ತುಂಬಾ ಜನರು ಹೂಕೋಸು (Cauliflower) ಖಾದ್ಯಗಳನ್ನು (Recipes) ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಕೆಲವರು ಹಸಿರು ಎಲೆ ತರಕಾರಿ (Vegetables) ತಿನ್ನಲು ಇಷ್ಟಪಡಲ್ಲ. ಆದರೆ ಪ್ರತಿಯೊಬ್ಬರೂ ಎಲೆಕೋಸು, ಹೂಕೋಸು ಖಾದ್ಯ ತಿನ್ನಲು ಇಷ್ಟಪಡ್ತಾರೆ (Like). ಇದು ಎಲ್ಲರ ನೆಚ್ಚಿನ ತರಕಾರಿ ಆಗಿದೆ. ಅದನ್ನು ಹೇಗೆ ತಯಾರಿಸಿ ತಿನ್ನುತ್ತೀರಿ ಎಂಬುದು ಸಹ ತುಂಬಾ ಮುಖ್ಯ ಆಗಿದೆ. ಅದು ತುಂಬಾ ರುಚಿಕರ (Tasty) ಆಗಿದೆ. ಜನರು ಹೂಕೋಸಿನ ಗೋಬಿಮಂಚೂರಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ತಾಜಾ ಹೂಕೋಸು ಸಿಗುತ್ತದೆ. ಅದರಿಂದ ಪಕ್ಯ, ಗೋಬಿ, ಬಜ್ಜಿ ಮಾಡಿ ತಿನ್ನುತ್ತಾರೆ. ಹೂಕೋಸು ಪಾಕವಿಧಾನ ಅತ್ಯಂತ ಸುಲಭ ಮತ್ತು ಸರಳವಾಗಿದೆ. ಇದು ಬೇಯಿಸಲು ಹೆಚ್ಚು ಸಮಯ ಬೇಕಿಲ್ಲ.
ಹೂಕೋಸು ಮತ್ತು ಆರೋಗ್ಯ
ಹೂಕೋಸನ್ನು ಯಾವ ತರಕಾರಿ ಜೊತೆ ಬೇಕಾದ್ರೂ ತಯಾರಿಸಬಹುದು. ಹೂಕೋಸನ್ನು ಸಾಂಬಾರ್, ಮಿಕ್ಸ್ ವೆಜಿಟೇಬಲ್ ಸೇರಿದಂತೆ ಹಲವು ಖಾದ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹೂಕೋಸು ಹಲವು ಪ್ರಯೋಜನ ನೀಡುತ್ತದೆ.
ಫೈಬರ್ ಮತ್ತು ಬಿ-ವಿಟಮಿನ್ ಹೊಂದಿದೆ. ಕ್ಯಾನ್ಸರ್ ವಿರುದ್ಧ ಹೋರಾಡಿ, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೋನ್ಯೂಟ್ರಿಯೆಂಟ್ ದೇಹಕ್ಕೆ ಒದಗಿಸುತ್ತದೆ. ಹೂಕೋಸು ತೂಕ ನಷ್ಟ ಮತ್ತು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಅಂತಹ ಎಲ್ಲಾ ಪೋಷಕಾಂಶ ಸಹ ಹೊಂದಿದೆ.
ಆಯುರ್ವೇದ ಹೇಳುವ ಪ್ರಕಾರ, ಹೂಕೋಸು ಜೀರ್ಣಕ್ರಿಯೆಗೆ ಅಷ್ಟಾಗಿ ಸಹಕಾರಿ ಅಲ್ಲ. ಹಾಗಾಗಿ ಹೂಕೋಸು ಸೇವನೆ ನಂತರ ಕೆಲವರಿಗೆ ಗ್ಯಾಸ್, ಹೊಟ್ಟೆಯುಬ್ಬರ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಜೀರ್ಣಕ್ರಿಯೆ ತಡವಾಗುತ್ತದೆ
ಹೂಕೋಸು ಫೋಲೇಟ್, ವಿಟಮಿನ್ ಕೆ ಮತ್ತು ಫೈಬರ್ ನಿಂದ ಕೂಡಿದೆ. ಹೂಕೋಸು ತರಕಾರಿ ಹೆಚ್ಚು ಸೇವಿಸಿದರೆ ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ. ಹೂಬಿಡುವ ಮತ್ತು ಎಲೆಗಳಿರುವ ಕ್ರೂಸಿಫೆರಸ್ ತರಕಾರಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹಸಿಯಾಗಿ ತಿಂದರೆ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಸಮಸ್ಯೆ ಎದುರಾಗುತ್ತದೆ.
ಅಧಿಕ ಫೈಬರ್ ಸೇವನೆ ಹಾನಿಕರ
ಅಧಿಕ ನಾರಿನಂಶವಿರುವ ಆಹಾರ ಸೇವನೆ ಹೊಟ್ಟೆಯುಬ್ಬರ, ಗ್ಯಾಸ್ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಜನರು ಹೂಕೋಸು ಕಡಿಮೆ ಸೇವಿಸುತ್ತಾರೆ. ಹೆಚ್ಚಿನ ಫೈಬರ್ ಆಹಾರ ಸೇವಿಸುವವರು ಆಹಾರವನ್ನು ನಿಧಾನವಾಗಿ ಸೇವಿಸಬೇಕು. ಯಾವ ಆಹಾರಗಳು ತಮ್ಮ ಹೊಟ್ಟೆಯುಬ್ಬರ, ಗ್ಯಾಸ್ ಸಮಸ್ಯೆ ಉಂಟು ಮಾಡುತ್ತವೆ ಎಂಬುದನ್ನು ಕಂಡುಕೊಳ್ಳಬೇಕು.
ರಕ್ತ ತೆಳುಗೊಳಿಸುವ ಔಷಧ ಸೇವಿಸುವವರು ಹೂಕೋಸು ಸೇವಿಸಬೇಡಿ
ಹೂಕೋಸಿನಲ್ಲಿರುವ ಅಧಿಕ ಮಟ್ಟದ ವಿಟಮಿನ್ ಕೆ, ರಕ್ತ ತೆಳುವಾಗಲು ಕೆಲಸ ಮಾಡುತ್ತೆ. ಹಾಗಾಗಿ ರಕ್ತ ತೆಳುವಾಗಿಸುವ ಔಷಧ ಸೇವಿಸುವವರು ಅದರ ಸೇವನೆ ತಪ್ಪಿಸಿ. ಹೂಕೋಸು ಸೇವನೆ ಬಗ್ಗೆ ತಜ್ಞರ ಸಲಹೆ ಪಡೆಯಿರಿ.
ಹೂಕೋಸು ತಿನ್ನುವ ಉತ್ತಮ ವಿಧಾನ
ತಾಜಾ ಹೂಕೋಸು ಸೇವಿಸಿ
ತಾಜಾ ಹೂಕೋಸು ಸೇವನೆ ಆರೋಗ್ಯಕ್ಕೆ ಸಹಕಾರಿ. ಇದು ಬೇರೆ ತರಕಾರಿಗಿಂತ 30 ಪ್ರತಿಶತ ಹೆಚ್ಚು ಪ್ರೋಟೀನ್ ಮತ್ತು ವಿವಿಧ ಉತ್ಕರ್ಷಣ ನಿರೋಧಕ ಹೊಂದಿದೆ.
ಚೆನ್ನಾಗಿ ಬೇಯಿಸಿ ತಿನ್ನುವುದು
ಹೂಕೋಸನ್ನು ಬೇಯಿಸಿ ಸೇವಿಸಿ. ಹೆಚ್ಚು ಜೀರ್ಣಕಾರಿ ಸಮಸ್ಯೆಯಿದ್ದರೆ ಬೇಯಿಸಿದ ನಂತರವೇ ನೀವು ಹೂಕೋಸು ತಿನ್ನಬೇಕು. ಮಿತವಾಗಿ ಸೇವಿಸಿ.
ಶುಂಠಿ ಮತ್ತು ಲವಂಗ ಸೇವಿಸಿ
ಹೂಕೋಸು ಖಾದ್ಯದಲ್ಲಿ ಶುಂಠಿ, ಕರಿಮೆಣಸು ಮತ್ತು ಲವಂಗ ಬಳಸಿ. ಇದರಿಂದ ಅದು ಜೀರ್ಣವಾಗುತ್ತದೆ. ಅವುಗಳನ್ನು ನೀರಿನಲ್ಲಿ ಕುದಿಸಬೇಡಿ.
ಹೂಕೋಸು ಖಾದ್ಯದಲ್ಲಿ ಇಂಗು ಹಾಕಿ
ಇಂಗು ಜೀರ್ಣಾಂಗ ವ್ಯವಸ್ಥೆ ಸುಗಮವಾಗಿ ಕೆಲಸ ಮಾಡಲು ಸಹಕಾರಿ. ಹೂಕೋಸು ಖಾದ್ಯದಲ್ಲಿ ಇಂಗು ಬಳಸಿ. ಇದು ಹೊಟ್ಟೆನೋವು ಮತ್ತು ಅಜೀರ್ಣ ಸಮಸ್ಯೆ ತಡೆಯುತ್ತದೆ. ಚಿಟಿಕೆ ಇಂಗು ಬಳಸಿ.
ಇದನ್ನೂ ಓದಿ: ಮನೆಯಲ್ಲಿ ಮೊಟ್ಟೆ ಇಲ್ದೇ ಬೆಲ್ಲದ ಕೇಕ್ ತಯಾರಿಸಿ, ಕ್ರಿಸ್ ಮಸ್ ಹಬ್ಬ ಸೆಲೆಬ್ರೇಟ್ ಮಾಡಿ!
ಅತಿಯಾಗಿ ತಿನ್ನಬೇಡಿ
ಹೂಕೋಸು ಜೀರ್ಣವಾಗಲು ಹೆಚ್ಚು ಸಮಯ ಬೇಕು. ಹಾಗಾಗಿ ಅತಿಯಾಗಿ ತಿನ್ನಬೇಡಿ. ಇದು ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಊಟದಲ್ಲಿ ಹೂಕೋಸು ತಿನ್ನುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ