ಮುಕ್ಕೋಟಿ ದೇವರಿಗೂ ತಟ್ಟಲಿದೆ ಚಂದ್ರಗ್ರಹಣದ ಬಿಸಿ: ದೋಷ ನಿವಾರಣೆಗೆ ಏನು ಮಾಡಿದ್ರೆ ಒಳಿತಾಗುತ್ತೆ..?


Updated:July 27, 2018, 7:48 AM IST
ಮುಕ್ಕೋಟಿ ದೇವರಿಗೂ ತಟ್ಟಲಿದೆ ಚಂದ್ರಗ್ರಹಣದ ಬಿಸಿ: ದೋಷ ನಿವಾರಣೆಗೆ ಏನು ಮಾಡಿದ್ರೆ ಒಳಿತಾಗುತ್ತೆ..?

Updated: July 27, 2018, 7:48 AM IST
ನ್ಯೂಸ್​ 18 ಕನ್ನಡ

ಬೆಂಗಲೂರು(ಜು.27): ಶತಮಾನದ ಸುದೀರ್ಘ ಕೇತುಗ್ರಸ್ಥ ಚಂದ್ರಗ್ರಹಣಕ್ಕೆ ಕ್ಷಣಗಣನೆ ಹೀಗಾಗಿ ಇಡೀ ವಿಶ್ವವೇ ಆಕಾಶದ ಕೌತುಕಕ್ಕೆ ಕುತೂಹಲದಿಂದ ಎದುರು ನೋಡುತ್ತಿದೆ. ಒಟ್ಟು 1 ಗಂಟೆ 43 ನಿಮಿಷ ಕಾಲ ಗ್ರಹಣ ಪ್ರಕ್ರಿಯೆ ನಡೆಯಲಿದ್ದು, ಚಂದ್ರ ಕಡು ಕೆಂಪು ಬಣ್ಣಕ್ಕೆ ಬದಲಾಗುತ್ತಾನೆ. ಭಾರತದಲ್ಲಿ ಮೊದಲ ಭಾಗ ಮಾತ್ರ ಗೋಚರವಾಗಲಿದ್ದು, ಮಧ್ಯರಾತ್ರಿ 11. 44ರಿಂದ ಬೆಳಗಿನ ಜಾವ 4.58ರವರೆಗೆ ಗ್ರಹಣ ಪ್ರಕ್ರಿಯೆ ನಡೆಯಲಿದೆ. ಶತಮಾನದ ಕೇತು ಗ್ರಸ್ಥ ಚಂದ್ರಗ್ರಹಣಕ್ಕೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಸುದೀರ್ಘ ಚಂದ್ರಗ್ರಹಣ ಎಂಬ ಕಾರಣಕ್ಕೆ ಈ ಗ್ರಹಣದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಗ್ರಹಣದ ಎಫೆಕ್ಟ್​ ದೇವಸ್ಥಾನದ ಜೊತೆಗೆ ಭಕ್ತರಿಗೂ ತಟ್ಟಲಿದೆ. ಆದರೆ ವಿಜ್ಞಾನಿಗಳು ಮಾತ್ರ ಸಾಕಷ್ಟು ಕೌತುಕದಲ್ಲಿ ಸಂಶೋಧನೆಗೆ ನಾಂದಿ ಹಾಡಲಿದ್ದಾರೆ.

ಚಂದ್ರಗ್ರಹಣ ದೋಷ ನಿವಾರಣೆಗೆ ಏನು ಮಾಡಿದ್ರೆ ಒಳಿತಾಗುತ್ತೆ..?

ಚಂದ್ರಗ್ರಹಣ ದಿನ ಜನ ಏನ್​ ಮಾಡ್ಬೇಕು.. ಏನು ಮಾಡಬಾರದು..? ಎಂಬ ಬಗ್ಗೆ ಖ್ಯಾತ ಪುರೋಹಿತ ಶ್ರೀಕಂಠ ದೀಕ್ಷಿತರು ಹಾಗೂ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ನ್ಯೂಸ್​ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.


 • ಮೇಷ: ದೇವರ ಆರಾಧಾನೆ ಮಾಡಿ ತುಪ್ಪದ ದೀಪ ಹಚ್ಚಿ. ಈಶ್ವರನ ಆರಾಧನೆ ಒಳಿತು ಅವರೆಕಾಳು, ಅಕ್ಕಿ ದಾನ ಶ್ರೇಷ್ಠ

 • ವೃಷಭ: ಗ್ರಹಣ ಕಾಲದಲ್ಲಿ ದೇವತಾರಾಧನೆ ಮಾಡುವುದರಿಂದ ಹೆಚ್ಚಿನ ಅನುಕೂಲ

 • Loading...

 • ಮಿಥುನ: ಅಷ್ಟೇನೂ ಶುಭದಾಯಕವಲ್ಲ. ಇಷ್ಟ ದೇವತಾ ಪ್ರಾರ್ಥನೆ ಮಾಡಿ

 • ಕಟಕ: ಈ ರಾಶಿಯವರ ಮೇಲೆ ಗ್ರಹಣ ಪ್ರಭಾವ ಕಂಡುಬರುವುದಿಲ್ಲ

 • ಸಿಂಹ: ಸ್ವಲ್ಪ ಮಟ್ಟಿನ ದೋಷ - ಗ್ರಹಣ ಕಾಲದಲ್ಲಿ ಪೂಜೆ ಮಾಡಿದ್ರೆ ಒಳಿತು - ಅಕ್ಕಿ ಅವರೆಕಾಳು ದಾನ ಲಾಭದಾಯಕ

 • ಕನ್ಯಾ: ಮಿಶ್ರಫಲ ಇರುವುದರಿಂದ ದೇವತಾರಾಧನೆಯಲ್ಲಿ ತೊಡಗಿಸಿಕೊಳ್ಳಿ

 • ತುಲಾ: ನಕಾರಾತ್ಮಕ ಪ್ರಭಾವ ಇಲ್ಲ. ಗ್ರಹಣ ಕಾಲದಲ್ಲಿ ಸ್ನಾನ, ದೇವತಾರಾಧನೆ ಸಾಕು

 • ವೃಶ್ಚಿಕ: ಮಿಶ್ರಫಲ ಇರುವುದರಿಂದ ಗ್ರಹಣ ಕಾಲದಲ್ಲಿ ಇಷ್ಟ ದೇವತಾರಾಧನೆ ಸೂಕ್ತ.

 • ಧನಸ್ಸು: ಅಲ್ಪ ದೋಷ. ಕುಲದೇವರ ಆರಾಧನೆ ಒಳಿತು. ಗ್ರಹಣ ಮುಗಿದ ನಂತರ ಅಕ್ಕಿ, ಅವರೆಕಾಳು ದಾನ ಶ್ರೇಷ್ಠ

 • ಮಕರ: ಅಶುಭ. ಗ್ರಹಣ ಕಾಲದಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಆರಾಧಿಸಿ

 • ಕುಂಭ: ತೊಂದರೆ ಏನಿಲ್ಲ. ಗ್ರಹಣ ಕಾಲದಲ್ಲಿ ಸ್ನಾನ, ದೇವರಿಗೆ ಪೂಜೆ ಆರಾಧನೆ ಮಾಡಿದ್ರೆ ಉತ್ತಮ


 
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...