• Home
  • »
  • News
  • »
  • lifestyle
  • »
  • Ginger Benefits: ಶುಂಠಿ ಕ್ಯಾನ್ಸರ್​ ಬರದಂತೆ ಕೂಡ ತಡೆಯುತ್ತದೆ.. ಆದರೆ ಈ ರೀತಿ ಸೇವಿಸಬೇಕಷ್ಟೇ..

Ginger Benefits: ಶುಂಠಿ ಕ್ಯಾನ್ಸರ್​ ಬರದಂತೆ ಕೂಡ ತಡೆಯುತ್ತದೆ.. ಆದರೆ ಈ ರೀತಿ ಸೇವಿಸಬೇಕಷ್ಟೇ..

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಶುಂಠಿ ಖಾರ, ಒಗರು, ಬಾಯಿಗೆ ರುಚಿಯಿಲ್ಲ.. ಒಂಥರಾ ಕಹಿ ಎಂದು ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಒಂದು ತುಂಡು ಹಸಿ ಶುಂಠಿಯಿಂದ ನೂರಾರು ಪ್ರಯೋಜನಗಳಿವೆ.

  • Share this:

    ಹಸಿ ಶುಂಠಿಯು (Ginger) ನಮ್ಮೆಲ್ಲರ ಅಡುಗೆ ಮನೆ (Kitchen)ಯಲ್ಲಿ ಪ್ರಮುಖ ಸ್ಥಾನದಲ್ಲಿರುತ್ತದೆ. ಚಹಾ (Tea) ಹಾಗೂ ಅಡುಗೆಗೆ ಶುಂಠಿ ಬೇಕೇ ಬೇಕು. ಶುಂಠಿ ಚಹಾದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಹಸಿ ಶುಂಠಿಯ ಸೇವನೆಯು ಆರೋಗ್ಯಕ್ಕೆ (Health) ತುಂಬಾ ಪ್ರಯೋಜನಕಾರಿ (Benefits) ಎಂದು ಪರಿಗಣಿಸಲಾಗಿದೆ. ಏಕೆಂದರೆ ಹಸಿ ಶುಂಠಿಯಲ್ಲಿ ಅನೇಕ ಔಷಧೀಯ ಗುಣಗಳು ಇವೆ. ಇದು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ತಂದು ಕೊಡುತ್ತದೆ. ವಿಟಮಿನ್ ಎ, ವಿಟಮಿನ್ ಡಿ, ಜೀವಸತ್ವಗಳು, ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹಸಿ ಶುಂಠಿಯಲ್ಲಿ ಹೇರಳವಾಗಿ ಸಿಗುತ್ತವೆ. ಇದರಿಂದಾಗಿ ಅನೇಕ ರೋಗಗಳು ದೂರವಾಗುತ್ತವೆ. ಮತ್ತೊಂದೆಡೆ ಹಸಿ ಶುಂಠಿಯ ಸೇವನೆಯಿಂದ ಶೀತ ಮತ್ತು ಕೆಮ್ಮಿನಂತಹ ವೈರಲ್ ಸೋಂಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸಬಹುದು. ಹಸಿ ಶುಂಠಿಯಿಂದ ಆಗುವ ಒಟ್ಟಾರೆ ಪ್ರಯೋಜನಗಳ ಬಗ್ಗೆ ತಿಳಿಯೋಣ.


    ಹಸಿ ಶುಂಠಿಯಿಂದ ಆಗುವ ಪ್ರಯೋಜನಗಳು


    ಕ್ಯಾನ್ಸರ್ ತಡೆಗೆ ಸಹಕಾರಿ: ಶುಂಠಿ ಖಾರ, ಒಗರು, ಬಾಯಿಗೆ ರುಚಿಯಿಲ್ಲ. ಒಂಥರಾ ಕಹಿ ಎಂದು ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಒಂದು ತುಂಡು ಹಸಿ ಶುಂಠಿಯಲ್ಲಿ ನೂರಾರು ಪ್ರಯೋಜನಗಳಿವೆ. ಮನೆ ಮದ್ದಾಗಿ ಶುಂಠಿ ಹೆಸರುವಾಸಿಯಾಗಿದೆ. ಯಲ್ಲಿರುವ ಔಷಧೀಯ ಗುಣಗಳು ಕ್ಯಾನ್ಸರ್ ನಂತಹ ಹೆಮ್ಮಾರಿಯನ್ನು ಹೊಡೆದೋಡಿಸುವ ಶಕ್ತಿ ಹೊಂದಿದೆ. ಶುಂಠಿ ದೈಹಿಕ ಆರೋಗ್ಯ ಕಾಪಾಡುತ್ತದೆ. ಚರ್ಮ, ಕೂದಲಿನ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ವಾಕರಿಕೆ, ಹಸಿವು ಕಡಿಮೆಯಾಗುವುದು ಮತ್ತು ವಾಂತಿ ಬಂದಾಗ ಶುಂಠಿ ಸೇವನೆ ಪ್ರಯೋಜನಕಾರಿ. ಕ್ಯಾನ್ಸರ್ ಚಿಕಿತ್ಸೆ, ಉದರಶೂಲೆ, ಹೊಟ್ಟೆ ಉಬ್ಬರ, ವಾಯು, ಮಾರ್ನಿಂಗ್ ಸಿಕ್ ನೆಸ್ ನಿಂದ ಉಂಟಾಗುವ ವಾಕರಿಕೆಗೆ ಔಷಧಿಯಾಗಿ ಶುಂಠಿಯನ್ನು ಬಳಸುವುದು ರೂಢಿಯಲ್ಲಿದೆ.


    ಇದನ್ನೂ ಓದಿ: ನಿಮ್ಮ ಕಣ್ಣುಗಳಲ್ಲೇ ಅಡಗಿದೆ ನಿಮ್ಮ ಆರೋಗ್ಯ, ಈ ಲಕ್ಷಣಗಳು ಕೆಲ ಕಾಯಿಲೆಯ ಸಂಕೇತ!


    ಖಾದ್ಯಗಳ ತಯಾರಿಕೆಯಲ್ಲಿ ಶುಂಠಿ: ಅಡುಗೆ ಮನೆಯಲ್ಲಿ ಚಹಾ ತಯಾರಿಸುವಾಗ ಮತ್ತು ಕೆಲ ಖಾದ್ಯಗಳಿಗೆ ಶುಂಠಿಯನ್ನು ಬಳಸುವುದು ರೂಢಿಯಲ್ಲಿದೆ. ಚಟ್ನಿ, ಪಲ್ಯ, ಪುಲಾವ್, ಜಿಂಜರ್ ಬ್ರೆಡ್ ಹೀಗೆ ವಿವಿಧ ಖಾದ್ಯಗಳಲ್ಲಿ ಶುಂಠಿಯ ಬಳಕೆ ಇದೆ. ಕೆಲವರು ಒಣ ಶುಂಠಿಯನ್ನು ಪುಡಿ ಮಾಡಿ ಕೆಲವು ಖಾದ್ಯಗಳಿಗೆ ಬಳಸುತ್ತಾರೆ. ಈಗಲೂ ಹಳ್ಳಿ ಮನೆಗಳಲ್ಲಿ ಶೀತ ಮತ್ತು ಜ್ವರ ಬಂದರೆ ಶುಂಠಿ ಚಹಾ ಕುಡಿಯುವುದು ಮಾಮೂಲು. ಗಂಟಲು ಮತ್ತು ಮೂಗು ಕಟ್ಟಿಕೊಂಡಿದ್ದರೆ ತೊಡೆದುಹಾಕಲು ಶುಂಠಿ ಚಹಾ ಸಹಾಯ ಮಾಡುತ್ತದೆ.


    ಅಲರ್ಜಿಗೆ ಚಿಕಿತ್ಸಕವಾಗಿ ಶುಂಠಿ ಬಳಕೆ: ಶುಂಠಿಯಲ್ಲಿ ಆಂಟಿಹಿಸ್ಟಾಮೈನ್ ಗುಣಗಳು ಇವೆ. ಹೀಗಾಗಿ ಅಲರ್ಜಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಶೀತ ಮತ್ತು ಜ್ವರಕ್ಕೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಒಂದು ಟೀ ಚಮಚ ಶುಂಠಿ ರಸ ಮತ್ತು ಜೇನುತುಪ್ಪವು ಶೀತಕ್ಕೆ, ನಿರಂತರ ಕೆಮ್ಮು ಮತ್ತು ಗಂಟಲಿನ ನೋವು ನಿವಾರಣೆಗೆ ಪರಿಣಾಮಕಾರಿ ಔಷಧಿಯಾಗಿದೆ.


    ಅಸ್ತಮಾ ಗುಣಪಡಿಸಲು ಸಹಕಾರಿ: ತಾಜಾ ಶುಂಠಿ ರಸ ಮತ್ತು ಮೆಂತ್ಯದ ಮಿಶ್ರಣವು ಅಸ್ತಮಾವನ್ನು ಗುಣಪಡಿಸಲು ಸಹಾಯಕವಾಗಿದೆ. ಹೊಟ್ಟೆ ಜ್ವರ ಅಥವಾ ಫುಡ್ ಪಾಯಿಸನ್ ಗೆ ಚಿಕಿತ್ಸೆ ನೀಡಲು ಶುಂಠಿ ಸಹಕಾರಿ. ಶುಂಠಿಯು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.


    ಹೊಟ್ಟೆಗೆ ಪ್ರಯೋಜನಕಾರಿ: ಹಸಿ ಶುಂಠಿ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಯಾರಾದರೂ ಹೊಟ್ಟೆ ನೋವು ಅಥವಾ ಸೆಳೆತದಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರಿಗೆ ಶುಂಠಿ ಸೇವನೆ ಆರಾಮ ನೀಡುತ್ತದೆ.


    ಮೈಗ್ರೇನ್ ನೋವಿಗೆ ಪರಿಣಾಮಕಾರಿ: ಮೈಗ್ರೇನ್ ನೋವಿಗೆ ಹಸಿ ಶುಂಠಿ ಸೇವನೆ ತುಂಬಾ ಪ್ರಯೋಜನಕಾರಿ ಆಗಿದೆ. ಯಾರಿಗಾದರೂ ಮೈಗ್ರೇನ್ ಸಮಸ್ಯೆ ಇದ್ದರೆ, ಅವರು ಪ್ರತಿದಿನ ಹಸಿ ಶುಂಠಿಯನ್ನು ಸೇವಿಸಬೇಕು. ದಣಿವು ನಿವಾರಣೆಗೆ ಶುಂಠಿ ಸೇವನೆ ಪ್ರಯೋಜನಕಾರಿ ಆಗಿದೆ.


    ಇದನ್ನೂ ಓದಿ: ಒಣ ಚರ್ಮ ಕಿಡ್ನಿ ಸಮಸ್ಯೆಗೂ ಕಾರಣವಾಗಿರಬಹುದು ಎಚ್ಚರ!


    ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು: ಹಸಿ ಶುಂಠಿಯನ್ನು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶುಂಠಿಯ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಅತಿಯಾದ ತೂಕದ ಇಳಿಕೆಗೆ ಶುಂಠಿ ಸೇವನೆ ಸಹಕಾರಿ.


    ರಕ್ತದೊತ್ತಡ ನಿಯಂತ್ರಣ: ಹಸಿ ಶುಂಠಿಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿದ್ದವರು ಹಸಿ ಶುಂಠಿಯನ್ನು ಪ್ರತಿದಿನ ಸೇವಿಸಬೇಕು.

    Published by:renukadariyannavar
    First published: