• Home
  • »
  • News
  • »
  • lifestyle
  • »
  • Jaggery Benefits: ಬೆಲ್ಲ ತಿನ್ನುವುದು ಈ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯಕಾರಿ

Jaggery Benefits: ಬೆಲ್ಲ ತಿನ್ನುವುದು ಈ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೀಪಾವಳಿಯಂದು ಬೆಲ್ಲದ ಸೇವನೆ ಮಾಲಿನ್ಯ ಮತ್ತು ಶೀತದಿಂದ ರಕ್ಷಿಸುತ್ತದೆ. ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಅವರು ಹೇಳುವ ಪ್ರಕಾರ ಬೆಲ್ಲದ ಸೇವನೆಯು ಅಸ್ತಮಾ ಮತ್ತು ಉಸಿರಾಟದ ಕಾಯಿಲೆ ಹೊಂದಿರುವ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಮನೆಯಲ್ಲಿ ಮಕ್ಕಳಿಗೆ ಸ್ವಲ್ಪ ಬೆಲ್ಲ ತಿನ್ನಿಸುವುದು ಪ್ರಯೋಜನ ನೀಡುತ್ತದೆ.

ಮುಂದೆ ಓದಿ ...
  • Share this:

    ದೀಪಾವಳಿ (Diwali) ಹಬ್ಬಕ್ಕೆ (Festival) ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ (Home) ಸಿಹಿ ಪದಾರ್ಥಗಳನ್ನು (Sweet Ingredients) ಮಾಡುತ್ತಾರೆ. ಕೆಲವರು ಸಿಹಿ ಪದಾರ್ಥಗಳಿಗೆ ಸಕ್ಕರೆ (Sugar) ಹಾಕಿ ಮಾಡುತ್ತಾರೆ. ಇನ್ನು ಕೆಲವರು ಸಕ್ಕರೆ ಆರೋಗ್ಯಕ್ಕೆ (Health) ಉತ್ತಮವಲ್ಲ ಎಂದು ಬೆಲ್ಲದಿಂದ ಮಾಡುತ್ತಾರೆ. ಹಾಗಾದ್ರೆ ಸಾಕಷ್ಟು ಸಿಹಿ ಒದಗಿಸುವ ಬೆಲ್ಲವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏಕೆ ತಿನ್ನಬೇಕು? ಬೆಲ್ಲ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಹಲವರಿಗೆ ಗೊತ್ತಿದೆ. ಇನ್ನು ಕೆಲವರಿಗೆ ತಿಳಿದಿಲ್ಲ. ದೀಪಾವಳಿ ಹಬ್ಬದಂದು ವಿಶೇಷವಾಗಿ ಬೆಲ್ಲ ತಿನ್ನುವುದು ಕೆಲವು ಮುಖ್ಯ ಪ್ರಯೋಜನಗಳ ನೀಡುತ್ತದೆ ಎಂದು ತಜ್ಞರು ಹೇಳ್ತಾರೆ. ಈ ದೀಪಾವಳಿಯಂದು ನೀವು ಬೆಲ್ಲವನ್ನು ಸೇವಿಸುವುದು ಹೇಗೆ ಆರೋಗ್ಯಕರ ಎಂದು ಇಲ್ಲಿ ತಿಳಿಯೋಣ.


    ದೀಪಾವಳಿಯಂದು ಬೆಲ್ಲದ ಸೇವನೆ ಹೇಗೆ ಆರೋಗ್ಯಕರ?


    ದೀಪಾವಳಿಯಂದು ಬೆಲ್ಲದ ಸೇವನೆ ಮಾಲಿನ್ಯ ಮತ್ತು ಶೀತದಿಂದ ರಕ್ಷಿಸುತ್ತದೆ. ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಅವರು ಹೇಳುವ ಪ್ರಕಾರ, ಬೆಲ್ಲದ ಸೇವನೆಯು ಅಸ್ತಮಾ ಮತ್ತು ಉಸಿರಾಟದ ಕಾಯಿಲೆ ಹೊಂದಿರುವ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಮನೆಯಲ್ಲಿ ಮಕ್ಕಳಿಗೆ ಸ್ವಲ್ಪ ಬೆಲ್ಲ ತಿನ್ನಿಸುವುದು ಪ್ರಯೋಜನ ನೀಡುತ್ತದೆ.


    ವಾಯು ಮಾಲಿನ್ಯದ ಕಾರಣಗಳು ಮತ್ತು ಅನಾನುಕೂಲಗಳು?


    ದೀಪಾವಳಿ ಬರುತ್ತಲೇ ವಾತಾವರಣದಲ್ಲಿ ಬದಲಾವಣೆ ಉಂಟಾಗುತ್ತದೆ. ಗಾಳಿ, ಧೂಳಿನ ಪ್ರಮಾಣ ಹೆಚ್ಚುತ್ತದೆ. ಪಟಾಕಿ, ಬೆಳೆಗಳ ಕಟಾವು, ವಾಹನಗಳ ಹೊಗೆ ಹೀಗೆ ವಾಯು ಮಾಲಿನ್ಯ ಉಂಟಾಗುತ್ತದೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಚಳಿಗಾಲದಲ್ಲಿ, ಬೆಚ್ಚಗಿನ ಗಾಳಿಯು ತಂಪಾದ ಗಾಳಿಯ ಮೇಲೆ ನೆಲೆಗೊಳ್ಳುತ್ತದೆ. ಹೀಗಾಗಿ ವಾತಾವರಣದಲ್ಲಿ ಮಾಲಿನ್ಯವು ನಿಶ್ಚಲವಾಗಿರುತ್ತದೆ. ದೀಪಾವಳಿಯಿಂದ ಉಂಟಾಗುವ ಮಾಲಿನ್ಯವು ಉಸಿರಾಟದ ತೊಂದರೆ, ಕಣ್ಣುಗಳಲ್ಲಿ ಉರಿ, ಉಸಿರುಗಟ್ಟುವಿಕೆ, ಕೆಮ್ಮು ಮತ್ತು ಶೀತ ಇತ್ಯಾದಿ ಸಮಸ್ಯೆ ಹೆಚ್ಚಿಸುತ್ತದೆ. ಈ ಸ್ಥಿತಿಯು ಆಸ್ತಮಾ ರೋಗಿಗಳು, ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚು ಹಾನಿಕಾರಕ.


    ದೀಪಾವಳಿಯಂದು ಬೆಲ್ಲವನ್ನು ಎಷ್ಟು ಮತ್ತು ಹೇಗೆ ತಿನ್ನಬೇಕು?


    ಆಯುರ್ವೇದದ ಪ್ರಸಿದ್ಧ ತಜ್ಞ, ಡಾ. ಅಬ್ರಾರ್ ಮುಲ್ತಾನಿ ಪ್ರಕಾರ, ಮಧುಮೇಹ ಮತ್ತು ಅಸಮತೋಲಿತ ಪಿತ್ತದೋಷದ ರೋಗಿಗಳು ಬೆಲ್ಲ ತಿನ್ನಬಾರದು ಎಂದು ಹೇಳುತ್ತಾರೆ. ಇವರನ್ನು ಹೊರತುಪಡಿಸಿ ಎಲ್ಲರೂ ಬೆಲ್ಲವನ್ನು ಪ್ರತಿನಿತ್ಯ ಸೇವಿಸಬಹುದು. ಪ್ರತಿದಿನ ರಾತ್ರಿ ಊಟದ ನಂತರ 10 ಗ್ರಾಂ ಬೆಲ್ಲವನ್ನು ಹಾಲಿನೊಂದಿಗೆ ಸೇವಿಸಿ.


    ಆಯುರ್ವೇದದ ಪ್ರಕಾರ, ಬೆಲ್ಲವು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ದೇಹದಿಂದ ಮಾಲಿನ್ಯದ ಕಣಗಳು ಮತ್ತು ವಿಷವನ್ನು ತೆಗೆದು ಹಾಕುತ್ತದೆ. ಇದರಿಂದ ಮಾಲಿನ್ಯದ ಅಡ್ಡ ಪರಿಣಾಮಗಳು ಕಡಿಮೆ ಆಗುತ್ತವೆ. ಮಾಲಿನ್ಯದ ಹಾನಿ ತಪ್ಪಿಸಲು, ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚನೆಯ ನೀರಿನಿಂದ ಬೆಲ್ಲ ಸೇವಿಸಬಹುದು.


    ಅಸ್ತಮಾ ರೋಗಿಗಳಿಗೆ ಉತ್ತಮ ಔಷಧ


    ಬೆಲ್ಲದಲ್ಲಿ ಅಲರ್ಜಿ ನಿವಾರಕ ಗುಣವಿದೆ. ದೇಹದಲ್ಲಿನ ಅಲರ್ಜಿ ಸಮಸ್ಯೆ ನಿವಾರಿಸುತ್ತದೆ. ಅಸ್ತಮಾ ಕೂಡ ಒಂದು ರೀತಿಯ ಅಲರ್ಜಿ. ಮಾಲಿನ್ಯದಿಂದಾಗಿ ತೀವ್ರ ಸ್ವರೂಪ ಪಡೆಯುತ್ತದೆ. ಹಾಗಾಗಿ ಅಸ್ತಮಾ ರೋಗಿಗಳು ಪ್ರತಿದಿನ ಬೆಲ್ಲವನ್ನು ತಿನ್ನಬೇಕು.


    ಕೆಮ್ಮು ಮತ್ತು ನೆಗಡಿ ಗುಣಪಡಿಸಲು ಬೆಲ್ಲ ಮನೆಮದ್ದು


    ಬೆಲ್ಲ ಸೇವನೆ ಶ್ವಾಸನಾಳ ಮತ್ತು ಶ್ವಾಸಕೋಶದ ಸ್ನಾಯುಗಳಿಗೆ ವಿಶ್ರಾಂತಿ ಪಡೆಯಲು ಸಹಕಾರಿ. ಇದು ಶೀತದಿಂದ ದೇಹಕ್ಕೆ ಪರಿಹಾರ ನೀಡುತ್ತದೆ. ಆಯುರ್ವೇದದಲ್ಲಿ ಮನೆಯಲ್ಲಿ ಕೆಮ್ಮು ಮತ್ತು ಶೀತಕ್ಕೆ ಇದು ಅತ್ಯುತ್ತಮ ಔಷಧಿ. ಕೆಮ್ಮು, ಶೀತ ರೋಗಿಗಳು ವಾಕರಿಕೆ ತಪ್ಪಿಸಲು ಉಗುರುಬೆಚ್ಚನೆಯ ನೀರಿನಿಂದ ಬೆಲ್ಲ ಸೇವಿಸಬೇಕು.


    ಚಳಿಗಾಲದ ಚಳಿಯಿಂದ ರಕ್ಷಿಸಿಕೊಳ್ಳಲು


    ಚಳಿಗಾಲದಲ್ಲಿ ಶೀತ ಹೆಚ್ಚು. ಇದು ಮಕ್ಕಳು ಮತ್ತು ವೃದ್ಧರು ಮತ್ತು ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳು ಹೆಚ್ಚು ಶೀತ ಅನುಭವಿಸಲು ಕಾರಣವಾಗುತ್ತದೆ. ಆದರೆ ಬೆಲ್ಲದ ಸೇವನೆ ದೇಹದಲ್ಲಿ ರಕ್ತ ಪೂರೈಕೆ ಮತ್ತು ರಕ್ತ ಸಂಚಾರ ಸುಧಾರಿಸುತ್ತದೆ. ಈ ಎರಡೂ ಪ್ರಯೋಜನಗಳು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಆಯುರ್ವೇದ ಸಲಹೆ


    ಆಯುರ್ವೇದ ತಜ್ಞ ಡಾ. ಅಬ್ರಾರ್ ಮುಲ್ತಾನಿ ಪ್ರಕಾರ, ದೀಪಾವಳಿಯಂದು ಮಾಲಿನ್ಯ ತಪ್ಪಿಸಲು, ಬೆಲ್ಲದ ಜೊತೆಗೆ ಜಲ ನೇತಿ ಕ್ರಿಯಾ ಮತ್ತು ಕಪಾಲಭಾತಿ ಅಭ್ಯಾಸ ಮಾಡಬೇಕು. ಇದಕ್ಕಾಗಿ ತಜ್ಞರ ಸಲಹೆ ಪಡೆಯಿರಿ.

    Published by:renukadariyannavar
    First published: