High Blood Pressure: ಪ್ರತಿದಿನ ಮೊಸರು ತಿಂದ್ರೆ ಬಿಪಿ ಸಮಸ್ಯೆ ಕಡಿಮೆಯಾಗುತ್ತಂತೆ

Curd For High BP: ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮೈನೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ಈ ಅಧ್ಯಯನವೊಂದನ್ನ ನಡೆಸಿದ್ದಾರೆ. ಅದರಲ್ಲಿ ರಕ್ತದೊತ್ತಡ ಮತ್ತು ಹೃದಯದ ಅಪಾಯದ ಅಂಶಗಳ ಮೇಲೆ ಮೊಸರು ಸೇವನೆಯ ಪರಿಣಾಮವನ್ನು ಅವರು ಸಂಶೋಧನೆ ನಡೆಸಿದ್ದಾರೆ,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಒತ್ತಡದ ಜೀವನಶೈಲಿಯಲ್ಲಿ(Lifestyle) ಅಧಿಕ ರಕ್ತದೊತ್ತಡವು(Blood Pressure) ಸಾಮಾನ್ಯ ಸಮಸ್ಯೆಯಾಗಿದೆ. ನಾವು ಭಾರತದ(India) ಬಗ್ಗೆ ಮಾತನಾಡಿದರೆ, 2020 ರಲ್ಲಿ, ಸುಮಾರು 15% ಜನರು ಹೈ ಬಿಪಿ ಹೊಂದಿರುವುದು ಸಾಬೀತಾಗಿದೆ. ವರದಿಯೊಂದರ ಪ್ರಕಾರ ಕಳೆದ 4 ವರ್ಷಗಳಲ್ಲಿ ಅಧಿಕ ಬಿಪಿ(BP) ಇರುವ ರೋಗಿಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಈ ಮಧ್ಯೆ, ಸುಮಾರು 35 ಪ್ರತಿಶತದಷ್ಟು ಜನರು ತಮ್ಮ ಕುಟುಂಬಗಳಲ್ಲಿ ಸಹ ಹೆಚ್ಚಿನ ಜನರು ಈ ಬಿಪಿ ಸಮಸ್ಯೆ ಹೆಚ್ಚಿದೆ ಎಂದು ಹೇಳಿದ್ದಾರಂತೆ. ಇದೀಗ ಹೊಸ ಅಧ್ಯಯನವೊಂದು(Study) ಪ್ರತಿ ದಿನ ಮೊಸರನ್ನು ಆಹಾರದಲ್ಲಿ ಸೇರಿಸಿಕೊಂಡರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದು ಹೇಳಿದೆ. 

ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮೈನೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ಈ ಅಧ್ಯಯನವೊಂದನ್ನ ನಡೆಸಿದ್ದಾರೆ. ಅದರಲ್ಲಿ ರಕ್ತದೊತ್ತಡ ಮತ್ತು ಹೃದಯದ ಅಪಾಯದ ಅಂಶಗಳ ಮೇಲೆ ಮೊಸರು ಸೇವನೆಯ ಪರಿಣಾಮವನ್ನು ಅವರು ಸಂಶೋಧನೆ ನಡೆಸಿದ್ದಾರೆ, ಹೆಚ್ಚಿನ ಬಿಪಿ ಹೊಂದಿರುವ ಜನರಲ್ಲಿ ಮೊಸರಿನ ಸೇವನೆಯು ಬಿಪಿಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಅಧ್ಯಯನದ ಫಲಿತಾಂಶಗಳನ್ನು ಇಂಟರ್‌ನ್ಯಾಶನಲ್ ಡೈರಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಸಂಶೋಧಕರ ಪ್ರಕಾರ, ವಿಶ್ವಾದ್ಯಂತ ಒಂದು ಶತಕೋಟಿಗಿಂತಲೂ ಹೆಚ್ಚು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ, ಇದು ಹೃದಯ ಸಂಬಂಧಿ ಸಮಸ್ಯೆಗಳಾದ CVD (ಹೃದಯರಕ್ತನಾಳದ ಕಾಯಿಲೆ), ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಅಪಾಯವನ್ನುಂಟುಮಾಡುತ್ತದೆ. ವಿಶ್ವಾದ್ಯಂತ ಸಾವಿಗೆ CVD ಪ್ರಮುಖ ಕಾರಣವಾಗಿದೆ. ಈ ಕಾರಣದಿಂದಾಗಿ, ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರತಿ 36 ಸೆಕೆಂಡಿಗೆ ಒಬ್ಬರು CVD ಯಿಂದ ಸಾಯುತ್ತಿದ್ದಾರೆ.

ಇದನ್ನೂ ಓದಿ: ಇವುಗಳನ್ನು ಬಳಸಿದ್ರೆ ಚಳಿಗಾಲದಲ್ಲಿ ಶೀತ, ಜ್ವರ ಬರಲ್ವಂತೆ

ತಜ್ಞರು ಏನು ಹೇಳುತ್ತಾರೆ?

"ಈ ಅಧ್ಯಯನವು ಹೆಚ್ಚಿನ ಬಿಪಿ ಹೊಂದಿರುವ ಜನರಲ್ಲಿ ಬಿಪಿಯನ್ನು ನಿಯಂತ್ರಿಸಲು ಮೊಸರು ಸಹಾಯಕವಾಗಬಹುದು ಎಂಬುದಕ್ಕೆ ಹೊಸ ಪುರಾವೆಗಳನ್ನು ನೀಡಿದೆ. ಅಧಿಕ ರಕ್ತದೊತ್ತಡವು ಹೃದಯರಕ್ತನಾಳದ ಕಾಯಿಲೆಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ, ಆದ್ದರಿಂದ ಅದನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ನಾವು ಮಾರ್ಗಗಳನ್ನು ಕಂಡುಹಿಡಿಯುವುದು ಮುಖ್ಯವಾಗಿದೆ ಎನ್ನುತ್ತಾರೆ ತಜ್ಞರು.

ಡೈರಿ ಆಹಾರ, ವಿಶೇಷವಾಗಿ ಮೊಸರು, ಬಿಪಿಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಡೈರಿ ಆಹಾರ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಸೂಕ್ಷ್ಮ ಪೋಷಕಾಂಶಗಳು ಇದ್ದು, ಇದು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊಸರು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ಕೂಡ ಇದ್ದು, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಅಧ್ಯಯನವನ್ನು ಹೇಗೆ ಮಾಡಲಾಯಿತು?

ಇದನ್ನೂ ಓದಿ: ಮೂತ್ರ ವಿಸರ್ಜನೆ ಮಾಡುವಾಗ ನೋವಿದ್ರೆ ಈ ಸಮಸ್ಯೆಗಳಿರಬಹುದು ಎಚ್ಚರ

ಸಂಶೋಧಕರು 915 ಜನರನ್ನು ಅಧ್ಯಯನದಲ್ಲಿ ಸೇರಿಸಿದ್ದಾರೆ. ನಿಯಮಿತವಾಗಿ ಮೊಸರು ಸೇವಿಸುವ ಜನರು ಸೇವಿಸದವರಿಗಿಂತ ಸುಮಾರು 7 ಪಾಯಿಂಟ್ ಕಡಿಮೆ ರಕ್ತದೊತ್ತಡವನ್ನು ಹೊಂದಿದ್ದಾರೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ.
Published by:Sandhya M
First published: