Health Tips: ರಾಗಿ ಯಾಕೆ ಬೆಸ್ಟ್ ಗೊತ್ತೇ? ವಿಟಮಿನ್​ಯುಕ್ತ ಆರೋಗ್ಯಕರ ಆಹಾರವಿದು

ಚಳಿಗಾಲದಲ್ಲಿ, ನಿಮ್ಮ ಆಹಾರ ಪದ್ದತಿಯಲ್ಲಿ ರಾಗಿಯಿಂದ ಮಾಡಿದ ಆಹಾರವನ್ನು ಸೇರಿಸುವುದು ಉತ್ತಮ. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಾಗಿ (Millet) ಸೇವನೆಯು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದು ‌ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ತಂಪನ್ನು ಕೂಡ ನೀಡುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ಜನರು ಇದನ್ನು ಧಾನ್ಯವಾಗಿ ಬಳಸುತ್ತಾರೆ. ಆದರೆ ನಾವು ಕೆಲವು ತಿಂಗಳು ರಾಗಿಯನ್ನು ಸೇವಿಸಿದರೆ, ಇದರಿಂದ ನಮ್ಮ ದೇಹಕ್ಕೆ ಅಪಾರ ಲಾಭಗಳಾಗುತ್ತವೆ. ಕ್ಯಾಲ್ಸಿಯಂ (Calcium) ಸಮೃದ್ಧವಾಗಿರುವುದರಿಂದ ರಾಗಿ ಸೇವಿಸುವುದು ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ (Children) ತುಂಬಾ ಒಳ್ಳೆಯದು. ಚಳಿಗಾಲದಲ್ಲಿ, ನಿಮ್ಮ ಆಹಾರ (Food) ಪದ್ದತಿಯಲ್ಲಿ ರಾಗಿಯಿಂದ ಮಾಡಿದ ಆಹಾರವನ್ನು ಸೇರಿಸುವುದು ಉತ್ತಮ. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ.

    ರಾಗಿಯು ಮಕ್ಕಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ

    ರಾಗಿಯಲ್ಲಿರುವ ಪ್ರಮುಖ ಅಂಶವೆಂದರೆ ಇದರಲ್ಲಿ ಪಿಷ್ಠವು ತುಂಬಾ ಕಡಿಮೆಯಿದೆ. ರಾಗಿಯಲ್ಲಿ ನಾರಿನಾಂಶವಿರುವ ಕಾರ್ಬ್ರೋಹೈಡ್ರೇಟ್ಸ್‌ಗಳಿವೆ ಮತ್ತು ಆಹಾರದ ನಾರಿನಾಂಶಗಳನ್ನು ಹೊಂದಿದೆ. ರಾಗಿಯು ಮಕ್ಕಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ತುಂಬಾ ಸುಲಭವಾಗಿ ಕರಗುವ ಕಾರಣದಿಂದ ಇದು ಸಣ್ಣ ಮಕ್ಕಳಿಗೆ ಸರಿಯಾದ ಆಹಾರವೆಂದು ಪರಿಗಣಿಸಲಾಗಿದೆ.

    ರಕ್ತಹೀನತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ

    ರಾಗಿಯಲ್ಲಿ ಅಡಗಿರುವ ಕಬ್ಬಿಣ ಅಂಶವು ರಕ್ತಹೀನತೆಯನ್ನು ನಿವಾರಣೆ ಮಾಡಲು ಮಾಡುತ್ತದೆ. ಅದೇ ರೀತಿ ದೇಹದ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡಲು ಇದು ಸಹಕಾರಿ. ಇದರಲ್ಲಿ ನೈಸರ್ಗಿಕವಾದ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಇದೆ.

    ಮೂಳೆಗಳನ್ನು ಬಲಪಡಿಸುವ ಗುಣ ಹೊಂದಿದೆ

    ರಾಗಿ ಹಿಟ್ಟಿನಲ್ಲಿ ಮೂಳೆಗಳನ್ನು ಬಲಪಡಿಸುವ ಗುಣ ಅಡಗಿದೆ. ರಾಗಿ ಹಿಟ್ಟಿನಲ್ಲಿ ಕ್ಯಾಲ್ಸಿಯಂ ಪ್ರಮಾಣವು ಹೆಚ್ಚಿರುವುದರಿಂದ ಇದು ಮೂಳೆಗಳನ್ನು ಬಲಪಡಿಸುತ್ತದೆ. 100 ಗ್ರಾಂ ರಾಗಿಯಲ್ಲಿ ಸುಮಾರು 344 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಕಂಡುಬರುತ್ತದೆ ಎಂದು ಅಧ್ಯಯನ ಹೇಳುತ್ತದೆ.

    ಮಧುಮೇಹ ನಿಯಂತ್ರಣಕ್ಕೆ ರಾಗಿ ಸಹಕಾರಿ

    ನಮ್ಮ ಆಹಾರವಾಗಿ ರಾಗಿ ಸೇವಿಸುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ರಾಗಿ ಒಳಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಗಳಿವೆ, ಈ ಕಾರಣದಿಂದಾಗಿ ಅನೇಕ ಮಧುಮೇಹ ರೋಗಿಗಳು ರಾಗಿಯನ್ನು ಸೇವಿಸುತ್ತಾರೆ.

    ಇದನ್ನೂ ಓದಿ: Breakfast Recipe: ಚಪಾತಿ, ರೋಟಿಗೆ ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ದಾಲ್ ಕರಿ

    ರಕ್ತಹೀನತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ

    ದೇಹದ ತೂಕವನ್ನು ಇಳಿಸುವ ಬಯಕೆ ಉಳ್ಳವರು ರಾಗಿಯನ್ನು ತಮ್ಮ ಆಹಾರದಲ್ಲಿ ಬಳಸಿಕೊಂಡರೆ ಉತ್ತಮ. ಸಸ್ಯಾಹಾರಿಗಳಿಗೆ ಪ್ರೋಟೀನ್ ಶ್ರೀ‌ ಮಂತವಾಗಿರುವ ರಾಗಿ ದೇಹ ತೂಕ ಇಳಿಸುವವರಿಗೆ ವರದಾನವೇ ಸರಿ.  ರಾಗಿಯಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಲೂ ನೆರವಾಗುತ್ತವೆ. ಯಕೃತ್ ನಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸಿ ಹೊರದಬ್ಬಲು ರಾಗಿ ಅತ್ಯುತ್ತಮವಾಗಿದೆ. ಜೊತೆಗೇ ಇನ್ನಷ್ಟು ಕೊಬ್ಬು ಬೆಳೆಯುವುದನ್ನು ತಡೆಗಟ್ಟುತ್ತದೆ. ಪರಿಣಾಮವಾಗಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ.

    ರಾಗಿಯಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ

    ರಾಗಿಯಲ್ಲಿ ಅಡಕವಾಗಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ವೇಗವಾಗಿ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ಮಲಬದ್ಧತೆ ನಿವಾರಿಸುವ ಗುಣ ಕೂಡ ಇದರಲ್ಲಿ ಅಡಗಿದೆ. ದಿನಸಿ ಕಡಿಮೆ ಇರುವ ಯಾವುದೇ ಆಹಾರವು ಮಲಬದ್ಧತೆಗೆ ಕಾರಣವಾಗುತ್ತದೆ ಆದರೆ ರಾಗಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವುದರಿಂದ ಇದು ಮಲಬದ್ಧತೆಯ ತೊಂದರೆಯನ್ನು ಶೀಘ್ರವಾಗಿ ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: Cardamom Benefits: ಏಲಕ್ಕಿಯಲ್ಲಿ ಅಡಕವಾಗಿರುವ ಅದ್ಭುತ ಔಷಧೀಯ ಗುಣಗಳು ಇವುಗಳೇ ನೋಡಿ!

    ರಾಗಿಯಲ್ಲಿ ಹಲವಾರು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳಿವೆ

    ರಾಗಿಯಲ್ಲಿ ಹಲವಾರು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳಿವೆ. ರಾಗಿ ಆಹಾರ ಸೇವನೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಯೌವ್ವನವನ್ನು ಕಾಪಾಡಿಕೊಳ್ಳಲು ರಾಗಿ ಆಹಾರ ಉತ್ತಮ. ಲೈಸಿನ್ ನಂತಹ ಅಗತ್ಯವಾದ ಅಮೈನೊ ಆಸಿಡ್ ಅಂಶಗಳು ಚರ್ಮದ ಅಂಗಾಂಶಗಳನ್ನು ಸುಕ್ಕುಗಳು ಮತ್ತು ವಯಸ್ಸಾದ ಚಿಹ್ನೆಗಳಿಂದ ರಕ್ಷಿಸುತ್ತದೆ.
    Published by:Swathi Nayak
    First published: