ಪ್ರತಿದಿನ ಮುಂಜಾನೆ ನೆನೆಸಿದ ಕಡಲೆ ತಿನ್ನುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು

ದೇಹದಲ್ಲಿ ಕಬ್ಬಿಣದ ಕೊರತೆ ಇದ್ದರೆ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ಕಂಡು ಬರುತಿದ್ದರೆ ಪ್ರತಿದಿನ ನೆನೆಸಿದ ಕಡಲೆ ಕಾಳುಗಳನ್ನು ತಿನ್ನುವುದರಿಂದ ಪರಿಹಾರ ಕಾಣಬಹದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿದಿನ ಬೆಳಿಗ್ಗೆ ನೆನೆಸಿದ ಬಾದಾಮಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಹಾಗೆಯೇ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಸಿಗುವ ಲಾಭಗಳು ಬಾದಾಮಿಗಿಂತ ಕಡಿಮೆಯಿಲ್ಲ. ಅಗ್ಗದ ಬೆಲೆಗೆ ಲಭ್ಯವಿರುವ ಕಡಲೆ ಕಾಳುಗಳಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಜೀವಸತ್ವಗಳು ಸಮೃದ್ಧವಾಗಿರುತ್ತವೆ. ಇದನ್ನು ತಿನ್ನುವುದರಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇನ್ನು ಮೊಳಕೆಯೊಡೆದ ಕಡಲೆ ಕಾಳುಗಳಲ್ಲಿ ಕ್ಲೋರೊಫಿಲ್, ವಿಟಮಿನ್ ಎ, ಬಿ, ಸಿ, ಡಿ ಮತ್ತು ಕೆ, ರಂಜಕ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಅಂಶಗಳು ಕಂಡು ಬರುತ್ತವೆ. ಪ್ರತಿನಿತ್ಯ ಕಡಲೆ ಕಾಳುಗಳನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ನೋಡೋಣ.

  ದೇಹ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ: ಕಡಲೆ ಕಾಳುಗಳಲ್ಲಿ ಸಾಕಷ್ಟು ಪ್ರಮಾಣದ ಜೀವಸತ್ವಗಳು, ಖನಿಜಗಳು, ಕ್ಲೋರೊಫಿಲ್ ಮತ್ತು ರಂಜಕವು ಕಂಡುಬರುತ್ತದೆ. ಇದರಿಂದಾಗಿ ಪ್ರತಿದಿನ ನೆನೆಸಿದ ಕಡಲೆ ಕಾಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಹಾಗೆಯೇ ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವೂ ಹೆಚ್ಚಾಗುತ್ತದೆ.

  ಮಧುಮೇಹ: ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಡಲೆ ಕಾಳು ಪ್ರಯೋಜನಕಾರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 25 ಗ್ರಾಂ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.

  ಮಲಬದ್ಧತೆಯ ಸಮಸ್ಯೆಗೆ ಪರಿಹಾರ: ಕಡಲೆಕಾಳಿನಲ್ಲಿರುವ ನಾರಿನ ಅಂಶ ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ನಿಮಗೆ ಹೊಟ್ಟೆ ನೋವು ಮತ್ತು ಮಲಬದ್ಧತೆ ಇದ್ದರೆ, ಶುಂಠಿ, ಜೀರಿಗೆ ಮತ್ತು ಉಪ್ಪನ್ನು ಬೆರೆಸಿ ತಿನ್ನಿರಿ. ಇದು ಹೊಟ್ಟೆ ನೋವಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೆಯೇ ಕಡಲೆಕಾಳಿಗೆ ನಿಂಬೆ, ಶುಂಠಿ, ಉಪ್ಪು ಮತ್ತು ಕರಿಮೆಣಸನ್ನು ಬೆರೆಸಿ ನೀವು ಪ್ರತಿದಿನ ಬೆಳಿಗ್ಗೆ ತಿನ್ನುವುದರಿಂದ ಮಲಬದ್ಧತೆ, ಅಜೀರ್ಣ ಸಮಸ್ಯೆಯನ್ನು ನಿವಾರಿಸಬಹುದು.

  ರಕ್ತಹೀನತೆಗೆ ಪರಿಹಾರ: ದೇಹದಲ್ಲಿ ಕಬ್ಬಿಣದ ಕೊರತೆ ಇದ್ದರೆ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ಕಂಡು ಬರುತಿದ್ದರೆ ಪ್ರತಿದಿನ ನೆನೆಸಿದ ಕಡಲೆ ಕಾಳುಗಳನ್ನು ತಿನ್ನುವುದರಿಂದ ಪರಿಹಾರ ಕಾಣಬಹದು. ಏಕೆಂದರೆ ಇದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  Published by:zahir
  First published: