ನೀವೂ ಪ್ಲಾಸ್ಟಿಕ್ ಕಂಟೈನರ್​ನಲ್ಲಿ ಆಹಾರ ಸೇವಿಸ್ತೀರಾ..? ಹಾಗಿದ್ದರೆ ಹುಷಾರ್..!

news18
Updated:July 9, 2018, 4:16 PM IST
ನೀವೂ ಪ್ಲಾಸ್ಟಿಕ್ ಕಂಟೈನರ್​ನಲ್ಲಿ ಆಹಾರ ಸೇವಿಸ್ತೀರಾ..? ಹಾಗಿದ್ದರೆ ಹುಷಾರ್..!
news18
Updated: July 9, 2018, 4:16 PM IST
-ನ್ಯೂಸ್ 18 ಕನ್ನಡ

ಪ್ಲಾಸ್ಟಿಕ್ ಕಂಟೈನರ್​ನಲ್ಲಿ ಪ್ಯಾಕ್​ ಮಾಡಿದ ಆಹಾರವನ್ನು ಸೇವಿಸುವ ಅಭ್ಯಾಸವಿದೆಯಾ..? ಹಾಗಿದ್ದರೆ, ಇನ್ನುಮುಂದೆ  ನೀವು ಎಚ್ಚರದಿಂದಿರಬೇಕು.  ಪ್ಲಾಸ್ಟಿಕ್ ಕಂಟೈನರ್​ನ ಆಹಾರದಿಂದ  ಕರುಳಿನ ಕಾಯಿಲೆ ಬರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಈ ರೀತಿಯ ಪ್ಯಾಕ್ಡ್​ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಾಂಗಗಳಲ್ಲಿ ಉರಿಯೂತ ಉಂಟಾಗಿ ಕರುಳಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆಹಾರವನ್ನು ಶೇಖರಿಸಲ್ಪಡುವ ಕಂಟೈನರ್​ಗಳಲ್ಲಿ ಬಿಸ್ಫೆನಾಲ್ ಎ (BPA) ಎಂಬ ರಾಸಾಯನಿಕ ವಸ್ತುಗಳನ್ನು ಬಳಸಲ್ಪಡುತ್ತಿದ್ದು, ಇದು ಆರೋಗ್ಯದ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ. ಇದರಿಂದ ಉಂಟಾಗುವ ಕಾಯಿಲೆಯಿಂದ ಮರಣ ಕೂಡ ಸಂಭವಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಬಿಸ್ಫೆನಾಲ್ ಎ ರಾಸಾಯನಿಕ ಪದಾರ್ಥ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದ ಮೊದಲ ಅಧ್ಯಯನ ಇದಾಗಿದೆ ಎಂದು ಅಮೆರಿಕದ ಟೆಕ್ಸಾಸ್​ನ ಎ & ಎಂ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಸಹ-ಲೇಖಕ ಜೆನ್ನಿಫರ್ ಡೆಲುಕಾ ಹೇಳಿದ್ದಾರೆ.

ಈ ಹಿಂದಿನ ಸಂಶೋಧನೆಯಲ್ಲಿ BPA ಹೊಂದಿರುವ ಕಂಟೈನರ್​ ಆಹಾರಗಳಿಂದ ಮಕ್ಕಳ ನಡವಳಿಕೆ, ಮೆದುಳಿಗೆ ಮತ್ತು ಪ್ರಾಸ್ಟೇಟ್ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತಿರುವುದು ಕಂಡು ಹಿಡಿಯಲಾಗಿತ್ತು.

ಸಾಮಾನ್ಯವಾಗಿ ಎಲ್ಲರೂ ಬಿಸ್ಫೆನಾಲ್ ಎ ಬಳಸಿದ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್ ಕಂಟೈನರ್​ಗಳ ಬಳಸುತ್ತಿರುವುದರಿಂದ, ಇದರಿಂದ ಉಂಟಾಗುವ ಉರಿಯೂತದ ಕರುಳಿನ ಕಾಯಿಲೆ ಬಗ್ಗೆಗಿನ ಅಧ್ಯಯನ ಅನಿವಾರ್ಯವಾಗಿತ್ತು. ಪ್ರಾಣಿಗಳ ಮೇಲೆ ನಡೆಸಿರುವ ಈ ಪರೀಕ್ಷೆಯಿಂದ ಉರಿಯೂತ, ಗಾಯಗಳು ಉಂಟಾಗಿರುವುದು ಕಂಡು ಬಂದಿದೆ ಎಂದು ಅಧ್ಯಯನ ತಂಡ ತಿಳಿಸಿದೆ.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ