Curd Eating Benefits: ಮೊಸರು ಸೇವಿಸಲು ಯಾವ ಸಮಯ ಸೂಕ್ತ? ರಾತ್ರಿ ವೇಳೆ ಸೇವಿಸಬಹುದೇ?

ರಾತ್ರಿ ಸಮಯದಲ್ಲಿ ಮೊಸರು ಸೇವಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಇನ್ನು ಬಹಳಷ್ಟು ತಜ್ಞರು ಕೂಡ ಮೊಸರು ತಿನ್ನದಂತೆ ಸಲಹೆ ನೀಡುತ್ತಾರೆ

 ಮೊಸರು

ಮೊಸರು

  • Share this:

ಬೇಸಿಗೆಯಲ್ಲಿ ಮನೆಗಳಲ್ಲಿ ಅತಿಹೆಚ್ಚಾಗಿ ಬಳಸುವ ಪದಾರ್ಥವೆಂದರೆ ಮೊಸರು ಮತ್ತು ಮಜ್ಜಿಗೆ. ಬೇರೆ ದಿನಗಳಲ್ಲಿಯೂ ಸಹ ಇದಕ್ಕೆ ಪ್ರಾಶಸ್ತ್ಯ ಇದ್ದೇ ಇರುತ್ತದೆ. ಗಟ್ಟಿ ಗಟ್ಟಿ ಮೊಸರನ್ನು ಇಷ್ಟಪಡದೇ ಇರುವವರು ಯಾರು ಹೇಳಿ? ಸಾಮಾನ್ಯವಾಗಿ ಎಲ್ಲರೂ ಮೊಸರನ್ನು ಇಷ್ಟಪಡುತ್ತಾರೆ. ಇನ್ನು ಕೆಲವರು ಯಾವುದೇ ತಿಂಡಿ, ಊಟವಿರಲಿ ಮೊಸರು  ಪಕ್ಕದಲ್ಲಿಯೇ ಇರಬೇಕು ಎನ್ನುವಷ್ಟು ಸೇವಿಸುತ್ತಾರೆ. ಆದರೆ ಎಲ್ಲ ಸಮಯವೂ ಮೊಸರು ಸೇವನೆಗೆ ಒಳ್ಳೆಯದಾ? ಯಾವ ಸಮಯದಲ್ಲಿ ಮೊಸರು ಸೇವಿಸಬೇಕು? ಮೊಸರನ್ನು ರಾತ್ರಿ ಸೇವಿಸಬಹುದಾ? (curd in Night) ಹೀಗೆ ಹಲವಾರು ಪ್ರಶ್ನೆಗಳು ಉದ್ಭವವಾಗುತ್ತದೆ.


ಮೊಸರಿನಿಂದ ಆಗುವ ಪ್ರಯೋಜನಗಳು
ಮೊಸರು ಭಾರತೀಯ ಆಹಾರದಲ್ಲಿ ಅತ್ಯಗತ್ಯ ಭಾಗವಾಗಿದೆ.  ಏಕೆಂದರೆ ಮೊಸರು ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿರುವ ಜೊತೆಗೆ ಉತ್ತಮ ಬ್ಯಾಕ್ಟೀರಿಯಾದ ಶಕ್ತಿಕೇಂದ್ರವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ಇದು ಖಂಡಿತವಾಗಿಯೂ ನಮ್ಮ ಆಹಾರಕ್ಕೆ ಒಂದು ಪರಿಪೂರ್ಣ ಜೊತೆಗಾರ್ತಿ ಎಂದರೆ ತಪ್ಪಾಗಲಾರದು. ತೂಕ ಇಳಿಕೆ, ಚರ್ಮದಲ್ಲಿ ಕಾಂತಿ ಹೆಚ್ಚಳ, ಹೃದಯ ಆರೋಗ್ಯ ಹೀಗೆ ದೈಹಿಕವಾಗಿ ಜೊತೆಗೆ ಸೌಂದರ್ಯವರ್ಧಕವಾಗಿಯೂ ಸಾಕಷ್ಟು ಪ್ರಯೋಜನಗಳನ್ನು ಇದು ಹೊಂದಿದೆ.


ರಾತ್ರಿ ಮೊಸರು ಸೇವಿಸುತ್ತೀರಾ?
ಕೆಲವರಿಗೆ ಮೂರು ಹೊತ್ತು ಮೊಸರು ಸೇವಿಸುವ ಅಭ್ಯಾಸ ಇರುತ್ತದೆ. ರಾತ್ರಿ ಮೊಸರು ತಿನ್ನದೇ ನಿದ್ರೆ ಬರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವರು ಅದಕ್ಕೆ ಒಗ್ಗಿಕೊಂಡಿರುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಮೊಸರು ಸೇವಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಇನ್ನು ಬಹಳಷ್ಟು ತಜ್ಞರು ಕೂಡ ಮೊಸರು ತಿನ್ನದಂತೆ ಸಲಹೆ ನೀಡುತ್ತಾರೆ.


ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದದ ಪ್ರಕಾರ ರಾತ್ರಿ ಹೊತ್ತು ಮೊಸರನ್ನು ಸೇವಿಸುವುದು ಒಳ್ಳೆಯದಲ್ಲ ಏಕೆಂದರೆ ಇದು ಲೋಳೆಯ ರಚನೆಗೆ ಕಾರಣವಾಗುತ್ತದೆ. ಮೊಸರು ಸಿಹಿ ಮತ್ತು ಹುಳಿ ಗುಣಗಳನ್ನು ಹೊಂದಿರುವುದರಿಂದ, ರಾತ್ರಿಯಲ್ಲಿ ಅದು ಮೂಗಿನ ಹೊಳ್ಳೆಯಲ್ಲಿ ಲೋಳೆಯ ಬೆಳವಣಿಗೆಗೆ ಕಾರಣವಾಗಬಹುದು ಎಂದು ವಿವರಿಸುತ್ತದೆ. ಏಕೆಂದರೆ ಆಯುರ್ವೇದ ಔಷಧದ ತತ್ವ ಶಾಸ್ತ್ರದ ಪ್ರಕಾರ ಕಫ ದೋಷವು ರಾತ್ರಿಯಲ್ಲಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಮೊಸರು ಸೇವನೆಯಿಂದ ದೂರ ಉಳಿಯುವುದು ಉತ್ತಮ. ಮತ್ತೆ ಅಸ್ತಮಾ ರೋಗದಿಂದ ಹೋರಾಡುತ್ತಿರುವವರು ಮತ್ತು ಉಸಿರುಗಟ್ಟುವಂತಹ ಅನುಭವಗಳು ಆಗುತ್ತಿದ್ದರೆ ರಾತ್ರಿ ವೇಳೆ ಮೊಸರು ತ್ಯಜಿಸುವುದು ಒಳ್ಳೆಯದು.


ಇದನ್ನು ಓದಿ: ಬ್ಯಾಟಿಂಗ್​ ವಿಚಾರದ ಟೀಕೆ ನಡುವೆಯೂ ಹೊಸ ದಾಖಲೆ ನಿರ್ಮಿಸಿದ ವಿರಾಟ್​ ಕೊಹ್ಲಿ

ಪರ್ಯಾಯಗಳು:
ರಾತ್ರಿ ಮೊಸರು ಸೇವಿಸುವುದನ್ನು ಬಿಡಲು ಸಾಧ್ಯವಾಗುವುದೇ ಇಲ್ಲ ಎನ್ನುವವರು ಬದಲಿಗೆ ಮಜ್ಜಿಗೆ ಕುಡಿಯಬಹುದು. ಇದು ಮೊಸರಿಗೆ ಸೂಕ್ತವಾದ ಬದಲಿಯಾಗಿದೆ. ನೀವು ಸೇವಿಸುವ ಆಹಾರದಲ್ಲಿ ಮೊಸರು ಬೇಕೇ ಬೇಕು ಎನ್ನುವವರಿಗೆ ಇನ್ನೊಂದು ವಿಧಾನವಿದೆ. ಅಂದರೆ ರೈಟವನ್ನು ತಯಾರಿಸುವುದು, ಇದು ಸಾಮಾನ್ಯ ಭಾರತೀಯ ಭಕ್ಷ್ಯವಾಗಿದೆ. ಇನ್ನು ಮೊಸರಿಗೆ ಕೊಂಚ ನೀರು ಸೇರಿಸಿ ಈರುಳ್ಳಿ, ಸೌತೆಕಾಯಿ, ಟೊಮೆಟೊ ಮತ್ತು ಕೆಲವು ಗಿಡಮೂಲಿಕೆಗಳನ್ನು ಸೇರಿಸಿ ತಯಾರಿಸಬಹುದು. ಈ ಎರಡಕ್ಕೂ ಒಂದು ಚಿಟಿಕೆ ಕರಿ ಮೆಣಸನ್ನು ಸೇರಿಸಲು ಮರೆಯದಿರಿ. ಏಕೆಂದರೆ ಇದು ಮೊಸರಿನ ತಂಪಾಗಿಸುವ ಗುಣಗಳನ್ನು ಸಮತೋಲನಗೊಳಿಸುವ ಶಾಖವನ್ನು ಉತ್ಪಾದಿಸುತ್ತದೆ.


ನೀವು ಹಗಲಿನಲ್ಲಿ ಮೊಸರು ಸೇವಿಸುತ್ತಿದ್ದರೆ, ಅದನ್ನು ಸಕ್ಕರೆ ಇಲ್ಲದೆ ಸೇವಿಸಿ. ಆದರೆ ನೀವು ರಾತ್ರಿಯಲ್ಲಿ ತಿನ್ನುತ್ತಿದ್ದರೆ, ಸ್ವಲ್ಪ ಸಕ್ಕರೆ ಸೇರಿಸಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶಾಂತ ಗೊಳಿಸುತ್ತದೆ. ಆದರೆ ನೀವು ಶೀತದಿಂದ ಬಳಲುತ್ತಿದ್ದರೆ ರಾತ್ರಿ ವೇಳೆ ಮೊಸರು ಮತ್ತು ಮಜ್ಜಿಗೆಯಿಂದ ದೂರವಿರುವುದೇ ಒಳ್ಳೆಯದು.


First published: