Hiccups : ಬಿಕ್ಕಳಿಕೆ ಸಮಸ್ಯೆಯಿಂದ ಸಾಕಾಗಿದೆಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

Health Tips: ಬಿಕ್ಕಳಿಕೆಗೆ ಒಂದು ಕಾಯಿಲೆಯಲ್ಲ, ಅದರಿಂದ ಸುಲಭವಾಗಿ ಪರಿಹಾರ ಪಡೆಯಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹುತೇಕ ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಬಿಕ್ಕಳಿಸುತ್ತಾರೆ. ಬಿಕ್ಕಳಿಕೆಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ತಮ್ಮಷ್ಟಕ್ಕೆ ತಾವೇ ದೂರವಾಗುತ್ತವೆ, ಅವು ಕಿರಿಕಿರಿ ಉಂಟುಮಾಡಬಹುದು ಮತ್ತು ತಿನ್ನುವುದು ಮತ್ತು ಮಾತನಾಡುವುವಾಗ ಸಮಸ್ಯೆ ಮಾಡುತ್ತದೆ. ಜನರು ಬಿಕ್ಕಳಿಕೆ ನಿಲ್ಲಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಅಕ್ಕರೆ ತಿಂದು ನೀರನ್ನು ಕುಡಿಯುವುದು, ಉಸಿರು ಗಟ್ಟಿ ಹಿಡಿಯುವುದು ಹೀಗೆ.  

ಬಿಕ್ಕಳಿಕೆಗೆ ಒಂದು ಕಾಯಿಲೆಯಲ್ಲ, ಅದರಿಂದ ಸುಲಭವಾಗಿ ಪರಿಹಾರ ಪಡೆಯಬಹುದು

ಧೂಮಪಾನ ಹಾಗೂ ಮದ್ಯಪಾನ ಅಭ್ಯಾಸವಿದ್ದರೆ ಬಿಡಿ

ಕಾರ್ಬೋಹೈಡ್ರೇಟ್ ತುಂಬಿದ ಪಾನೀಯಗಳಿಂದ ದೂರವಿರಿ

ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸ ಬೇಡಿ

ಊಟ ತಿಂಡಿ ಗಳನ್ನು ಸೇವಿಸುವಾಗ ನಿಧಾನವಾಗಿ ತಿನ್ನಿ.

ಕೈ ಗಳಿಂದ ಮೂಗನ್ನು ಮುಚ್ಚಿ

ಕೈಗಳಿಂದ ಮೂಗನ್ನು ಮುಚ್ಚುವುದರಿಂದ ಬಿಕ್ಕಳಿಕೆ ನಿಲ್ಲಿಸಲು ಸಹಕಾರಿಯಾಗುತ್ತದೆ. ಈ ರೀತಿ ಮಾಡುವುದರಿಂದ ಶ್ವಾಸಕೋಶ ದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಹೊರಹೋಗುತ್ತದೆ.

ಸಾಮಾಜಿಕ ಸ್ಥಳಗಳಲ್ಲಿ ಬಿಕ್ಕಳಿಕೆ ಬಂದಾಗ ಮುಜುಗರವಾಗುತ್ತದೆ.  ಆದರೆ ಈ ರೀತಿ ನಾಲಿಗೆಯನ್ನು ಹಿಡಿದಿಟ್ಟುಕೊಳ್ಳುವುದರಿಂದ ಬಿಕ್ಕಳಿಕೆಯನ್ನು  ತಡೆಯಬಹುದು. ಈ ರೀತಿ ನಾಲಿಗೆಯನ್ನು ಹಿಡಿದು ಇಟ್ಟುಕೊಳ್ಳುವುದರಿಂದ ಗಂಟಲಿನಲ್ಲಿರುವ ಸ್ನಾಯುಗಳು ಮತ್ತು ನರಗಳನ್ನು ಇದು ಉತ್ತೇಜಿಸುತ್ತದೆ. ಇದರಿಂದ ನಿಮ್ಮ ಗಂಟಲು ಸರಾಗವಾಗಿ ಉಸಿರಾಡಲು ಸಹಾಯವಾಗುತ್ತದೆ.

ಉಸಿರಾಡುವಾಗ ಕಿರಿಕಿರಿ ಉಂಟಾದರೆ ಐಸ್ ವಾಟರ್ ನಿಂದ ಗಾರ್ಗಲ್ ಮಾಡುವುದರಿಂದ ಗಂಟಲಿನಲ್ಲಿ ಆಗುವ ಕಿರಿಕಿರಿಯನ್ನು ತಪ್ಪಿಸಬಹುದು. ಐಸ್ ವಾಟರ್ ಅನ್ನು ಗಾರ್ಗಲ್  ಮಾಡುವುದರಿಂದ ಇದನ್ನು ಕಡಿಮೆ ಮಾಡಬಹುದು.. ಇದು ನಿಮ್ಮ ಉಸಿರಾಟದ ಮಟ್ಟವನ್ನು ಹೆಚ್ಚಿಸಿ ಬಿಕ್ಕಳಿಕೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಈ ಆಯುರ್ವೇದ ಗಿಡಮೂಲಿಕೆಯ ಆರೋಗ್ಯ ಪ್ರಯೋಜನಗಳು ಒಂದೆರೆಡಲ್ಲ.

ಬಿಕ್ಕಳಿಕೆಗೆ ಮತ್ತೊಂದು ಪರಿಹಾರವೆಂದರೆ ಕಡಲೆಕಾಯಿ ಬೆಣ್ಣೆ. ನಿಮ್ಮ ಉಸಿರಾಟವು ಬಿಕ್ಕಳಿಕೆ ಸಮಯದಲ್ಲಿ ಪದೇಪದೇ ಬದಲಾಗುತ್ತಿರುತ್ತದೆ.  ಇದಕ್ಕೆ ಪರಿಹಾರ ಕಡಲೆಕಾಯಿ ಬೆಣ್ಣೆ. ಕಡಲೆಕಾಯಿ ಬೆಣ್ಣೆ ಉಸಿರಾಟವನ್ನು ಸರಾಗವಾಗುವಂತೆ ಮಾಡುತ್ತದೆ. ಕಡಲೆಕಾಯಿ ಬೆಣ್ಣೆ ಇಲ್ಲದಿದ್ದಾಗ ಚಾಕಲೇಟನ್ನು ಸಹ ಬಳಸಬಹುದು.

ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇದೆ. ನಿಂಬೆ ಹಣ್ಣಿನಲ್ಲಿರುವ ಹುಳಿ ಅಂಶವು ಬಿಕ್ಕಳಿಕೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿ ಆಮ್ಲೀಯ ಅಂಶವಿದೆ, ಇದು ವಾಗಸ್ ನರವನ್ನು ಮರು ಹೊಂದಿಸುತ್ತದೆ. ಅಲ್ಲದೆ ನಿಂಬೆಯನ್ನು ಕತ್ತರಿಸಿ ಅದರ ಮೇಲೆ ಸ್ವಲ್ಪ ಉಪ್ಪನ್ನು ಉದುರಿಸಿ ಅನಂತರ ಸೇವನೆ ಮಾಡಬಹುದು.

ವಿನೆಗರ್ ಸಹ ಬಿಕ್ಕಳಿಕೆಯನ್ನು ನಿವಾರಿಸಲು ಸಹಾಯಮಾಡುತ್ತದೆ. ಆದರೆ ನೀರು, ಜೇನುತುಪ್ಪ ,ಸಕ್ಕರೆ ರೀತಿ ವಿನೇಗರ್ ಅನ್ನು ನೀವು ನೇರವಾಗಿ ಸೇವಿಸಬಾರದು. ನಿಮ್ಮ ನಾಲಿಗೆ ಮೇಲೆ ಕೆಲವೊಂದು ವಿನೆಗರ್ ಡ್ರಾಪ್ ಗಳನ್ನು ಹಾಕಿ ಅದು ಬಿಕ್ಕಳಿಕೆ ನಿಲ್ಲಿಸಲು ಸಹಾಯ ಮಾಡುತ್ತದೆ.

ಜೇನುತುಪ್ಪವನ್ನು ಸಹ ಬಿಕ್ಕಳಿಕೆಯನ್ನು ನಿವಾರಿಸಲು ಬಳಕೆ ಮಾಡಲಾಗುತ್ತದೆ. ಇದರಲ್ಲಿರುವ ಸಕ್ಕರೆ ಅಂಶವು ಬಿಕ್ಕಳಿಕೆಯನ್ನು ನಿವಾರಿಸಲು ಸಹಾಯಮಾಡುತ್ತದೆ. ಜೇನುತುಪ್ಪವನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತಿನ ನಂತರ ಅದನ್ನು ನುಂಗಿ.ಇಲ್ಲವಾದಲ್ಲಿ ಅರ್ಧ ಗ್ಲಾಸ್ ನೀರಿನಲ್ಲಿ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಜೇನುತುಪ್ಪವು ವಾಗಾಸ್ ನರವನ್ನು ತಂಪು ಗೊಳಿಸುತ್ತದೆ ,ಇದರಿಂದ ನಿರಂತರ ಬಿಕ್ಕಳಿಕೆಗೆ ಪರಿಹಾರ ಸಿಗುತ್ತದೆ.

ಸಕ್ಕರೆಯು ಸಹ ಬಿಕ್ಕಳಿಕೆಗೆ ಒಂದು ಉತ್ತಮ ಪರಿಹಾರ..ಸ್ವಲ್ಪ ಸಕ್ಕರೆಯನ್ನು 2 ನಿಮಿಷಗಳ ಕಾಲ ಬಾಯಲ್ಲಿ ಸಕ್ಕರೆಯನ್ನು ಇಟ್ಟುಕೊಂಡು ನಂತರ ನುಗ್ಗಿ, ಅದು ಬಿಕ್ಕಳಿಕೆ ನಿಲ್ಲಿಸಲು  ಸಹಾಯ ಮಾಡುತ್ತದೆ. ನಿಮಗೆ ಬೇರೆ ಯಾವುದೇ ವಸ್ತುಗಳು ಸುಲಭವಾಗಿ ಸಿಗದಿದ್ದಲ್ಲಿ, ಸಕ್ಕರೆ ಮಾತ್ರ ಆರಾಮದಾಯಕವಾಗಿ ಲಭಿಸುತ್ತದೆ.
Published by:Sandhya M
First published: