HOME » NEWS » Lifestyle » EATING 5 HEALTHY FOOD AFTER EXERCISE ZP

ಬೆಳಿಗ್ಗೆ ಜಾಗಿಂಗ್ ಮಾಡಿದ ಬಳಿಕ ಈ ಆಹಾರಗಳನ್ನು ಸೇವಿಸುವುದು ಉತ್ತಮ

ಕೆಂಪಕ್ಕಿ ಬಿಳಿ ಅಕ್ಕಿಗಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಬ್ರೌನ್ ರೈಸ್‌ನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ.

news18-kannada
Updated:February 17, 2021, 7:24 AM IST
ಬೆಳಿಗ್ಗೆ ಜಾಗಿಂಗ್ ಮಾಡಿದ ಬಳಿಕ ಈ ಆಹಾರಗಳನ್ನು ಸೇವಿಸುವುದು ಉತ್ತಮ
ಸಾಂದರ್ಭಿಕ ಚಿತ್ರ
  • Share this:
ನೀವು ಫಿಟ್​ನೆಸ್​ ಪ್ರೇಮಿಯಾಗಿದ್ದರೆ ಅಥವಾ ಆರೋಗ್ಯವಂತರಾಗಲು ಬೆಳಿಗ್ಗೆ ಜಾಗಿಂಗ್ ಮಾಡುತ್ತಿದ್ದರೆ, ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಅನೇಕ ಜನರು ಜಾಗಿಂಗ್ ಮತ್ತು ದೈನಂದಿನ ವ್ಯಾಯಾಮದ ಬಳಿಕವೂ ಫಿಟ್ ಆಗಿರಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಾರೆ. ಇದಕ್ಕೆ ಒಂದು ಕಾರಣ ಜೀವನಶೈಲಿ. ಏಕೆಂದರೆ ಸ್ನಾಯುಗಳ ಚೇತರಿಕೆಗೆ ತಾಲೀಮು ಮಾತ್ರವಲ್ಲದೆ ಜೀವನ ಶೈಲಿಯನ್ನು ಸಹ ಬದಲಾಯಿಸಬೇಕಾಗುತ್ತದೆ. ಜೀವನ ಶೈಲಿಯಲ್ಲಿ ಪ್ರಮುಖ ವಿಷಯವೆಂದರೆ ನಿಮ್ಮ ಆಹಾರ ಪದ್ಧತಿಯಲ್ಲಿನ ಬದಲಾವಣೆ. ಹೀಗಾಗಿ ಜಾಂಗಿಂಗ್ ಜೊತೆಗೆ ಪ್ರತಿನಿತ್ಯ ಈ ಆಹಾರ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅಂತಹ ಆಹಾರ ಕ್ರಮಗಳ ಬಗ್ಗೆ ಇಲ್ಲಿ ತಿಳಿಸಲಾಗಿದ್ದು, ಅದರಂತೆ ಫಿಟ್​ನೆಸ್ ಕಾಪಾಡಿಕೊಳ್ಳಬಹುದು.

ಮೊಸರು: ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಮೊಸರನ್ನು ತಾಲೀಮು ನಂತರ ಸೇವಿಸಬೇಕು. ಇದು ದೇಹವನ್ನು ತಕ್ಷಣವೇ ಪುನರುಜ್ಜೀವನಗೊಳಿಸುತ್ತದೆ. ಮೊಸರು ತಿನ್ನುವುದರಿಂದ, ದೇಹವು ಹೈಡ್ರೀಕರಿಸುತ್ತದೆ .ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಇದು ದೇಹದ ಸಮಸ್ಯೆಗಳನ್ನು ಸಡಿಲಗೊಳಿಸುದಲ್ಲದೆ ಉರಿಯೂತವನ್ನು ಶಮನ ಮಾಡುತ್ತದೆ.

ಕಡಲೆಕಾಯಿ ಬೆಣ್ಣೆ: ಕಡಲೆಕಾಯಿ ಬೆಣ್ಣೆಯಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ. ಇದರಲ್ಲಿ ಫೈಬರ್, ಆರೋಗ್ಯಕರ ಕೊಬ್ಬುಗಳು, ಪೊಟ್ಯಾಸಿಯಮ್ ಕೂಡ ಇರುತ್ತದೆ. ಇದಲ್ಲದೆ, ಇದು ಅ್ಯಂಟಿ-ಆಕ್ಸಿಡೆಂಟ್ಸ್​, ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಇದು ಸ್ನಾಯುಗಳ ಚೇತರಿಕೆಗೆ ಸಹ ಬಹಳ ಉಪಯುಕ್ತವಾಗಿದೆ. ಇದರಲ್ಲಿರುವ ಜೀವಸತ್ವಗಳು ಬಿ 6 ಮತ್ತು ಸತುವು ಮೂಳೆಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ.

ಚಿಕನ್: ಮಾಂಸಹಾರ ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಚಿಕನ್‌ನಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕೊಬ್ಬು ಇರುತ್ತದೆ. ಜಾಂಗಿಂಗ್ ಅಥವಾ ತಾಲೀಮು ಮಾಡಿದ ನಂತರ ನೀವು 100 ಗ್ರಾಂ ಹುರಿದ ಕೋಳಿಮಾಂಸವನ್ನು ಸೇವಿಸಿದರೆ ನಿಮಗೆ ತಕ್ಷಣ 31 ಗ್ರಾಂ ಪ್ರೋಟೀನ್ ಸಿಗುತ್ತದೆ.

ಬ್ರೌನ್ ರೈಸ್: ಕೆಂಪಕ್ಕಿ ಬಿಳಿ ಅಕ್ಕಿಗಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಬ್ರೌನ್ ರೈಸ್‌ನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹಸಿವನ್ನು ಸಹ ಕಡಿಮೆ ಮಾಡುತ್ತದೆ. ಹಾಗೆಯೇ ನಿಮ್ಮ ತೂಕವನ್ನು ಕಡಿಮೆಗೊಳಿಸಲು ಮತ್ತು ಹೆಚ್ಚಿಸಲು ಸಹ ಸಹಾಯಕ.

ನೀರು ಕುಡಿಯುವುದು: ಜಾಂಗಿಂಗ್ ಅಥವಾ ವ್ಯಾಯಾಮ ಮಾಡಿ ಚೆನ್ನಾಗಿ ನೀರು ಕುಡಿಯಲು ಮರೆಯದಿರಿ. ಏಕೆಂದರೆ ಸ್ನಾಯುಗಳಲ್ಲಿ ಡಿಹೈಡ್ರೇಟ್‌ಗಳನ್ನು ಇಡುವುದು ಮುಖ್ಯ. ಹೀಗಾಗಿ ಜಾಂಗಿಂಗ್​ಗೆ ಮೊದಲು ಹಾಗೂ ನಂತರ ನೀರನ್ನು ಕುಡಿಯಿರಿ. ವರ್ಕ್ ಔಟ್ ಸಮಯದಲ್ಲಿ 15 ರಿಂದ 20 ನಿಮಿಷಗಳ ವ್ಯತ್ಯಾಸದಲ್ಲಿ ಒಂದರಿಂದ ಒಂದೂವರೆ ಕಪ್ ನೀರನ್ನು ಕುಡಿಯುವುದು ಅವಶ್ಯಕ.
Published by: zahir
First published: February 17, 2021, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories