದೆ.
    Published by:ranjumbkgowda1 ranjumbkgowda1
    First published: