ಬೆಳಂಬೆಳಗ್ಗೆ ಪಾರ್ಕಿನಲ್ಲಿ (Park) ವಯಸ್ಸಾದವರು ವಾಕಿಂಗ್ (Walking) ಮಾಡಿ, ಸ್ವಲ್ಪ ವ್ಯಾಯಾಮ (Exercise) ಮಾಡಿ ನಗುವುದನ್ನು ನೀವು ಕಂಡಿರಬಹುದು. ನಗುವುದು ಆರೋಗ್ಯಕ್ಕೆ (Health) ಟಾನಿಕ್ ಇದ್ದಂತೆ. ಹಾಗಾಗಿ ಎಲ್ಲರೂ ನಗುತ್ತಾ ಇರಬೇಕು. ಕೆಟ್ಟ ಮನಸ್ಥಿತಿ, ಆಲೋಚನೆ, ದುಃಖ, ಸಂಕಷ್ಟ, ಅಡಚಣೆ ಎಲ್ಲವೂ ಸಾಮಾನ್ಯವಾಗಿ ಬರುತ್ತದೆ. ಇದನ್ನು ಹೋಗಲಾಡಿಸಲು ನಗುವುದು ಮುಖ್ಯವಾಗಿದೆ. ನಕ್ಕರೆ ಎಲ್ಲಾ ನೋವು ನಿವಾರಣೆಯಾಗುತ್ತದೆ. ನಕ್ಕಾಗ ಮನಸ್ಥಿತಿ ಸುಧಾರಿಸುತ್ತದೆ. ಜೊತೆಗೆ ಮನಸ್ಥಿತಿ ಸುಧಾರಿಸಲು ವೈದ್ಯರು ಹಲವು ಚಟುವಟಿಕೆಗಳು ಮತ್ತು ಆಹಾರ (Food) ಸೇವನೆಗೆ ಸಲಹೆ ನೀಡುತ್ತಾರೆ. ಕೆಲವು ಆಹಾರಗಳ ಸೇವನೆ ಮಾಡಿದಾಗ ಮನಸ್ಸು ಹಗುರವಾಗುತ್ತದೆ. ಸ್ಟ್ರೆಸ್ ಕಡಿಮೆಯಾಗುತ್ತದೆ.
ಒತ್ತಡ ಮತ್ತು ಕೆಟ್ಟ ಮನಸ್ಥಿತಿ ಸುಧಾರಿಸುವುದು ಹೇಗೆ?
ಏನೇ ಬರಲಿ, ಎಷ್ಟೇ ಕೆಟ್ಟ ಪರಿಸ್ಥಿತಿಯೇ ಎದುರಾಗಲಿ ಆಗ ಭಾವನಾತ್ಮಕ ಸಮತೋಲನ ಕಾಪಾಡುವುದು ತುಂಬಾ ಮುಖ್ಯ. ಭಾವನಾತ್ಮಕ ಸಮತೋಲನ ಕಾಪಾಡಿಕೊಳ್ಳುವ ಆಹಾರ ಸೇವನೆ ಮಾಡುವಂತೆ ವೈದ್ಯರು ತಿಳಿಸುತ್ತಾರೆ.
ಈ ಆಹಾರಗಳಲ್ಲಿ ವಿಟಮಿನ್ಸ, ಖನಿಜ ಮತ್ತು ಅನೇಕ ಪೋಷಕಾಂಶಗಳು ಇವೆ. ನಾಲ್ಕು ತರಹದ ಆಹಾರ ಪದಾರ್ಥಗಳು ನಿಮ್ಮ ಮೂಡ್ ಸ್ವಿಂಗ್ ನ್ನು ನಿಭಾಯಿಸಲು ಪರಿಣಾಮಕಾರಿ ಎಂದು ಹೇಳಲಾಗಿದೆ.
ಮೂಡ್ ಸ್ವಿಂಗ್ಸ್ ಸಮಯದಲ್ಲಿ ಉಂಟಾಗುವ ಲಕ್ಷಣಗಳು
ದಣಿವಾಗುವುದು, ಒತ್ತಡ, ಕೋಪ, ಸಾರ್ವಕಾಲಿಕ ದಣಿದ ಭಾವನೆ, ಉದ್ರೇಕ, ನಿದ್ರಾಹೀನತೆ, ಕೆರಳುವಿಕೆ, ದುಃಖ, ಜನರಿಂದ ದೂರ ಒಂಟಿಯಾಗಿರುವುದು ಆಗಿದೆ.
ಅಂದ ಹಾಗೇ ನಾವು ಸೇವಿಸುವ ಆಹಾರದ ಪರಿಣಾಮವು ನಮ್ಮ ಮನಸ್ಥಿತಿಯ ಮೇಲೆ ಬೀರುತ್ತದೆ. ಉತ್ತಮ ಆಹಾರ ಸೇವನೆಯಿಂದ ಮನಸ್ಥಿತಿ ಸುಧಾರಿಸಬಹುದು. ದೇಹದಲ್ಲಿ ಸಿರೊಟೋನಿನ್, ಆಕ್ಸಿಟೋಸಿನ್,
ಡೋಪಮೈನ್ ಮುಂತಾದ ಅನೇಕ ಹಾರ್ಮೋನುಗಳಿವೆ. ಇವುಗಳು ಮೂಡ್ ಎಲಿವೇಟರ್ ಹಾರ್ಮೋನುಗಳಾಗಿವೆ. ನೀವು ಒತ್ತಡ ಹಾಗೂ ತುಂಬಾ ನೋವಿನಲ್ಲಿದ್ದರೆ ಈ ಆಹಾರ ಸೇವನೆ ಮಾಡಿ.
ಹುದುಗಿಸಿದ ಆಹಾರಗಳು
ಹುದುಗಿಸುವಿಕೆ ಆಹಾರವನ್ನು ಸಂರಕ್ಷಿಸುವ ವಿಧಾನವಾಗಿದೆ. ಉತ್ತಮ ಬ್ಯಾಕ್ಟೀರಿಯಾದ ನಿಯಂತ್ರಿತ ಬೆಳವಣಿಗೆಯ ಮೂಲಕ ಸಂರಕ್ಷಣೆ ಮಾಡಲಾಗುತ್ತದೆ. ಕಳೆದ ಕೆಲವು ದಶಕಗಳಲ್ಲಿ ಹುದುಗಿಸಿದ ಆಹಾರದ ಬೇಡಿಕೆ ಹೆಚ್ಚಾಗಿದೆ.
ನೀವು ಒತ್ತಡಕ್ಕೆ ಒಳಗಾಗಿದ್ದರೆ ಮತ್ತು ನಿಮ್ಮ ಮನಸ್ಥಿತಿ ತಾಜಾಗೊಳಿಸಲು ಈ ಆಹಾರ ಪದಾರ್ಥ ಊಟಕ್ಕೆ ಸೇರಿಸಿ. ಮೊಸರು, ಕಿವಿ ಅಥವಾ ಗಂಜಿ, ಓಟ್ಸ್ ಆಹಾರಗಳು ಪ್ರೋಬಯಾಟಿಕ್‌ಗಳಾಗಿವೆ. ಇದು ಕರುಳಿನ ಆರೋಗ್ಯ ಸುಧಾರಿಸಿ, ಮನಸ್ಥಿತಿ ಸುಧಾರಿಸುತ್ತದೆ.
ಕಾಫಿ
ಬೆಳಿಗ್ಗೆ ಕಾಫಿ ಸೇವನೆಯು ಮನಸ್ಥಿತಿಯು ಸ್ವಯಂಚಾಲಿತವಾಗಿ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ. ಕೆಫೀನ್ ನಮ್ಮ ದೇಹದಲ್ಲಿ ಮೂಡ್ ಎಲಿವೇಟರ್ ಹಾರ್ಮೋನ್ ಅಂದರೆ ಡೋಪಮೈನ್ ಅನ್ನು ಹೆಚ್ಚಿಸುತ್ತದೆ. ಮನಸ್ಸಿನಲ್ಲಿರುವ ನರಪ್ರೇಕ್ಷಕ. ಅದು ನಿಮ್ಮ ದುಃಖವನ್ನು ಸಂತೋಷವಾಗಿ ಪರಿವರ್ತಿಸುತ್ತದೆ.
ಕಾಫಿಯು ನಮ್ಮ ಚಿತ್ತವನ್ನು ಶಾಂತವಾದ ಮೋಡ್ ನಲ್ಲಿ ಇರಿಸುತ್ತದೆ. ಇದು ದುಃಖವನ್ನು ನಿಧಾನವಾಗಿ ದೂರ ಮಾಡುತ್ತದೆ. ಮೇಯೊ ಕ್ಲಿನಿಕ್ ಪ್ರಕಾರ ದಿನಕ್ಕೆ 4 ಬಾರಿ ಹೆಚ್ಚು ಸೇವಿಸಬೇಡಿ. ಉಬ್ಬುವುದು ಮತ್ತು ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗುತ್ತೆ.
ಚಾಕೊಲೇಟ್
ಸಂತೋಷದ ಹಾರ್ಮೋನ್ ಅನ್ನು ಉತ್ತೇಜಿಸಲು ಚಾಕೊಲೇಟ್ ಸಹಾಯ ಮಾಡುತ್ತದೆ. ಇದು ಟ್ರಿಪ್ಟೊಫಾನ್ ಎಂಬ ರಾಸಾಯನಿಕ ಹೊಂದಿದೆ. ಇದನ್ನು ತಿಂದ ನಂತರ ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಉತ್ಪತ್ತಿ ಆಗುತ್ತದೆ. ಇದು ಸಂತೋಷದ ಹಾರ್ಮೋನ್ ಆಗಿದೆ.
ದೇಹದಲ್ಲಿ ಸಿರೊಟೋನಿನ್ ಮಟ್ಟ ಹೆಚ್ಚಿದರೆ ವ್ಯಕ್ತಿಯು ಸಂತೋಷದಿಂದ ಇರುತ್ತಾನೆ. ಅವಧಿಗಳು ಮತ್ತು ಋತುಬಂಧ ಸಮಯದಲ್ಲಿ ಇದರ ಪ್ರಮಾಣ ಕಡಿಮೆ ಆಗುತ್ತದೆ.
ಬ್ಲ್ಯಾಕ್ಬೆರಿ, ಬ್ಲೂಬೆರ್ರಿ ಮತ್ತು ಸ್ಟ್ರಾಬೆರಿ
ಬ್ಲ್ಯಾಕ್‌ಬೆರಿಗಳು, ಬೆರಿಹಣ್ಣುಗಳು ಮತ್ತು ಸ್ಟ್ರಾಬೆರಿ ಸೇವನೆ ಉತ್ತಮ. ಪಾಲಿಫಿನಾಲ್‌ಗ ಳು, ಫ್ಲೇವನಾಯ್ಡ್‌ಗಳ ವರ್ಗ. ಆಹಾರದಲ್ಲಿ ಅವುಗಳನ್ನು ಸೇರಿಸುವುದು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸುವಲ್ಲಿ ಪರಿಣಾಮಕಾರಿ.
ಮೂಡ್ ಅನ್ನು ಸರಿಯಾಗಿ ಇಡುತ್ತದೆ. ಫ್ಲೇವನಾಯ್ಡ್ಗಳು ವಿಟಮಿನ್ ಸಿ ಜೊತೆಗೆ ಕೆಲಸ ಮಾಡುತ್ತವೆ. ಈ ಹಣ್ಣುಗಳು ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುತ್ತವೆ. ಒತ್ತಡ ಸಮಸ್ಯೆಯಿಂದ ಹೊರ ಬರಲು ನಿಮ್ಮ ದಿನಚರಿಯಲ್ಲಿ ನೈಸರ್ಗಿಕ ವಸ್ತು ಸೇರಿಸಿ.
ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್
ಧ್ಯಾನ ಮಾಡಿ. ಯೋಗ ಮಾಡಿ. ಉತ್ತಮ ಆಹಾರ ಸೇವಿಸಿ. ಹರ್ಬಲ್ ಟೀ ಅಂದರೆ ಗ್ರೀನ್ ಟೀ, ಶುಂಠಿ ಅಥವಾ ಲೆಮನ್ ಟೀ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ