• Home
 • »
 • News
 • »
 • lifestyle
 • »
 • Food with Water: ಊಟ ಮಾಡುವಾಗ ನೀರು ಕುಡಿಯಬೇಕಾ? ಕುಡಿಯಬಾರದಾ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ

Food with Water: ಊಟ ಮಾಡುವಾಗ ನೀರು ಕುಡಿಯಬೇಕಾ? ಕುಡಿಯಬಾರದಾ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀರನ್ನು ಕುಳಿತು ಕುಡಿಯಬೇಕು. ದಿನಕ್ಕೆ ಎಂಟು ಗ್ಲಾಸ್ ನೀರನ್ನು ಕಡ್ಡಾಯವಾಗಿ ಕುಡಿಯುವಂತೆ ತಜ್ಞರು ಸೂಚಿಸುತ್ತಾರೆ. ಹಾಗೆಯೇ ಆಹಾರ ತಿನ್ನುವ ಸಮಯದಲ್ಲಿ ನೀರನ್ನು ಕುಡಿಯುವುದು ಸರಿಯೇ? ಎಂಬ ಪ್ರಶ್ನೆ ಎದುರಾಗಿದೆ. ಅದಾಗ್ಯೂ ಮನೆಯಲ್ಲಿ ಯಾರಾದ್ರೂ ಹಿರಿಯರಿದ್ರೆ ಊಟ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬೇಡ ಅಂತಾ ಹೇಳುವುದನ್ನು ನೀವು ಕೇಳಿರಬಹುದು. ಇದು ಸರಿನಾ? ತಪ್ಪಾ?

ಮುಂದೆ ಓದಿ ...
 • Share this:

  ನೀರು ಕುಡಿಯುವುದು (Water Drinking) ಆರೋಗ್ಯಕ್ಕೆ (Health) ಮುಖ್ಯವಾದ ಭಾಗವಾಗಿದೆ. ನೀರಿಲ್ಲದೇ ಬದುಕಿಲ್ಲ. ಮಾನವನಿಗೆ ಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ನೀರು ಸಹ ಒಂದು. ಒಂದು ಹೊತ್ತಿನ ಆಹಾರವಿಲ್ಲದೇ (Food) ವ್ಯಕ್ತಿ ಇರಬಹುದು. ಆದ್ರೆ ನೀರು ಕುಡಿಯದೇ ಇರಲು ಸಾಧ್ಯವಿಲ್ಲ. ನೀರು ಕುಡಿಯುವ ವಿಚಾರದಲ್ಲಿಯೂ ಸಾಕಷ್ಟು ನಿಯಮಗಳನ್ನು (Rules) ಫಾಲೋ ಮಾಡ್ಬೇಕು ಎಂಬುದು ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೇ ಇರಬಹುದು. ಯಾಕಂದ್ರೆ ನೀರು ಕುಡಿಯುವ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನೀರು ಕುಡಿಯುವ ವಿಚಾರದಲ್ಲಿ ಅಸಡ್ಡೆ ಮಾಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.


  ಆಹಾರ ಸೇವನೆ ವೇಳೆ ನೀರು ಕುಡಿಯಬಹುದಾ?


  ಅಂದ ಹಾಗೇ ನೀರನ್ನು ಕುಳಿತು ಕುಡಿಯಬೇಕು. ದಿನಕ್ಕೆ ಎಂಟು ಗ್ಲಾಸ್ ನೀರನ್ನು ಕಡ್ಡಾಯವಾಗಿ ಕುಡಿಯುವಂತೆ ತಜ್ಞರು ಸೂಚಿಸುತ್ತಾರೆ. ಹಾಗೆಯೇ ಆಹಾರ ತಿನ್ನುವ ಸಮಯದಲ್ಲಿ ನೀರನ್ನು ಕುಡಿಯುವುದು ಸರಿಯೇ? ಎಂಬ ಪ್ರಶ್ನೆ ಎದುರಾಗಿದೆ. ಅದಾಗ್ಯೂ ಮನೆಯಲ್ಲಿ ಯಾರಾದ್ರೂ ಹಿರಿಯರಿದ್ರೆ ಊಟ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬೇಡ ಅಂತಾ ಹೇಳುವುದನ್ನು ನೀವು ಕೇಳಿರಬಹುದು.


  ಇಂದು ನಾವು ಆಹಾರದ ಜೊತೆಗೆ ನೀರು ಕುಡಿಯಬಾರದು ಎಂಬ ಸಾಂಪ್ರದಾಯಿಕ ನಂಬಿಕೆಯ ಕುರಿತು ತಜ್ಞರು ಏನ್ ಹೇಳ್ತಾರೆ ಅನ್ನೋದನ್ನ ನೋಡೋಣ. ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಆಹಾರ ಸೇವಿಸುವ ಮೊದಲು ನೀರು ಕುಡಿಯಬೇಕು. ಇಲ್ಲವೇ ಆಹಾರ ಸೇವಿಸಿದ ಅರ್ಧ ಗಂಟೆ ಬಿಟ್ಟು ನಂತರ ನೀರು ಕುಡಿಯಬೇಕು ಎಂದು ಸಲಹೆ ಕೊಡ್ತಾರೆ.
  ಊಟ ಮಾಡುತ್ತಾ ನೀರು ಕುಡಿದರೆ ತಿಂದ ಆಹಾರ ಜೀರ್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ ಈ ವಿಷಯ ಎಷ್ಟು ನಿಜ ಎಂಬ ಬಗ್ಗೆ ಡಯೆಟಿಷಿಯನ್ ಶೀನಂ ನಾರಂಗ್, ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ ಒಂದನ್ನು ಶೇರ್ ಮಾಡಿದ್ದಾರೆ.


  ಊಟ ಮಾಡುತ್ತಾ ನೀರು ಕುಡಿಯುವುದು ಉತ್ತಮ


  ಆಹಾರ ತಜ್ಞ ಶೀನಂ ನಾರಂಗ್ ಅವರು ಹೇಳಿದ ಪ್ರಕಾರ, ಯಾರೆಲ್ಲಾ ಊಟ ಮಾಡುತ್ತಾ ನೀರು ಕುಡಿಯುತ್ತಾರೋ ಅದು ಸಂಪೂರ್ಣವಾಗಿ ಒಳ್ಳೆಯದು ಎಂದು ಹೇಳಿದ್ದಾರೆ.


  ಊಟ ಮಾಡುತ್ತಾ ನೀರು ಕುಡಿದರೆ ಜೀರ್ಣಕಾರಿ ಸಮಸ್ಯೆ, ಹೊಟ್ಟೆಯುಬ್ಬರ, ಆಸಿಡ್ ರಿಫ್ಲಕ್ಸ್ ಅಥವಾ ಇತರೆ ಋಣಾತ್ಮಕ ಆರೋಗ್ಯ ಪರಿಣಾಮ ಉಂಟಾಗುತ್ತದೆ ಎಂದು ಹೇಳುವ ಮಾತಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ.


  ಹಾಗಾಗಿ ನಾರಂಗ್ ಅವರು, ಊಟ ಮಾಡುತ್ತಾ ನೀರು ಕುಡಿದರೆ ವಾಸ್ತವದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆಗೆ ಸಹಕಾರಿ ಎಂದಿದ್ದಾರೆ. ಊಟ ಮಾಡುತ್ತಾ ನೀರು ಕುಡಿಯುವುದು ಉತ್ತಮ ಎಂದು ಅನೇಕ ಅಧ್ಯಯನಗಳು ಮತ್ತು ತಜ್ಞರು ಹೇಳಿದ್ದಾರೆ ಎಂದಿದ್ದಾರೆ.


  ಶೀನಂ ನಾರಂಗ್ ಅವರು ಆಹಾರದ ಜೀರ್ಣಕ್ರಿಯೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಿದರು ಮತ್ತು ನೀರು ನಿಜವಾಗಿಯೂ ಆಹಾರದ ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ವಿವರಿಸಿದರು.


  ಸಾಂದರ್ಭಿಕ ಚಿತ್ರ


  ಆಹಾರ ತಜ್ಞ ಶೀನಂ ನಾರಂಗ್ ಹೇಳೋದೇನು?


  ಊಟ ಮಾಡುತ್ತಾ ನೀರು ಕುಡಿದರೆ ಅದು ನಿಮ್ಮ ಜೀರ್ಣಕ್ರಿಯೆಗೆ ಹಾನಿ ಮಾಡುವುದಿಲ್ಲ. ಆರೋಗ್ಯಕ್ಕೆ ಊಟ ಮಾಡುತ್ತಾ ನೀರು ಕುಡಿಯುವುದು ಉತ್ತಮ ಎಂದಿದ್ದಾರೆ.


  ಊಟದ ಮಧ್ಯದಲ್ಲಿ ನೀರು, ವೈನ್ ಅಥವಾ ದ್ರವ ಪದಾರ್ಥ, ಜ್ಯೂಸ್ ಕುಡಿಯುವುದು ಜೀರ್ಣಕ್ರಿಯೆಗೆ ಹಾನಿ ಮಾಡಲ್ಲ. ದ್ರವ ಪದಾರ್ಥಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಎಂದಿದ್ದಾರೆ.


  ಊಟದ ಜೊತೆ ನೀರು ಕುಡಿದರೆ ಅದು ಹಸಿವನ್ನು ನಿಯಂತ್ರಿಸುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದಿದ್ದಾರೆ.


  ಇದನ್ನೂ ಓದಿ: ಯೀಸ್ಟ್ ಸೋಂಕು ಹೇಗೆ ಉಂಟಾಗುತ್ತದೆ? ತಡೆಯಲು ಏನು ಮಾಡ್ಬೇಕು?


  ಜೊತೆಗೆ ಮೇಯೊ ಕ್ಲಿನಿಕ್ ಸಹ ಊಟ ಮಾಡುವಾಗ ನೀರು ಕುಡಿಯುವುದು ಯಾವುದೇ ಆರೋಗ್ಯ ತೊಂದರೆ ಉಂಟು ಮಾಡಲ್ಲ. ಜೀರ್ಣಕ್ರಿಯೆಗೆ ಇದು ಅಡ್ಡಿ ಮಾಡಲ್ಲ ಎಂದಿದೆ. ಊಟ ಮಾಡುತ್ತಾ ನೀರು ಕುಡಿದ್ರೆ ಅದು ಆಹಾರ ಜೀರ್ಣವಾಗಲು ಸಹಕಾರಿ ಎಂದು ತಿಳಿಸಿದೆ.

  Published by:renukadariyannavar
  First published: