ಗರ್ಭಿಣಿಯರನ್ನು ಕಾಡುವ ಹಲ್ಲು ನೋವು ಡೇಂಜರ್, ಅದನ್ನು ಬಾರದಂತೆ ತಡೆಯಲು ಸರಳ ಉಪಾಯಗಳು ಇಲ್ಲಿವೆ

Pregnancy Teeth pain: ಗರ್ಭಾವಸ್ಥೆಯಲ್ಲಿ ತಲೆತಿರುಗುವಿಕೆ, ವಾಕರಿಕೆ, ಬೆನ್ನು ನೋವು, ಹಿಮ್ಮಡಿಗಳಲ್ಲಿ ಊತ ಇತ್ಯಾದಿ ಸಮಸ್ಯೆಗಳು ಸಾಮಾನ್ಯವಾಗಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಅನೇಕ ಮಹಿಳೆಯರು ಹಲ್ಲುನೋವಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಒಬ್ಬ ಮಹಿಳೆಗೆ ಗರ್ಭವಸ್ಥೆ(Pregnancy) ಎನ್ನುವುದು ತುಂಬಾ ಸಂತೋಷಕರ(Happy) ಅನುಭವವನ್ನು(Feel) ಉಂಟು ಮಾಡುತ್ತದೆ ನಿಜ. ಗರ್ಭಾವಸ್ಥೆಯ ನಂತರ ಹೊಸದಾಗಿ ಮನೆಗೆ ಒಬ್ಬ ಅತಿಥಿ(Guest) ಆಗಮನವಾಗುತ್ತಿದೆ ಎಂದು ಕೇಳಿದರೆ ಮನೆಯ ಇತರ ಸದಸ್ಯರಿಗಿಂತ ಹೆಚ್ಚು ಖುಷಿ ಕೊಡುವುದು ಗರ್ಭಿಣಿ ಮಹಿಳೆ. ಆದರೆ ತನ್ನ 9 ತಿಂಗಳ ಗರ್ಭಾವಸ್ಥೆ ಯನ್ನು ಪೂರೈಸುವ ಸಂದರ್ಭದಲ್ಲಿ ಹಲವಾರು ಕ್ಲಿಷ್ಟಕರ ಆರೋಗ್ಯ(Health) ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಗರ್ಭಿಣಿಯರು ತಮ್ಮ ಜೀವನಶೈಲಿ(Lifestyle) ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೆರಿಗೆಯ ವೇಳೆ ಮಗುವು ಆರೋಗ್ಯವಂತವಾಗಿ ಹಾಗೂ ಯಾವುದೇ ಸಮಸ್ಯೆಗಳಿಲ್ಲದೆ(Problem) ಹುಟ್ಟಲು, ತಾಯಿಯು ಆರೋಗ್ಯವಂತಳಾಗಿ ಹಾಗೂ ರೋಗಮುಕ್ತಳಾಗಿ ಇರುವುದು ತುಂಬಾ ಮುಖ್ಯ. ಇಲ್ಲದಿದ್ರೆ ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ..

    ಇನ್ನು ಗರ್ಭಾವಸ್ಥೆಯು ಮಹಿಳೆಗೆ ಸುಂದರವಾದ ಅನುಭವ. ಆದರೆ ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತವೆ..
    ಗರ್ಭಾವಸ್ಥೆಯಲ್ಲಿ ತಲೆತಿರುಗುವಿಕೆ, ವಾಕರಿಕೆ, ಬೆನ್ನು ನೋವು, ಹಿಮ್ಮಡಿಗಳಲ್ಲಿ ಊತ ಇತ್ಯಾದಿ ಸಮಸ್ಯೆಗಳು ಸಾಮಾನ್ಯವಾಗಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಅನೇಕ ಮಹಿಳೆಯರು ಹಲ್ಲುನೋವಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಜೊತೆಗೆ ಹಲ್ಲಿನ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.

    ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಬೇಗ ಗರ್ಭಿಣಿಯಾಗ್ತಾರೆ ಎಂದಿದ್ದಾರೆ ತಜ್ಞ ವೈದ್ಯರು

    ಗರ್ಭಿಣಿಯರಿಗೆ ಹೆಚ್ಚು ಕಾಡುವ ಹಲ್ಲು ನೋವು

    ಗರ್ಭಧಾರಣಾ ಅವಧಿಯಲ್ಲಿ ಆಗುವ ಹಾರ್ಮೋನ್‌ ಏರುಪೇರಿನಿಂದಾಗಿ ಗರ್ಭಿಣಿ ಮಹಿಳೆಯರಲ್ಲಿ ಒಸಡಿನ ಸಮಸ್ಯೆ, ಒಸಡಿನ ಉರಿಯೂತ, ಒಸಡು ಊದಿಕೊಳ್ಳುವುದು, ಬ್ರಷ್‌ ಮಾಡುವಾಗ ಅಥವಾ ಫ್ಲಾಸ್‌ ಮಾಡುವಾಗ ಒಸಡಿನಲ್ಲಿ ರಕ್ತ ಬರುವುದು ಮತ್ತು ಒಸಡಿನಲ್ಲಿ  ಮಾಂಸದ ಗುಳ್ಳೆಗಳು ಕಾಣಿಸಿಕೊಳ್ಳುವುದು ಅಥವಾ ಪಯೋಜೆನಿಕ್‌ ಗ್ರ್ಯಾನ್ಯುಲೋಮಾ ಇತ್ಯಾದಿ ಸಮಸ್ಯೆಗಳ ಜೊತಗೆ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

    1) ಹಲ್ಲುಗಳ ದಂತಕವಚಕ್ಕೆ ಹಾನಿ: ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಲ್ಲಿ ಬೆಳಗಿನ ಸಮಯದಲ್ಲಿ ಉಂಟಾಗುವ ಹಲ್ಲು ಬೇನೆಯಿಂದ ಗ್ಯಾಸ್ಟ್ರಿಕ್ ಆಮ್ಲವು, ಬಾಯಿಯ ಕುಹರ ಸಂಪರ್ಕಕ್ಕೆ ಬಂದು, ಹಲ್ಲುಗಳ ದಂತಕವಚ ಹಾನಿಯಾಗುವ ಸಾಧ್ಯತೆ ಇರುತ್ತದೆ.

    2)ಹಲ್ಲುಗಳಲ್ಲಿ ಹುಳು: ಮಕ್ಕಳು ಇರುವಾಗ ಅಥವಾ ಸಿಹಿ ತಿಂದಾಗ ಉಂಟಾಗುವ ಹುಳುವಿನ ಸಮಸ್ಯೆ ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚು. ಗರ್ಭಿಣಿ ಮಹಿಳೆಯರಿಗೆ ಸಿಹಿತಿಂಡಿ ತಿನ್ನುವ ಬಯಕೆ ಹೆಚ್ಚಿರುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

    3)ಹಲ್ಲಿನ ವಸಡುಗಳಿಗೆ ಹಾನಿ: ಗರ್ಭಾವಸ್ಥೆಯಲ್ಲಿ, ಮಹಿಳೆಯರ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ, ಒಸಡು ಕಾಯಿಲೆಗಳಿಗೆ ಗುರಿಯಾಗುವ ಅಪಾಯವು ಹೆಚ್ಚಾಗುತ್ತದೆ.

    ಹಲ್ಲು ನೋವು ತಪ್ಪಿಸಲು ಏನು ಮಾಡಬೇಕು..?

    * ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗಿ ಹಲ್ಲುನೋವಿನ ಸಮಸ್ಯೆಗಳ ಬಗ್ಗೆ ಹೇಳಿಕೊಂಡು ದಂತ ವೈದ್ಯರು ನೀಡುವ ಸಲಹೆ ಪಾಲಿಸುವುದು ಮುಖ್ಯ.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಂಗೀತ ಆಲಿಸುವುದರಿಂದ ಉಂಟಾಗುವ ಅದ್ಭುತ ಪರಿಣಾಮಗಳೇನು?

    * ನಿಮ್ಮ ಹಲ್ಲುಗಳನ್ನು ಮೃದುವಾದ ಟೂತ್‌ಬ್ರಷ್‌ ಮೂಲಕ ದಿನಕ್ಕೆ ಕನಿಷ್ಠ ಎರಡು ಬಾರಿ ಬ್ರಷ್‌ ಮಾಡಿಕೊಂಡು ಸೂಕ್ಷ್ಮಾಣು ನಿರೋಧಕ ಮೌತ್‌ವಾಶ್‌ ಬಳಸುವುದು

    *ಕ್ಯಾಲ್ಸಿಯಂ, ಪ್ರೋಟೀನ್, ರಂಜಕ, ವಿಟಮಿನ್ ಎ, ಸಿ ಮತ್ತು ಡಿ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿ ಹಲ್ಲಿನ ಆರೋಗ್ಯ ಹೆಚ್ಚಳ ಮಾಡಿಕೊಳ್ಳುವುದು.

    *ಫೈಬರ್ ಭರಿತ ವಸ್ತುಗಳ ಸೇವನೆ, ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಹಲ್ಲಿನ ನೋವಿನಿಂದ ಮುಕ್ತಿ ಪಡೆಯಬಹುದು.
    Published by:ranjumbkgowda1 ranjumbkgowda1
    First published: