Healthy Foods: ಆರೋಗ್ಯಕರ ಜೀವನಶೈಲಿ & ದೇಹದ ಸಮತೋಲನ ಕಾಯ್ದುಕೊಳ್ಳಲು ಈ ಪದಾರ್ಥಗಳ ಸೇವನೆ ಮಾಡಿ

ವಿಟಮಿನ್ ಮತ್ತು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆರೋಗ್ಯಯುತ ವಸ್ತುಗಳ ಸೇವನೆಯ ಅಭ್ಯಾಸವು ಅತ್ಯುತ್ತಮ ಆಯ್ಕೆ ಆಗಿದೆ. ಇಲ್ಲಿ ನಾವು ಉಗುರು, ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಕೆಲವು ವಸ್ತುಗಳ ಬಗ್ಗೆ ಇಲ್ಲಿ ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹವು (Body) ಆರೋಗ್ಯವಾಗಿರುವುದು (Health) ತುಂಬಾ ಮುಖ್ಯ. ಯಾಕೆಂದರೆ ಮನುಷ್ಯ (Human) ಆರೋಗ್ಯವಾಗಿದ್ದಾಗ ಮಾತ್ರ ಆತ ಖುಷಿಯಾಗಿ (Happiness) ಬದುಕು ನಡೆಸಲು ಸಾಧ್ಯ. ಆರೋಗ್ಯಕರ ದೇಹ ಪಡೆಯಲು ಆರೋಗ್ಯ ಮತ್ತು ಸತ್ವಯುತ ಆಹಾರ (Food) ಸೇವನೆ ಕೂಡ ಅತ್ಯಗತ್ಯವಾಗಿದೆ. ಆರೋಗ್ಯಕರ ದೇಹವು ಸಮತೋಲಿತ ಆಹಾರ ಹೊಂದುವುದು ತುಂಬಾ ಮುಖ್ಯ. ಸಮತೋಲನ ಆಹಾರ ದೇಹದ ಆಂತರಿಕ ಅಗತ್ಯವನ್ನು ಪೂರೈಸುತ್ತದೆ. ದೇಹದ ಬಾಹ್ಯ ಭಾಗಗಳಿಗೆ ಪ್ರಯೋಜನ ನೀಡುತ್ತದೆ. ಚರ್ಮ (Skin), ಕೂದಲು (Hair) ಮತ್ತು ಉಗುರು (Nails) ಭಾಗಗಳ ಹೆಚ್ಚುವರಿ ಆರೈಕೆಗಾಗಿ ಕಾಸ್ಮೆಟಿಕ್ ಬಳಸಬಾರದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವಿಟಮಿನ್ ಮತ್ತು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆರೋಗ್ಯಯುತ ವಸ್ತುಗಳ ಸೇವನೆಯ ಅಭ್ಯಾಸವು ಅತ್ಯುತ್ತಮ ಆಯ್ಕೆ ಆಗಿದೆ.

    ಇಲ್ಲಿ ನಾವು ಉಗುರು,, ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಕೆಲವು ವಸ್ತುಗಳ ಬಗ್ಗೆ ಇಲ್ಲಿ ತಿಳಿಯೋಣ.

    ಬ್ರೌನ್ ರೈಸ್ ಆರೋಗ್ಯಕ್ಕೆ ಒಳ್ಳೆಯದು

    ಬಯೋಟಿನ್ ಮತ್ತು ನೀರಿನಲ್ಲಿ ಕರಗುವ ಬಿ ವಿಟಮಿನ್ ‌ಗಳು ಕಂದು ಅಕ್ಕಿಯಲ್ಲಿ ಹೇರಳವಾಗಿವೆ. ನಮ್ಮ ಕೂದಲು ಮತ್ತು ಉಗುರುಗಳಿಗೆ ಇದು ತುಂಬಾ ಒಳ್ಳೆಯದು. ಕಂದು ಅಕ್ಕಿಯಲ್ಲಿ ಹೇರಳವಾಗಿರುವ ಕರಗುವ ಬಿ ವಿಟಮಿನ್‌ಗಳು ಕೂದಲು

    ಮತ್ತು ಉಗುರುಗಳನ್ನು ಹಾನಿಯಾಗದಂತೆ ಅಥವಾ ದುರ್ಬಲವಾಗದಂತೆ ರಕ್ಷಿಸುತ್ತವೆ. ಇದಕ್ಕಾಗಿ ನೀವು ಬಾರ್ಲಿ, ಬಲ್ಗರ್ ಗೋಧಿ ಮತ್ತು ಕ್ವಿನೋವಾ ಸಹ ಸೇವನೆ ಮಾಡಬಹುದು.

    ಇದನ್ನೂ ಓದಿ: ಯಕೃತ್ತು ದಾನ ಹೇಗೆ ಮಾಡಲಾಗುತ್ತದೆ? ಆರೋಗ್ಯಕರ ಯಕೃತ್ತನ್ನು ಗುರುತಿಸುವುದು ಹೇಗೆ?

    ಪ್ರೋಟೀನ್‌ ರಾಜ ಮೊಟ್ಟೆ

    ಪ್ರೋಟೀನ್‌ಗಳ ರಾಜ ಎಂದು ಮೊಟ್ಟೆಯನ್ನು ಕರೆಯಲಾಗುತ್ತದೆ. ಮೊಟ್ಟೆ ಹೇರಳವಾದ ಸತು ಮತ್ತು ಸೆಲೆನಿಯಮ್ ಹೊಂದಿರುತ್ತದೆ. ಇದು ನಮ್ಮ ಕೂದಲು ಮತ್ತು ನೆತ್ತಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲ್ಪಟ್ಟಿದೆ. ಪ್ರತಿದಿನ ಬೆಳಗ್ಗೆ ಮೊಟ್ಟೆಯನ್ನು ಉಪಾಹಾರದಲ್ಲಿ ತಿನ್ನಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

    ಬೀಟಾ ಕ್ಯಾರೋಟಿನ್ ಉತ್ತಮ ಮೂಲ ಕ್ಯಾರೆಟ್

    ಬೀಟಾ ಕ್ಯಾರೋಟಿನ್ ನ ಉತ್ತಮ ಮೂಲ ಹೊಂದಿದೆ ಕ್ಯಾರೆಟ್. ಇದು ವಿಟಮಿನ್ ಎ ಹೊಂದಿದೆ. ವಿಟಮಿನ್-ಎ ಚರ್ಮಕ್ಕೆ ಎಣ್ಣೆಯುಕ್ತ ವಸ್ತುವಾದ ಮೇದೋಗ್ರಂಥಿಗಳ ಸ್ರವಿಕೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಆರೋಗ್ಯಕರ ನೆತ್ತಿಗೆ ತುಂಬಾ ಮುಖ್ಯ ಎಂದು ತಜ್ಞರು ಹೇಳುತ್ತಾರೆ.

    ಹಳದಿ ಬಣ್ಣದ ಹಣ್ಣುಗಳು, ತರಕಾರಿಯಾದ ಕುಂಬಳಕಾಯಿ, ಸಿಹಿ ಗೆಣಸು ಮತ್ತು ಹಳದಿ ಬೆಲ್ ಪೆಪರ್ ವಿಟಮಿನ್ ಎ ಯ ಉತ್ತಮ ಮೂಲಗಳು ಎಂದು ಪರಿಗಣಿಸಲ್ಪಟ್ಟಿವೆ.

    ಬಯೋಟಿನ್ ಹೇರಳವಾಗಿರುವ ಬಾದಾಮಿ

    ಉತ್ತಮ ಪ್ರಮಾಣದ ಬಯೋಟಿನ್ ಅಂಶವನ್ನು ಬಾದಾಮಿ ಹೊಂದಿದೆ. ಇದು ನಮ್ಮ ಉಗುರುಗಳ ಬಲವರ್ಧನೆಗೆ ಸಹಕಾರಿ ಆಗಿದೆ. ಬಾದಾಮಿಯಲ್ಲಿರುವ ವಿಟಮಿನ್-ಇ ನಮ್ಮ ಕೂದಲು ಮತ್ತು ನೆತ್ತಿಯನ್ನು ಆರೋಗ್ಯವಾಗಿಡಲು ಕೆಲಸ ಮಾಡುತ್ತದೆ.

    ವಿಟಮಿನ್-ಡಿ ಯ ಉತ್ತಮ ಮೂಲಕೊಬ್ಬಿನ ಮೀನು

    ವಿಟಮಿನ್-ಡಿ ಯ ಉತ್ತಮ ಮೂಲ ಕೊಬ್ಬಿನ ಮೀನುಗಳು ಆಗಿವೆ. ಇದು ನಮ್ಮ ಚರ್ಮ ಮತ್ತು ಕೂದಲಿಗೆ ಬಹಳಷ್ಟು ಪ್ರಯೋಜನಕಾರಿ ಆಗಿದೆ. ನೀವು ಸಾಲ್ಮನ್, ಮ್ಯಾಕೆರೆಲ್ ಮತ್ತು ಟ್ಯೂನ ಮೀನುಗಳನ್ನು ಸೇವನೆ ಮಾಡಬಹುದು. ಈ ಎಲ್ಲಾ ಮೀನುಗಳಲ್ಲಿ ಒಮೆಗಾ ಕೊಬ್ಬಿನಾಮ್ಲ ತುಂಬಿವೆ.

    ವಿಟಮಿನ್-ಡಿ ಹೊಂದಿವೆ ಅಣಬೆಗಳು

    ಸಾಕಷ್ಟು ಪ್ರಮಾಣದ ವಿಟಮಿನ್-ಡಿ ಅಣಬೆಯಲ್ಲಿ ಕಂಡು ಬರುತ್ತದೆ. ಇದು ಕೂದಲಿಗೆ ಶಕ್ತಿ ಮತ್ತು ಹೊಳಪು ನೀಡುತ್ತದೆ. 'ಸ್ಟೇ ಸೇಲ್ಸ್ ಜರ್ನಲ್ಸ್' ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೆತ್ತಿಯಲ್ಲಿ ಹೊಸ ಕೂದಲು ಬೆಳವಣಿಗೆಯ ಪ್ರಕ್ರಿಯೆಗೆ ವಿಟಮಿನ್-ಡಿ ಸಹಾಯಕ ಆಗಿದೆ.

    ವಿಟಮಿನ್-ಸಿ ಯಲ್ಲಿ ಸಮೃದ್ಧವಾಗಿರುವ ಕಿವಿ ಹಣ್ಣು

    ಕಿವಿ ಹಣ್ಣು ವಿಟಮಿನ್-ಸಿ ಯಲ್ಲಿ ಸಮೃದ್ಧವಾಗಿದೆ. ಕಾಲಜನ್ ಉತ್ಪಾದನೆ ಮತ್ತು ಚರ್ಮದ ಪುನರುತ್ಪಾದನೆಯ ಗುಣಗಳನ್ನು ಕಿವಿ ಹಣ್ಣು ಹೊಂದಿದೆ. ಇದು ಸುಕ್ಕುಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕ ಗುಣಗಳು ನಯವಾದ ಚರ್ಮಕ್ಕೆ ತುಂಬಾ ಒಳ್ಳೆಯದು.

    ಇದನ್ನೂ ಓದಿ: ಬೇಸಿಗೆಯಲ್ಲಿ ಕಚೇರಿಗೆ ಹೋಗುವ ಮೊದಲು ಯಾವ ರೀತಿಯ ಮೇಕಪ್ ಮಾಡಿದರೆ ಬೆಸ್ಟ್?

    ಆರೋಗ್ಯಕ್ಕೆ ಬ್ರೊಕೊಲಿ

    ಆರೋಗ್ಯಕರ ಜೀವನಶೈಲಿ ಅನುಸರಿಸುವ ಜನರು ಬ್ರೊಕೊಲಿ ತಿನ್ನಲು ಇಷ್ಟ ಪಡುತ್ತಾರೆ. ಬ್ರೊಕೊಲಿಯಲ್ಲಿ ಕಂಡು ಬರುವ ಕಬ್ಬಿಣವು ನಮ್ಮ ಕೂದಲಿನ ಬೆಳವಣಿಗೆಗೆ  ಅಗತ್ಯವಾದ ಖನಿಜ ಆಗಿದೆ. ಆರೋಗ್ಯಕರ ಚರ್ಮ ಮತ್ತು ಬಲಿಷ್ಠ ಉಗುರುಗಳಿಗೆ ಇದು ಉತ್ತಮವಾಗಿದೆ.
    Published by:renukadariyannavar
    First published: