Chia Seeds: ಚಿಯಾ ಬೀಜಗಳನ್ನು ಅತಿಯಾಗಿ ತಿಂದ್ರೂ ಆರೋಗ್ಯದ ಸಮಸ್ಯೆ ಕಾಡುತ್ತೆ

ಚಿಯಾ ಬೀಜಗಳು

ಚಿಯಾ ಬೀಜಗಳು

ಚಿಯಾ ಬೀಜಗಳನ್ನು ದೇಹದ ತೂಕವನ್ನು ಕಡಿಮೆ ಮಾಡುವ ಪ್ರಯೋಜನಗಳಿಗಾಗಿ ವ್ಯಾಪಕವಾಗಿ ತಿನ್ನಲಾಗುತ್ತದೆ ಎಂದು ನಂಬಲಾಗಿದೆ. ಆದರೆ ಇದನ್ನು ಅತಿಯಾಗಿ ತಿಂದರೂ ಆರೋಗ್ಯದ ಸಮಸ್ಯೆಯಾಗುತ್ತದೆ.

  • Share this:

ನೀವು ಈ ‘ಫಾಲುದಾ’ ಎಂಬ ಐಸ್‌ಕ್ರೀಮ್ ಅನ್ನು ಹೆಚ್ಚು ತಿನ್ನುತ್ತಿದ್ದರೆ, ಆ ಗ್ಲಾಸ್‌ನ ಕೆಳಭಾಗದಲ್ಲಿ ಬಿಳಿ ಬಣ್ಣದ ಒಂದು ಚಿಕ್ಕ ಚಿಕ್ಕ ಬೀಜಗಳಲ್ಲಿ ಕಪ್ಪು ಬಣ್ಣದ ಸಾಸಿವೆಕಾಳಿನ ಹಾಗೆ ಇರುವುದನ್ನು ಪಕ್ಕಾ ನೋಡಿರುತ್ತೀರಿ. ಅವುಗಳನ್ನು ಚಿಯಾ ಬೀಜಗಳು ಅಂತ ಕರೆಯುತ್ತಾರೆ. ಈ ಚಿಯಾ ಬೀಜಗಳು (Chia Seeds) ಸಾಲ್ವಿಯಾ ಹಿಸ್ಪಾನಿಕಾ ಸಸ್ಯದ ಸಣ್ಣ ಕಪ್ಪು ತಿನ್ನಬಹುದಾದ ಬೀಜಗಳಾಗಿದ್ದು, ಇವು ಪುದೀನಾ ಸಸ್ಯಗಳಿಗೆ ಸೇರಿದವು ಆಗಿವೆ.


ಈ ಚಿಯಾ ಬೀಜಗಳನ್ನು ದೇಹದ ತೂಕವನ್ನು ಕಡಿಮೆ ಮಾಡುವ ಪ್ರಯೋಜನಗಳಿಗಾಗಿ ವ್ಯಾಪಕವಾಗಿ ತಿನ್ನಲಾಗುತ್ತದೆ ಎಂದು ನಂಬಲಾಗಿದೆ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳು ನೀರು ಅಥವಾ ಹಾಲಿನಲ್ಲಿ ನೆನೆಸಿದಾಗ ಅವುಗಳ ಗಾತ್ರ ದೊಡ್ಡದಾಗಿ ಬೆಳೆಯುತ್ತವೆ. ಈ ಬೀಜಗಳು ತಿನ್ನಲು ಬಲು ಮಜಾ ಅಂತ ಅನ್ನಿಸುತ್ತದೆ, ಆದರೆ ಈ ಚಿಯಾ ಬೀಜಗಳನ್ನು ತಿನ್ನುವುದರಿಂದ ತೊಂದರೆ ಪಕ್ಕಾ.


ಹೆಚ್ಚು ಚಿಯಾ ಬೀಜಗಳನ್ನು ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳು


ಜೀರ್ಣಕ್ರಿಯೆ ಸಮಸ್ಯೆ: ಸಾಕಷ್ಟು ಚಿಯಾ ಬೀಜಗಳನ್ನು ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಚಿಯಾ ಬೀಜಗಳು ನಾರುಗಳಿಂದ ತುಂಬಿರುತ್ತವೆ ಮತ್ತು ಇದನ್ನು ಸಾಕಷ್ಟು ಪ್ರಮಾಣದಲ್ಲಿ ತಿಂದಾಗ ದೇಹವು ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.


ಈ ಸಣ್ಣ ಬೀಜಗಳನ್ನು ಹೆಚ್ಚು ಸೇವಿಸುವುದರಿಂದ ಅತಿಸಾರ, ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ಸೆಳೆತಕ್ಕೆ ಕಾರಣವಾಗಬಹುದು.


ರಕ್ತದೊತ್ತಡದ ಔಷಧಿಗಳಲ್ಲಿ ಸಮಸ್ಯೆ ಮಾಡಬಹುದು


ಚಿಯಾ ಬೀಜಗಳು ರಕ್ತವನ್ನು ತೆಳುಗೊಳಿಸುತ್ತವೆ, ಚಿಯಾ ಬೀಜಗಳಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿವೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ


ಚಿಯಾ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಔಷಧಿಗಳಿಗೆ ಅಡ್ಡಿಯಾಗಬಹುದು. ನೀವು ಬಿಪಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಚಿಯಾ ಬೀಜಗಳನ್ನು ಸಣ್ಣ ಪ್ರಮಾಣದಲ್ಲಿ ತಿನ್ನಲು ಪ್ರಯತ್ನಿಸಬೇಕು.


ಚಿಯಾ ಬೀಜಗಳು


ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು


ಚಿಯಾ ಬೀಜಗಳು ನಾರುಗಳಿಂದ ತುಂಬಿದ್ದು, ಇದು ಸಕ್ಕರೆಯನ್ನು ಹೀರಿಕೊಳ್ಳುವ ಕರುಳಿನ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ ಮತ್ತು ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.


ಚಿಯಾ ಬೀಜಗಳ ಈ ಗುಣವು ಈಗಾಗಲೇ ಔಷಧಿ ಮತ್ತು ಇನ್ಸುಲಿನ್ ತೆಗೆದುಕೊಳ್ಳುತ್ತಿರುವ ಮಧುಮೇಹ ಹೊಂದಿರುವವರಿಗೆ ಸಮಸ್ಯೆಯಾಗಬಹುದು. ಸಾಕಷ್ಟು ಚಿಯಾ ಬೀಜಗಳನ್ನು ತಿನ್ನುವುದರಿಂದ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬದಲಾಯಿಸಬಹುದು, ಇದಕ್ಕೆ ಔಷಧಿ ಮತ್ತು ಇನ್ಸುಲಿನ್ ನಲ್ಲಿ ಬದಲಾವಣೆಯ ಅಗತ್ಯವಿರುತ್ತದೆ.


ಪ್ರತಿದಿನ ಎಷ್ಟು ಪ್ರಮಾಣದ ಚಿಯಾ ಬೀಜಗಳನ್ನು ತಿನ್ನಬೇಕು?


ವರದಿಗಳ ಪ್ರಕಾರ, ಈ ಚಿಯಾ ಬೀಜಗಳಲ್ಲಿರುವ ಪೋಷಕಾಂಶಗಳನ್ನು ಪಡೆಯಲು ದೇಹಕ್ಕೆ ದಿನಕ್ಕೆ ಒಂದು ಅಥವಾ ಒಂದೂವರೆ ಟೇಬಲ್ ಚಮಚದಷ್ಟು ಚಿಯಾ ಬೀಜಗಳು ಸಾಕು. ಚಿಯಾ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲ, ಫೈಬರ್ ಗಳು, ಪ್ರೋಟೀನ್, ಕ್ಯಾಲ್ಸಿಯಂ, ರಂಜಕ ಮತ್ತು ಸತುವನ್ನು ಹೊಂದಿರುತ್ತವೆ.




ಈ ಚಿಯಾ ಬೀಜಗಳನ್ನು ಹೇಗೆ ತಿನ್ನುವುದು?


ಈ ಚಿಯಾ ಬೀಜಗಳಿಗೆ ಯಾವುದೇ ಪರಿಮಳವಿರುವುದಿಲ್ಲ ಮತ್ತು ನೀವು ಇವುಗಳನ್ನು ರಾತ್ರಿ ಹೊತ್ತಿನಲ್ಲಿ ಸರಳವಾಗಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಕುಡಿಯಬಹುದು.


ಆದರೆ ಈ ಬೀಜಗಳನ್ನು ಮುಂಚಿತವಾಗಿ ನೆನೆಸಿಡುವುದನ್ನು ಮಾತ್ರ ಮರೆಯಬೇಡಿ. ಈ ಬೀಜಗಳು ಹೆಚ್ಚು ದೊಡ್ಡ ಗಾತ್ರಕ್ಕೆ ಊದಿಕೊಳ್ಳುತ್ತವೆ ಮತ್ತು ಅದನ್ನು ತಿಂದಾಗ ಅವು ಸಿಲುಕಿಕೊಳ್ಳಬಹುದು ಮತ್ತು ಆಹಾರ ನಾಳವನ್ನು ಉಸಿರುಗಟ್ಟಿಸಬಹುದು.


ಚಿಯಾ ಬೀಜಗಳ ಪ್ರಯೋಜನಗಳು


ಚಿಯಾ ಬೀಜಗಳು ಅತ್ಯಂತ ಪೌಷ್ಟಿಕವಾಗಿದ್ದು, ಈ ಸಣ್ಣ ಬೀಜಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. 2 ಟೇಬಲ್ ಚಮಚ ಚಿಯಾ ಬೀಜಗಳಲ್ಲಿ 138 ಕ್ಯಾಲೊರಿಗಳು, 4.7 ಗ್ರಾಂ ಪ್ರೋಟೀನ್, 8.7 ಗ್ರಾಂ ಕೊಬ್ಬು ಮತ್ತು 9.8 ಗ್ರಾಂ ಫೈಬರ್ ಇರುತ್ತದೆ. ಇದರಲ್ಲಿ ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸತು, ಥಯಾಮಿನ್ ಮತ್ತು ನಿಯಾಸಿನ್ ಸಹ ಇರುತ್ತವೆ. ಇದರಲ್ಲಿರುವಂತಹ ಫೈಬರ್ ಅಂಶವು ದೇಹದ ತೂಕವನ್ನು ಇಳಿಸಿಕೊಳ್ಳಲು ಉತ್ತಮ ಆಹಾರವಾಗಿದೆ.

top videos
    First published: