Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

Health tips: ಒಂದು ತುಂಡು ಸೌತೆಕಾಯಿ ಅಥವಾ ಬೆರ್ರಿ ಹಣ್ಣನ್ನು ಮಗುವಿಗೆ ಕೊಡಿ ಇದರಿಂದ ಮಕ್ಕಳಿಗೆ ನೀರು ಕುಡಿಯಲು ಹೆಚ್ಚು ಪ್ರೋತ್ಸಾಹವುಂಟಾಗುತ್ತದೆ.

  • Share this:

ಇಂದಿನ ದಿನಗಳಲ್ಲಿ ಆರೋಗ್ಯವೆಂಬುದು (Health) ಮಹತ್ತರ ಅಂಶವಾಗಿದ್ದು, ನಮ್ಮ ಆರೋಗ್ಯ ಕೈಕೊಟ್ಟರೆ ಅದಕ್ಕಿಂತ ಹೆಚ್ಚಿನ ಸಮಸ್ಯೆ ನಮ್ಮ ಜೀವನದಲ್ಲಿ ಬೇರೊಂದಿರುವುದಿಲ್ಲ. ಸಾಂಕ್ರಾಮಿಕ (Epidemic) ಬಂದ ನಂತರವಂತೂ ಆರೋಗ್ಯದ ಬಗೆಗಿನ ಕಾಳಜಿ ಇನ್ನೂ ಹೆಚ್ಚುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಅದರಲ್ಲೂ ಜ್ವರ, ಗಂಟಲಿನ ಕಿರಿಕಿರಿ, ಶೀತದ ಲಕ್ಷಣಗಳು ( symptoms) ಉಂಟಾದಾಗ ಇದು ಕೋವಿಡ್(covid) ಏನೋ ಎಂಬ ಭಯ ನಮ್ಮನ್ನು ಕಾಡುತ್ತದೆ. ಕೋವಿಡ್ ಬಂದ ನಂತರ ಸಣ್ಣದಾಗಿ ಕಂಡುಬರುವ ಗಂಟಲು ನೋವು (Minor throat pain )ಕೂಡ ಕೆಟ್ಟ ಲಕ್ಷಣವೆಂದೇ ಪರಿಗಣಿತವಾಗುತ್ತಿದೆ.ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಅದಕ್ಕೆ ಬೇಕಾದ ಔಷಧೋಪಚಾರಗಳನ್ನು ನಡೆಸುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ.


ಮನೆಮದ್ದು


ಸಣ್ಣದಾಗಿ ನೋಯುತ್ತಿರುವ ಗಂಟಲಿನ ನೋವು ನಿಮ್ಮನ್ನು ಹೆಚ್ಚು ಹಿಂಸಿಸುತ್ತಿದೆ ಎಂದಾದಲ್ಲಿ ನೀವು ಚಿಂತಿಸಬೇಕಾಗಿಲ್ಲ. ಮನೆಯಲ್ಲೇ ಈ ನೋವುಗಳಿಗೆ ಔಷಧೋಪಚಾರಗಳನ್ನು ನಡೆಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಮನೆಮದ್ದುಗಳೇನು ಎಂಬುದನ್ನು ಕಂಡುಕೊಳ್ಳೋಣ.


ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಹೆಚ್ಚುವುದನ್ನು ತಡೆಯಲು ಇಲ್ಲಿದೆ ಸೂಪರ್ ಟಿಪ್ಸ್


ಒಂದು ಚಮಚ ಜೇನುತುಪ್ಪ ಸೇವನೆ:


ಕೆಮ್ಮು ಇಲ್ಲವೇ ಗಂಟಲಿನ ಕಿರಿಕಿರಿಯಾಗಿರಲಿ, ಒಂದು ಚಮಚದಷ್ಟು ಜೇನು ಸೇವಿಸುವುದು ನಿಮಗೆ ಈ ಸಮಯದಲ್ಲಿ ಸಹಕಾರಿಯಾಗಿದೆ. ನೀವು ಜೇನುತುಪ್ಪವನ್ನು ಹಾಲು ಅಥವಾ ಅರಿಶಿನ ಬೆರೆಸಿದ ನೀರಿನಲ್ಲಿ ಕೂಡ ಬೆರೆಸಿ ಸೇವಿಸಬಹುದು. ಜೇನಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ನಿಮ್ಮ ಗಂಟಲಿಗೆ ಪರಿಹಾರನೀಡುತ್ತದೆ.


ಉಪ್ಪು ನೀರಿನಲ್ಲಿ ಮುಕ್ಕಳಿಸುವುದು:


ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಸೇರಿಸಿ ಅದನ್ನು ಮಿಶ್ರ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಬಾಯಿಗೆ ಹಾಕಿ ಮುಕ್ಕಳಿಸಿ. ಇದು ಗಂಟಲಿನ ಉರಿಯೂತ ಕಡಿಮೆ ಮಾಡುತ್ತದೆ ಹಾಗೂ ಗಂಟಲು ಕಟ್ಟಿರುವ ಭಾಗವನ್ನು ಸರಿಪಡಿಸುತ್ತದೆ. ಸೋಂಕು ನಿವಾರಣೆಗೊಳ್ಳುವವರೆಗೆ ನೀವು 5 ಗಂಟೆಗಳಿಗೊಮ್ಮೆ ಇದನ್ನು ಮಾಡಬಹುದು.


ಪುದೀನಾ ಕ್ಯಾಮೊಮೈಲ್ ಚಹಾ ಕುಡಿಯುವುದು:


ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಚಹಾ ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಗಂಟಲನ್ನು ಶಮನಗೊಳಿಸುತ್ತದೆ. ಉರಿಯೂತದ ಔಷಧೀಯ ಗುಣಗಳಿಗಾಗಿ ಅವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಪುದೀನಾ ಚಹಾ ಪರಿಮಳ ಭರಿತವಾಗಿದೆ, ಹಾಗೂ ಸಂಜೆಯ ಸಮಯದಲ್ಲಿ ಇದು ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.


ಮಕ್ಕಳು ಹಾಗೂ ನವಜಾತ ಶಿಶುವಿಗೆ ಗಂಟಲು ನೋವಿದ್ದರೆ ನೀಡಬಹುದಾದ ಮನೆಮದ್ದುಗಳು


ಚಿಕ್ಕಮಕ್ಕಳಿಗೆ ಗಂಟಲು ನೋಯುತ್ತಿದ್ದರೆ ಮಕ್ಕಳಿಗೆ ಗಂಟಲು ನೋವಿನ ಕುರಿತು ಸ್ಪಷ್ಟವಾಗಿ ಹೇಳಲೂ ಆಗುವುದಿಲ್ಲ. ನಿಮ್ಮ ಮಗು ಅಸಾಧ್ಯ ಗಂಟಲು ನೋವಿನಿಂದ ಬಳಲುತ್ತಿದ್ದರೆ ಈ ಮನೆಮದ್ದುಗಳನ್ನು ನೀವು ಬಳಸಬಹುದಾಗಿದೆ.


ಮಗುವಿನ ಮಲಗುವ ಕೋಣೆಯಲ್ಲಿ ಆರ್ದ್ರಕ ಇರಿಸಿ. ಗಾಳಿಯಲ್ಲಿರುವ ತೇವಾಂಶವು ನೋಯುತ್ತಿರುವ ಗಂಟಲನ್ನು ಉಪಶಮನ ಮಾಡುತ್ತದೆ. ಮಕ್ಕಳು ಸಾಕಷ್ಟು ನೀರು ಸೇವಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಕ್ಕಳು ಆದಷ್ಟು ನೀರು ಸೇವಿಸಿದಂತೆ ಮಗುವಿಗೆ ಗಂಟಲಿನ ಸೋಂಕುಗಳು ಅಷ್ಟೊಂದು ಕಾಡುವುದಿಲ್ಲ. ಒಂದು ತುಂಡು ಸೌತೆಕಾಯಿ ಅಥವಾ ಬೆರ್ರಿ ಹಣ್ಣನ್ನು ಮಗುವಿಗೆ ಕೊಡಿ ಇದರಿಂದ ಮಕ್ಕಳಿಗೆ ನೀರು ಕುಡಿಯಲು ಹೆಚ್ಚು ಪ್ರೋತ್ಸಾಹವುಂಟಾಗುತ್ತದೆ.


ಇದನ್ನೂ ಓದಿ: Health Tips: ಬೇಯಿಸಿದ ಮೊಟ್ಟೆಯ ಡಯೆಟ್: ದಿನದಲ್ಲಿಎಷ್ಟು ಮೊಟ್ಟೆ ಸೇವಿಸಬೇಕು?


ಮಗುವಿಗೆ ಐದು ವರ್ಷ ತುಂಬಿಲ್ಲದಿದ್ದರೆ ಅವರಿಗೆ ಕ್ಯಾಂಡಿ ನೀಡಬೇಡಿ. ಅದೂ ಅಲ್ಲದೆ ಕೆಮ್ಮಿನ ಔಷಧಗಳನ್ನು ನೀಡುವಾಗ ಜಾಗರೂಕರಾಗಿರಿ. ಇನ್ನು ನಿಮ್ಮ ಮಗು 5 ಹಾಗೂ 10 ವರ್ಷದವರಾಗಿದ್ದರೆ ಕೆಮ್ಮಿನ ಔಷಧವನ್ನು ಮಕ್ಕಳು ಸರಿಯಾಗಿ ಸೇವಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇನ್ನು ನಿಮ್ಮ ಮಗುವಿಗೆ 1 ವರ್ಷ ತುಂಬಿಲ್ಲದೇ ಇದ್ದರೆ ಮಗುವಿಗೆ ಜೇನು ನೀಡಬೇಡಿ.

First published: