ಮೊಳಕೆ ಬರಿಸಿದ ಕಾಳುಗಳನ್ನು (Sprouts) ಬೆಳಗ್ಗೆ ತಿನ್ನುವುದನ್ನು ಹಾಗೂ ಆರೋಗ್ಯಕ್ಕೆ (Health) ತುಂಬಾನೇ ಒಳ್ಳೆಯದು ಎಂದು ಹೇಳುವುದನ್ನು ನಾವು ನೋಡಿರುತ್ತೇವೆ. ಇದು ಆರೋಗ್ಯಕ್ಕೂ ಸಹ ತುಂಬಾನೇ ಒಳ್ಳೆಯದು. ಅದರಲ್ಲೂ ದೇಹದ ತೂಕವನ್ನು (Weight Loss) ಕಡಿಮೆ ಮಾಡಿಕೊಳ್ಳಬೇಕು ಅಂತ ಗುರಿಯನ್ನು ಇಟ್ಟುಕೊಂಡು ಜಿಮ್ ಗೆ (GYM) ಹೋಗಿ ಪ್ರತಿದಿನ ಕಠಿಣವಾದ ತಾಲೀಮು ಮಾಡಿ ಬರುವವರಿಗೆ ಮೊಳಕೆ ಕಾಳುಗಳು ಉತ್ತಮವಾದ ಆಹಾರ ಪದಾರ್ಥವಾಗಿದೆ.
ಮೊಳಕೆ ಕಾಳು ಫಿಟ್ನೆಸ್ ಉತ್ಸಾಹಿಗಳಲ್ಲಿ ಸಾಕಷ್ಟು ಪ್ರಸಿದ್ಧವಾಗಿರುವ ಜನಪ್ರಿಯ ಪ್ರೋಟೀನ್ ಸಹ ಆಗಿದೆ ಅಂತ ಹೇಳಬಹುದು. ಪ್ರೋಟೀನ್ ಸ್ನಾಯುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಮೊಟ್ಟೆಗಳು, ಕೋಳಿ ಮತ್ತು ಇತರ ಪ್ರಾಣಿ-ಆಧಾರಿತ ಮೂಲಗಳು ಪ್ರೋಟೀನ್ ನ ಸಾಮಾನ್ಯ ಮೂಲಗಳಾಗಿವೆ.
ಮೊಳಕೆ ಕಾಳುಗಳಲ್ಲಿ ಏನೆಲ್ಲಾ ಇದೆ ನೋಡಿ..
ಮೊಳಕೆ ಕಾಳುಗಳು ಸಸ್ಯಾಹಾರಿ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಅನೇಕರು ತಮ್ಮ ಆಹಾರ ಕ್ರಮದಲ್ಲಿ ಇದನ್ನು ಸೇರಿಸಿಕೊಳ್ಳುತ್ತಾರೆ. ಮೊಳಕೆ ಕಾಳುಗಳನ್ನು ತಿನ್ನುವ ಸರಿಯಾದ ವಿಧಾನದ ಬಗ್ಗೆ ಹೆಚ್ಚಿನವರಿಗೆ ಅನೇಕ ರೀತಿಯ ಗೊಂದಲಗಳಿರುತ್ತವೆ ಅಂತಾನೆ ಹೇಳಬಹುದು. ಎಂದರೆ ಮೊಳಕೆ ಕಾಳುಗಳನ್ನು ಹಸಿಯಾಗಿ ಸೇವಿಸಬೇಕೆ ಅಥವಾ ಬೇಯಿಸಿಕೊಂಡು ತಿನ್ನಬೇಕೆ ಅಂತ ಅನೇಕ ರೀತಿಯ ಗೊಂದಲಗಳು ಇರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಮೊಳಕೆ ಕಾಳುಗಳನ್ನು ಸೇವಿಸಲು ನೀವು ಸರಿಯಾದ ವಿಧಾನವನ್ನು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ ಅದಕ್ಕೆ ಉತ್ತರ.
ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು?
ಪೌಷ್ಟಿಕ ತಜ್ಞರಾದ ಮುನ್ಮುನ್ ಗನೇರಿವಾಲ್ ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ವೊಂದರಲ್ಲಿ "ಹೆಚ್ಚಿನ ಜನರು ಸಾಧ್ಯವಾದಷ್ಟು ಹೆಚ್ಚಿನ ಪ್ರೋಟೀನ್ ಅಂಶವಿರುವ ಆಹಾರವನ್ನು ಸೇವಿಸಲು ಇಷ್ಟಪಡುವುದರಿಂದ, ಮೊಳಕೆ ಕಾಳುಗಳು ವಿಶೇಷವಾಗಿ ಸಸ್ಯಾಹಾರಿ ಪ್ರೋಟೀನ್ ಗೆ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ" ಎಂದು ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡ ಒಂದು ವೀಡಿಯೋದಲ್ಲಿ ಗನೇರಿವಾಲ್ ಕಚ್ಚಾವಾಗಿರುವ ಯಾವುದನ್ನಾದರೂ ಜೀರ್ಣಿಸಿಕೊಳ್ಳಲು ದೇಹಕ್ಕೆ ಸ್ವಲ್ಪ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ. ದುರದೃಷ್ಟವಶಾತ್, ಈ ದಿನಗಳಲ್ಲಿ ಕಚ್ಚಾ ಆಹಾರಗಳು ಸಾಮಾನ್ಯವಾಗಿ ಉತ್ತಮ ಆರೋಗ್ಯಕ್ಕೆ ಸಂಬಂಧಿಸಿವೆ.
"ಬೇಯಿಸಿಕೊಳ್ಳುವುದು ಒಂದು ವಿಕಸನಗೊಂಡ ಕಲೆಯಾಗಿದ್ದು, ಅದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಅಡುಗೆ ಮಾಡಿಕೊಂಡು ಸೇವಿಸುವುದರ ಒಂದು ಪ್ರಮುಖವಾದ ಪ್ರಯೋಜನವೆಂದರೆ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಎಲ್ಲಾ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳುತ್ತದೆ. ನೀವು ಮೊಳಕೆ ಕಾಳುಗಳನ್ನು ತಿನ್ನುತ್ತಿದ್ದರೆ, ಹಗಲು ಅಥವಾ ರಾತ್ರಿ ಹೊತ್ತಿನಲ್ಲಿ ಅವುಗಳನ್ನು ಹಸಿಯಾಗಿ ತಿನ್ನಿ ಬೇಯಿಸಬೇಡಿ" ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: Pregnancy Tips: ಪಪ್ಪಾಯಿ ಮಾತ್ರವಲ್ಲ, ಗರ್ಭಿಣಿಯರು ಈ ಹಣ್ಣುಗಳನ್ನು ಸೇವಿಸುವುದು ಕೂಡ ಡೇಂಜರ್
ನೀವು ರಾತ್ರಿ ಹೊತ್ತಿನಲ್ಲಿ ಮೊಳಕೆ ಕಾಳುಗಳನ್ನು ತಿನ್ನಬಹುದೇ?
ಲಘು ಭೋಜನವಾಗಿ ಮೊಳಕೆ ಕಾಳುಗಳನ್ನು ಸೇವಿಸಲು ಯಾವಾಗಲೂ ನಿಮಗೆ ಸಲಹೆ ನೀಡಲಾಗುತ್ತದೆ. ಇವು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಜೀರ್ಣಿಸಿಕೊಳ್ಳಲು ಕಷ್ಟಕರವಾದ ಮತ್ತು ಮಲಗುವಾಗ ತೊಂದರೆಯನ್ನುಂಟು ಮಾಡುವ ಆಹಾರಗಳನ್ನು ಸೇವಿಸಬೇಡಿ. ಸಣ್ಣ ದ್ವಿದಳ ಧಾನ್ಯಗಳು ಮತ್ತು ಮೊಳಕೆ ಕಾಳುಗಳು ಜೀರ್ಣಿಸಿಕೊಳ್ಳಲು ತುಂಬಾನೇ ಸುಲಭ. ಆದರೆ ನೀವು ರಾತ್ರಿ ಊಟಕ್ಕೆ ಅಂತ ಮೊಳಕೆ ಕಾಳುಗಳನ್ನು ತಿನ್ನುತ್ತಿದ್ದರೆ, ಅವುಗಳನ್ನು ರೊಟ್ಟಿ ಅಥವಾ ಅನ್ನದೊಂದಿಗೆ ಸೇರಿಸಿಕೊಂಡು ತಿನ್ನಿರಿ.
ಆಹಾರದಲ್ಲಿ ಮೊಳಕೆ ಕಾಳುಗಳನ್ನು ಸೇರಿಸುವುದು ಹೇಗೆ?
ಅತ್ಯಂತ ಸಾಮಾನ್ಯವಾದ ವಿಧಾನವೆಂದರೆ ಮೊಳಕೆ ಕಾಳುಗಳೊಂದಿಗೆ ಚಾಟ್ ತಯಾರಿಸುವುದು. ಸಲಾಡ್ ಸಹ ನೀವು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಇದು ಆರೋಗ್ಯಕರ ಆಯ್ಕೆಯಾಗಿದೆ. ನೀವು ಇವುಗಳನ್ನು ಮೇಲೋಗರಗಳಿಗೆ ಸೇರಿಸಬಹುದು ಅಥವಾ ಅನ್ನ ಅಥವಾ ಸೂಪ್ ನೊಂದಿಗೆ ಸಹ ಸೇರಿಸಿಕೊಂಡು ತಿನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ