ಬಹುತೇಕರು ಊಟ ಮಾಡಲು ಮನೆಯಲ್ಲಿ ತಟ್ಟೆಗಳನ್ನೇ (Plates) ಬಳಸುತ್ತಾರೆ, ಆದರೆ ಮೊದಲೆಲ್ಲಾ ಜನರು ತಮ್ಮ ಮನೆಯಲ್ಲಿ ಈ ಬಾಳೆ ಎಲೆಗಳಲ್ಲಿ (Banana Leaf) ಊಟ ಮಾಡುತ್ತಿದ್ದರು. ಆದರೆ ಬಾಳೆ ಎಲೆಯಲ್ಲಿನ ಊಟ ಈಗ ಬರೀ ಹಬ್ಬಕ್ಕೆ ಅಷ್ಟೇ ಸೀಮಿತವಾಗಿ ಬಿಟ್ಟಿದೆ. ಒಂದು ತಟ್ಟೆಯಲ್ಲಿ ಅನೇಕ ಬಗೆಯ ಆಹಾರ (Food) ಪದಾರ್ಥಗಳನ್ನು ಹಾಕಿಕೊಂಡು ತಿನ್ನುವುದಕ್ಕೆ ತುಂಬಾನೇ ಮಜಾ ಇರುತ್ತದೆ. ಅದರಲ್ಲೂ ತಟ್ಟೆಯ ಬದಲಿಗೆ ಈ ಬಾಳೆ ಎಲೆಯ ಮೇಲೆ ಇದನ್ನೇಲ್ಲಾ ಬಡಿಸಿಕೊಂಡು ತಿಂದರೆ ಅದರ ರುಚಿ (Taste) ದುಪ್ಪಟ್ಟಾಗುತ್ತದೆ ಅಂತ ಹೇಳಬಹುದು.
ಉದಾಹರಣೆಗೆ ಕೇರಳದಲ್ಲಿ ಆಚರಿಸುವ ಓಣಂ ಹಬ್ಬಕ್ಕೆ ಈ ಸಾದ್ಯ ಅಂತ ಮಾಡ್ತಾರಲ್ಲ, ಅದು ಸಹ ಹೀಗೆ ಅನೇಕ ಆಹಾರ ಪದಾರ್ಥಗಳನ್ನು ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ ಅಂತ ಹೇಳಬಹುದು.
ಬಾಳೆ ಎಲೆಗಳ ಬಳಕೆಯ ಬಗ್ಗೆ ಏನ್ ಹೇಳುತ್ತೇ ಅಧ್ಯಯನ?
ಇನ್ನೊಂದು ಉದಾಹರಣೆ ಎಂದರೆ ಥಾಲಿ. ಅದರಲ್ಲೂ ಸಹ ಹೀಗೆ ಅನೇಕ ಭಕ್ಷ್ಯಗಳನ್ನು ಒಂದು ತಟ್ಟೆಯಲ್ಲಿಯೇ ಬಡಿಸಲಾಗುತ್ತದೆ.
ಬಾಳೆ ಎಲೆಯ ಮೇಲೆ ಆಹಾರವನ್ನು ಏಕೆ ಬಡಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರಿಂದ ಏನಾದರೂ ಆರೋಗ್ಯ ಪ್ರಯೋಜನಗಳಿವೆಯೇ ಅಥವಾ ಕೇವಲ ರುಚಿಗಾಗಿ ಈ ರೀತಿ ಬಡಿಸಲಾಗುತ್ತದೆ ಅಂತ ಅನೇಕರು ಕೇಳಬಹುದು.
'ಜರ್ನಲ್ ಆಫ್ ಎಥ್ನಿಕ್ ಫುಡ್ಸ್' ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಬಾಳೆ ಎಲೆಗಳ ಬಳಕೆಯು ಲೋಹದ ಪಾತ್ರೆಗಳು ಅಸ್ತಿತ್ವಕ್ಕೆ ಬರುವ ಮುಂಚಿನ ಯುಗಕ್ಕೆ ಸೇರಿದ್ದು ಎಂದು ನಮಗೆ ನೆನಪಿಸುತ್ತದೆ.
ಬಾಳೆಹಣ್ಣಿನ ಎಲೆಗಳು ದಪ್ಪ, ಗಾತ್ರದಲ್ಲಿ ದೊಡ್ಡದಾಗಿದ್ದುದರಿಂದ ಮತ್ತು ಅಕ್ಷಯವಾಗಿರುವುದರಿಂದ, ಅವುಗಳನ್ನು ಆಹಾರವನ್ನು ಬಡಿಸಲು ಬಳಕೆಗೆ ತರಲಾಯಿತು.
ಬಾಳೆ ಎಲೆಗಳಲ್ಲಿ ಊಟ ಮಾಡುವುದು ಏಕೆ ಆರೋಗ್ಯಕರವಾಗಿದೆ?
1. ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ
ಬಾಳೆ ಎಲೆಗಳು ನೈಸರ್ಗಿಕವಾಗಿ ಪಾಲಿಫಿನಾಲ್ ಗಳನ್ನು ಹೊಂದಿರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಾಮಾನ್ಯ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುವ ಒಂದು ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
ಎಲೆಯ ಮೇಲೆ ಬಡಿಸುವ ಆಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ತುಂಬಲು ಪಾಲಿಫಿನಾಲ್ ಗಳನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ.
2. ಬ್ಯಾಕ್ಟೀರಿಯಾ ವಿರೋಧಿ
ಬಾಳೆ ಎಲೆಗಳನ್ನು ಬ್ಯಾಕ್ಟೀರಿಯಾ ವಿರೋಧಿ ಎಂದು ಹೇಳಲಾಗುತ್ತದೆ ಮತ್ತು ಆಹಾರದಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತದೆ, ಇದು ಅದನ್ನು ಆರೋಗ್ಯಕರ ಮತ್ತು ಶುದ್ಧವಾಗಿಸುತ್ತದೆ. ಅದಕ್ಕಾಗಿಯೇ ಧಾರ್ಮಿಕ ಆಚರಣೆಗಳಲ್ಲಿ ಈ ಬಾಳೆ ಎಲೆಗಳನ್ನು ಹೆಚ್ಚಾಗಿ ಬಳಸುವುದನ್ನು ನಾವು ನೋಡುತ್ತೇವೆ.
3. ಹೆಚ್ಚು ನೈರ್ಮಲ್ಯ
ನಾವು ನಮ್ಮ ನಿಯಮಿತ ಪಾತ್ರೆಗಳನ್ನು ತೊಳೆದಾಗ, ಸಾಬೂನು ಕ್ಲೀನರ್ ಗಳಿಂದ ರಾಸಾಯನಿಕ ಉಳಿಕೆಯ ಅಪಾಯವಿರುತ್ತದೆ. ಆದರೆ ಬಾಳೆ ಎಲೆಗಳನ್ನು ಸ್ವಾಭಾವಿಕವಾಗಿ ಮೇಣದಂತಹ ವಸ್ತುವಿನಿಂದ ಲೇಪಿಸಲಾಗುತ್ತದೆ, ಇದು ಆಹಾರವು ಅದರ ಮೇಲ್ಮೈಗೆ ಅಂಟಿಕೊಳ್ಳುವುದನ್ನು ತಡೆಯುತ್ತದೆ. ಆದ್ದರಿಂದ, ಎಲೆಗಳನ್ನು ತೊಳೆಯುವುದು ಸುಲಭ ಮತ್ತು ಮರುಬಳಕೆಗೆ ಇದು ಹೆಚ್ಚು ಆರೋಗ್ಯಕರವಾಗಿದೆ.
ಈ ಆರೋಗ್ಯ ಪ್ರಯೋಜನಗಳ ಹೊರತಾಗಿ, ಬಾಳೆ ಎಲೆಗಳ ಮೇಲೆ ಊಟ ಮಾಡುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಇದು ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಅವುಗಳನ್ನು ತುಂಬಾ ಜನಪ್ರಿಯಗೊಳಿಸುತ್ತದೆ.
ಒಂದಕ್ಕೆ, ಲೋಹ ಮತ್ತು ಗಾಜಿನ ತಟ್ಟೆಗಳಿಗೆ ಹೋಲಿಸಿದರೆ ಇದು ಹೆಚ್ಚು ಮಿತವ್ಯಯಕಾರಿಯಾಗಿದೆ ಮತ್ತು ಎರಡನೆಯದಾಗಿ, ಬಾಳೆ ಎಲೆಗಳು ಮತ್ತು ಕಾಗದದ ತಟ್ಟೆಗಳು ಬಿಸಾಡಬಹುದು, ಪ್ಲಾಸ್ಟಿಕ್ ತಟ್ಟೆಗಳಿಗೆ ಹೋಲಿಸಿದರೆ ಇವುಗಳು ಹೆಚ್ಚು ಪರಿಸರ ಸ್ನೇಹಿಯಾಗಿವೆ.
ಊಟವನ್ನು ಕೈಯಿಂದ ಮಾಡುವುದು ಒಳ್ಳೆಯದು ಅಂತಾರೆ..
ಆಹಾರವನ್ನು ನಾವು ಯಾವುದೇ ಚಮಚಗಳನ್ನು ಬಳಸದೆ ಕೈಯಿಂದ ತಿಂದರೆ ಅದು ನಮ್ಮ ಎಲ್ಲಾ ಇಂದ್ರಿಯಗಳನ್ನು ಸ್ಪರ್ಶಿಸಿಸುತ್ತದೆ ಮತ್ತು ಕೈಗಳಿಂದ ತಿನ್ನುವ ಸಂತೋಷವನ್ನು ನಾವು ಎಂದಿಗೂ ಮರೆಯಬಾರದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ