• Home
  • »
  • News
  • »
  • lifestyle
  • »
  • Life Lesson: ಜಗಳ ದೊಡ್ಡದಾಗುವ ಮುನ್ನ ನಿಲ್ಲಿಸಲು ಇಷ್ಟು ಮಾಡಿ ಸಾಕು

Life Lesson: ಜಗಳ ದೊಡ್ಡದಾಗುವ ಮುನ್ನ ನಿಲ್ಲಿಸಲು ಇಷ್ಟು ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ways to End an Argument: ನೀವು ಯಾರೊಂದಿಗಾದರೂ ಇಂತಹ ವಾದ ವಿವಾದಗಳಿಂದ ಅಸಮಾಧಾನಗೊಂಡಾಗ ಅವರಿಂದ ದೂರ ಹೋಗುವ ಬದಲು ಅವರೊಂದಿಗೆ ಕುಳಿತು ಮಾತುಕತೆ ನಡೆಸುವುದು ಮುಖ್ಯವಾಗುತ್ತದೆ.

  • Share this:

ಒಬ್ಬರು ಇನ್ನೊಬ್ಬರ ತರಹ ಇರುವುದಿಲ್ಲ, ಹಾಗಾಗಿ ಇಬ್ಬರು ವ್ಯಕ್ತಿಗಳು ಒಂದು ಸನ್ನಿವೇಶವನ್ನು ನೋಡುವ ರೀತಿ ಬೇರೆ ಬೇರೆ ಆಗಿರುತ್ತದೆ ಮತ್ತು ಅವರ ಅನಿಸಿಕೆಗಳು (Opinion) ಸಹ ಬೇರೆ ಬೇರೆ ಆಗಿರುತ್ತದೆ. ಹೀಗಾದಾಗ ಒಂದು ವಿಷಯದ ಬಗ್ಗೆ ಮಾತಾಡುವಾಗ ಅನೇಕ ಸಂದರ್ಭಗಳಲ್ಲಿ ವಾದ ವಿವಾದಗಳು (Argument) ಆಗುವುದು ಸಹಜ ಅಂತ ಹೇಳಬಹುದು. ಎಷ್ಟೋ ಸಾರಿ ವ್ಯಕ್ತಿಗಳ ನಡುವೆ ಶುರುವಾದ ಚಿಕ್ಕ ಪುಟ್ಟ ವಾದಗಳು ದೊಡ್ಡ ಜಗಳಗಳಾಗಿ (fight) ಬೆಳೆದಿರುತ್ತದೆ ಮತ್ತು ಇದು ಮಾನಸಿಕ ನೆಮ್ಮದಿಯನ್ನು ಸಹ ಕೆಡಿಸುತ್ತದೆ ಅಂತ ಹೇಳಬಹುದು. ಅದಕ್ಕೆ ಮಾತಾಡುವಾಗ ಅದರಲ್ಲೂ ಒಂದು ನಿರ್ದಿಷ್ಟವಾದ ವಿಷಯದ ಬಗ್ಗೆ ಮಾತಾಡುವಾಗ ಎಲ್ಲಿ ಆ ವಿಷಯವನ್ನು ನಿಲ್ಲಿಸಬೇಕೆಂದು ತಿಳಿದಿರುವುದು ತುಂಬಾನೇ ಮುಖ್ಯವಾಗುತ್ತದೆ.


ನೀವು ಯಾರೊಂದಿಗಾದರೂ ಇಂತಹ ವಾದ ವಿವಾದಗಳಿಂದ ಅಸಮಾಧಾನಗೊಂಡಾಗ ಅವರಿಂದ ದೂರ ಹೋಗುವ ಬದಲು ಅವರೊಂದಿಗೆ ಕುಳಿತು ಮಾತುಕತೆ ನಡೆಸುವುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಈ ವಾದ ದೊಡ್ಡದಾಗಿ ಬೆಳೆದಾಗ ಜಗಳ, ಕಿರುಚಾಟಗಳು ಸಹ ಶುರುವಾಗುತ್ತವೆ ಅಂತ ಹೇಳಬಹುದು. ಬೇರೆಯವರ ಬಗ್ಗೆ ಅಲ್ಲದೆ ಇದ್ದರೂ, ನಮ್ಮ ಮಾನಸಿಕ ಶಾಂತಿಗಾಗಿ ಆ ವಾದವನ್ನು ದೊಡ್ಡದಾಗಿ ಬೆಳೆಯುವ ಮೊದಲೇ ಕೊನೆಗೊಳಿಸುವುದು ಉತ್ತಮ. ಹೇಗೆ ಈ ವಾದವನ್ನು ಕೊನೆಗೊಳಿಸುವುದು ಅಂತ ನೀವು ಯೋಚಿಸುತ್ತಿರಬಹುದು ಅಲ್ಲವೇ? ಇಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳನ್ನು ನಾವು ನೀಡಿದ್ದೇವೆ ನೋಡಿ.


ಈ ವಾದವನ್ನು ಕೊನೆಗೊಳಿಸುವುದು ಹೇಗೆ?


1. ಆ ವ್ಯಕ್ತಿಯನ್ನು ಟೀಕಿಸಬೇಡಿ


ನಿಮ್ಮ ಜೊತೆ ವಾದ ಮಾಡುತ್ತಿರುವ ವ್ಯಕ್ತಿಯ ಆಗ್ಗೆ ಕಠೋರವಾದ ಮಾತುಗಳನ್ನು ಆಡಬೇಡಿ. ಹೀಗೆ ನೀವು ಅವರನ್ನು ಕಟುವಾಗಿ ಟೀಕಿಸಿದರೆ ಆ ವಾದ ದೊಡ್ಡ ಜಗಳವಾಗಿ ಬದಲಾಗುತ್ತದೆ. ನೀವು ಮಾತನಾಡುವ ಮೊದಲು ಸಮಾಧಾನದಿಂದ ಯೋಚಿಸಬೇಕು. "ವಾದದ ಸಮಯದಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಯನ್ನು ಟೀಕಿಸುವುದು, ಅವರ ಬಗ್ಗೆ ವಿಮರ್ಶೆ ಮಾಡುವುದು ಮತ್ತು ದೂರನ್ನು ಹೇಳುವುದಕ್ಕಿಂತಲೂ ಭಿನ್ನವಾಗಿರುತ್ತದೆ ಎಂದು ಹೇಳಬಹುದು. ನೀವು ಆಗಾಗ್ಗೆ ಈ ಟೀಕೆಗಳನ್ನು ಬಳಸುವುದನ್ನು ಕಂಡುಕೊಂಡರೆ, ನೀವು ಆ ವ್ಯಕ್ತಿಯನ್ನು ಮರೆತು ವಾದ ಮಾಡುವುದರ ಮೇಲೆ ನಿಮ್ಮ ಗಮನ ಹೋಗಬಹುದು" ಎಂದು ಅಟ್ ಈಸ್ ನ ಮುಖ್ಯ ಮಾನಸಿಕ ಆರೋಗ್ಯ ತಜ್ಞೆ ರಿಚಾ ವಸಿಷ್ಠ ಹೇಳುತ್ತಾರೆ.


ಇದನ್ನೂ ಓದಿ: ಕಾಯಿ ಕಾಯಿ ಹಸಿರು ಮೆಣಸಿನಕಾಯಿ; ಮೈಕೊರೆಯೋ ಚಳಿಗೆ, ಶೀತಕಾಲದ ಕಾಯಿಲೆಗೆ ಇದೇ ಮದ್ದಂತೆ!


2. ಧನಾತ್ಮಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ


"ಸಂಘರ್ಷಗಳು ಹೆಚ್ಚಾಗಿ ತಿರಸ್ಕಾರಕ್ಕೆ ಕಾರಣವಾಗುತ್ತವೆ. ತಿರಸ್ಕಾರ ಶುರುವಾದಾಗ ನೀವು ಇತರರನ್ನು ಅಗೌರವದಿಂದ ನಡೆಸಿಕೊಳ್ಳಬಹುದು, ವ್ಯಂಗ್ಯದಿಂದ ಅಣಕಿಸಬಹುದು ಮತ್ತು ಅವರನ್ನು ಅಪಹಾಸ್ಯ ಮಾಡಬಹುದು" ಎಂದು ವಸಿಷ್ಠ ಹೇಳುತ್ತಾರೆ. ನಿಮಗೆ ವ್ಯಕ್ತಿಯ ಬಗ್ಗೆ ತಿರಸ್ಕಾರದ ಭಾವನೆ ಬಂದರೆ, ವಾದ ಅಥವಾ ಸಂಭಾಷಣೆಯ ಸಮಯದಲ್ಲಿ ವಿರಾಮ ನೀಡಲು ಪ್ರಯತ್ನಿಸಿ ಮತ್ತು ನಿಮ್ಮ ಮುಂದೆ ಇರುವ ವ್ಯಕ್ತಿಯ ಸಕಾರಾತ್ಮಕ ಗುಣಗಳ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ. ಇದು ಆ ವ್ಯಕ್ತಿಯ ಬಗ್ಗೆ ತಿರಸ್ಕಾರದ ಭಾವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಇವರು ಹೇಳುತ್ತಾರೆ.


3. ರಕ್ಷಣಾತ್ಮಕವಾಗಿ ವರ್ತಿಸಬೇಡಿ


ಮಾನಸಿಕ ಆರೋಗ್ಯ ತಜ್ಞರು "ಕೆಲವೊಮ್ಮೆ, ನಾವು ಅನ್ಯಾಯವಾಗಿ ಆಪಾದಿಸಲ್ಪಟ್ಟಾಗ, ನಾವು ನೆಪಗಳನ್ನು ಹುಡುಕುತ್ತೇವೆ ಮತ್ತು ಆ ದೂಷಣೆಗಳಿಂದ ತಪ್ಪಿಸಿಕೊಳ್ಳಲು ಬಲಿಪಶು ಆದವರಂತೆ ವರ್ತಿಸುತ್ತೇವೆ. ರಕ್ಷಣಾತ್ಮಕವಾಗಿರುವ ಯಾರಾದರೂ ಅದನ್ನು ಇನ್ನೊಬ್ಬ ವ್ಯಕ್ತಿಯ ತಪ್ಪು ಅಂತ ಆ ದೂಷಣೆಯನ್ನು ಅವರ ಮೇಲೆ ಹೊರಿಸುವ ಪ್ರಯತ್ನ ಮಾಡಬಹುದು" ಎಂದು ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ರಕ್ಷಣಾತ್ಮಕವಲ್ಲದ ಪ್ರತಿಕ್ರಿಯೆಯನ್ನು ಬಳಸಲು ಪ್ರಯತ್ನಿಸಿ. ಎಂದರೆ ಜವಾಬ್ದಾರಿಯನ್ನು ತೆಗೆದುಕೊಂಡು ಆ ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಇತರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ ಎಂದು ಅವರು ಸೂಚಿಸುತ್ತಾರೆ.


ಇದನ್ನೂ ಓದಿ: ನೀವು ತುಂಬಾ ಭಯಪಡ್ತಿರಾ? ಹಾಗಾದ್ರೆ ಈ ಥೆರಪಿ ಮಾಡಿಸಿಕೊಳ್ಳಿ


4. ವಾದದ ಮಧ್ಯೆ ಮೌನವಾಗಿರುವುದು ಒಳ್ಳೆಯದಲ್ಲ


ಆಗಾಗ, ವಾದಗಳಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇರುವುದು ಸಹ ವಾದವನ್ನು ಇನ್ನಷ್ಟು ಹದಗೆಡಿಸಬಹುದು. ಒಬ್ಬ ವ್ಯಕ್ತಿಯು ಆ ವಾದದಿಂದ ಹಿಂದೆ ಸರಿದಾಗ ಅಥವಾ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದಾಗ ಅದು ಇನ್ನೊಬ್ಬ ವ್ಯಕ್ತಿಯನ್ನು ಇನ್ನಷ್ಟು ಕೆರಳಿಸುತ್ತೆ. "ಸಂಘರ್ಷದ ಸಮಯದಲ್ಲಿ ನೀವು ಮೌನವಾಗಿರುವುದು ಒಳ್ಳೆಯದು ಎಂದು ನಿಮಗೆ ಅನಿಸಿದರೆ, ಚರ್ಚೆಯನ್ನು ನಿಲ್ಲಿಸಿ ಮತ್ತು ವಿರಾಮ ತೆಗೆದುಕೊಳ್ಳುವಂತೆ ವ್ಯಕ್ತಿಯನ್ನು ಕೇಳಿ" ಎಂದು ವಸಿಷ್ಠ ಹೇಳುತ್ತಾರೆ.

Published by:Sandhya M
First published: