Benefits Curd: ಮೊಸರು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಯ ಅಂದ ಕಾಪಾಡಲು ಸಹಕಾರಿ

ಮೊಸರು ಈ ಮೊದಲೇ ಅರ್ಧಕ್ಕಿಂತ ಹೆಚ್ಚು ಜೀರ್ಣವಾಗಿರುವುದರಿಂದ ಜಠರದಲ್ಲಿಯೇ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ. ಇದರಿಂದ ಜಠರ ರಸ ಮತ್ತು ಕರುಳಿನ ರಸಗಳು ಇತರ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮರ್ಥವಾಗುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತೀಯರ ಊಟವು ಮೊಸರಿಲ್ಲದೆ ಅಂತ್ಯವಾಗುವುದು ಬಹಳ ಕಡಿಮೆ. ಹೌದು ಮೊಸರು (Curd) ತಿನ್ನುವುದರಿಂದ ಜೀರ್ಣಾಂಗ (Digestion) ವ್ಯವಸ್ಥೆ ಆರೋಗ್ಯಕರವಾಗಿ ಇರುವುದು. ಅದೇ ರೀತಿ ಮೊಸರು ಅದರ ಹೊಟ್ಟೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಮೊಸರಿನಲ್ಲಿ ಪ್ರೋಟೀನ್ ಕ್ಯಾಲ್ಸಿಯಂ (Calcium) ರೈಬೋಫ್ಲೇವಿನ್, ವಿಟಮಿನ್ ಬಿ6 ಮತ್ತು ವಿಟಮಿನ್ ಬಿ 12 (Vitamin B 12) ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಮೊಸರು ಈ ಮೊದಲೇ ಅರ್ಧಕ್ಕಿಂತ ಹೆಚ್ಚು ಜೀರ್ಣವಾಗಿರುವುದರಿಂದ ಜಠರದಲ್ಲಿಯೇ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ. ಇದರಿಂದ ಜಠರ ರಸ ಮತ್ತು ಕರುಳಿನ ರಸಗಳು ಇತರ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮರ್ಥವಾಗುತ್ತವೆ.

  ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ

  ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ ಮೊಸರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಹೇಗೋ ಸೇರಿಕೊಂಡ ಅತ್ಯಂತ ಸೂಕ್ಷ್ಮ ಕ್ರಿಮಿಗಳನ್ನು ಬಗ್ಗು ಬಡಿಯಲು ಸಮರ್ಥವಾಗಿವೆ. ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು.

  ಇದನ್ನೂ ಓದಿ: Cardamom Benefits: ಏಲಕ್ಕಿಯಲ್ಲಿ ಅಡಕವಾಗಿರುವ ಅದ್ಭುತ ಔಷಧೀಯ ಗುಣಗಳು ಇವುಗಳೇ ನೋಡಿ!

  ಮೂಳೆಗಳನ್ನು ಸದೃಢಗೊಳಿಸಲು ಸಹಕಾರಿ

  ಮೊಸರಿನಲ್ಲಿ ಕ್ಯಾಲ್ಶಿಯಂ ಮತ್ತು ರಂಜಕಗಳು ಅವಶ್ಯಕವಾಗಿ ಇದೆ. ನಮ್ಮ ಮೂಳೆಗಳಿಗೆ ಮತ್ತು ಹಲ್ಲುಗಳಿಗೆ ಇವೆರಡರ ಅವಶ್ಯಕತೆ ಅಧಿಕವಿದೆ. ಆದ್ದರಿಂದ ಮೊಸರು ಮೂಳೆ ಮತ್ತು ಹಲ್ಲುಗಳನ್ನು ಸದೃಢವಾಗಿರಲು ಸಹಕರಿಸುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಲೆಗಳು ತೊಳಗುವ ಮತ್ತು ಗಾಳಿ ಗುಳ್ಳೆಗಳಿಂದ ತುಂಬಿರುವ ತೊಂದರೆ ಎದುರಿಸುತ್ತಿದ್ದಾರೆ ಮೊಸರಿನ ಸೇವನೆಯು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

  ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

  ಹೌದು ಮೊಸರು ಕೇವಲ ಆಹಾರವಾಗಿ ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಮೊಸರಿನೊಂದಿಗೆ ಲಿಂಬೆ ಹಣ್ಣಿನ ರಸವನ್ನು ಒಂದೇ ಪ್ರಮಾಣದಲ್ಲಿ ಸೇರಿಸಿ ತೆಳುವಾಗಿ ಚರ್ಮದ ಮೇಲೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದರೆ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಉತ್ತಮ ಪರಿಣಾಮಕ್ಕಾಗಿ ಇದನ್ನು ವಾರಕ್ಕೆರಡು ಬಾರಿ ಮಾಡಿದರೆ ಉತ್ತಮ.

  ಕೂದಲ ಆರೈಕೆ ಯುವಜನರ ಪಾತ್ರ ಮಹತ್ವದ್ದು

  ಮೊಸರು ನೈಸರ್ಗಿಕವಾಗಿ ಕೂದಲಿನ ಪೋಷಣೆ ಮಾಡಲು ಸಹಕಾರಿ. ಮೊಸರನ್ನು ಕೂದಲಿನ ಬುಡಕ್ಕೆ ಮಸಾಜ್ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ. ಹುಳಿ ಮೊಸರಿಗೆ ಲಿಂಬೆರಸ, ಮುಲ್ತಾನಿ ಮಿಟ್ಟಿ ಸೇರಿಸಿ ತಲೆಗೆ ಲೇಪಿಸಿ, 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಹೊಟ್ಟು ನಿವಾರಣೆಯಾಗುವುದರೊಂದಿಗೆ ಕೂದಲು ಉದುರುವುದೂ ನಿಲ್ಲುತ್ತದೆ. ಮೆಹಂದಿ ಪುಡಿಗೆ ಮೊಸರು ಸೇರಿಸಿ, ತಲೆಗೆ ಹಚ್ಚಿದರೆ, ಕೂದಲು ಉದುರುವುದು ನಿವಾರಣೆಯಾಗುತ್ತದೆ. ಮೊಸರನ್ನು ಬೆರಳ ತುದಿಗಳಲ್ಲಿ ಅದ್ದಿ ತಲೆಹೊಟ್ಟಿರುವ ಕಡೆ ನಯವಾಗಿ ಮಸಾಜ್ ಮಾಡುವುದರಿಂದ ಕ್ರಮೇಣವಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ.

  ಇದನ್ನೂ ಓದಿ: Health Tips: ರಾಗಿ ಯಾಕೆ ಬೆಸ್ಟ್ ಗೊತ್ತೇ? ವಿಟಮಿನ್​ಯುಕ್ತ ಆರೋಗ್ಯಕರ ಆಹಾರವಿದು

  ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ

  ನೀವು ಮಲಬದ್ಧತೆ ಅಥವಾ ಇತರ ಯಾವುದೇ ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಮೊಸರನ್ನು ಸೇವಿಸಬೇಕು. ನಿಮ್ಮ ಜೀರ್ಣಕಾರಿ ಸಮಸ್ಯೆಗಳನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ವು ಮೊಸರನ್ನು ಅನ್ನದೊಂದಿಗೆ ಬೆರೆಸಿ ತಿನ್ನಬಹುದು. ಇದು ಹೊಟ್ಟೆಯನ್ನು ಆರೋಗ್ಯವಾಗಿರಿಸುತ್ತದೆ, ಅತಿಸಾರದ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

  ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಮೊಸರು ಸಹಾಯಮಾಡುತ್ತದೆ

  ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಮೊಸರು ಸಹಾಯಮಾಡುತ್ತದೆ. ಇದು ರಕ್ತದೊತ್ತಡಕ್ಕೆ ಉತ್ತಮವಾದ ಮೆಗ್ನೀಷಿಯಂ ಹೊಂದಿರುವುರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ. ಇದರಲ್ಲಿರುವ ಪ್ರೋಟೀನ್‌ಗಳು, ಪೊಟ್ಯಾಸಿಯಮ್‌ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕರವಾದ ಹೃದಯವನ್ನು ಉತ್ತೇಜಿಸುತ್ತದೆ.
  Published by:Swathi Nayak
  First published: