Eye Health: ಕಣ್ಣು ಉರಿಯ ಸಮಸ್ಯೆ ನಿಮಗಿದೆಯೇ ಇಲ್ಲಿದೆ ನೋಡಿ ಸರಳ ಪರಿಹಾರ

ರಾತ್ರಿ ಹೆಚ್ಚು ಹೊತ್ತು ಮೊಬೈಲ್ , ಟಿವಿ ವೀಕ್ಷಿಸುವುದರಿಂದ ಬೆಳಗ್ಗೆ ಕಣ್ಣು ಉರಿ ಬರುತ್ತದೆ. ಅಲ್ಲದೇ ಇದರಿಂದ ತಲೆನೋವು ಕಣ್ಣು ಕೆಂಪಗಾಗುವುದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಮ್ಮ ದೇಹದ ಅತಿ ಸೂಕ್ಷ ಅಂಗಾಂಗ ಎಂದರೆ ಅದು ಕಣ್ಣು(Eye) . ಆದರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಅಥವಾ ಮೊಬೈಲ್ ನೋಡುವುದರಿಂದ ಕಣ್ಣಿಗೆ ಅತಿ ಹೆಚ್ಚು ಆಯಾಸ (Tiredness) ವಾಗುತ್ತದೆ. ರಾತ್ರಿ ಹೆಚ್ಚು ಹೊತ್ತು ಮೊಬೈಲ್ , ಟಿವಿ ವೀಕ್ಷಿಸುವುದರಿಂದ ಬೆಳಗ್ಗೆ ಕಣ್ಣು ಉರಿ ಬರುತ್ತದೆ. ಅಲ್ಲದೇ ಇದರಿಂದ ತಲೆನೋವು (Headache) ಕಣ್ಣು ಕೆಂಪಗಾಗುವುದು (Red Eye) ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇನ್ನೂ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬಾರದಿದ್ದರೆ ಕೂಡ ಕಣ್ಣು ಉರಿ ಸಮಸ್ಯೆ ಕಂಡು ಬರುತ್ತದೆ. ಕೆಲವೊಮ್ಮೆ ಉಷ್ಣತೆ (Heat) ಯಿಂದ ಕಣ್ಣು ಉರಿ ಶುರುವಾಗುತ್ತದೆ. ಅಥವಾ ದಿನನಿತ್ಯ ಹೆಚ್ಚಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು.

    ಕಣ್ಣಿನ ಉರಿ ಸಮಸ್ಯೆಯಿಂದ ಹೊರಬರಲು ಈ ಮನೆಮದ್ದುಗಳನ್ನು ಉಪಯೋಗಿಸಿ

    ದಾಳಿಂಬೆ ಹಣ್ಣಿನಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹಾಗೆಯೇ ಅದರ ಎಲೆಗಳ ಮೂಲಕ ಕೂಡ ಕಣ್ಣಿನ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಇದಕ್ಕಾಗಿ ನೀವು ದಾಳಿಂಬೆ ಗಿಡದ ಎಲೆಗಳನ್ನು ಪುಡಿ ಮಾಡಿ ನೀರು ಬೆರೆಸಿ ಪೇಸ್ಟ್​ನಂತೆ ಮಾಡಿ. ಬಳಿಕ ಅದನ್ನು ಕಣ್ಣುಗಳ ಮೇಲೆ ಹಚ್ಚಿಕೊಳ್ಳಿ. ಇದನ್ನು10 ರಿಂದ 20 ನಿಮಿಷಗಳ ಬಳಿಕ ತೊಳೆಯಿರಿ.

    * ಉಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ. ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ದಿನಕ್ಕೆ ಎರಡು ಮೂರು ಬಾರಿ ಮಾಡಿದ್ರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.

    ಇದನ್ನೂ ಓದಿ: Cold shower: ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುತ್ತೆ ತಣ್ಣೀರು ಸ್ನಾನ; ಹೃದಯ ಸಂಬಂಧಿ ಕಾಯಿಲೆ ಇರೋರು ಎಚ್ಚರ ವಹಿಸಿ

    * ಸೀಬೆ ಮರದ ಹೂಗಳನ್ನು ದಾಳಿಂಬೆ ಚಿಗುರಿನ ಜೊತೆ ಕಷಾಯ ಮಾಡಿ ಆ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ಉರಿ ನಿವಾರಣೆಯಾಗುತ್ತದೆ.

    * ಶ್ರೀಗಂಧವನ್ನು ರೋಸ್‌ವಾಟರ್‌ನಲ್ಲಿ ಕಲಸಿ ರೆಪ್ಪೆಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

    * ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವಾಗ 1 ಗಂಟೆಯಲ್ಲಿ 2-3 ನಿಮಿಷ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ಸ್ವಲ್ಪ ದೂರಕ್ಕೆ ನೋಡುವುದು, ಕಣ್ಣು ಮಿಟುಕಿಸುವ ವ್ಯಾಯಾಮ ಒಳ್ಳೆಯದು.

    * ಉಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ. ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ದಿನಕ್ಕೆ ಎರಡು ಮೂರು ಬಾರಿ ಮಾಡಿದ್ರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.

    * ಸಾಮಾನ್ಯವಾಗಿ ಕಣ್ಣಿನ ನೋವಿನ ಸಮಸ್ಯೆ ಕಾಡುತ್ತಿದ್ದರೆ ರೋಸ್ ವಾಟರ್ ಮೂಲಕ ಪರಿಹಾರ ಕಾಣಬಹುದು. ಇದಕ್ಕಾಗಿ ನೀವು ರಾತ್ರಿ ಮಲಗುವ ವೇಳೆ ಕಣ್ಣಿನ ಮೇಲ್ಭಾಗದಲ್ಲಿ ರೋಸ್ ವಾಟರ್ ಸವರಬೇಕು. ಅಥವಾ ರೋಸ್ ವಾಟರ್ ಮಿಶ್ರಿತ ನೀರಿನಿಂದ ಕಣ್ಣುಗಳನ್ನು ತೊಳೆದು ಮಲಗಬಹುದು. ಹೀಗೆ ಮಾಡುವುದರಿಂದ ಕಣ್ಣು ಉರಿ ಅಥವಾ ಕಣ್ಣು ನೋವು ಕಡಿಮೆಯಾಗುತ್ತದೆ.

    ಇದನ್ನೂ ಓದಿ: Health Tips: ಜೇನುತುಪ್ಪ ತಿಂದ್ರೆ ಏನೆಲ್ಲಾ ಅಡ್ಡ ಪರಿಣಾಮ ಉಂಟಾಗುತ್ತೆ? ಆಹಾರ ತಜ್ಞರು ಏನ್ ಹೇಳ್ತಾರೆ?

    ಧನಿಯ ಬೀಜಗಳು ನಿವಾರಣೆ ಮಾಡುತ್ತದೆ

    ಕೊತ್ತಂಬರಿ ಬೀಜ ಸಾಮಾನ್ಯ ಮಸಾಲೆ ಪದಾರ್ಥ ಎಂದು ಅನಿಸಿದರೂ ಇದರಲ್ಲಿ ಸಾಕಷ್ಟು ಆಂಟಿ ಬ್ಯಾಕ್ಟೀರಿಯಲ್ ಮತ್ತು ಗುಣಲಕ್ಷಣಗಳು ಲಭ್ಯವಿದ್ದು, ಕಣ್ಣುಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ರೋಗ ಲಕ್ಷಣಗಳ ವಿರುದ್ಧ ಹೋರಾಡುವ ಶಕ್ತಿ ಪಡೆದಿವೆ.

    ಒಣ ಕಣ್ಣುಗಳ ಸಮಸ್ಯೆಯನ್ನು ಧನಿಯ ಬೀಜಗಳು ನಿವಾರಣೆ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ನೀರು ಹಾಕಿ ಒಂದು ಟೇಬಲ್ ಚಮಚ ಧನಿಯಾ ಕಾಳುಗಳನ್ನು ಸೇರಿಸಿ ಈ ನೀರನ್ನು ಸ್ವಲ್ಪ ಹೊತ್ತು ಕುದಿಯಲು ಬಿಟ್ಟು ನಂತರ ಆರಿಸಿ ಕೆಲವು ಹನಿಗಳನ್ನು ನಿಮ್ಮ ಕಣ್ಣುಗಳಿಗೆ ಡ್ರಾಪರ್ ಸಹಾಯದಿಂದ ಬಿಟ್ಟುಕೊಳ್ಳಬಹುದು. ಇಲ್ಲವೆಂದರೆ ಇದೇ ನೀರಿನಲ್ಲಿ ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು.
    Published by:Swathi Nayak
    First published: