• Home
  • »
  • News
  • »
  • lifestyle
  • »
  • Health Care: ಕೇವಲ 4 ದಿನ ಮಿಸ್ ಮಾಡ್ದೇ ತುಳಸಿ ಎಲೆ ತಿನ್ನಿ ಸಾಕು, ಈ ಸಮಸ್ಯೆ ಮಾಯವಾಗುತ್ತೆ

Health Care: ಕೇವಲ 4 ದಿನ ಮಿಸ್ ಮಾಡ್ದೇ ತುಳಸಿ ಎಲೆ ತಿನ್ನಿ ಸಾಕು, ಈ ಸಮಸ್ಯೆ ಮಾಯವಾಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Problems: ತುಳಸಿ ಎಲೆಗಳು ಆಗಾಗ ಅತಿಸಾರವನ್ನು ತಡೆಯಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಬೇಕು.

  • Share this:

ಪ್ರತಿಯೊಬ್ಬರ ಮನೆ (Home) ಅಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ತುಳಸಿ (Tulsi)  ಗಿಡವಿರುತ್ತದೆ. ಹಿಂದೂ ಧರ್ಮದಲ್ಲಿ, ತುಳಸಿಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜಿಸಲಾಗುತ್ತದೆ, ಅದನ್ನು ಕೇವಲ ಸಸ್ಯದ ಬದಲಿಗೆ ದೇವರೆಂದು (God)  ಪರಿಗಣಿಸಲಾಗಿದೆ. ಹೆಚ್ಚಿನ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿರುವ ತುಳಸಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು (Benefits) ಹೊಂದಿದೆ. ಆಯುರ್ವೇದದಲ್ಲಿ ಈ  ತುಳಸಿ ಕೂಡ ದೊಡ್ಡ ಮಹತ್ವ ಹೊಂದಿದೆ. ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ನೀವು ಪ್ರತಿದಿನ ಕೇವಲ 4 ತುಳಸಿ ಎಲೆಗಳನ್ನು ತಿಂದರೆ ಸಾಕು ಪ್ರಯೋಜನಗಳು ಹೆಚ್ಚು.  ಹೌದು ಏನೆಲ್ಲಾ ಪ್ರಯೋಜನ ಸಿಗುತ್ತದೆ ಎಂಬುದು ಇಲ್ಲಿದೆ.


ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಭಾರಿ ಬದಲಾವಣೆಯಾಗಿದೆ. ಕರಿದ ಮತ್ತು ಮಸಾಲೆಯುಕ್ತ ಆಹಾರಗಳ ಬಳಕೆ ಹೆಚ್ಚಾಗಿದೆ. ಅಲ್ಲದೆ, ನೀರು ಅಥವಾ ದ್ರವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು, ಸಮಯಕ್ಕೆ ಊಟ ಮಾಡದಿರುವುದು ಮತ್ತು ತಡರಾತ್ರಿಯಲ್ಲಿ ತಿನ್ನುವುದು ಮಲಬದ್ಧತೆಗೆ ಕಾರಣವಾಗಬಹುದು. ಅನೇಕ ಜನರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.


ತುಳಸಿ ಎಲೆಗಳು ಇದಕ್ಕೆ ಮನೆಮದ್ದು. ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ತುಳಸಿ ಎಲೆಗಳು ಆಗಾಗ ಅತಿಸಾರವನ್ನು ತಡೆಯಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಬೇಕು.




ಮೂಳೆಗಳು ಬಲಗೊಳ್ಳುತ್ತವೆ


ಮೂಳೆ ಸಂಬಂಧಿತ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಚಿಕ್ಕ ವಯಸ್ಸಿನಲ್ಲೂ ಈ ಸಮಸ್ಯೆಯನ್ನು ಕಾಣಬಹುದು. ತುಳಸಿ ಎಲೆಗಳನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಏಕೆಂದರೆ ಈ ಎಲೆಗಳಲ್ಲಿ ಪೊಟ್ಯಾಶಿಯಂ ಮತ್ತು ಫೋಲೇಟ್ ನಂತಹ ಪೋಷಕಾಂಶಗಳಿವೆ. ಮೂಳೆಗಳನ್ನು ಬಲಪಡಿಸುವ ಕೆಲಸವು ಈ ಎರಡು ಅಂಶಗಳಿಂದಾಗಿರುತ್ತದೆ. ಹಾಗಾಗಿ ಮಿಸ್ ಮಾಡದೇ ನಾಲ್ಕು ದಿನ ತುಳಸಿ ಎಲೆಯನ್ನು ತಿನ್ನಿ.


ಇದನ್ನೂ ಓದಿ: ಚಳಿಗಾಲದಲ್ಲಿ ಕೀಲು ನೋವು ಬರಬಾರದು ಅಂದ್ರೆ ಈ ಕೆಲಸ ಮಾಡಿ ಸಾಕು


ಶೀತ ಹಾಗೂ ಕೆಮ್ಮಿನಿಂದ ಪರಿಹಾರ ನೀಡುತ್ತದೆ


ಪರಿಸರದಲ್ಲಿನ ಬದಲಾವಣೆಯಿಂದಾಗಿ, ಸಾಮಾನ್ಯವಾಗಿ ಎಲ್ಲರಿಗೂ ಯಾವಾಗಲೂ ಶೀತ ಮತ್ತು ಕೆಮ್ಮು ಉಂಟಾಗುತ್ತದೆ. ಜೊತೆಗೆ ತಲೆ ನೋವು ಸಹ ಬರುತ್ತದೆ. ಇದರ ಚಿಕಿತ್ಸೆಗಾಗಿ ಔಷಧಿ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು, ತುಳಸಿ ಎಲೆಗಳನ್ನು ಚಹಾ ಅಥವಾ ಕಷಾಯವನ್ನು ಮಾಡಿ,  ಸೇವಿಸುವುದರಿಂದ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ತುಳಸಿ ಎಲೆಗಳು ಶೀತ, ಕೆಮ್ಮಿನ ಚಿಕಿತ್ಸೆಯಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.




ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ


ತುಳಸಿ ಎಲೆಗಳು ಹೃದಯವನ್ನು ಆರೋಗ್ಯವಾಗಿಡಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಸ್ವತಂತ್ರ ರಾಡಿಕಲ್​ಗಳೀಂದ ಉಂಟಾಗುವ ಹಾನಿಯಾಗದಂತೆ ತಡೆಯಲು ತುಳಸಿಯನ್ನು ಬಳಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದು ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ತುಳಸಿ ರಸವನ್ನು ಕುಡಿಯಬಹುದು ಅಥವಾ ಅದರ ಕಷಆಯವನ್ನು ಸಹ ಸೇವಿಸಬಹುದು. ಅಲ್ಲದೇ ಕೇವಲ ಎಲೆಯನ್ನು ಜಗಿಯುವುದು ಸಹ ಸಹಾಯ ಮಾಡುತ್ತದೆ.


Your luck will change with the remedy of dry tulsi leaves


ಒತ್ತಡ ಪರಿಹಾರ ಸಿಗುತ್ತದೆ


ಜೀವನಶೈಲಿಯ ಬದಲಾವಣೆಯಿಂದ ಒತ್ತಡವು ಎಲ್ಲರಲ್ಲಿ ಅಪಾರವಾಗಿ ಹೆಚ್ಚಾಗಿದೆ ಎಂದರೆ ತಪ್ಪಲ್ಲ. ಅಂತಹ ಪರಿಸ್ಥಿತಿಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ತುಳಸಿ ಎಲೆಗಳನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕದ ಸಮಸ್ಯೆಗಳನ್ನು ನಿವಾರಿಸಬಹುದು.


ಇದನ್ನೂ ಓದಿ: ಚಳಿಗಾಲದಲ್ಲಿ ನವಜಾತ ಶಿಶುಗಳ ಆರೈಕೆ ಹೇಗೆ? ಇಲ್ಲಿದೆ ವಿವರ


ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಒತ್ತಡವನ್ನು ನಿವಾರಿಸಬಹುದು. ಇದಲ್ಲದೆ ತುಳಸಿಯನ್ನು ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಬಾಯಿಯ ದುರ್ವಾಸನೆ ಸಹ ದೂರವಾಗುತ್ತದೆ.

Published by:Sandhya M
First published: