Memory Booster: ನಿಮ್ಮ ಜ್ಞಾಪಕಶಕ್ತಿ ಹೆಚ್ಚಿಸಲು ಮತ್ತು ಹೃದಯದ ಆರೋಗ್ಯ ಸುಧಾರಿಸಲು ಈ ಹಣ್ಣು ಸೇವಿಸಿ!

ಇತ್ತೀಚೆಗೆ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು, ಒಂದು ಅಧ್ಯಯನ ಮಾಡಿದ್ದಾರೆ. ಇದು ಕ್ರ್ಯಾನ್‌ಬೆರಿಗಳ ಸೇವನೆಯ ಕುರಿತು ಆಗಿದೆ. ಕ್ರ್ಯಾನ್‌ಬೆರಿಗಳ ಸೇವನೆ ಮೆದುಳನ್ನು ಚುರುಕಾಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಾನವ (Human) ದೇಹದ (Body) ಪ್ರಮುಖ ಭಾಗವೆಂದರೆ (Part) ಅದು ಮೆದುಳು (Brain). ದೇಹದ ಪ್ರತಿಯೊಂದು ಅಂಗ ಮನಸ್ಸಿನ ಮಾತು ಕೇಳುತ್ತದೆ. ಅಂದರೆ ಮನಸ್ಸಿನ ಸೂಚನೆ ಮೇರೆಗೆ ಕೆಲಸ (Work) ಮಾಡುತ್ತದೆ. ಯೋಚಿಸುವ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದ ಸೂಚನೆ ಮತ್ತು ಬುದ್ಧಿವಂತಿಕೆಯನ್ನು ಮೆದುಳು ನೀಡುತ್ತದೆ. ಉದಾಹರಣೆಗೆ, ಮೆದುಳು ಕೈಗೆ ಸಂಕೇತ ನೀಡಿದಾಗ, ನಮ್ಮ ಕೈ ಮಾತ್ರ ಕೆಲವು ಕೆಲಸ ಮಾಡುತ್ತದೆ. ಮೆದುಳು ಸಂಕೇತ ನೀಡದಿದ್ದರೆ ಕೈಗಳು ಕೆಲಸ ಮಾಡಲ್ಲ. ಹಾಗಾಗಿ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಮನಸ್ಸು ಮತ್ತು ಮೆದುಳಿನ ಆರೋಗ್ಯ ಕಾಪಾಡುವುದು ಮತ್ತು ವಿಶೇಷ ಕಾಳಜಿ ವಹಿಸುವುದು ಅತ್ಯವಶ್ಯಕ.

    ಜ್ಞಾಪಕ ಶಕ್ತಿಯನ್ನು ಬೂಸ್ಟ್ ಮಾಡುತ್ತದೆ ಈ ಹಣ್ಣು

    ಇತ್ತೀಚೆಗೆ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು, ಒಂದು ಅಧ್ಯಯನ ಮಾಡಿದ್ದಾರೆ. ಇದು ಕ್ರ್ಯಾನ್‌ಬೆರಿಗಳ ಸೇವನೆಯ ಕುರಿತು ಆಗಿದೆ. ಕ್ರ್ಯಾನ್‌ಬೆರಿಗಳ ಸೇವನೆ ಮೆದುಳನ್ನು ಚುರುಕಾಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

    ಜೊತೆಗೆ ಬುದ್ಧಿಮಾಂದ್ಯತೆ ಕಡಿಮೆ ಮಾಡಲು ಸಹಕಾರಿ. ಕ್ರ್ಯಾನ್ಬೆರಿ ಕೆಂಪು ಬಣ್ಣದ ಹಣ್ಣು ಆಗಿದೆ. ಕ್ರ್ಯಾನ್ಬೆರಿ ಹಣ್ಣಿನ ಗಾತ್ರವು ತುಂಬಾ ಚಿಕ್ಕದಾಗಿದೆ. ಔಷಧೀಯ ಗುಣಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕ್ರ್ಯಾನ್ಬೆರಿಗಳು ಸಾಕಷ್ಟು ಪ್ರಯೋಜನ ಹೊಂದಿವೆ.

    ಇದನ್ನೂ ಓದಿ: ವಿವಿಧ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ತ್ರಿಫಲ ಚೂರ್ಣ, ಇದರ ಬಳಕೆ ಹೇಗೆ ಗೊತ್ತಾ?

    12 ವಾರಗಳಲ್ಲಿ ಪರಿಣಾಮ ಗೋಚರ

    ಕ್ರ್ಯಾನ್ಬೆರಿಗಳ ರುಚಿ ಸಾಕಷ್ಟು ಕಹಿ ಆಗಿದೆ. ಯುನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ ನಡೆಸಿದ ಸಂಶೋಧನೆ ಪ್ರಕಾರ, ಕ್ರ್ಯಾನ್‌ಬೆರಿ ಪುಡಿ ಸೇವಿಸಿದ ಜನರು 12 ವಾರಗಳ ನಂತರ ಉತ್ತಮ ಜ್ಞಾಪಕ ಶಕ್ತಿ ಹೊಂದಿದ್ದರು. ಅವರ MRI ಮಾಡಿದಾಗ, ಅವರ ಮೆದುಳಿನ ಪ್ರಮುಖ ಭಾಗಗಳಿಗೆ ರಕ್ತದ ಹರಿವು ತುಂಬಾ ಚೆನ್ನಾಗಿತ್ತು. ಇದಲ್ಲದೆ ಆ ಜನರ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ 9 ಪ್ರತಿಶತದಷ್ಟು ಕಡಿಮೆಯಾಗಿದೆ.

    ಮೆದುಳಿನಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ

    ಸಂಶೋಧಕರ ತಂಡದ ಪ್ರಕಾರ, ಕ್ರ್ಯಾನ್ಬೆರಿ ಮೆದುಳನ್ನು ಸುಧಾರಿಸುತ್ತದೆ. ಕ್ರ್ಯಾನ್ಬೆರಿ ಸೇವನೆಯು ಮೆದುಳಿನಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕ್ರ್ಯಾನ್‌ಬೆರಿ ಜ್ಯೂಸ್‌ ಅನ್ನು ಕುಡಿಯುವ ಬದಲು ಹಸಿ ಕ್ರ್ಯಾನ್‌ಬೆರಿಗಳನ್ನು ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ.

    60 ಜನರ ಮೇಲೆ ನಡೆದಿದೆ ಸಂಶೋಧನೆ

    ಇದರ ಕಟು ಮತ್ತು ಕಹಿ ರುಚಿ ಹೆಚ್ಚಿನ ಜನರಿಗೆ ಇಷ್ಟವಾಗಲ್ಲ. ಆದರೆ ಇದು ಸಾಕಷ್ಟು ಪ್ರಯೋಜನಕಾರಿ ಆಗಿದೆ. ಕ್ರ್ಯಾನ್ಬೆರಿ ಬಗ್ಗೆ ನಡೆದ ಸಂಶೋಧನೆಯಲ್ಲಿ 60 ಜನರು ತೊಡಗಿಸಿಕೊಂಡಿದ್ದರು. ಅದರಲ್ಲಿ ಅರ್ಧದಷ್ಟು ಜನರು 50 ರಿಂದ 80 ವರ್ಷ ವಯಸ್ಸಿನವರು.

    60 ಜನರಿಗೆ 4.5 ಗ್ರಾಂ ಒಣಗಿದ ಕ್ರ್ಯಾನ್ಬೆರಿ ಪುಡಿ ನೀಡಲಾಯಿತು ಮತ್ತು ಇತರರಿಗೆ ಪ್ಲೇಸ್ಬೋ ನೀಡಲಾಯಿತು. ಈ ಸಂಶೋಧನೆಯು ಪ್ರಮುಖ ಅನಾರೋಗ್ಯ ಹೊಂದಿರುವ ಜನರನ್ನು ಒಳಗೊಂಡಿರಲಿಲ್ಲ. ಇದನ್ನು ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್‌ನಲ್ಲಿ ಪ್ರಕಟಿಸಲಾಯಿತು.

    12 ವಾರಗಳ ನಂತರ ಮೆಮೊರಿ ಸುಧಾರಣೆ

    ಅಧ್ಯಯನದ ಪ್ರಮುಖ ಲೇಖಕ ಡಾ. ಡೇವಿಡ್ ವಜೌರ್ ಪ್ರಕಾರ, 12 ವಾರಗಳ ನಂತರ, ಕ್ರ್ಯಾನ್‌ಬೆರಿ ಪುಡಿ ತಿನ್ನುವ ಗುಂಪು ಗಮನಾರ್ಹವಾಗಿ ಮೆಮೊರಿ ಸುಧಾರಣೆ ಕಂಡು ಬಂದಿದೆ. ಮತ್ತು ಅವರ ಮೆದುಳಿನ ಪ್ರಮುಖ ಭಾಗಗಳಿಗೆ ಉತ್ತಮ ರಕ್ತದ ಹರಿವು ಇದೆ.

    ಡಾ. ಡೇವಿಡ್ ಹೇಳುವ ಪ್ರಕಾರ, ಕ್ರ್ಯಾನ್‌ಬೆರಿ ಸೇವಿಸಿದ ಗುಂಪು ತಮ್ಮ LDL ಅಥವಾ "ಕೆಟ್ಟ" ಕೊಲೆಸ್ಟರಾಲ್ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಈ ಸಂಶೋಧನೆಯ ಫಲಿತಾಂಶ ಹೆಚ್ಚು ಉತ್ತಮವಾಗಿವೆ. ಮುಖ್ಯ ವಿಷಯವೆಂದರೆ ಕೇವಲ 12 ವಾರಗಳಲ್ಲಿ, ಕ್ರ್ಯಾನ್ಬೆರಿ ಮೆಮೊರಿ ಮತ್ತು ನರಗಳ ಕಾರ್ಯವನ್ನು ಸುಧಾರಿಸಿದೆ.

    ಇದನ್ನೂ ಓದಿ: ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ದಿನಚರಿಯಲ್ಲಿ ಮೊದಲು ಇದನ್ನು ಸೇರಿಸಿ

    100 ಗ್ರಾಂ ಕ್ರ್ಯಾನ್ಬೆರಿ ಸೇವನೆ ಹೃದಯದ ಆರೋಗ್ಯಕ್ಕೆ ಬಲ ನೀಡುತ್ತದೆ

    ಕ್ರ್ಯಾನ್‌ಬೆರಿಗಳನ್ನು ಪ್ರತಿದಿನ ಸೇವನೆ ಮಾಡೋದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಪ್ರತಿದಿನ 100 ಗ್ರಾಂ ಕ್ರ್ಯಾನ್ಬೆರಿ ಸೇವಿಸುವ ಪುರುಷರ ಹೃದಯ ಸಾಮರ್ಥ್ಯವು ಒಂದು ತಿಂಗಳ ನಂತರ ಸುಧಾರಿಸಿದೆ. ಉರಿಯೂತ ತಡೆಗಟ್ಟುವ ಮೂಲಕ ಹೃದಯವನ್ನು ಆರೋಗ್ಯಕರವಾಗಿ ಇರಿಸುತ್ತವೆ.
    Published by:renukadariyannavar
    First published: