ನೀವು ಯಾವ ಸಮಯಕ್ಕೆ ಊಟ-ತಿಂಡಿ ತಿನ್ತೀರಾ ಎನ್ನುವುದರ ಮೇಲೆ ನಿಮ್ಮ ಆರೋಗ್ಯ ನಿಂತಿದೆ, ಬೇಕಿದ್ರೆ ಪರೀಕ್ಷಿಸಿ

Eating Meals: ಗ್ಲೂಕೋಸ್ ಅಂಶ ಹೆಚ್ಚಾಗಲು ಮತ್ತು ಬೀಟಾ-ಸೆಲ್ ಕಾರ್ಯದ ಮೇಲೆ ಪರಿಣಾಮಗಳಿಗೆ ಊಟದ ಸಮಯ ಕಾರಣವಾಗಿದೆ ಎಂದು ಫಲಿತಾಂಶಗಳು ತೋರಿಸುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಯಾವ ಆಹಾರ ಪದಾರ್ಥಗಳನ್ನು ಸೇವಿಸುತ್ತೇವೆ ಎನ್ನುವುದು ನಮ್ಮ ದೇಹದ ಆರೋಗ್ಯ(Healthy body) ಕಾಪಾಡಿಕೊಳ್ಳುವಲ್ಲಿ ಎಷ್ಟು ಪ್ರಮುಖ ಪಾತ್ರ ( Important)ವಹಿಸುತ್ತದೆಯೋ, ಅಷ್ಟೇ ಮಹತ್ವದ್ದು ನಾವು ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಿದ್ದೇವೆ ಅಥವಾ ಇಲ್ಲವೇ ಎಂಬುದಾಗಿದೆ ಎಂದರೆ ತಪ್ಪಾಗುವುದಿಲ್ಲ.ನೀವು ಆರೋಗ್ಯಕರ ದೇಹ ಹೊಂದಲು ಬಯಸಿದರೆ, ನಿಮ್ಮ ಆಹಾರದಲ್ಲಿ ಪೌಷ್ಟಿಕ (Nutritious) ಆಹಾರ ಪದಾರ್ಥಗಳನ್ನು ಹೊಂದುವುದು ಅತ್ಯಗತ್ಯ. ಇದನ್ನು ಮಾಡಿದರೆ ನಾವು ಆರೋಗ್ಯಕರ ದೇಹ ಹೊಂದಬಹುದೇ..? ಇದಕ್ಕೆ ಉತ್ತರ (Answer) ಕೊಡುವುದು ಕಷ್ಟವಾಗಬಹುದು. ನಾವು ಸಮಯಕ್ಕೆ ಸರಿಯಾಗಿ ಊಟ(Meal) ಮಾಡುವುದು ನಾವು ತೆಗೆದುಕೊಳ್ಳುವ ಆಹಾರದಷ್ಟೇ ಮುಖ್ಯವಾಗುತ್ತದೆ.

ಆರೋಗ್ಯ ತೊಡಕು
ಊಟದ ಸಮಯದಲ್ಲಾಗುವ ಬದಲಾವಣೆಗಳು ನಾವು ಸಮತೋಲಿತ ಆಹಾರ ಸೇವಿಸಿದ್ದರೂ ಸಹ ನಮ್ಮ ದೇಹದ ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರಬಹುದು ಮತ್ತು ಆರೋಗ್ಯ ತೊಡಕುಗಳಿಗೆ ಮತ್ತಷ್ಟು ಕಾರಣವಾಗಬಹುದು. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡುವುದು ರೂಢಿ ಮಾಡಿಕೊಳ್ಳುವುದು ಒಳ್ಳೆಯದು. ಊಟದ ಸಮಯ ಬದಲಾದರೇ, ಅಥವಾ ಊಟ ಬಿಟ್ಟರೇ ಅನೇಕ ಆರೋಗ್ಯ ಸಮಸ್ಯೆ ಬಿಡದೇ ಕಾಡುವುದು ಸಹಜ

ಇದನ್ನೂ ಓದಿ: Fruits With Meal: ಊಟದ ಜೊತೆ ಹಣ್ಣುಗಳನ್ನು ತಿನ್ನಲೇಬಾರದು ಎನ್ನುತ್ತೆ ಆಯುರ್ವೇದ..! ಯಾಕೆ ಗೊತ್ತಾ?

ಗ್ಲೂಕೋಸ್ ಮಟ್ಟ ನಿಯಂತ್ರಣ
ಬ್ರಿಗ್ಹ್ಯಾಮ್ ಮತ್ತು ಮಹಿಳಾ ಆಸ್ಪತ್ರೆ ಇತ್ತೀಚಿಗೆ ನಡೆಸಿದ ಅಧ್ಯಯನವು ರಾತ್ರಿ ಆಹಾರ ಸೇವಿಸುವ ಪದ್ಧತಿಗಳು ಮನುಷ್ಯನ ದೇಹದಲ್ಲಿ ಗ್ಲೂಕೋಸ್ ಹೆಚ್ಚಾಗಲು ಕಾರಣವಾಗಬಹುದು ಎಂದು ಬಹಿರಂಗಪಡಿಸಿದೆ. ಆದರೆ ಹಗಲಿನ ಊಟವು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಪ್ಪು ಹೊಂದಾಣಿಕೆ
ಸೈನ್ಸ್ ಅಡ್ವಾನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯು ರಾತ್ರಿಯ ಸಮಯದಲ್ಲಿ ಸೇವಿಸುವ ಆಹಾರದ ಸಮಯವು ಬದಲಾದರೆ ದೇಹದ ಕೇಂದ್ರ ಮತ್ತು ಬಾಹ್ಯ ಸಿರ್ಕಾಡಿಯನ್ ಚಕ್ರಗಳ ನಡುವೆ ತಪ್ಪು ಹೊಂದಾಣಿಕೆಗೆ ಕಾರಣವಾಗುತ್ತದೆ ಎಂದು ತೋರಿಸಿದೆ. ಅದು 24 ಗಂಟೆಗಳ ಇಡೀ ದಿನದ ಚಕ್ರದಲ್ಲಿ ಮಾನಸಿಕ ದೈಹಿಕ ಮತ್ತು ವರ್ತನೆಯ ಬದಲಾವಣೆಗಳನ್ನು ನಿಯಂತ್ರಿಸುವ ನೈಸರ್ಗಿಕ ಸಮಯಪಾಲಕರಾಗಿ ಕಾರ್ಯನಿರ್ವಹಿಸುತ್ತದೆ.

ಫ್ರಾಂಕ್ ಎ.ಜೆ.ಎಲ್. ಶೀರ್ ಅಧ್ಯಯನದ ಸಹ ಸಂಬಂಧಿತ ಲೇಖಕರಾಗಿದ್ದು, ಗ್ಲೂಕೋಸ್ ಅಂಶ ಹೆಚ್ಚಾಗಲು ಮತ್ತು ಬೀಟಾ-ಸೆಲ್ ಕಾರ್ಯದ ಮೇಲೆ ಪರಿಣಾಮಗಳಿಗೆ ಊಟದ ಸಮಯ ಕಾರಣವಾಗಿದೆ ಎಂದು ಫಲಿತಾಂಶಗಳು ತೋರಿಸುತ್ತವೆ ಎಂದು ಅವರು ಹೇಳಿದರು.

ಸಂಶೋಧನೆ
ಅಧ್ಯಯನಕ್ಕಾಗಿ, ಸಂಶೋಧಕರು 14 ದಿನಗಳ ನಿಯಂತ್ರಿತ ಪ್ರಯೋಗಾಲಯ ಪ್ರೊಟೋಕಾಲ್‌ಗೆ ಒಳಗಾದ 19 ಆರೋಗ್ಯವಂತ ಯುವ ಅಭ್ಯರ್ಥಿಗಳನ್ನು ಒಳಗೊಂಡಿದ್ದು, ಅವರ ಮೇಲೆ ಯಾದೃಚ್ಛಿಕ ನಿಯಂತ್ರಿತ ಪ್ರಯೋಗ ನಡೆಸಿದರು. ಪ್ರಯೋಗಗಳಿಗಾಗಿ, ಅಭ್ಯರ್ಥಿಗಳು ನಿರಂತರವಾಗಿ ದೇಹದ ಭಂಗಿಗಳು ಮತ್ತು ಪ್ರತಿ ಗಂಟೆಗೆ ಒಂದೇ ರೀತಿಯ ತಿಂಡಿಗಳನ್ನು ಸೇವಿಸುವಾಗ ವ್ಯಾಪಕವಾಗಿ ನಿಯಂತ್ರಿತ ಮಂದ ಬೆಳಕಿನ ವಾತಾವರಣದಲ್ಲಿ 32 ಗಂಟೆಗಳ ಕಾಲ ಎಚ್ಚರವಾಗಿರಬೇಕಾಗಿತ್ತು. ಇಲ್ಲಿನ ಅಭ್ಯರ್ಥಿಗಳಿಗೆ ಯಾವುದೇ ಸಮಯದ ಸೂಚನೆ ಇರಲಿಲ್ಲ.

ಊಟದ ವೇಳಾಪಟ್ಟಿ
ಇದರ ನಂತರ, ಅಭ್ಯರ್ಥಿಗಳನ್ನು ವಿಭಿನ್ನ ಸಮಯದಲ್ಲಿ ಆಹಾರ ಸೇವಿಸುವ ವೇಳಾಪಟ್ಟಿ ಅನುಸರಿಸಲು ತಿಳಿಸಲಾಯಿತು. ಮೊದಲ ಗುಂಪು ರಾತ್ರಿ ಪಾಳಿ ಉದ್ಯೋಗಿಗಳ ವೇಳಾಪಟ್ಟಿ ಅನುಕರಿಸಲು ರಾತ್ರಿ ಸಮಯದಲ್ಲಿ ಊಟ ಮಾಡಿತು. ಆದರೆ ಇನ್ನೊಂದು ಗುಂಪು ತಮ್ಮ ಊಟದ ವೇಳಾಪಟ್ಟಿಯನ್ನು ಕೇಂದ್ರ ಸಿರ್ಕಾಡಿಯನ್ ಗಡಿಯಾರದ 24 ಗಂಟೆಗಳ ಚಕ್ರದೊಂದಿಗೆ ಹೊಂದಿಸಲು ಹಗಲಿನ ಸಮಯದಲ್ಲಿ ಆಹಾರ ಸೇವಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಶೇ.80ರಷ್ಟು ಮಕ್ಕಳಿಗೆ ಬಿಸಿಯೂಟದಲ್ಲಿ ಬೇಕು ಮೊಟ್ಟೆ: ಸಮೀಕ್ಷೆಯಲ್ಲಿ ಬಹಿರಂಗ

ರಾತ್ರಿ ಸಮಯದಲ್ಲಿ ಊಟ ಮಾಡಿದ ಅಭ್ಯರ್ಥಿಗಳು ತಮ್ಮ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಹೊಂದಿದ್ದರು. ಆದರೆ ಹಗಲಿನಲ್ಲಿ ಪ್ರತ್ಯೇಕವಾಗಿ ಊಟ ಮಾಡಿದವರಿಗೆ ಯಾವುದೇ ಗಮನಾರ್ಹ ಹೆಚ್ಚಳವಾಗಿರಲಿಲ್ಲ ಎಂದು ಈ ಸಂಶೋಧನೆಯು ತೋರಿಸಿದೆ.
Published by:vanithasanjevani vanithasanjevani
First published: