ಅಡುಗೆ ಮನೆಯ ಸಿಂಕ್​ಅನ್ನು ಹೊಳಪಾಗಿಡುವ ಪರಿಣಾಮಕಾರಿ ವಿಧಾನಗಳು

ಅಡುಗೆ ಮಾಡಿ ಆಹಾರ ಸೇವಿಸಿದ ನಂತರ ಪಾತ್ರೆಗಳನ್ನು ತೊಳೆಯುವ ಅಭ್ಯಾಸ ಮಾಡಿ. ಈ ಮೂಲಕ ಸಿಂಕ್ ನಲ್ಲಿ ಕೀಟಾಣು ಉತ್ಪತ್ತಿಯಾಗದಂತೆ ಎಚ್ಚರವಹಿಸಬಹುದು ಮತ್ತು ಅದನ್ನು ಸ್ವಚ್ಛಗೊಳಿಸಲು ಕಷ್ಟಪಡುವ ಅಗತ್ಯವೂ ಇರುವುದಿಲ್ಲ.

news18
Updated:August 6, 2019, 2:59 PM IST
ಅಡುಗೆ ಮನೆಯ ಸಿಂಕ್​ಅನ್ನು ಹೊಳಪಾಗಿಡುವ ಪರಿಣಾಮಕಾರಿ ವಿಧಾನಗಳು
ಅಡುಗೆ ಮನೆ ಸಿಂಕ್
  • News18
  • Last Updated: August 6, 2019, 2:59 PM IST
  • Share this:
ಅಡುಗೆ ಮನೆಯಲ್ಲಿನ ಸಿಂಕ್ ಹೆಚ್ಚು ಸ್ವಚ್ಛವಾಗಿಡಬೇಕಾದ ಅತ್ಯಂತ ಮುಖ್ಯವಾದ ಸ್ಥಳಗಳಲ್ಲಿ ಒಂದು. ಸಿಂಕ್ ಕೀಟಾಣು, ಕ್ರಿಮಿ ಇತ್ಯಾದಿಗಳಿಂದ ಆರೋಗ್ಯಕ್ಕೆ ಅನೇಕ ಅಪಾಯಗಳನ್ನು ಉಂಟು ಮಾಡುವುದರಿಂದ ಅದರ ಸ್ವಚ್ಛತೆಯನ್ನು ನಿರ್ಲಕ್ಷಿಸುವಂತಿಲ್ಲ.

ಪ್ರತಿದಿನ ಸಿಂಕ್ ಸ್ವಚ್ಛಗೊಳಿಸಿ

ನಿಮ್ಮ ಸಿಂಕ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಿ. ಪಾತ್ರೆಗಳನ್ನು ತೊಳೆದ ನಂತರ ನೀವು ಸುರಿಯುವ ನೀರು ಸಿಂಕ್ ಅನ್ನು ಸ್ವಚ್ಛಗೊಳಿಸುವುದಿಲ್ಲ ಮತ್ತು ಕೀಟಾಣು ಮುಕ್ತವಾಗಿಸುವುದಿಲ್ಲ. ಪ್ರತಿದಿನ ಸ್ವಚ್ಛಗೊಳಿಸುವುದು ಸ್ವಲ್ಪ ಕಷ್ಟವೆನಿಸಿದರೂ ಆಗಾಗ್ಗೆ ಸಿಂಕ್ ಗಳನ್ನು ಸ್ವಚ್ಛಗೊಳಿಸುವುದು ಮುಖ್ಯ. ಇದಕ್ಕೆ ಯಾವುದೇ ದೀರ್ಘ ಸ್ವಚ್ಛತೆ ಅಗತ್ಯವಿಲ್ಲ, ಸಾಮಾನ್ಯವಾಗಿ ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಕೊಂಡರೆ ಸಾಕು.ಡ್ರೈನ್ ಮತ್ತು ವಿಲೇವಾರಿಯ ಬಗ್ಗೆ ಎಚ್ಚರವಹಿಸಿ

ಎರಡು ವಾರಕ್ಕೊಮ್ಮೆ ಡ್ರೈನ್ ನಲ್ಲಿ ಸಿಟ್ರಸ್ ಮತ್ತು ವಿನೆಗರ್ ಯುಕ್ತ ಐಸ್ ಕ್ಯೂಬ್ ಹಾಕಿ. ಪೈಪ್ ನಲ್ಲಿ ಯಾವುದಾದರೂ ವಿಲೇವಾರಿ ಮಾಡಬಹುದಾದ ವಸ್ತು ಸೇರಿದ್ದರೆ, ಈ ಕ್ಯೂಬ್ ಅದನ್ನು ಸಾಗಿಸುತ್ತದೆ. ಸಾಧ್ಯವಿದ್ದಲ್ಲಿ, ಸಿಂಕ್ ಗೆ ಡ್ರೈನ್ ಕವರ್ ಖರೀದಿಸಿ.

 

ಪಾತ್ರೆಗಳನ್ನು ಸಾಧ್ಯವಾದಷ್ಟೂ ಬೇಗ ತೊಳೆಯಿರಿ

ಸಿಂಕ್ ಎಲ್ಲಾ ಸಮಯದಲ್ಲೂ ಖಾಲಿ ಇರುವುದು ಉತ್ತಮ. ಅಡುಗೆ ಮಾಡಿ ಆಹಾರ ಸೇವಿಸಿದ ನಂತರ ಪಾತ್ರೆಗಳನ್ನು ತೊಳೆಯುವ ಅಭ್ಯಾಸ ಮಾಡಿ. ಈ ಮೂಲಕ ಸಿಂಕ್ ನಲ್ಲಿ ಕೀಟಾಣು ಉತ್ಪತ್ತಿಯಾಗದಂತೆ ಎಚ್ಚರವಹಿಸಬಹುದು ಮತ್ತು ಅದನ್ನು ಸ್ವಚ್ಛಗೊಳಿಸಲು ಕಷ್ಟಪಡುವ ಅಗತ್ಯವೂ ಇರುವುದಿಲ್ಲ. 
First published: August 6, 2019, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading