Watermelon Seeds: ಕಲ್ಲಂಗಡಿ ಬೀಜ ಎಸೆಯೋ ಬದಲು ಹೀಗೆ ತಿನ್ನಿ, ಆರೋಗ್ಯ ಲಾಭ ಬಹಳಷ್ಟಿದೆ

ಆರೋಗ್ಯ ತಜ್ಞರ ಪ್ರಕಾರ ಕಲ್ಲಂಗಡಿ ತಿಂದು ಬೀಜ ಎಸೆಯುವ ತಪ್ಪು ಮಾಡಬೇಡಿ. ಯಾಕೆಂದರೆ ನಾವು ಎಸೆಯುವ ಕಲ್ಲಂಗಡಿ ಬೀಜಗಳು ದೇಹಕ್ಕೆ ಮತ್ತು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲ್ಲಂಗಡಿ (Watermelon) ನಾಲಿಗೆಗೆ (Tongue) ರುಚಿ ಹಾಗೂ ದೇಹಕ್ಕೂ (Body) ತಂಪು (Cool). ಕಲ್ಲಂಗಡಿ ಬೇಸಿಗೆಯಲ್ಲಿ (Summer) ದೇಹವನ್ನು ತೇವಾಂಶದಿಂದ ಇರುವಂತೆ ಮಾಡುತ್ತದೆ. ಕಲ್ಲಂಗಡಿ ಹಣ್ಣಿನ ಪ್ರಯೋಜನಗಳು ಗೊತ್ತೇ ಇದೆ. ಆದರೆ ಕಲ್ಲಂಗಡಿ ಬೀಜದ (Seeds) ಪ್ರಯೋಜನಗಳ (Benefits) ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ, ಆರೋಗ್ಯ ತಜ್ಞರ ಪ್ರಕಾರ ಕಲ್ಲಂಗಡಿ ತಿಂದು ಬೀಜ ಎಸೆಯುವ ತಪ್ಪು ಮಾಡಬೇಡಿ. ಯಾಕೆಂದರೆ ನಾವು ಎಸೆಯುವ ಕಲ್ಲಂಗಡಿ ಬೀಜಗಳು ದೇಹಕ್ಕೆ ಮತ್ತು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿವೆ. ಕಲ್ಲಂಗಡಿ ಬೀಜಗಳು ಹಣ್ಣಿನಷ್ಟೇ ಪೌಷ್ಟಿಕ ಅಂಶಗಳಿಂದ ಕೂಡಿವೆ. ಕಲ್ಲಂಗಡಿ ಬೀಜಗಳ ಪ್ರಯೋಜನಗಳು ಮತ್ತು ಅವುಗಳನ್ನು ತಿನ್ನುವ ಸರಿಯಾದ ಮಾರ್ಗವನ್ನು ನಾವು ಇಂದು ಇಲ್ಲಿ ನೋಡೋಣ.

  ಕಲ್ಲಂಗಡಿ ಬೀಜಗಳಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದೆ

  ಕಲ್ಲಂಗಡಿ ಬೀಜಗಳ ಪೌಷ್ಟಿಕಾಂಶದಿಂದ ಸಮೃದ್ಧವಾಗಿವೆ. ಕಲ್ಲಂಗಡಿ ಬೀಜಗಳಲ್ಲಿ ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲಗಳು ಇವೆ. ಇದರ 4 ಗ್ರಾಂ ಬೀಜಗಳು ಸುಮಾರು 0.29 ಮಿಗ್ರಾಂ ಏರಿಯನ್, 21 ಮಿಗ್ರಾಂ ಮೆಗ್ನೀಸಿಯಮ್, ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತದೆ.

  ಸ್ಥೂಲಕಾಯ ಸಮಸ್ಯೆ ಪರಿಹಾರಕ್ಕೆ ಕಲ್ಲಂಗಡಿ ಬೀಜಗಳು

  ದೇಹಕ್ಕೆ ಈ ಎಲ್ಲಾ ಪೋಷಕಾಂಶಗಳ ಪ್ರಯೋಜನಗಳನ್ನು ಕಲ್ಲಂಗಡಿ ಬೀಜಗಳು ನೀಡುತ್ತವೆ. ಸ್ಥೂಲಕಾಯ ಸಮಸ್ಯೆ ಪರಿಹಾರಕ್ಕೆ ಕಲ್ಲಂಗಡಿ ಬೀಜಗಳ ಬೆಸ್ಟ್. ಬೀಜಗಳ ಪೌಷ್ಟಿಕಾಂಶದ ಮೌಲ್ಯವು ಅದನ್ನು ಅದ್ಭುತವಾದ ಸೂಪರ್‌ಫುಡ್ ನ್ನಾಗಿಸುತ್ತದೆ. ಅವುಗಳಲ್ಲಿ ಕೆಲವೇ ಕ್ಯಾಲೋರಿಗಳು ಕಂಡು ಬರುತ್ತವೆ.

  ಇದನ್ನೂ ಓದಿ: ಯಾವ ಪದಾರ್ಥದ ಜೊತೆಗೆ ಜೇನುತುಪ್ಪ ತಿನ್ನಬಾರದು?

  ಆದಾಗ್ಯೂ ಕೇವಲ 4 ಗ್ರಾಂ (ಬೆರಳೆಣಿಕೆಯಷ್ಟು ಬೀಜಗಳನ್ನು) ಮಾತ್ರ ಸೇವನೆ ಮಾಡಬೇಕು. ಕಲ್ಲಂಗಡಿ ಬೀಜಗಳು ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಫುಡ್ ಆಗಿದೆ. ಸ್ಥೂಲಕಾಯ ನಿಯಂತ್ರಿಸುವುದರ ಜೊತೆಗೆ ಅನೇಕ ಗಂಭೀರ ಕಾಯಿಲೆಗಳನ್ನು ತೊಡೆದು ಹಾಕಬಹುದು.

  ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಕಲ್ಲಂಗಡಿ ಬೀಜಗಳು

  ರಕ್ತದ ಸಕ್ಕರೆ ಮಟ್ಟ ನಿಯಂತ್ರಣ ಮಾಡಲು ಕಲ್ಲಂಗಡಿ ಬೀಜಗಳು ಸಹಕಾರಿ ಆಗಿವೆ. ಇನ್ಸುಲಿನ್ ಪ್ರತಿರೋಧಕ್ಕೆ ಕಲ್ಲಂಗಡಿ ಬೀಜಗಳು ಸಂಬಂಧಿಸಿವೆ. ಅಧ್ಯಯನದ ಪ್ರಕಾರ ಕಲ್ಲಂಗಡಿ ಬೀಜಗಳಲ್ಲಿ ಕಂಡು ಬರುವ ಮೆಗ್ನೀಸಿಯಮ್ ಇದಕ್ಕೆ ಕಾರಣವಾಗಿದೆ. ಇದು ಮೆಟಾಬಾಲೈಸಿಂಗ್ ಕಾರ್ಬೋಹೈಡ್ರೇಟ್‌ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಜೊತೆಗೆ ಟೈಪ್-2 ಮಧುಮೇಹ ನಿಯಂತ್ರಣಕ್ಕೂ ಸಹಕಾರಿ.

  ಹೊಳೆಯುವ ತ್ವಚೆ ಪಡೆಯಲು ಕಲ್ಲಂಗಡಿ ಬೀಜಗಳು

  ಹೊಳೆಯುವ ತ್ವಚೆ ಪಡೆಯಲು ಕಲ್ಲಂಗಡಿ ಬೀಜಗಳು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಮೆಗ್ನೀಸಿಯಮ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಸತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮದ ಟೋನ್ ಸುಧಾರಿಸುತ್ತದೆ. ಜೊತೆಗೆ ವಯಸ್ಸಾದ ಪ್ರಕ್ರಿಯೆ ನಿಧಾನಗೊಳಿಸುತ್ತದೆ. ಕಲ್ಲಂಗಡಿ ಬೀಜದ ಎಣ್ಣೆಯನ್ನು ಅನೇಕ ತ್ವಚೆ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ.

  ಕಲ್ಲಂಗಡಿ ಬೀಜ ತಿನ್ನುವ ಸರಿಯಾದ ವಿಧಾನ

  ಕಲ್ಲಂಗಡಿ ಬೀಜಗಳನ್ನು ತಿನ್ನುವ ಸರಿಯಾದ ವಿಧಾನವೆಂದರೆ: ಕಲ್ಲಂಗಡಿ ಬೀಜಗಳನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿಯಿರಿ. ಅದರ ನಂತರ ಅವುಗಳನ್ನು ಪೆಟ್ಟಿಗೆಯಲ್ಲಿ ಇರಿಸಿ. ನಿಮ್ಮ ಬೆಳಗಿನ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳಿ. ನೀವು ಅವುಗಳನ್ನು ಸಲಾಡ್, ಓಟ್ಸ್, ಟೋಸ್ಟ್ ಅಥವಾ ಯಾವುದೇ ಇತರ ಬೀಜಗಳೊಂದಿಗೆ ಬೆರೆಸಿ ತಿನ್ನಬಹುದು.

  ಕಲ್ಲಂಗಡಿ ಹಣ್ಣಿನ ಪ್ರಯೋಜನಗಳು

  ಕಣ್ಣು ಮತ್ತು ಚರ್ಮದ ಆರೋಗ್ಯಕೆ ಉತ್ತಮ

  ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾದ ನೀರಿನಂಶ, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ ಇದ್ದು, ಅವು ಕೊಲಾಜೆನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಆ ಮೂಲಕ ಚರ್ಮ ಸುಂದರ ಹಾಗೂ ಮೃದುವಾಗಿರುವಂತೆ ನೋಡಿಕೊಳ್ಳುತ್ತವೆ.

  ಅಧ್ಯಯನಗಳಿಂದ ತಿಳಿದು ಬಂದಿರುವ ಪ್ರಕಾರ, ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಪೀನ್ ಅಂಶ, ಸೂರ್ಯನಿಂದ ರಕ್ಷಣೆ ನೀಡುವ ಪರಿಣಾಮವನ್ನು ಹೊಂದಿದೆ. ಹಾಗಾಗಿ, ಚರ್ಮಕ್ಕೆ ಸೂರ್ಯನಿಂದ ಹಾನಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್ ಎ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಮ್ಯಾಕ್ಯುಲರ್ ಡಿಜನರೇಶನ್ ಅನ್ನು ಕೂಡ ತಡೆಯಬಲ್ಲದು.

  ವ್ಯಾಯಾಮದ ನಂತರದ ಸ್ನಾಯು ನೋವು ನಿವಾರಕ

  ಕಲ್ಲಂಗಡಿ ಹಣ್ಣು , ವ್ಯಾಯಾಮ ಮಾಡುವಾಗ ಮತ್ತು ವ್ಯಾಯಾಮದ ನಂತರ ಉಂಟಾಗುವ ಸ್ನಾಯು ನೋವನ್ನು ತಡೆಯಬಲ್ಲದು. ಅದಕ್ಕೆ ಕಾರಣ, ಕಲ್ಲಂಗಡಿ ಹಣ್ಣಿನಲ್ಲಿ ಇರುವ ಪೊಟ್ಯಾಶಿಯಂ. ವ್ಯಾಯಾಮಕ್ಕೆ ಮುನ್ನ ಅಥವಾ ವ್ಯಾಯಾಮ ಮಾಡಿದ ಬಳಿಕ ಒಂದು ಬಟ್ಟಲು ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಸೇವಿಸುವುದರಿಂದ ಸ್ನಾಯುಗಳ ಆರೋಗ್ಯದ ಮೇಲೆ ರಕ್ಷಣಾತ್ಮಕ ಪರಿಣಾಮ ಬೀರುವುದು ಸಾಧ್ಯ.

  ಇದನ್ನೂ ಓದಿ: ಅಸ್ತಮಾ ರೋಗಿಗಳು ಏನು ತಿನ್ನಬೇಕು; ಏನು ತಿನ್ನಬಾರದು ಗೊತ್ತಾ?

  ಗರ್ಭಾವಸ್ಥೆಯಲ್ಲಿ ಮುಂಜಾನೆಯ ಸುಸ್ತು ನಿವಾರಣೆ

  ಕಲ್ಲಂಗಡಿ ಹಣ್ಣಿನಲ್ಲಿ ಹೇರಳ ಪ್ರಮಾಣದ ನೀರಿನ ಅಂಶವಿದೆ. ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದರಿಂದ ಗರ್ಭಾವಸ್ಥೆಯ ಆರಂಭ ಮೂರು ತಿಂಗಳಲ್ಲಿ ಡೀಹೈಡ್ರೇಶನ್ ಆಗದಂತೆ ತಡೆಯಬಹುದು. ಅಷ್ಟೇ ಅಲ್ಲ, ಎರಡನೇ ಮತ್ತು ಮೂರನೇ ತಿಂಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮುಂಜಾನೆಯ ಸುಸ್ತು ಮತ್ತು ಎದೆ ಉರಿಯನ್ನು ತಡೆಯಬಲ್ಲದು.
  Published by:renukadariyannavar
  First published: