ಪ್ರತಿದಿನ ಈರುಳ್ಳಿ-ಬೆಳ್ಳುಳ್ಳಿ ಸೇವಿಸಿ ಮಾರಕ ಕಾಯಿಲೆಯಿಂದ ದೂರವಿರಿ

ಈ ಅಧ್ಯಯನದಿಂದ ಕಚ್ಚಾ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ಚಟ್ನಿ ದಿನಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸಿದ ಮಹಿಳೆಯರು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 67 ರಷ್ಟು ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

zahir | news18-kannada
Updated:October 1, 2019, 3:44 PM IST
ಪ್ರತಿದಿನ ಈರುಳ್ಳಿ-ಬೆಳ್ಳುಳ್ಳಿ ಸೇವಿಸಿ ಮಾರಕ ಕಾಯಿಲೆಯಿಂದ ದೂರವಿರಿ
onions
  • Share this:
ವಿಶ್ವದಲ್ಲೇ ಅತಿಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಈ ಬಾರಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇದೀಗ ಭಾರತದಿಂದ ಹೊರದೇಶಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಮೂಲಕ ದರದ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಇನ್ನೊಂದೆಡೆ ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆಗೂ ಅನಿವಾರ್ಯವಾಗಿರುವ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಸ್ತನ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

ಕಚ್ಚಾ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯು ಬಹಳ ಕಡಿಮೆ ಇರುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ವಿಜ್ಞಾನಿಗಳು ಪೋರ್ಟೊ ರಿಕೊದ ಸುಮಾರು 600 ಮಹಿಳೆಯರ ಆಹಾರ ಪದ್ಧತಿಯನ್ನು ಸೂಕ್ಷ್ಮವಾಗಿ ಗಮನಿಸಿ ಈ ಸಂಶೋಧನೆಯನ್ನು ನಡೆಸಿದೆ. ಏಕೆಂದರೆ ಇದೇ ಭಾಗದಲ್ಲಿ ಕಳೆದೊಂದು ದಶಕದಲ್ಲಿ ಅತೀ ಹೆಚ್ಚು ಸ್ತನ ಕ್ಯಾನ್ಸರ್ ರೋಗಗಳು ಪತ್ತೆಯಾಗಿತ್ತು.

ಇದನ್ನೂ ಓದಿ: ಸೆಕ್ಸ್ ಬೇಕೆನಿಸಿದಾಗ ಮಾಡಿಬಿಡಬೇಕು: ಹೊಸ ಚರ್ಚೆಗೆ ಕಾರಣವಾಯ್ತು ನಟಿಯ ಹೇಳಿಕೆ..!

ಈ ಅಧ್ಯಯನದಿಂದ ಕಚ್ಚಾ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ಚಟ್ನಿ ದಿನಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸಿದ ಮಹಿಳೆಯರು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 67 ರಷ್ಟು ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹಿಂದೂಸ್ತಾನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಸ್ತನ ಕ್ಯಾನ್ಸರ್​ನಂತಹ ಮಹಾಮಾರಿಯ ಅಪಾಯವನ್ನ ತಪ್ಪಿಸಲು ನೀವು ನಿಮ್ಮ ದೈನಂದಿನ ಆಹಾರದಲ್ಲಿ ಕಚ್ಚಾ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಬೇಕು. ಅವುಗಳನ್ನು ನಿಮ್ಮ ಆಹಾರದಲ್ಲಿ ಸಲಾಡ್ ಆಗಿಯು ಸಹ ಸೇವಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: Bigg boss: ಮೊದಲ ದಿನವೇ ಬಿಗ್ ಬಾಸ್​ ಮನೆಯಿಂದ ನಟಿಯನ್ನು ಹೊರ ಹಾಕುವಂತೆ ಆಗ್ರಹ..!

ಈ ಸಂಶೋಧನೆಯ ನೇತೃತ್ವ ವಹಿಸಿದ ಲೇಖಕ ಗೌರಿ ದೇಸಾಯಿ, ಪೋರ್ಟೊ ರಿಕೊದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ಸೇವಿಸಿದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ಸಂಶೋಧನೆಯಲ್ಲಿ ನಾವು ತಿಳಿದುಕೊಂಡಿದ್ದೇವೆ. ಕಚ್ಚಾ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ದಿನಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸಿದ ಮಹಿಳೆಯರಿಗೆ ಇತರ ಮಹಿಳೆಯರಿಗಿಂತ ಸ್ತನ ಕ್ಯಾನ್ಸರ್ ಬರುವ ಶೇಕಡಾ 67 ರಷ್ಟು ಕಡಿಮೆ ಇರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ ಆಹಾರ ಕ್ರಮದ ಒಂದು ಭಾಗವಾಗಿರಲಿ. ಇದು ಆರೋಗ್ಯಕ್ಕೂ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ನಗ್ನ ಫೋಟೋ ಹಂಚಿ ಪಡ್ಡೆ ಹುಡುಗರ ಹಾರ್ಟ್​ ಬೀಟ್ ಹೆಚ್ಚಿಸಿದ ಮಾದಕ ಮದನಾರಿ..!

 
First published:October 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading