• Home
  • »
  • News
  • »
  • lifestyle
  • »
  • Sugar And Health: ಊಟದ ನಂತರ ಸಿಹಿ ಸೇವನೆ ಎಷ್ಟು ಆರೋಗ್ಯಕರ?

Sugar And Health: ಊಟದ ನಂತರ ಸಿಹಿ ಸೇವನೆ ಎಷ್ಟು ಆರೋಗ್ಯಕರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಕ್ಕರೆಯನ್ನು ಸಿಹಿ ವಿಷ ಎಂದು ಕರೆಯುತ್ತಾರೆ. ಇದು ಸಿಹಿಯ ಅತ್ಯಂತ ಅಪಾಯಕಾರಿ ರೂಪ ಎನ್ನುತ್ತವೆ ಸಂಶೋಧನೆಗಳು. ಪಬ್ಮೆಡ್ ಪ್ರಕಾರ ಸಕ್ಕರೆ ಕ್ಯಾಲೋರಿಗಳ ಮೂಲವಾಗಿದೆ. ವಿಷಯದಲ್ಲಿ ಸಿಹಿ ತಿಂಡಿ ತಿನ್ನುವ ಸಮಯ ಮತ್ತು ಪ್ರಮಾಣ ಎಷ್ಟಿದೆ ಎಂಬುದನ್ನು ನೋಡಿಕೊಳ್ಳುವುದು ಬಹಳ ಮುಖ್ಯ.

  • Share this:

    ಊಟದ (Dinner) ನಂತರ ಕೆಲವರು ಪಾನ್ ತಿನ್ನುತ್ತಾರೆ. ಇನ್ನು ಕೆಲವರು ಸೋಂಪು (Fennel) ತಿನ್ನುತ್ತಾರೆ. ಇನ್ನೂ ಸ್ವಲ್ಪ ಜನರು (People) ಊಟದ ನಂತರ ಸಿಹಿ ಪದಾರ್ಥ (Sweet Ingredients) ತಿನ್ನಲು ತುಂಬಾ ಇಷ್ಟ ಪಡ್ತಾರೆ. ಹಾಗಾಗಿಯೇ ಮನೆಯಲ್ಲಿ (Home) ಊಟದ ನಂತರ ತಿನ್ನಲು ಕೆಲವು ಸಿಹಿ ಪದಾರ್ಥಗಳನ್ನು ತಂದಿಟ್ಟುಕೊಂಡಿರ್ತಾರೆ. ಇನ್ನೂ ಭಾರತದ ಹಲವು ಭಾಗದಲ್ಲಿ ಸಿಹಿ ತಿನ್ನುವ ಸಂಸ್ಕೃತಿ ಇದೆ. ಇದು ಕೇವಲ ರುಚಿಗಾಗಿ ತಿನ್ನುವುದಾದರೆ, ಬಾಯಿ ಚಪಲವಾಗಿರುತ್ತದೆ. ಅದಾಗ್ಯೂ ಆರೋಗ್ಯಕ್ಕೆ ಸಿಹಿ ಸೇವನೆ ಹೆಚ್ಚು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಆರೋಗ್ಯದ ವಿಷಯದಲ್ಲಿ ಸಿಹಿ ತಿಂಡಿ ತಿನ್ನುವ ಸಮಯ ಮತ್ತು ಪ್ರಮಾಣ ಎಷ್ಟಿದೆ ಎಂಬುದನ್ನು ನೋಡಿಕೊಳ್ಳುವುದು ಬಹಳ ಮುಖ್ಯ.


    ಸಕ್ಕರೆ ಎಂಬುದು ಸಿಹಿ ವಿಷ!


    ವೈದ್ಯಕೀಯ ಭಾಷೆಯಲ್ಲಿ ಸಕ್ಕರೆಯನ್ನು ಸಿಹಿ ವಿಷ ಎಂದು ಕರೆಯುತ್ತಾರೆ. ಇದು ಸಿಹಿಯ ಅತ್ಯಂತ ಅಪಾಯಕಾರಿ ರೂಪ ಎನ್ನುತ್ತವೆ ಸಂಶೋಧನೆಗಳು. ಪಬ್ಮೆಡ್ ಪ್ರಕಾರ ಸಕ್ಕರೆ ಕ್ಯಾಲೋರಿಗಳ ಮೂಲವಾಗಿದೆ. ಸಕ್ಕರೆಯಿಂದ ಮಾಡಿದ ಆಹಾರ ಪದಾರ್ಥಗಳು ಹೆಚ್ಚಿನ ಕ್ಯಾಲೋರಿ ಹೊಂದಿವೆ. ಇದು ಬೊಜ್ಜು ಮತ್ತು ಅದರ ಸಂಬಂಧಿತ ಕಾಯಿಲೆಗೆ ಕಾರಣವಾಗಿದೆ.


    ಪ್ರಶಸ್ತಿ ವಿಜೇತ ಪೌಷ್ಟಿಕತಜ್ಞ ಲವ್ನೀತ್ ಬಾತ್ರಾ ಅವರು ಹೇಳುವ ಪ್ರಕಾರ, ಆರೋಗ್ಯದ ವಿಷಯದಲ್ಲಿ ಸಕ್ಕರೆ ಸಿಹಿ ವಿಷವಾಗಿದೆ ಎಂದು ವಿವರಿಸುತ್ತಾರೆ. ಅನೇಕ ಜನರು ಆರೋಗ್ಯವನ್ನು ಲೆಕ್ಕಿಸದೇ, ರುಚಿಯಿಂದಾಗಿ ಅತಿಯಾಗಿ ಸಕ್ಕರೆ ಪದಾರ್ಥಗಳನ್ನು ಸೇವಿಸುತ್ತಾರೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಸಕ್ಕರೆ ಅಂಶ ಹಣ್ಣು ಮತ್ತು ತರಕಾರಿಗಳಲ್ಲಿ ಸಹ ಇದೆ. ಆದರೆ ಇದು ನೈಸರ್ಗಿಕವಾಗಿ ಇದೆ. ಹಾಗಾಗಿ ಇದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲ್ಲ. ಬದಲಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ.


    ಆಹಾರ ಮತ್ತು ಪಾನೀಯಗಳಲ್ಲಿ ಸಕ್ಕರೆಯ ಪ್ರಮಾಣ


    ಆಹಾರ ಮತ್ತು ಪಾನೀಯಗಳಲ್ಲಿ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಸಕ್ಕರೆಯನ್ನು ಮತ್ತೆ ಪ್ರತ್ಯೇಕವಾಗಿ ಸೇರಿಸಿ ಸೇವನೆ ಮಾಡಿದಾಗ ಸಮಸ್ಯೆ ಹೆಚ್ಚುತ್ತದೆ. ಸಕ್ಕರೆ ತಿನ್ನುವುದನ್ನು ನಿಲ್ಲಿಸುವುದು ಕಷ್ಟದ ಕೆಲಸ. ಆದರೆ ಸಕ್ಕರೆಯನ್ನು ವೈದ್ಯರ ಸಲಹೆ ಪಡೆದು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿ ಮಾಡಲ್ಲ ಎನ್ನುತ್ತಾರೆ ತಜ್ಞರು. ಮತ್ತು ಇದು ಅನೇಕ ಪ್ರಯೋಜನ ಹೊಂದಿದೆ.


    ಕರುಳಿನ ಆರೋಗ್ಯ ಹಾನಿ  


    ಹೆಚ್ಚು ಸಕ್ಕರೆ ಸೇವನೆ ಮಾಡುವುದು ಕರುಳಿನಲ್ಲಿ ಉರಿಯೂತ ಉತ್ತೇಜಿಸುತ್ತದೆ. ಇದು ಸೂಕ್ಷ್ಮಜೀವಿಗಳನ್ನು ಹಾನಿ ಉಂಟು ಮಾಡುತ್ತದೆ. ಅಂದರೆ ಉತ್ತಮ ಬ್ಯಾಕ್ಟೀರಿಯಾ ಕೊರತೆ ಮತ್ತು ರೋಗಕಾರಕ ಬ್ಯಾಕ್ಟೀರಿಯಾದ ಅಧಿಕವಾಗುವಂತೆ ಮಾಡುತ್ತವೆ. ಅಂತಹ ವೇಳೆ ಸಕ್ಕರೆ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ನಿಮ್ಮ ಕರುಳನ್ನು ಆರೋಗ್ಯಕವಾಗಿಡುತ್ತದೆ.


    ರಕ್ತದ ಸಕ್ಕರೆಯ ತ್ವರಿತ ಏರಿಕೆ


    ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರಗಳು ರಕ್ತದ ಸಕ್ಕರೆಯ ತ್ವರಿತ ಏರಿಕೆಗೆ ಕಾರಣ. ಇದು ಕೆಲವೇ ನಿಮಿಷಗಳಲ್ಲಿ ಚೈತನ್ಯವನ್ನು ಹಾಳು ಮಾಡುತ್ತದೆ. ದೇಹದಲ್ಲಿ ಆಯಾಸ ಹೆಚ್ಚಾಗುತ್ತದೆ.


    ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ


    ಹೆಚ್ಚಿನ ಸಕ್ಕರೆ ಸೇವನೆ ಸಂಬಂಧಿಸಿದ ದೀರ್ಘಕಾಲದ ಉರಿಯೂತ ನಿಮ್ಮ ಪ್ರತಿರಕ್ಷಣಾ ಪ್ರತಿಕ್ರಿಯೆ ಕುಂಠಿತಗೊಳಿಸುತ್ತದೆ. ವರ್ಷವಿಡೀ ಶೀತ ಮತ್ತು ಜ್ವರ ನಿಮ್ಮನ್ನು ಹೆಚ್ಚು ದುರ್ಬಲಗೊಳಿಸುತ್ತದೆ.


    ಚರ್ಮದ ಮೇಲೆ ವಯಸ್ಸಾದ ಪರಿಣಾಮ


    ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯಲ್ಲಿ ಸಮೃದ್ಧವಾಗಿರುವ ಆಹಾರ ಸೇವನೆ ಚರ್ಮದ ಮೇಲೆ ವಯಸ್ಸಾದ ಪರಿಣಾಮ ಕಡಿಮೆ ವಯಸ್ಸಿನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಅಂತಹ ವೇಳೆ ಸಕ್ಕರೆಯ ಸೇವನೆ ನಿಯಂತ್ರಿಸಿ.


    ದೇಹದಲ್ಲಿ ಉರಿಯೂತದ ಸಮಸ್ಯೆ


    ಹೆಚ್ಚುವರಿ ಸಕ್ಕರೆ ಸೈಟೊಕಿನ್‌ಗಳನ್ನು ಹೆಚ್ಚಿಸುತ್ತದೆ. ಅವು ಉರಿಯೂತದ ಅಣುಗಳಾಗಿವೆ. ಈ ಉರಿಯೂತ ಅನೇಕ ರೋಗಗಳಿಗೆ ಅಪಾಯ ಉಂಟು ಮಾಡುತ್ತದೆ. ಇದನ್ನು ತಡೆಗಟ್ಟಲು ಸಕ್ಕರೆ ಸೇವನೆ ಕಡಿಮೆ ಮಾಡಿ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಯಕೃತ್ತು ಅನಾರೋಗ್ಯ


    ನಿಮ್ಮ ಯಕೃತ್ತು, ಸಕ್ಕರೆಯ ಹೆಚ್ಚಿನ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಆಹಾರದ ಕಾರ್ಬೋಹೈಡ್ರೇಟ್‌ಗಳನ್ನು ಕೊಬ್ಬಾಗಿ ಪರಿವರ್ತಿಸುತ್ತದೆ. ಹೆಚ್ಚು ಸಕ್ಕರೆ ತಿನ್ನುವುದು NAFLD ಗೆ ಕಾರಣವಾಗಬಹುದು. ಇದು ಮಾರಣಾಂತಿಕವೂ ಆಗಬಹುದು.

    Published by:renukadariyannavar
    First published: