• Home
  • »
  • News
  • »
  • lifestyle
  • »
  • Dry Fruits: ಹೆಚ್ಚು ಡ್ರೈ ಫ್ರೂಟ್ಸ್​ ತಿಂದರೆ ಕೆಲವೇ ದಿನಗಳಲ್ಲಿ ಹೆಚ್ಚುತ್ತೆ ತೂಕ!

Dry Fruits: ಹೆಚ್ಚು ಡ್ರೈ ಫ್ರೂಟ್ಸ್​ ತಿಂದರೆ ಕೆಲವೇ ದಿನಗಳಲ್ಲಿ ಹೆಚ್ಚುತ್ತೆ ತೂಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಣ ಹಣ್ಣುಗಳನ್ನು ತಿನ್ನುವುದು ಸಂಪೂರ್ಣ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಆದರೆ ಒಣ ಹಣ್ಣುಗಳನ್ನು ಸರಿಯಾಗಿ ಸೇವನೆ ಮಾಡದೇ ಹೋದರೆ ಅದು ಅನೇಕ ಕಾಯಿಲೆಗಳಿಗೆ ಕಾರಣವಾಗುವ ಅಪಾಯ ಹೆಚ್ಚು. ಇಷ್ಟೆಲ್ಲಾ ಪೋಷಕಾಂಶ ಹೊಂದಿದ್ದರೂ ಸಹ ದಿನಕ್ಕೆ ಒಂದೇ ಸಮಯದಲ್ಲಿ ಹೆಚ್ಚು ಒಣ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಅಂತಾರೆ ತಜ್ಞರು.

ಮುಂದೆ ಓದಿ ...
  • Share this:

    ಆರೋಗ್ಯಕ್ಕೆ (Health) ಹೆಚ್ಚು ಲಾಭ (Benefit) ನೀಡುವ ಕಾರಣದಿಂದ ಹೆಚ್ಚಿನ ಜನರು (People), ಎಷ್ಟೇ ಬೆಲೆ ಹೆಚ್ಚಳವಿದ್ದರೂ ಸಹ ಒಣ ಹಣ್ಣುಗಳನ್ನು (Dry Fruits) ಕೊಂಡು ತಂದು ತಿನ್ನುತ್ತಾರೆ. ಅದರಲ್ಲೂ ಹೆಚ್ಚಾಗಿ ಡಯಟ್ (Diet) ಮಾಡುವವರು ತಮ್ಮ ಆಹಾರ ಕ್ರಮದಲ್ಲಿ ಒಣ ಹಣ್ಣುಗಳನ್ನು ಸೇರಿಸುತ್ತಾರೆ. ನೀವು ಪ್ರತಿ ಋತುವಿನಲ್ಲಿ ಸೀಮಿತ ಪ್ರಮಾಣದಲ್ಲಿ ಒಣ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಒಣ ಹಣ್ಣುಗಳ ಸೇವನೆ ಹೆಚ್ಚಿನ ಪೋಷಣೆ ನೀಡುತ್ತವೆ. ಒಣ ಹಣ್ಣುಗಳ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹೀಗಾಗಿ ಆರೋಗ್ಯವು ಅಗತ್ಯವಾದ ಪೋಷಣೆ ಪಡೆಯಲು ಸಾಧ್ಯ ಆಗುತ್ತದೆ. ಜೊತೆಗೆ ದೇಹವು ಆರೋಗ್ಯಕರವಾಗಿ ಇರುತ್ತದೆ.


    ಒಣ ಹಣ್ಣುಗಳನ್ನು ಹೆಚ್ಚು ತಿನ್ನುವುದು ಬೊಜ್ಜಿಗೆ ಕಾರಣವಾಗುತ್ತೆ?!


    ಒಣ ಹಣ್ಣುಗಳನ್ನು ತಿನ್ನುವುದು ಸಂಪೂರ್ಣ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಆದರೆ ಒಣ ಹಣ್ಣುಗಳನ್ನು ಸರಿಯಾಗಿ ಸೇವನೆ ಮಾಡದೇ ಹೋದರೆ ಅದು ಅನೇಕ ಕಾಯಿಲೆಗಳಿಗೆ ಕಾರಣವಾಗುವ ಅಪಾಯ ಹೆಚ್ಚು. ಇಷ್ಟೆಲ್ಲಾ ಪೋಷಕಾಂಶ ಹೊಂದಿದ್ದರೂ ಸಹ ದಿನಕ್ಕೆ ಒಂದೇ ಸಮಯದಲ್ಲಿ ಹೆಚ್ಚು ಒಣ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಅಂತಾರೆ ತಜ್ಞರು.


    ನ್ಯೂಟ್ರಿಷನ್ ಡಾ. ಐಲೀನ್ ಕೆನಡಿ ಅವರ ಪ್ರಕಾರ, ಬೀಜಗಳು ಕೊಬ್ಬು, ಫೈಬರ್, ಜೀವಸತ್ವ, ಖನಿಜ, ಉತ್ಕರ್ಷಣ ನಿರೋಧಕ ಮತ್ತು ಪ್ರೋಟೀನ್‌ ಹೊಂದಿವೆ. ಪ್ರತಿನಿತ್ಯ ಒಣ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.




    ಬೀಜಗಳು ಹೃದಯದ ಆರೋಗ್ಯ, ಕಡಿಮೆ ಕೊಲೆಸ್ಟ್ರಾಲ್ ಮತ್ತು ತೂಕ ನಷ್ಟಕ್ಕೆ ಪ್ರಯೋಜನಕಾರಿ. ಆದರೆ ಒಣ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಅದು ತೂಕ ಹೆಚ್ಚಳ, ಹೊಟ್ಟೆ ಉಬ್ಬುವುದು ಮತ್ತು ಜೀರ್ಣಕ್ರಿಯೆ ಬದಲಾವಣೆ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತೆ ಎನ್ನುತ್ತಾರೆ.


    ಹೆಚ್ಚು ಒಣ ಹಣ್ಣುಗಳ ಸೇವನೆಯ ಅಡ್ಡ ಪರಿಣಾಮಗಳು


    ಹೊಟ್ಟೆಯ ಅಸ್ವಸ್ಥತೆ ಸಮಸ್ಯೆ


    ಫೈಬರ್ ದೇಹಕ್ಕೆ ಬಹಳ ಮುಖ್ಯ. ಇದು ಹೊಟ್ಟೆಯ ಆರೋಗ್ಯ ಕಾಪಾಡಲು ಸಹಕಾರಿ. ಆದರೆ ಇದರ ಅತಿಯಾದ ಸೇವನೆ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ಮಲಬದ್ಧತೆ, ಹೊಟ್ಟೆ ಸೆಳೆತ, ಅತಿಸಾರ ಉಂಟು ಮಾಡುತ್ತದೆ.


    ತ್ವರಿತ ತೂಕ ಹೆಚ್ಚಳ


    ಒಣ ಹಣ್ಣುಗಳಲ್ಲಿ ಕ್ಯಾಲೋರಿ ತುಂಬಾ ಹೆಚ್ಚಿರುತ್ತವೆ. ಹಾಗಾಗಿ ಇದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಿತ್ಯವೂ ಡ್ರೈ ಫ್ರೂಟ್ಸ್ ತಿಂದರೆ ಕೆಲವೇ ದಿನಗಳಲ್ಲಿ ದಪ್ಪ ಆಗುತ್ತಾರೆ.


    ಹಲ್ಲುಗಳಿಗೆ ಹಾನಿ


    ಒಣ ಹಣ್ಣುಗಳ ಸೇವನೆ ಪ್ರಯೋಜನಕಾರಿ. ಆದರೆ ಒಣದ್ರಾಕ್ಷಿ ಮತ್ತು ಖರ್ಜೂರದಂತಹ ಒಣ ಹಣ್ಣುಗಳ ಅತಿಯಾದ ಸೇವನೆ ಹಲ್ಲುಗಳಿಗೆ ಹಾನಿ ಉಂಟು ಮಾಡುತ್ತದೆ. ಕಡಿಮೆ ಸೇವಿಸಿ.


    ಅಸ್ತಮಾ ಸಮಸ್ಯೆ


    ಒಣ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಆಸ್ತಮಾ ರೋಗ ಲಕ್ಷಣ ಉಂಟಾಗುತ್ತವೆ. ಒಣ ಹಣ್ಣುಗಳನ್ನು ಸಂರಕ್ಷಿಸಲು ಸಲ್ಫರ್ ಡೈಆಕ್ಸೈಡ್ ಬಳಸುತ್ತಾರೆ. ಇದು ಅಪಾಯಕಾರಿ. ಹೆಚ್ಚು ಒಣ ಹಣ್ಣುಗಳನ್ನು ತಿನ್ನುವುದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡುತ್ತದೆ.


    ಬೀಜಗಳ ಹೆಚ್ಚಿನ ಸೇವನೆ ಜೀರ್ಣಿಸಿಕೊಳ್ಳಲು ಕಷ್ಟಕರ. ಕೊಬ್ಬನ್ನು ಸಹ ಹೊಂದಿದ್ದು, ಅತಿಯಾಗಿ ಸೇವಿಸಿದರೆ ಅತಿಸಾರಕ್ಕೆ ಕಾರಣವಾಗುತ್ತದೆ. ಆಹಾರ ವಿಷಯವಾಗುವ ಸಾಧ್ಯತೆ ಇದೆ.


    ಒಂದು ದಿನದಲ್ಲಿ ಎಷ್ಟು ಒಣ ಹಣ್ಣು ಸೇವಿಸಬೇಕು?


    ಒಣ ಹಣ್ಣುಗಳಲ್ಲಿ ಸಕ್ಕರೆ ಮತ್ತು ಕ್ಯಾಲೊರಿ ಹೆಚ್ಚು. ದಿನಕ್ಕೆ ಸುಮಾರು 15 ರಿಂದ 20 ಗ್ರಾಂ ಬೀಜ ಅಥವಾ ಒಣ ಹಣ್ಣು ತಿನ್ನಬೇಕು.


    ಇದನ್ನೂ ಓದಿ: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?


    ಒಂದು ದಿನದಲ್ಲಿ ಎಷ್ಟು ವಿಭಿನ್ನ ಒಣ ಹಣ್ಣು ಮತ್ತು ಬೀಜ ಸೇವಿಸಬೇಕು?


    ಐದು ಬಾದಾಮಿ, ಎರಡು ವಾಲ್ನಟ್ಸ್, ಖರ್ಜೂರ ಎರಡು, ಪಿಸ್ತಾ ಆರು ಸೇವಿಸಬೇಕು.

    Published by:renukadariyannavar
    First published: