ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ(Problems) ಅಂದ್ರೆ ಅದು ಹೇರ್ ಫಾಲ್(Hairfall). ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ(Food) ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ)less sleep) ಹಾಗೂ ಟೆನ್ಶನ್‍ನಿಂದ(Tension )ಕೂಡ ಕೂದಲು ಉದುರೋಕೆ ಶುರುವಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಕೂದಲು ಉದುರತ್ತೆ. ಆದ್ರೆ ಕೂದಲು ಉದುರಿರುವ ಸ್ಥಳದಲ್ಲಿ ಮತ್ತೆ ಕೂದಲು ಬೆಳೆಯದಿದ್ದರೆ ಅದಕ್ಕೆ ಹೇರ್ ಫಾಲ್ ಸಮಸ್ಯೆ ಎನ್ನುತ್ತಾರೆ..ಕಲುಷಿತ ನೀರು, ಧೂಳು, ಹಾ’ರ್ಮೋನ್‌ಗಳ ವ್ಯತ್ಯಾಸ, ಪೋಷಕಾಂಶಗಳ(Vitamin) ಕೊರತೆ ಅಥವಾ ಕಾಯಿಲೆಯಿಂದಾಗಿಯೂ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಕೂದಲು ಉದುರುವ ಸಮಸ್ಯೆ ಕಂಡು ಬಂದರೆ ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ(Shampo) ಹಚ್ಚಬೇಕು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಕೂದಲು ಯಾವ ಕಾರಣಕ್ಕೆ ಉದುರುತ್ತದೆ ಎಂದು ತಿಳಿದುಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಬಹುದು..
ಮಹಿಳೆಯರಂತೆ ಪುರುಷರಲ್ಲಿಯೂ ಕೂಡ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡು ಬಂದು ಪುರುಷರು ಬೊಕ್ಕತಲೆಯವರಾಗುತ್ತಿದ್ದಾರೆ. ಹೀಗಾಗಿ ನಾವು ನೀಡುವ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ನೀವು ನಿಮ್ಮ ಕೂದಲಿನ ಆರೋಗ್ಯ ರಕ್ಷಣೆಯ ಮಾಡಿಕೊಳ್ಳುವುದರ ಜೊತೆಗೆ ನಿಮ್ಮ ತಲೆಯ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಹುದು..
1) ಉತ್ತಮವಾದ ಆಹಾರ ಪದ್ಧತಿ
ನಾವು ಸೇವಿಸುವ ಆಹಾರವೂ ಕೂಡ ನಮ್ಮ ತಲೆ ಕೂದಲಿಗೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳನ್ನು ನೀಡುತ್ತವೆ.. ಹೀಗಾಗಿ ಆಹಾರದ ಕ್ರಮದ ಮೇಲೆ ನಿಗಾ ಇರಿಸಿಕೊಂಡು ಕೂದಲಿಗೆ ಬೇಕಾದ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದು ಸೂಕ್ತ..ಹೇರ್ ಫಾಲ್ ನಿಯಂತ್ರಿಸಲು ವಿಟಿಮಿನ್-ಎ, ವಿಟಮಿನ್-ಬಿ, ಓಮೆಗಾ-3 ಹಾಗೂ ವಿಟಮಿನ್-ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದರಿಂದ ಕೂದಲ ಬೆಳವಣಿಗೆಗೆ ಉತ್ತಮ ವಿಟಮಿನ್ ಅಂಶ ದೊರಕಿ ಹೇರ್ ಫಾಲ್ ಕಡಿಮೆಯಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿ ಕೊಬ್ಬಿನಂಶ ಇರುವುದರಿಂದ ತಲೆ ಕೂದಲಿಗೆ ಅಗತ್ಯವಾದ ಆಮ್ಲಜನಕದ ಸರಬರಾಜು ಮಾಡಲಾಗುವುದು..
ಇದನ್ನೂ ಓದಿ :ಬಿಳಿ ಕೂದಲಿನ ಸಮಸ್ಯೆಗೆ ಅಂಗೈನಲ್ಲಿದೆ ಪರಿಹಾರ
2) ಹೆಚ್ಚು ನೀರು ಕುಡಿಯುವುದು
ನಮ್ಮ ದೇಹದಲ್ಲಿ ಡಿಹೈಡ್ರೇಷನ್ ಸಮಸ್ಯೆ ಉಂಟಾಗದಂತೆ ಸದಾ ಎಚ್ಚರಿಕೆಯಿಂದ ಇರಬೇಕು.. ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾಗಬಾರದು.. ಹೀಗಾಗಿ ಆಹಾರದಂತೆಯೇ ಅಗತ್ಯವಾದ ನೀರನ್ನು ಅಗತ್ಯ ಪ್ರಮಾಣದಲ್ಲಿ ಸೇವನೆ ಮಾಡಬೇಕು.. ವಿಧ ಬಗೆಯ ಹಣ್ಣುಗಳ ಜ್ಯೂಸ್ ಕುಡಿಯುವುದರಿಂದ ತಲೆ ಕೂದಲಿಗೆ ಅಗತ್ಯವಾದ ಪೌಷ್ಠಿಕ ತತ್ವಗಳು ಸಿಕ್ಕಿ ತಲೆಕೂದಲು ಬೆಳವಣಿಗೆಗೆ ಸಹಕಾರಿಯಾಗಲಿದೆ
3) ಟ್ರೆಂಡಿ ಹೇರ್ ಸ್ಟೈಲ್ ಗೆ ಬ್ರೇಕ್ ಹಾಕುವುದು
ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಹೇರ್ ಸ್ಟೈಲ್ ಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ..ಅದ್ರಲ್ಲೂ ಹೊಸಬಗೆಯ ಹೇರ್ ಸ್ಟೈಲ್ ಮತ್ತು ಹೇರ್ ಕಲರಿಂಗ್ ತಂತ್ರಗಳಿಗೆ ಮೊರೆ ಹೋಗುತ್ತಿರುವುದು. ಇಲ್ಲಿ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಾಗುವುದರಿಂದ ಮತ್ತು ಹೆಚ್ಚಿನ ತಾಪಮಾನ ತಲೆಕೂದಲಿಗೆ ತಗಲುವುದರಿಂದ ಕೂದಲು ಉದುರಲು ಆರಂಭ ಆಗುತ್ತದೆ ಹೀಗಾಗಿ ಇದಕ್ಕೆ ಮೊದಲು ಬ್ರೇಕ್ ಹಾಕಬೇಕು.
4) ತಜ್ಞರಿಂದ ಸಲಹೆ
ಈಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ತಲೆಕೂದಲಿನ ಹಾನಿಯಾಗುವುದು ಜಾಸ್ತಿ ಇರುತ್ತದೆ. ತಕ್ಷಣ ಅದಕ್ಕೆ ವಿವಿಧ ಮದ್ದು ಮಾಡುವ ಬದಲು ಮೊದಲು ಯಾವ ಕಾರಣಕ್ಕೆ ಉದುರಲು ಪ್ರಾರಂಭವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.. ಅನುವಂಶೀಯತೆಯ ಕಾರಣವಾಗಿದ್ದರೆ ಅದಕ್ಕೆ ಬೇರೆಯದೇ ಪರಿಹಾರಗಳು ಇರುತ್ತವೆ. ಒಂದು ವೇಳೆ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಕಾರಣವಾಗಿದ್ದರೆ, ಅದಕ್ಕೆ ವೈದ್ಯರ ಸಲಹೆ ಮತ್ತು ಸೂಚನೆಗಳು ಕೆಲಸ ಮಾಡುವ ಹಾಗಿರುತ್ತವೆ. ಅಡ್ಡ ಪರಿಣಾಮಗಳು ಉಂಟಾಗದ ರೀತಿಯಲ್ಲಿ ಇವುಗಳನ್ನು ಅನುಸರಿಸಬಹುದು.
ಇದನ್ನೂ ಓದಿ : ಕಹಿ ಇದ್ರೂ ಕೂಡ ಬೇವಿನ ಜ್ಯೂಸ್ ಪ್ರಯೋಜನಗಳು ಹಲವಾರು
5)ವಿಟಮಿನ್ ಸೇರಿದ ಆಹಾರ ಸೇವನೆ
ಆಂಟಿ ಆಕ್ಸಿಡೆಂಟ್ ಗುಣಗಳುಳ್ಳ ವಿಟಮಿನ್-ಎ ಪದಾರ್ಥಗಳು ಆರೋಗ್ಯಕರ ಕೂದಲು ಮತ್ತು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸಿಹಿ ಆಲೂಗೆಡ್ಡೆ, ಕ್ಯಾರೆಟ್, ಕರಿಬೇವಿನ ಸೊಪ್ಪು, ಒಣಗಿದ ಏಪ್ರಿಕಾಟ್, ಸ್ವೀಟ್ ಕೆಂಪು ಮೆಣಸು, ಟ್ಯೂನಾ ಮೀನು,ಮಾವು ವಿಟಮಿನ್-ಎ ಅಂಶವನ್ನು ಒಳಗೊಂಡಿರುತ್ತದೆ. ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ನಷ್ಟವನ್ನು ತಡೆಯುತ್ತದೆ.
6) ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು
ದೈನಂದಿನ ಜಂಜಾಟದಿಂದ ಮನಸ್ಸು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತದೆ.. ಸರಿಯಾದ ರೀತಿಯಲ್ಲಿ ನಿದ್ರೆ ಆಗುವುದಿಲ್ಲ.. ಜವಾಬ್ದಾರಿಗಳು ಹೆಚ್ಚಿದಷ್ಟು ಮನಸ್ಸಿನ ಮೇಲೆ ಭಾರ ಬೀಳುತ್ತದೆ.. ಹೀಗಾಗಿ ಆದಷ್ಟು ಮನಸ್ಸನ್ನು ಸಂತೋಷ ಹಾಗೂ ಉಲ್ಲಾಸದಿಂದ ಇಟ್ಟುಕೊಳ್ಳಬೇಕು.. ಒಂದು ವೇಳೆ ಮಾನಸಿಕ ಒತ್ತಡ ಹೆಚ್ಚಾದರೆ ಕೂದಲುದುರುವ ಸಮಸ್ಯೆಯೂ ಅಧಿಕವಾಗಲಿದೆ.. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಕೂದಲು ಉದುರುವುದನ್ನು ತಡೆಯಬಹುದು
7) ಕೆಟ್ಟ ಚಟಗಳಿಂದ ಉಳಿಯುವುದು
ಸಾಮಾನ್ಯವಾಗಿ ಪುರುಷರು ಧೂಮಪಾನ ಹಾಗೂ ಮದ್ಯಪಾನ ಹೆಚ್ಚಾಗಿ ಮಾಡುತ್ತಾರೆ.. ಈ ರೀತಿ ಹೆಚ್ಚು ಧೂಮಪಾನ ಮದ್ಯಪಾನ ಮಾಡುವುದು ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಲಿದೆ.ಧೂಮಪಾನ ಮದ್ಯಪಾನ ಹೊರತುಪಡಿಸಿ ಹಲವು ಕೆಟ್ಟ ಚಟಗಳು ನಮ್ಮ ದೇಹದಲ್ಲಿ ಸಮಸ್ಯೆಗಳ ಮಾತನಾಡುವುದರ ಜೊತೆಗೆ ತಲೆ ಕೂದಲು ಉದುರಲು ಕಾರಣವಾಗುತ್ತದೆ.. ಹೀಗಾಗಿ ಆದಷ್ಟು ಕೆಟ್ಟ ಚಟ ಗಳಿಂದ ದೂರವಿರುವುದು ಒಳಿತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ