HOME » NEWS » Lifestyle » EAT THESE WEIGHT LOSS FOODS FOR BREAKFAST AND SHED KILOS WITHOUT BREAKING A SWEAT STG HG

Weight Loss: ತೂಕ ಇಳಿಸಿಕೊಳ್ಳಬೇಕೆಂದು ಬೆಳಗ್ಗಿನ ಉಪಾಹಾರ ತಪ್ಪಿಸಬೇಡಿ....ಹುಷಾರ್!

Weight loss: ಕೆಲವೊಮ್ಮೆ ಬೆಳಗ್ಗೆ ಹೊಟ್ಟೆಗೆ ಏನನ್ನೂ ಸೇವಿಸುವುದಿಲ್ಲ. ಆದರೆ ಹೀಗೆ ಮಾಡುವುದರಿಂದ ತೂಕ ಕಡಿಮೆಯಾಗುವುದಿಲ್ಲ, ಬದಲಾಗಿ ಆ ಪ್ರಕ್ರಿಯೆ ಕುಂಠಿತವಾಗುತ್ತದೆ ಎಂಬುವುದು ಹೆಚ್ಚಿನವರ ಅಭಿಪ್ರಾಯ. ತೂಕ ಇಳಿಸಿಕೊಳ್ಳುವವರು ಬೆಳಗ್ಗಿನ ಉಪಾಹಾರವನ್ನು ಏಕೆ ತ್ಯಜಿಸಬಾರದು ಎಂಬುದಕ್ಕೆ ಇಲ್ಲಿವೆ ಕಾರಣಗಳು.

news18-kannada
Updated:June 10, 2021, 11:56 AM IST
Weight Loss: ತೂಕ ಇಳಿಸಿಕೊಳ್ಳಬೇಕೆಂದು ಬೆಳಗ್ಗಿನ ಉಪಾಹಾರ ತಪ್ಪಿಸಬೇಡಿ....ಹುಷಾರ್!
ಸಾಂದರ್ಭಿಕ ಚಿತ್ರ
  • Share this:
Weight Loss Tips: ಬೆಳಿಗ್ಗೆ ರಾಜನಂತೆ ತಿನ್ನಿ, ಮಧ್ಯಾಹ್ನ ಮಂತ್ರಿಯಂತೆ ತಿನ್ನಿ, ರಾತ್ರಿ ಭಿಕ್ಷುಕನಂತೆ ತಿನ್ನಿ ಎಂಬ ಮಾತನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಆದರೂ, ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಇರುವ ಹೆಚ್ಚಿನ ಮಂದಿ ಮಾತ್ರ, ಕ್ಯಾಲೋರಿ ಕಡಿಮೆ ತಿನ್ನಬೇಕೆಂಬ ಕಾರಣಕ್ಕೆ ಆಗಾಗ ಬೆಳಗ್ಗಿನ ಉಪಾಹಾರ ಸೇವಿಸುವುದನ್ನು ತಪ್ಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವರು ಕೇವಲ ಒಂದು ಲೋಟ ಬ್ಲ್ಯಾಕ್‌ ಕಾಫಿ ಕುಡಿಯುತ್ತಾರೆ, ಅಥವಾ ಕೆಲವೊಮ್ಮೆ ಬೆಳಗ್ಗೆ ಹೊಟ್ಟೆಗೆ ಏನನ್ನೂ ಸೇವಿಸುವುದಿಲ್ಲ. ಆದರೆ ಹೀಗೆ ಮಾಡುವುದರಿಂದ ತೂಕ ಕಡಿಮೆಯಾಗುವುದಿಲ್ಲ, ಬದಲಾಗಿ ಆ ಪ್ರಕ್ರಿಯೆ ಕುಂಠಿತವಾಗುತ್ತದೆ ಎಂಬುವುದು ಹೆಚ್ಚಿನವರ ಅಭಿಪ್ರಾಯ. ತೂಕ ಇಳಿಸಿಕೊಳ್ಳುವವರು ಬೆಳಗ್ಗಿನ ಉಪಾಹಾರವನ್ನು ಏಕೆ ತ್ಯಜಿಸಬಾರದು ಎಂಬುದಕ್ಕೆ ಇಲ್ಲಿವೆ ಕಾರಣಗಳು.

1. ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ

ರಾತ್ರಿ ಮಲಗಿದ ನಂತರ ಬೆಳಗ್ಗಿನವರೆಗೆ ಹೊಟ್ಟೆ ಖಾಲಿ ಇರುವುದರಿಂದ ನಿಮ್ಮ ದೇಹದ ಚಯಾಪಚಯ ಪ್ರಕ್ರಿಯೆ ಮಂದ ಗತಿಯಲ್ಲಿ ಇರುತ್ತದೆ. ಹಾಗಾಗಿ ಕೊಬ್ಬು ಕರಗುವ ಪ್ರಕ್ರಿಯೆ ಕೂಡ ನಿಧಾನವಾಗುತ್ತದೆ. ಬೆಳಗ್ಗೆ ಎದ್ದ , ಒಂದು ಗಂಟೆಯ ಒಳಗೆ ಏನನ್ನಾದರೂ ತಿನ್ನುವುದು ಅತ್ಯಂತ ಅಗತ್ಯ. ಒಂದು ಪ್ಲೇಟ್ ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಉಪಹಾರ, ಇಡೀ ದಿನ ನಿಮ್ಮ ಚಯಾಪಚಯ ಕ್ರಿಯೆಯನ್ನು ಮತ್ತು ಕ್ಯಾಲೋರಿ ಕರಗಿಸುವ ಪ್ರಕ್ರಿಯೆಯನ್ನು ವೃದ್ಧಿಸುತ್ತದೆ. ಮೊಟ್ಟೆಗಳು, ಸ್ಮೂತಿಗಳು, ಉಪ್ಪಿಟ್ಟು ಮತ್ತು ಇಡ್ಲಿ ಕೆಲವು ಅತ್ಯಂತ ಉತ್ತಮ ಉಪಾಹಾರದ ಆಯ್ಕೆಗಳು.

2. ರಾತ್ರಿ ಹಸಿವಾಗುವುದನ್ನು ತಪ್ಪಿಸುತ್ತದೆ

ಬೆಳಗ್ಗೆ ಆರೋಗ್ಯಕರ ಮತ್ತು ಹೆಚ್ಚು ಫೈಬರ್‌ಯುಕ್ತ ಉಪಾಹಾರವನ್ನು ಸೇವಿಸುವುದು, ರಾತ್ರಿ ತಿನ್ನಬೇಕೆಂದು ಉಂಟಾಗುವ ಆಸೆಯನ್ನು ತಪ್ಪಿಸುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಬೆಳಗ್ಗೆ ಸರಿಯಾಗಿ ಉಪಾಹಾರ ಸೇವಿಸದಿದ್ದರೆ, ದಿನವಿಡೀ ಏನನ್ನಾರೂ ತಿನ್ನುತ್ತಿರಬೇಕು ಎಂಬ ಮನಸ್ಸಾಗುತ್ತಿರುತ್ತದೆ. ಹೆಚ್ಚು ಕಾರ್ಬೋಹೈಡ್ರೇಟ್‍ಯುಕ್ತ ಉಪಹಾರ ನಿಮ್ಮ ರಕ್ತ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೆಳಗ್ಗೆ ಕಾರ್ಬ್ ತಿನ್ನದವರು ಹೆಚ್ಚಾಗಿ ಸಂಜೆ ಚೆನ್ನಾಗಿ ತಿಂದುಬಿಡುತ್ತಾರೆ.

3. ಅದು ಹೊಟ್ಟೆ ತುಂಬಿಸುತ್ತದೆ

ಬೆಳಗ್ಗೆ ಹೆಚ್ಚು ಫೈಬರ್‌ಯುಕ್ತ ಆಹಾರವನ್ನು ಸೇವಿಸುವುದರಿಂದ, ಮಧ್ಯಾಹ್ನದ ಊಟದವರೆಗೆ ನಿಮಗೆ ಹಸಿವಾಗುವುದಿಲ್ಲ. ಅದು ಅನಾರೋಗ್ಯಕರ ಮತ್ತು ಸಿಹಿ ತಿನಿಸುಗಳನ್ನು ತಿನ್ನಬೇಕೆಂಬ ಆಸೆಯನ್ನು ಕಡಿಮೆ ಮಾಡುತ್ತದೆ. ಆನಾರೋಗ್ಯಕರ ತಿಸಿಸುಗಳನ್ನು ಆಗಾಗ ಮೆಲ್ಲುವುದೇ ನಿಮ್ಮ ತೂಕ ಕಡಿಮೆ ಮಾಡುವ ಯೋಜನೆಗೆ ಸಾಮಾನ್ಯ ಅಡ್ಡಿ. ನೀವು ಉಪಾಹಾರ ತಿನ್ನದಿದ್ದಾಗ ಸಹಜವಾಗಿಯೇ ದಿನವಿಡೀ ಹಸಿವಾಗುತ್ತದೆ, ಆಗ ಹಸಿವು ನೀಗಿಸಿಕೊಳ್ಳುವ ತರಾತುರಿಯಲ್ಲಿ ಅನಾರೋಗ್ಯಕರವಾದದನ್ನು ತಿಂದು, ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವ ಯೋಜನೆಗೆ ನೀವೇ ಅಡ್ಡಿಯಾಗುತ್ತೀರಿ.4. ಅದು ಒಂದು ಅಂಶ ಹೆಚ್ಚು ಪ್ರೋಟೀನನ್ನು ನಿಮಗೆ ನೀಡುತ್ತದೆ

ಬೆಳಗ್ಗಿನ ಉಪಾಹಾರವನ್ನು ತಪ್ಪಿಸುವುದು ಎಂದರೆ, ಪ್ರೋಟೀನ್ ಸೇರಿದಂತೆ ಇತರ ಆವಶ್ಯಕ ಪೋಷಕಾಂಶಗಳಿಂದ ವಂಚಿತರಾಗುವುದು ಎಂದರ್ಥ. ನಿಮಗೆ ದೀರ್ಘ ಕಾಲದವರೆಗೆ ತೂಕ ಇಳಿಸಬೇಕು ಎಂಬ ಆಸೆಯಿದ್ದರೆ, ದಿನವಿಡೀ ಅಗತ್ಯವಿರುವಷ್ಟು ಪ್ರೋಟೀನ್ ತಿನ್ನಬೇಕೆಂಬುದನ್ನು ಕೂಡ ತಿಳಿದುಕೊಂಡಿರಬೇಕಾಗುತ್ತದೆ. ಹಾನಿಗೊಂಡ ಜೀವಕೋಶಗಳನ್ನು ಸರಿಪಡಿಸಲು ಮತ್ತು ಸ್ನಾಯುಗಳನ್ನು ಸದೃಢಗೊಳಿಸಲು ಪ್ರೊಪ್ರೋಟೀನ್ ಅತ್ಯಾವಶ್ಯಕ. ಬೆಳಗ್ಗಿನ ಉಪಾಹಾರದ ಮೂಲಕ ಒಂದಿಷ್ಟು ಹೆಚ್ಚು ಪ್ರೋಟೀನ್ ನಿಮ್ಮ ದೇಹವನ್ನು ಸೇರುತ್ತದೆ.
First published: June 10, 2021, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories