ಇತ್ತೀಚಿನ ದಿನಗಳಲ್ಲಿ ಮೇಯನೀಸ್ (Mayonnaise) ಬಳಕೆ ಹೆಚ್ಚಾಗಿದೆ. ಮೇಯನೀಸ್ ನ್ನು ಹಲವು ರೂಪಗಳಲ್ಲಿ ಸೇವನೆ ಮಾಡಲಾಗುತ್ತದೆ. ಚಿಕ್ಕ ಮಕ್ಕಳಿಂದ (Children’s) ಹಿಡಿದು ದೊಡ್ಡವರವರೆಗೆ ಮೇಯನೀಸ್ ಎಲ್ಲರ ಅಚ್ಚುಮೆಚ್ಚಿನ ಪದಾರ್ಥ (Ingredient) ಆಗಿದೆ. ಮೇಯನೀಸ್ ನ್ನು ಸಲಾಡ್ (Salad) ಹಾಗೂ ಬ್ರೆಡ್ ಗಳ ಮೇಲೆ ರೋಲ್ ಗಳಲ್ಲಿ ಸೇರಿದಂತೆ ಇತ್ಯಾದಿ ಹಲವು ಭಕ್ಷ್ಯಗಳ (Recipes) ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಹಾಗೆಯೇ ಇದನ್ನು ಭೋಜನದಲ್ಲಿ ಸೈಡರ್ ಆಗಿಯೂ ತುಂಬಾ ಇಷ್ಟ ಪಟ್ಟು ಸೇವನೆ ಮಾಡಲಾಗುತ್ತದೆ. ಇದು ಬಹುಅಪರ್ಯಾಪ್ತ ಕೊಬ್ಬು, ಮೊನೊಸಾಚುರೇಟೆಡ್ ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬಿನ ಮಿಶ್ರಣದಿಂದ ಕೂಡಿದೆ.
ಮೇಯನೀಸ್ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ?
ಮೇಯನೀಸ್ ಇದು ಸಾಕಷ್ಟು ಪ್ರಮಾಣದ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಹೊಂದಿದೆ. ಜೊತೆಗೆ ವಿಟಮಿನ್ ಇ ಮತ್ತು ವಿಟಮಿನ್ ಕೆ ಕೂಡ ಹೊಂದಿದೆ. ಆದರೆ ಇದರ ನಿಯಮಿತ ಹಾಗೂ ಅಧಿಕ ಸೇವನೆ ಮಾಡದಂತೆ ಸಲಹೆ ನೀಡಲಾಗುತ್ತದೆ.
ಇದರ ಬಗ್ಗೆ ನ್ಯೂಟ್ರಿಫೈ ನಿರ್ದೇಶಕಿ ಪೂನಂ ಜುನೇಜಾ ಏನು ಹೇಳಿದ್ದಾರೆ ಇಲ್ಲಿ ನೋಡೋಣ. ಮೇಯನೀಸ್ ಇದು ಕೆಲವು ಪ್ರಯೋಜನಗಳನ್ನು ನೀಡುತ್ತದೆ. ಇದರ ಸೀಮಿತ ಸೇವನೆಯು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ.
ಹಾಗಾಗಿ ಮೇಯನೀಸ್ ನ್ನು ತಿನ್ನುವ ಸರಿಯಾದ ವಿಧಾನ ಮೊದಲು ತಿಳಿಯಬೇಕು. ಅಂದಾಗ ಮಾತ್ರ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
ಇನ್ನು ತಜ್ಞರು ಮೇಯನೀಸ್ ಇದನ್ನು ತಿನ್ನದಂತೆ ಸಲಹೆ ನೀಡುತ್ತಾರೆ. ಇದರ ಬದಲಿಗೆ ಇತರೆ ಆರೋಗ್ಯಕರ ಪರ್ಯಾಯ ಪದಾರ್ಥಗಳ ಸೇವನೆ ಮಾಡುವಂತೆ ತಿಳಿಸಿದ್ದಾರೆ.
ಮೇಯನೀಸ್ ಸೇವನೆಯಿಂದ ದೇಹದ ಕೊಬ್ಬು ಹೆಚ್ಚುತ್ತದೆ
ಮೇಯನೇಸ್ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯಿರಿ. ಮೇಯನೇಸ್ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಅಂತಾರೆ ತಜ್ಞರು. ಹಾಗಾಗಿ ಇದನ್ನು ಸೀಮಿತ ಪ್ರಮಾಣದಲ್ಲಿ ತಿನ್ನುವಂತೆ ಸೂಚಿಸುತ್ತಾರೆ. ಮೇಯನೀಸ್ ನಲ್ಲಿ ಕ್ಯಾಲೋರಿಗಳ ಪ್ರಮಾಣ ತುಂಬಾ ಹೆಚ್ಚು.
ಹಾಗೆಯೇ ಮೇಯನೀಸ್ ಇದರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದೆ. ಹಾಗಾಗಿ ಇದರ ಸೇವನೆಯು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಅಂತಾರೆ ತಜ್ಞರು. ಮೇಯನೇಸ್ ತಯಾರಿಸಲು ಬಳಸುವ ಪ್ರಕ್ರಿಯೆಗಳು ಕೆಲವೊಮ್ಮೆ ಪರಿಪೂರ್ಣವಾಗಿಲ್ಲ. ಇದು ಅನಾರೋಗ್ಯಕರ ಬ್ಯಾಕ್ಟೀರಿಯಾದಿಂದ ಕೂಡಿದೆ. ಹಾಗಾಗಿ ಇದು ಅನಾರೋಗ್ಯ ಉಂಟು ಮಾಡುತ್ತದೆ.
ವಿಶೇಷವಾಗಿ ಮನೆಯಲ್ಲೇ ನೀವು ಮೇಯನೇಸ್ ತಯಾರಿಸಿ ಸೇವನೆ ಮಾಡಿ. ಇದು ಹೆಚ್ಚು ಅಪಾಯಕಾರಿಯಲ್ಲ. ಇನ್ನು ಮಾರುಕಟ್ಟೆಯಿಂದ ಮೇಯನೇಸ್ ತರುವಾಗ ಜಾಗ್ರತೆ ವಹಿಸಿ. ಇದರ ತಯಾರಿಕೆ ವೇಳೆ ಹಲವು ಸಂರಕ್ಷಕಗಳನ್ನು ಬಳಸಲಾಗುತ್ತದೆ.
ಮೇಯನೇಸ್‌ನ ಎರಡೂ ರೂಪಗಳಿವೆ. ಎರಡೂ ಹೆಚ್ಚಿನ ಕ್ಯಾಲೊರಿ ಹೊಂದಿದೆ. ಸ್ಥೂಲಕಾಯ ಇದ್ದವರು ಇದರಿಂದ ಆದಷ್ಟು ದೂರವಿರಿ, ಸೇವನೆ ತಪ್ಪಿಸಿ.
ಮೇಯನೇಸ್ ಸ್ಯಾಚುರೇಟೆಡ್ ಕೊಬ್ಬು ಹೊಂದಿದೆ. ಹಾಗಾಗಿ ಇದನ್ನು ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇಲ್ಲದಿದ್ದರೆ ಅದರ ಅಧಿಕ ಸೇವನೆಯು ಅಪಧಮನಿಗಳಲ್ಲಿ ಅಡಚಣೆ ಉಂಟು ಮಾಡುತ್ತದೆ.
ಪರಿಧಮನಿಯ ಅಪಧಮನಿಗಳಲ್ಲಿನ ಸ್ಟೆನೋಸಿಸ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅಥವಾ ಹೃದಯಾಘಾತದ ಅಪಾಯ ಉಂಟು ಮಾಡುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಮುಖದ ತ್ವಚೆ ಸುಂದರವಾಗಲಿ ಅಂತ ಅಡುಗೆ ಸೋಡಾ ಬಳಸುತ್ತೀರಾ? ಹಾಗಿದ್ರೆ ಇದು ಎಷ್ಟು ಸೇಫ್?
ಅತಿಯಾದ ಮೇಯನೇಸ್ ಸೇವನೆಯು ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿಸುತ್ತದೆ. ಇದು ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಾಕಷ್ಟು ಪ್ರಮಾಣದ ಸಕ್ಕರೆ ಹೊಂದಿದ್ದು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಹಾಗಾಗಿ ಅಧಿಕ ಮೇಯನೀಸ್ ಸೇವನೆ ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ