Fitness: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ

ಆಯುರ್ವೇದದಲ್ಲಿ ಖಾಲಿ ಹೊಟ್ಟೆಯಲ್ಲಿ ಕೆಲವು ಪದಾರ್ಥಗಳ ಸೇವನೆ ಮಾಡದಂತೆ ತಿಳಿಸಲಾಗಿದೆ. ಆದರೆ ನೀವು ಜೀವನ ಪೂರ್ತಿ ಫಿಟ್ ಆಗಿರಬೇಕೆಂದರೆ ಕೆಲವು ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನೀವು ಬೆಳಿಗ್ಗೆ (Morning) ಹಾಸಿಗೆಯಿಂದ (Bed) ಎದ್ದ ಕೂಡಲೇ ಒಂದು ಲೋಟ ನೀರು (Water) ಕುಡಿಯಲು ಸಾಮಾನ್ಯವಾಗಿ ಎಲ್ಲರೂ ಸಲಹೆ (Advice) ನೀಡುತ್ತಾರೆ. ಆದರೆ ಹೆಚ್ಚಿನ ಜನರು ನೀರು ಕುಡಿಯಲ್ಲ. ಬಹುತೇಕರು ನಿದ್ರೆಯಿಂದ (Sleeping) ಎದ್ದ ಕೂಡಲೇ ಕಾಫಿ, ಚಹಾ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಈ ಅಭ್ಯಾಸವು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಆಯುರ್ವೇದದಲ್ಲಿ ಖಾಲಿ ಹೊಟ್ಟೆಯಲ್ಲಿ ಕೆಲವು ಪದಾರ್ಥಗಳ ಸೇವನೆ ಮಾಡದಂತೆ ತಿಳಿಸಲಾಗಿದೆ. ಕೆಲ ಪದಾರ್ಥಗಳು ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ ಅಥವಾ ಅಜೀರ್ಣದ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಅವುಗಳ ಸೇವನೆ ನಿಷೇಧಿಸಲಾಗಿದೆ.

    ಆದರೆ ನೀವು ಜೀವನ ಪೂರ್ತಿ ಫಿಟ್ ಆಗಿರಬೇಕೆಂದರೆ ಕೆಲವು ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸುವ ಬಯಕೆ ಹೊಂದಿದ್ದರೆ ಖಂಡಿತಾ ಸೇವನೆ ಮಾಡಬಹುದು ಎನ್ನುತ್ತಾರೆ ತಜ್ಞರು.

    ರಾತ್ರಿಯಿಡೀ ಮಲಗಿದ ನಮ್ಮ ಹೊಟ್ಟೆಯು ಬೆಳಿಗ್ಗೆ ಸಂಪೂರ್ಣವಾಗಿ ಖಾಲಿಯಾಗುತ್ತದೆ. ಬೆಳಿಗ್ಗೆ ಸರಿಯಾದ ಪದಾರ್ಥ ಸೇವನೆಯ ಮೂಲಕ ನಮ್ಮ ದೇಹಕ್ಕೆ ಪೌಷ್ಟಿಕಾಂಶ ನೀಡುವ ಅಗತ್ಯವಿರುತ್ತದೆ. ಇದು ದಿನವಿಡೀ ನಮ್ಮ ಶಕ್ತಿಯನ್ನು ಸರಿಯಾಗಿ ಇರಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳ ಸೇವಿಸುವುದು ಆರೋಗ್ಯ ಹಾಗೂ ಫಿಟ್ ಆಗಿರಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

    ಕಲ್ಲಂಗಡಿ

    ನೀವು ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಸೇವನೆ ಮಾಡಬಹುದು. ಕಲ್ಲಂಗಡಿ ಸೇವನೆ ಬೇಸಿಗೆಯಲ್ಲಿ ನಿಮಗೆ ಶಕ್ತಿ ನೀಡುತ್ತದೆ. ಇದು ನಿಮ್ಮ ಕರುಳಿಗೆ ಕೂಡ ಒಳ್ಳೆಯದು. ಬೆಳಿಗ್ಗೆ ಕಲ್ಲಂಗಡಿ ತಿಂದರೆ ಅದು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಲು ಉತ್ತೇಜಿಸುತ್ತದೆ.

    ನೆನೆಸಿದ ಬಾದಾಮಿ

    ಬಾದಾಮಿ ಆರೋಗ್ಯದ ನಿಧಿ ಆಗಿದೆ. ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿಂದರೆ ಅದರ ಗುಣಮಟ್ಟ ಹೆಚ್ಚುತ್ತದೆ. ನೆನೆಸಿದ ಬಾದಾಮಿಯಲ್ಲಿ ಪೌಷ್ಟಿಕಾಂಶ ಮೌಲ್ಯವು ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ರಾತ್ರಿ ಖಾಲಿ ಹೊಟ್ಟೆಯ ನಂತರ ಬೆಳಿಗ್ಗೆ ಅದನ್ನು ಸೇವಿಸಿ.

    ಪಪ್ಪಾಯಿ

    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವಿಸಿ. ಇದು ಆರೋಗ್ಯ ಕಾಪಾಡುತ್ತದೆ. ಪಪ್ಪಾಯಿ ನಿಮ್ಮ ದೇಹದಿಂದ ವಿಷ ತೆಗೆದು ಹಾಕುತ್ತದೆ. ಇದು ಇನ್ನೂ ಅನೇಕ ಪ್ರಯೋಜನ ಹೊಂದಿದೆ. ಪಪ್ಪಾಯಿ ಸೇವಿಸಿದ 45 ನಿಮಿಷಗಳ ನಂತರಉಪಹಾರ ಸೇವಿಸುವುದು ಉತ್ತಮ.

    ಜೇನುತುಪ್ಪ

    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ಜೇನುತುಪ್ಪ ಸೇವಿಸುವುದು ದೇಹಕ್ಕೆ ಒಳ್ಳೆಯದು. ಇದು ಶಕ್ತಿ ನೀಡುವುದರ ಜೊತೆಗೆ ದೇಹವನ್ನು ನಿರ್ವಿಷಗೊಳಿಸುತ್ತದೆ. ಇದಕ್ಕ ನಿಂಬೆಹಣ್ಣು ಸೇರಿಸಿದರೆ ನಿಮ್ಮ ದೇಹಕ್ಕೆ ವಿಟಮಿನ್ ಸಿ ಕೂಡ ಸಿಗುತ್ತದೆ.

    ಗೋಧಿ ಹುಲ್ಲು

    ಬೆಳಿಗ್ಗೆ ಗೋಧಿ ಹುಲ್ಲಿನ ಪುಡಿ ಪಾನೀಯ ಕುಡಿದರೆ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಫ್ರೀ ರ್ಯಾಡಿಕಲ್ ಗುಣಗಳಿದ್ದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    ಆಮ್ಲಾ ರಸ

    ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಸೇವಿಸಿದರೆ ದೇಹಕ್ಕೆ ಸಾಕಷ್ಟು ಕಬ್ಬಿಣ, ವಿಟಮಿನ್ ಸಿ ಮತ್ತು ಅನೇಕ ರೀತಿಯ ಖನಿಜ ಲವಣ ನೀಡುತ್ತದೆ. ಇದು ನಿಮ್ಮನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಎರಡು ಚಮಚ ಆಮ್ಲಾ ಜ್ಯೂಸ್ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನ ಕುಡಿಯಬಹುದು.

    ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

    ಅಲೋವೆರಾ

    ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಇದು ಪ್ರೋಟೀನ್ ಮತ್ತು ವಿಟಮಿನ್ಗಳನ್ನು ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ದೇಹದ ಉರಿಯೂತ ಕಡಿಮೆ ಮಾಡುತ್ತದೆ.
    Published by:renukadariyannavar
    First published: