Healthy Ageing Tips: ಈ ಆಹಾರಗಳನ್ನು ತಿಂದರೆ ವಯೋಸಹಜ ಕಾಯಿಲೆಗಳನ್ನು ನಿಯಂತ್ರಿಸಬಹುದಂತೆ ನೋಡಿ

ಆರೋಗ್ಯಕರ ಮತ್ತು ಸಮತೋಲಿತ ಭಾರತೀಯ ಆಹಾರವನ್ನು ತಿನ್ನುವುದು ಬಹಳ ಮುಖ್ಯ. ಆ ಮೂಲಕ ನೀವು ತಿನ್ನುವ ಪ್ರಮಾಣದ ಮೇಲೆ ನಿಯಂತ್ರಣ ಹೊಂದಬಹುದು ಮತ್ತು ಜೊತೆ ಜೊತೆಗೆ ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದು. ಅದರಂತೆ, ಅವರು ಆಹಾರ ಕ್ರಮದ ಬಗ್ಗೆ ನೀಡಿರುವ ಸಲಹೆಗಳು ಈ ಕೆಳಗಿನಂತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ, ಮೂಳೆಗಳಲ್ಲಿನ ಸಾಂದ್ರತೆ (Density in Bones) ಕಡಿಮೆಯಾಗುವುದು, ಇಂದ್ರೀಯಗಳ ದುರ್ಬಲತೆ, ಚರ್ಮ ಸುಕ್ಕುಗಟ್ಟುವುದು, ತೂಕ ಹೆಚ್ಚುವುದು, ಮಧುಮೇಹ , ಹೃದಯದ ಕಾಯಿಲೆ ಇತ್ಯಾದಿಗಳು ಕಂಡುಬರುತ್ತವೆ. ವಯಸ್ಸಾದಂತೆ ಚಯಾಪಚಯವು ನಿಧಾನಗೊಳ್ಳುತ್ತದೆ ಆದರೆ, ನಮ್ಮ ದೇಹಕ್ಕೆ ಪೌಷ್ಟಿಕಾಂಶದ (Nutrition) ಅಗತ್ಯಗಳು ಹಾಗೆಯೇ ಇರುತ್ತದೆ. ಹಾಗಾಗಿ ನಾವು ಏನನ್ನು ತಿನ್ನುತ್ತೇವೆ ಎಂಬುವುದರ ಬಗ್ಗೆ ಗಮಬ ಹರಿಸುವುದು ಅಗತ್ಯವಾಗುತ್ತದೆ. ದೆಹಲಿಯ ವಸಂತ್ ಕುಂಜ್‍ನಲ್ಲಿರುವ ಫೋರ್ಟೀಸ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ರುಚಿಕಾ ಜೈನ್ ಅವರು, “ ಸಾಕಷ್ಟು ಹಣ್ಣುಗಳು (Fruits) ಮತ್ತು ತರಕಾರಿಗಳು (Vegetables) ಹಾಗೂ ಸಂಪೂರ್ಣ ಧಾನ್ಯಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವು ನಮಗೆ ಉತ್ತಮ ಪ್ರಮಾಣದ ಫೈಬರನ್ನು (Fiber) ನೀಡುತ್ತದೆ. ಅದರಿಂದ ತೂಕ (Weight) ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. 

ವಯಸ್ಸು ಹೆಚ್ಚಿದಂತೆ ನಾವು ಮಧುಮೇಹ, ತೂಕದ ಸಮಸ್ಯೆ ಮತ್ತು ಕೊಲೆಸ್ಟ್ರಾಲ್ ಹಾಗೂ ಹೃದಯದ ಸಮಸ್ಯೆಗಳನ್ನು ನಿಯಂತ್ರಿಸಲು ಹೆಚ್ಚಿನ ಫೈಬರ್ ಇರುವ ಆಹಾರಗಳನ್ನು ಸೇವಿಸಬೇಕಾಗುತ್ತದೆ” ಎನ್ನುತ್ತಾರೆ.

ಮೈಥಾಲಿ ಆರೋಗ್ಯ ವರ್ಲ್ಡ್ ನ ಪೌಷ್ಟಿಕಾಂಶ ಸಲಹೆಗಾರರಾದ ಡಾ. ಮೇಘನಾ ಪಾಸಿ ಅವರು ಹೇಳುವ ಪ್ರಕಾರ, ಆರೋಗ್ಯಕರ ಮತ್ತು ಸಮತೋಲಿತ ಭಾರತೀಯ ಆಹಾರವನ್ನು ತಿನ್ನುವುದು ಬಹಳ ಮುಖ್ಯ. ಆ ಮೂಲಕ ನೀವು ತಿನ್ನುವ ಪ್ರಮಾಣದ ಮೇಲೆ ನಿಯಂತ್ರಣ ಹೊಂದಬಹುದು ಮತ್ತು ಜೊತೆ ಜೊತೆಗೆ ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದು. ಅದರಂತೆ, ಅವರು ಆಹಾರ ಕ್ರಮದ ಬಗ್ಗೆ ನೀಡಿರುವ ಸಲಹೆಗಳು ಈ ಕೆಳಗಿನಂತಿವೆ.

1) ಅತ್ಯಧಿಕ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ
ಆದರೆ, ಅವುಗಳಲ್ಲಿ ಪೌಷ್ಟಿಕಾಂಶ ಹೆಚ್ಚಿದ್ದರೂ, ಕ್ಯಾಲೋರಿಗಳು ಕಡಿಮೆ ಇರಬೇಕು. ನೀವು ತಿನ್ನುವ ಆಹಾರದಲ್ಲಿ ಹೆಚ್ಚು ವಿಟಮಿನ್‍ಗಳು, ಮಿನರಲ್‍ಗಳು , ಫೈಬರ್, ಸಂಕೀರ್ಣ ಕಾರ್ಬೋಹೈಡ್ರೆಟ್‍ಗಳು, ಲೀನ್ ಪ್ರೋಟೀನ್‍ಗಳು ಮತ್ತು ಆರೋಗ್ಯಕರ ಕೊಬ್ಬುಗಳು ಇರಲಿ.

ಇದನ್ನೂ ಓದಿ:  Bones Sound: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?

2) ಆಹಾರದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳು

  • ಸಂಸ್ಕರಿತ ಧಾನ್ಯಗಳ ಬದಲಿಗೆ, ಸಂಪೂರ್ಣ ಧಾನ್ಯಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ.

  • ಅಧಿಕ ಕೊಬ್ಬು/ ಸಂಪೂರ್ಣ ಹಾಲಿನ ಬದಲಿಗೆ ಕಡಿಮೆ ಕೊಬ್ಬು/ ಕೊಬ್ಬು ರಹಿತ ಹಾಲನ್ನು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಿ.

  • ಬಟರ್ ಚೀಸ್‍ಗಳ ಬದಲಿಗೆ ಸಸ್ಯ ಆಧಾರಿತ ಎಣ್ಣೆಗಳನ್ನು (ಆಲಿವ್ , ಸಾಸಿವೆ, ಶೇಂಗಾ ಎಣ್ಣೆಗಳು) ಬಳಸಿ.

  • ಸಕ್ಕರೆ ಮತ್ತು ಉಪ್ಪು ಉಳ್ಳ ತಿನಿಸುಗಳ ಬದಲಿಗೆ ಒಣ ಬೀಜಗಳು, ಮೊಳಕೆ ಕಾಳು ಇತ್ಯಾದಿಗಳನ್ನು ಬಳಸಿ.

  • ಕೆಂಪು ಮಾಂಸದ ಬದಲಿಗೆ, ತೆಳುವಾದ ಕೋಳಿ ಮಾಂಸ, ಮೊಟ್ಟೆ ಮತ್ತು ಸಮುದ್ರ ಆಹಾರಗಳನ್ನು ಸೇವಿಸಿ.

  • ಕರಿದ ತಿಂಡಿಗಳ ಬದಲಿಗೆ, ಹುರಿದ, ಹಬೆಯಲ್ಲಿ ಬೇಯಿಸಿದ, ಬೇಕ್ ಮಾಡಿದ, ಹದವಾಗಿ ಫ್ರೈ ಮಾಡಿದ ತಿನಿಸುಗಳನ್ನು ತಿನ್ನಿ.


3) ಆಯಾ ಋತುವಿನಲ್ಲಿ ದೊರೆಯುವ ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ
ಆಯಾ ಋತುವಿನಲ್ಲಿ ಸಿಗುವ ಹಣ್ಣು ತರಕಾರಿಗಳನ್ನು ತಿನ್ನುವುದರಿಂದ ಊರಿಯೂತದ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

4) ಪೌಷ್ಟಿಕಾಂಶದ ಮಾಹಿತಿಯನ್ನು ಓದಿಕೊಳ್ಳಿ
ಪ್ಯಾಕೆಟ್ ಆಹಾರಗಳನ್ನು ಖರೀದಿಸುವ ಮೊದಲು, ಅದರಲ್ಲಿರುವ ಪೌಷ್ಟಿಕಾಂಶಗಳ ಕುರಿತು ಪ್ಯಾಕೆಟ್‍ನ ಮೇಲೆ ಮುದ್ರಿಸಲಾದ ಲೇಬಲನ್ನು ಓದಿಕೊಳ್ಳಿ. ಕಡಿಮೆ ಸಕ್ಕರೆ ಮತ್ತು ಉಪ್ಪನ್ನು ಹೊಂದಿರುವ ಆಹಾರಗಳನ್ನು ಖರೀದಿಸಿ.

ಇದನ್ನೂ ಓದಿ:  Skin Care: ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮಕ್ಕೆ ಈ ಸ್ಕಿನ್ ಕೇರ್ ಟಿಪ್ಸ್ ಫಾಲೋ ಮಾಡಿ

5) ಉಪ್ಪಿನ ಬಳಕೆ ಕಡಿಮೆ ಮಾಡಿ
ಉಪ್ಪಿನ ಬದಲಿಗೆ ಗಿಡಮೂಲಿಕೆಗಳು, ಲಿಂಬೆ, ಮಸಾಲೆಗಳನ್ನು ಬಳಸಿ.

6) ಸಂಪೂರ್ಣ ಪೌಷ್ಟಿಕಾಂಶಯುಕ್ತ ಆಹಾರ
ನಿಮ್ಮ ಆಹಾರದಲ್ಲಿ ಹಾಲು , ಮೀನು, ತೆಳುವಾದ ಮಾಂಸ, ಮೊಟ್ಟೆ ಮುಂತಾದ ಸಂಪೂರ್ಣ ಪ್ರೊಟೀನ್‍ಯುಕ್ತ ಆಹಾರಗಳನ್ನು ಸೇವಿಸಿ. ಸಸ್ಯಹಾರಿಗಳು ಸೋಯಾಬೀನ್, ದ್ವಿದಳ ಧಾನ್ಯಗಳು, ಒಣ ಬೀಜಗಳು, ಬೇಳೆಗಳು, ಪನೀರ್, ಹಾಲು ಇತ್ಯಾದಿಗಳನ್ನು ಸೇವಿಸಬಹುದು.
Published by:Ashwini Prabhu
First published: